Telangana Love Jihad । ವಿಷದ ಚುಚ್ಚುಮದ್ದು ಚುಚ್ಚಿಕೊಂಡು ವೈದ್ಯ ವಿದ್ಯಾರ್ಥಿನಿ ಧರಾವತಿ ಸಾವು, ತೆಲಂಗಾಣ ಗೃಹಮಂತ್ರಿಯ ಸಂಬಂಧಿ ಸೈಫ್ ಅರೆಸ್ಟ್ !

Telangana Love Jihad: ತೆಲಂಗಾಣದ ವಾರಂಗಲ್ ಪಟ್ಟಣದ ಕಾಕತೀಯ ವೈದ್ಯಕೀಯ ಕಾಲೇಜಿನಲ್ಲಿ ಓದುತ್ತಿದ್ದ ಧರಾವತಿ ಪ್ರೀತಿ ಎಂಬ ಮೆಡಿಕಲ್ ವಿದ್ಯಾರ್ಥಿನಿಯು, ಮಾರಕ ಚುಚ್ಚುಮದ್ದನ್ನು ತೆಗೆದುಕೊಂಡ ಐದು ದಿನಗಳ ನಂತರ, ಭಾನುವಾರ ರಾತ್ರಿ ಹೈದರಾಬಾದ್‌ನ ನಿಜಾಮ್ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (NIMS) ಸಾವಿಗೀಡಾಗಿದ್ದಾಳೆ. ಸರ್ಕಾರವು ಆಕೆಯ ಸಾವಿಗೆ ಕಾರಣ ವಿವರಿಸುವವರೆಗೆ ಮತ್ತು ವಿಭಾಗದ ಮುಖ್ಯಸ್ಥರು ಮತ್ತು ಪ್ರಾಂಶುಪಾಲರನ್ನು ಅಮಾನತುಗೊಳಿಸುವವರೆಗೂ ಮೃತದೇಹವನ್ನು ಗಾಂಧಿ ಆಸ್ಪತ್ರೆಗೆ  ಶವ ಪರೀಕ್ಷೆಗಾಗಿ ಸ್ಥಳಾಂತರಿಸಲು ಸಂತ್ರಸ್ತ ಕುಟುಂಬವು ಅನುಮತಿ ನಿರಾಕರಿಸಿದ್ದರಿಂದ NIMS ನಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ  ಉಂಟಾಗಿತ್ತು.

ತೆಲಂಗಾಣ ಸರ್ಕಾರವು ಆಕೆಯ ಕುಟುಂಬಕ್ಕೆ 10 ಲಕ್ಷ ರೂಪಾಯಿಗಳ ಪರಿಹಾರವನ್ನು ಘೋಷಿಸಿದೆ. ಆದರೆ ರಾಜ್ಯದ ಸಚಿವರು ಹಿರಿಯರ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡ ಸ್ನಾತಕೋತ್ತರ ವಿದ್ಯಾರ್ಥಿಯ ಕುಟುಂಬಕ್ಕೆ ಇನ್ನೂ 20 ಲಕ್ಷ ರೂಪಾಯಿಗಳನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. ಸರಕಾರ ಕೆಲ ಭರವಸೆ ನೀಡಿದ ಬಳಿಕ ಕುಟುಂಬಸ್ಥರು ಶವ ಸಾಗಾಟಕ್ಕೆ ಅನುಮತಿ ನೀಡಿದರು. ಆದರೆ ಈಗ ಆಕೆಯ ಸಾವಿಗೆ ಲವ್ ಜಿಹಾದ್ ಕಾರಣ (Telangana Love Jihad) ಎನ್ನುವ ಪ್ರತಿಭಟನೆ ಎದುರಾಗಿದೆ.

ಪ್ರೀತಿಗೆ ಹಿರಿಯರು ನೀಡಿದ ಕಿರುಕುಳವೇ ಆಕೆಯನ್ನು ಆತ್ಮಹತ್ಯೆಗೆ ಪ್ರೇರೇಪಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸೈಫ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಹಾಗೂ ಎಸ್‌ಸಿ /ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆ ಮತ್ತು ರ್ಯಾಗಿಂಗ್ ವಿರೋಧಿ ಕಾಯ್ದೆಗಳ ಅಡಿ ಪ್ರಕರಣ ದಾಖಲಿಸಲಾಗಿದೆ. ವಾರಂಗಲ್ ಜಿಲ್ಲೆಯ ಪೊಲೀಸ್ ಆಯುಕ್ತರು ಅವಮಾನಕರ ವರ್ತನೆಯೂ ರ್ಯಾಗಿಂಗ್ ವ್ಯಾಪ್ತಿಗೆ ಬರುತ್ತದೆ ಎಂದು ರಂಗನಾಥ್ ಹೇಳಿದ್ದಾರೆ. ಪೊಲೀಸರ ಪ್ರಕಾರ, ಸೈಫ್ ತನ್ನ ಬಗ್ಗೆ ವಾಟ್ಸಾಪ್ ಗುಂಪಿನಲ್ಲಿ ಆಕೆಯ ಬಗ್ಗೆ ಅವಮಾನಕರ ಕಾಮೆಂಟ್‌ಗಳನ್ನು ಮಾಡುತ್ತಿದ್ದ.

ಈ ಸಂಬಂಧ ವಾರಂಗಲ್ ಪೊಲೀಸರು ಫೆಬ್ರವರಿ 24 ರಂದು ಅರಿವಳಿಕೆ ವಿಭಾಗದಲ್ಲಿ ಎರಡನೇ ವರ್ಷದ ವಿದ್ಯಾರ್ಥಿ ಪ್ರೀತಿಯ ಹಿರಿಯ ಸಹಪಾಠಿ ಎಂ.ಎ.ಸೈಫ್ ನನ್ನು ಬಂಧಿಸಿದ್ದಾರೆ. ಆತನು ತೆಲಂಗಾಣದ ಗೃಹಮಂತ್ರಿ ಮೊಹಮದ್ ಮೊಹಮದ್ ಆಲಿಯ ಹತ್ತಿರದ ಸಂಬಂಧಿಯಾಗಿದ್ದು ಆತನನ್ನು ರಕ್ಷಿಸಲಾಗುತ್ತದೆ ಎನ್ನುವ ಗುಲ್ಲು ಇದೀಗ ತೆಲಂಗಾಣದಲ್ಲಿ ಎದ್ದಿದೆ.

ಕೆಲವು ವಿರೋಧ ಪಕ್ಷಗಳ ಮುಖಂಡರು ಮತ್ತು ವಿದ್ಯಾರ್ಥಿ ಗುಂಪುಗಳು ಗಾಂಧಿ ಆಸ್ಪತ್ರೆಗೆ ಶವ ಸಾಗಿಸುತ್ತಿದ್ದ ಆಂಬ್ಯುಲೆನ್ಸ್ ನ್ನು ತಡೆಯಲು ಪ್ರಯತ್ನಿಸಿದರು. ಅವರು ಮೃತದೇಹವನ್ನು ಮುಖ್ಯಮಂತ್ರಿಯವರ ಅಧಿಕೃತ ನಿವಾಸ ಪ್ರಗತಿ ಭವನಕ್ಕೆ ಕೊಂಡೊಯ್ಯಲು ಬಯಸಿದ್ದರು. ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ, ಬಳಿಕ ಶವವನ್ನು ಗಾಂಧಿ ಆಸ್ಪತ್ರೆಗೆ ರವಾನಿಸಿದರು. ನಂತರ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಪ್ರೀತಿ ಅವರ ಪಾರ್ಥಿವ ಶರೀರವನ್ನು ನಂತರ ಜನಗಾಂವ್ ಜಿಲ್ಲೆಯ ಅವರ ಸ್ವಗ್ರಾಮಕ್ಕೆ ಕೊಂಡೊಯ್ಯಲಾಗಿದ್ದು, ಸೋಮವಾರ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಗುವುದು ಎಂದು ಕುಟುಂಬವು ತಿಳಿಸಿದೆ.

ಸಂತ್ರಸ್ತೆಯ ತಂದೆ ಡಿ.ನರೇಂದ್ರ ಎನ್ನುವವರು ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದರೆ, ರಾಜ್ಯ ಪಂಚಾಯತ್ ರಾಜ್ ಸಚಿವ ಇ.ದಯಾಕರ್ ರಾವ್ 20 ಲಕ್ಷ ರೂಪಾಯಿ ಭರವಸೆ ನೀಡಿದ್ದಾರೆ. ಕುಟುಂಬದ ಸದಸ್ಯರಿಗೆ ಪಂಚಾಯತ್ ರಾಜ್ ಇಲಾಖೆಯಲ್ಲಿ ಸರ್ಕಾರಿ ನೌಕರಿ ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ. ಅಲ್ಲದೆ ಹಾಲಿ ನ್ಯಾಯಾಧೀಶರಿಂದ ಪ್ರಕರಣದ ತನಿಖೆ ನಡೆಸಲಾಗುವುದು ಎಂದು ದಯಾಕರ್ ರಾವ್ ಕುಟುಂಬಕ್ಕೆ ಭರವಸೆ ನೀಡಿದ್ದಾರೆ ಎಂದು ವರದಿಯಾಗಿದೆ.

Leave A Reply

Your email address will not be published.