Xiaomi 13 Pro :ಭಾರತದಲ್ಲಿ ಬಿಡುಗಡೆಯಾಗುತ್ತಿದೆ ಇಂದು Xiaomi 13 Pro; ಅತ್ಯದ್ಭುತ ವೈಶಿಷ್ಟ್ಯಗಳೊಂದಿಗೆ ಲಗ್ಗೆ ಇಡೋಕೆ ರೆಡಿ!

Xiaomi 13 Pro: ಸದ್ಯ ಉತ್ತಮ ಕ್ಯಾಮೆರಾ(camera ), ಹೆಚ್ಚಿನ ಪ್ರೊಸೆಸರ್, ಫಾಸ್ಟ್ ಚಾರ್ಜಿಂಗ್ ಬ್ಯಾಟರಿಯಂತಹ ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿರುವ, Xiaomi 13 ಸರಣಿಯಲ್ಲಿ ಒಂದಲ್ಲಾ ಎರಡಲ್ಲಾ ಮೂರು ಸ್ಮಾರ್ಟ್ ಫೋನ್ (smartphone )ಗಳು ಬಿಡುಗಡೆ ಆಗಲಿವೆ. ಸ್ಮಾರ್ಟ್ ಫೋನ್ ಪ್ರಿಯರಿಗೆ ಇದೊಂದು ಖುಷಿಯ ವಿಚಾರ ಆಗಿದೆ.

ಹೌದು ಜಾಗತಿಕ ಮೊಬೈಲ್ ಮಾರುಕಟ್ಟೆಯಲ್ಲಿ ಪ್ರಸಿದ್ದ ‘Xiaomi 13’ ಸರಣಿಯಲ್ಲಿ Xiaomi 13, Xiaomi 13 Lite ಮತ್ತು Xiaomi 13 Pro ಮೂರು ಸ್ಮಾರ್ಟ್‌ಫೋನ್‌ಗಳು ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಯಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಿವೆ.

ಈಗಾಗಲೇ ಫೆಬ್ರವರಿ 27 ರಿಂದ ಆರಂಭವಾದ ವಿಶ್ವ ಮೊಬೈಲ್ ಕಾಂಗ್ರೆಸ್‌ ಕಾರ್ಯಕ್ರಮದ ಮೊದಲನೇ ದಿನ Xiaomi 13 ಸರಣಿ ಸ್ಮಾರ್ಟ್‌ಫೋನ್‌ಗಳನ್ನು ಜಾಗತಿಕ ಬೆಲೆಗಳಲ್ಲಿ ಪರಿಚಯಿಸಲಾಗಿತ್ತು. ಇದೀಗ Xiaomi 13 ಸರಣಿಯಲ್ಲಿ ಬಿಡುಗಡೆಯಾಗಿರುವ Xiaomi 13, Xiaomi 13 Lite ಮತ್ತು Xiaomi 13 Pro ಮೂರು ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಎಷ್ಟು ಬೆಲೆ ಹೊಂದಿರಲಿವೆ ಮತ್ತು ಖರೀದಿಗೆ ಯಾವಾಗ ದೊರೆಯಲಿವೆ ಎಂಬ ಬಗ್ಗೆ ಫೆಬ್ರವರಿ 28 ಅಂದರೆ ಇಂದು ಮಾಹಿತಿ ಬಹಿರಂಗ ಆಗಲಿದೆ.

ಸದ್ಯ ಗ್ರಾಹಕರ ನಿರೀಕ್ಷೆಯಂತೆಯೇ Xiaomi 13 ಮತ್ತು Xiaomi 13 Pro ಸ್ಮಾರ್ಟ್‌ಫೋನ್‌ಗಳ ಜೊತೆಗೆ ನೂತನ Xiaomi 13 Lite ಸ್ಮಾರ್ಟ್‌ಫೋನನ್ನು ಸಹ ಜಾಗತಿಕ ಮಾರುಕಟ್ಟೆಗೆ ಪರಿಚಯಿಸಲಾಗಿದ್ದು, ಇವುಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

Xiaomi 13 ಸ್ಮಾರ್ಟ್‌ಫೋನ್ ಹೊಂದಿರುವ ಸಂಪೂರ್ಣ ವೈಶಿಷ್ಟ್ಯಗಳು:
• ಶವೋಮಿ 13 ಸ್ಮಾರ್ಟ್​ಫೋನ್ 2400*1080 ಪಿಕ್ಸೆಲ್ಸ್ ರೆಸಲೂಷನ್ ಸಾಮರ್ಥ್ಯದ 6.36 ಇಂಚಿನ ಫುಲ್ HD+ ಅಮೋಲ್ಡ್ ಡಿಸ್‌ಪ್ಲೇಯನ್ನು ಹೊಂದಿದೆ.
• ಈ ಡಿಸ್‌ಪ್ಲೇ 120Hz ರಿಫ್ರೆಶ್‌ ರೆಟ್‌, ಕಾರ್ನಿಂಗ್ ಗೋರಿಲ್ಲ ಗ್ಲಾಸ್ 5 ಪ್ರೊಟೆಕ್ಷನ್ ಮತ್ತು ಡಾಲ್ಬಿ ವಿಷನ್ ಬೆಂಬಲವನ್ನು ಪಡೆದಿದೆ.
• ಇದರಲ್ಲಿ ಆಕ್ಟಾ-ಕೋರ್ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8 Gen 2 4nm ಪ್ರೊಸೆಸರ್‌ ನೀಡಲಾಗಿದ್ದು MIUI 14 ಆಧಾರಿತ ಆಂಡ್ರಾಯ್ಡ್ 13 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.
• ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ನಲ್ಲಿ ಅನಾವರಣಗೊಂಡಿದೆ.
• ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೋನಿ IMX800 ಸೆನ್ಸಾರ್‌, ಎರಡನೇ ಕ್ಯಾಮೆರಾ 12 ಮೆಗಾಪಿಕ್ಸೆಲ್​ನ ಆಲ್ಟ್ರಾ-ವೈಡ್ ಆ್ಯಂಗಲ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ 10 ಮೆಗಾಪಿಕ್ಸೆಲ್​ನ ಟೆಲಿಫೋಟೋ ಕ್ಯಾಮೆರಾ ನೀಡಲಾಗಿದೆ.
• ಇದರಲ್ಲಿ 8K ವಿಡಿಯೋ ರೆಕಾರ್ಡಿಂಗ್ ಆಯ್ಕೆ ಇರುವುದು ವಿಶೇಷ. ಇವುಗಳ ಜೊತೆಗೆ 32 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ.
• 4500mAh ಸಾಮರ್ಥ್ಯದ ಬ್ಯಾಟರಿ ಶಕ್ತಿ ನೀಡಲಾಗಿದ್ದು, ಇದಕ್ಕೆ ತಕ್ಕಂತೆ 67W ಫಾಸ್ಟ್ ಚಾರ್ಜರ್ ಸೌಲಭ್ಯ ಇದೆ.
• ಅಂತೆಯೆ 50W ವಯರ್​ಲೆಸ್ ಚಾರ್ಜಿಂಗ್ ಆಯ್ಕೆ ಕೂಡ ಇದೆ.
• ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G ಬೆಂಬಲ ಪಡೆದಿರುವ ಜೊತೆಗೆ ವೈಫೈ 7, ಬ್ಲೂಟೂತ್ 5.3, USB ಟೈಪ್-C ಪೋರ್ಟ್‌ ಅನ್ನು ಬೆಂಬಲಿಸುತ್ತಿದೆ. Xiaomi 13 ಆರಂಭಿಕ ಬೆಲೆ 999 Euros, ಅಂದರೆ ಭಾರತದಲ್ಲಿ 87,585 ರೂ. ಆಗಿದೆ.

Xiaomi 13 Lite ಸ್ಮಾರ್ಟ್‌ಫೋನ್ ಹೊಂದಿರುವ ಸಂಪೂರ್ಣ ವೈಶಿಷ್ಟ್ಯಗಳು :
• ಹೊಸ Xiaomi 13 Lite ಸ್ಮಾರ್ಟ್‌ಫೋನ್ ಫುಲ್‌ ಹೆಚ್‌ಡಿ+ ರೆಸಲ್ಯೂಶನ್‌ನೊಂದಿಗೆ 6.55-ಇಂಚಿನ ಅಮೋಲೆಡ್ ಡಿಸ್‌ಪ್ಲೇ ಹೊಂದಿದೆ.
• ಗೊರಿಲ್ಲಾ ಗ್ಲಾಸ್ 5 ರಕ್ಷಣೆ ಪಡೆದಿರುವ ಈ ಡಿಸ್‌ಪ್ಲೇಯು 120Hz ರಿಫ್ರೆಶ್ ರೇಟ್, 240Hz ಟಚ್ ಸ್ಲಾಟಿಂಗ್ ರೇಟ್, 1000 ನಿಟ್ ಬ್ರೈಟ್‌ನೆಸ್, ಎಚ್‌ಡಿಆರ್ 10+, ಡಾಲ್ಟಿ ವಿಷನ್ ಮತ್ತು 1920Hz ಹೈ-ಫ್ರೀಕ್ವೆನ್ಸಿ ಪಿಡಬ್ಲ್ಯೂಎಂ ಡಿಮ್ಮಿಂಗ್ ನಂತಹ ಪ್ರಮುಖ ವೈಶಿಷ್ಟ್ಯಗಳನ್ನು ಹೊಂದಿದೆ .
• ಪ್ರೊಸೆಸರ್ ವಿಭಾಗದಲ್ಲಿ, Xiaomi 13 Lite ಸ್ಮಾರ್ಟ್‌ಫೋನ್ 8GB RAM ಮತ್ತು 128GB/256GB ಸ್ಟೋರೇಜ್‌ಗಳೊಂದಿಗೆ ಸಂಯೋಜಿಸಲಾದ Qualcomm’s Snapdragon 7 Gen 1 ಚಿಪ್‌ಸೆಟ್ ಮತ್ತು Adreno 644 GPU ಹೊಂದಿದೆ.
• ಮುಖ್ಯವಾಗಿ Android 12 ಆಧಾರಿತ MIUI 14 ನಲ್ಲಿ ಕಾರ್ಯನಿರ್ವಹಿಸಲಿದೆ.
• ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿರುವ Xiaomi 13 Lite ಸ್ಮಾರ್ಟ್‌ಫೋನ್ 50MP Sony IMX766 ಮುಖ್ಯ ಕ್ಯಾಮೆರಾ 8MP 115-ಡಿಗ್ರಿ ಅಲ್ಟ್ರಾವೈಡ್ ಲೆನ್ಸ್ ಮತ್ತು 2MP ಮ್ಯಾಕ್ರೋ ಕ್ಯಾಮೆರಾಗಳನ್ನು ಹೊಂದಿದೆ.
• ಸೆಲ್ಫಿ ಮತ್ತು ವೀಡಿಯೋ ಕರೆಗಳಿಗಾಗಿ, ಸೆಲ್ಫಿ ಗ್ಲೋ ಫ್ಲ್ಯಾಷ್‌ನೊಂದಿಗೆ 8MP ಸಾಮರ್ಥ್ಯದ ಡೆಪ್ತ್ ಕ್ಯಾಮೆರಾ ಅಳವಡಿಸಲಾಗಿದೆ.
• ಅದಲ್ಲದೆ 67W ಫಾಸ್ಟ್ ಚಾರ್ಜಿಂಗ್ ಬೆಂಬಲದ 4,500mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ.
• ಡಾಲ್ಬಿ ಅಟ್ಮೋಸ್ ಬೆಂಬಲವಿರುವ ಡ್ಯುಯಲ್ ಸ್ಪೀಕರ್‌ಗಳು, ಇನ್-ಡಿಸ್‌ಪ್ಲೇ ಫಿಂಗರ್ಪ್ರಿಂಟ್ ಸೆನ್ಸಾರ್ ಒಳಗೊಂಡಿದೆ.
• ಜೊತೆಗೆ 5G SA/NSA, Dual 4G VoLTE, Wi-Fi 6 802.11, Bluetooth 5.2, GPS, NavIC, NFC ಮತ್ತು USB Type-C ಯಂತಹ ಕನೆಕ್ಟಿವಿಟಿ ವೈಶಿಷ್ಟ್ಯಗಳನ್ನು ಈ ಸ್ಮಾರ್ಟ್‌ಫೋನ್ ಬೆಂಬಲಿಸಲಿದೆ.

ಮುಖ್ಯವಾಗಿ Xiaomi 13 Lite ಸ್ಮಾರ್ಟ್‌ಫೋನ್ ಖರೀದಿಯ ಜೊತೆಗೆ
Qualcomm’s Snapdragon 7 Gen 1 ಚಿಪ್‌ಸೆಟ್ ಪಡೆಯಬಹುದು. ಇನ್ನು ಮಧ್ಯಮ ಫೀಚರ್ಸ್ ಹೊಂದಿರುವ Xiaomi 13 Lite ಸ್ಮಾರ್ಟ್‌ಫೋನ್ ಜಾಗತಿಕ ಮಾರುಕಟ್ಟೆಯಲ್ಲಿ 499 ಯುರೋ ಅಂದರೆ ಸುಮಾರು 43,750 ರೂ. ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ.

Xiaomi 13 ಪ್ರೊ ಸ್ಮಾರ್ಟ್‌ಫೋನ್ ಹೊಂದಿರುವ ಸಂಪೂರ್ಣ ವೈಶಿಷ್ಟ್ಯಗಳು:
• ಶವೋಮಿ 13 ಸ್ಮಾರ್ಟ್ಫಫೋನ್ 3200*1440 ಪಿಕ್ಸೆಲ್ಸ್ ರೆಸಲೂಷನ್ ಸಾಮರ್ಥ್ಯದ 6.73 ಇಂಚಿನ ಫುಲ್ HD+ E6 ಅಮೋಲ್ಡ್ ಡಿಸ್‌ಪ್ಲೇಯನ್ನು ಹೊಂದಿದೆ.
• ಈ ಡಿಸ್‌ಪ್ಲೇ 120Hz ರಿಫ್ರೆಶ್‌ ರೆಟ್‌, ಕಾರ್ನಿಂಗ್ ಗೋರಿಲ್ಲ ಗ್ಲಾಸ್ 5 ಪ್ರೊಟೆಕ್ಷನ್ ಮತ್ತು ಡಾಲ್ಬಿ ವಿಷನ್ ಬೆಂಬಲವನ್ನು ಪಡೆದಿದೆ.
• ಇದರಲ್ಲಿ ಆಕ್ಟಾ-ಕೋರ್ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8 Gen 2 4nm ಪ್ರೊಸೆಸರ್‌ ನೀಡಲಾಗಿದ್ದು MIUI 14 ಆಧಾರಿತ ಆಂಡ್ರಾಯ್ಡ್ 13 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.
• ಈ ಸ್ಮಾರ್ಟ್‌ಫೋನ್‌ ಕೂಡ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ನಲ್ಲಿ ಅನಾವರಣಗೊಂಡಿದೆ.
• ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೋನಿ IMX989 ಸೆನ್ಸಾರ್‌, ಎರಡನೇ ಕ್ಯಾಮೆರಾ 50 ಮೆಗಾಪಿಕ್ಸೆಲ್​ನ ಆಲ್ಟ್ರಾ-ವೈಡ್ ಆ್ಯಂಗಲ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ ಕೂಡ 50 ಮೆಗಾಪಿಕ್ಸೆಲ್​ನ ಟೆಲಿಫೋಟೋ ಕ್ಯಾಮೆರಾ ನೀಡಲಾಗಿದೆ.
• ಇದರಲ್ಲಿ 8K ವಿಡಿಯೋ ರೆಕಾರ್ಡಿಂಗ್ ಆಯ್ಕೆ ಇರುವುದು ವಿಶೇಷ.
• ಇವುಗಳ ಜೊತೆಗೆ 32 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ.
• 4820mAh ಸಾಮರ್ಥ್ಯದ ಬ್ಯಾಟರಿ ನೀಡಲಾಗಿದ್ದು, ಇದಕ್ಕೆ ತಕ್ಕಂತೆ 120W ಫಾಸ್ಟ್ ಚಾರ್ಜರ್ ಸೌಲಭ್ಯ ಇದೆ.
• ಅಂತೆಯೆ 50W ವಯರ್​ಲೆಸ್ ಚಾರ್ಜಿಂಗ್ ಆಯ್ಕೆ ಕೂಡ ಇದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G ಬೆಂಬಲ ಪಡೆದಿರುವ ಜೊತೆಗೆ ವೈಫೈ 7, ಬ್ಲೂಟೂತ್ 5.3, USB ಟೈಪ್-C ಪೋರ್ಟ್‌ ಅನ್ನು ಬೆಂಬಲಿಸುತ್ತಿದೆ. ಶವೋಮಿ 13 ಪ್ರೊ ಆರಂಭಿಕ ಬೆಲೆ 1,299 Euros, ಅಂದರೆ ಭಾರತದಲ್ಲಿ 1,13,890 ರೂ. ಆಗಿದೆ.

ಈ ಮೇಲಿನ ಉತ್ತಮ ಕ್ಯಾಮೆರಾ(camera ), ಹೆಚ್ಚಿನ ಪ್ರೊಸೆಸರ್, ಫಾಸ್ಟ್ ಚಾರ್ಜಿಂಗ್ ಬ್ಯಾಟರಿಯಂತಹ ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿರುವ, Xiaomi 13 ಸರಣಿಯಲ್ಲಿನ Xiaomi 13, Xiaomi 13 Lite ಮತ್ತು Xiaomi 13 Pro ಈ ಮೂರು ಸ್ಮಾರ್ಟ್ ಫೋನ್ ಗಳನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು.

Leave A Reply

Your email address will not be published.