New Honda 100CC: ಹೀರೋ ಸ್ಪ್ಲೆಂಡರ್ ಬೈಕಿಗೆ ಠಕ್ಕರ್ ಕೊಡಲು ಬರಲು ರೆಡಿಯಾಗಿದೆ ಹೊಸ ಹೋಂಡಾ 100cc ಬೈಕ್
New Honda 100CC: ಹಲವಾರು ರೀತಿಯ ಬೈಕ್(bike )ಹವಾ ಜೋರಾಗಿರುವ ಸಮಯದಲ್ಲೇ ಇದೀಗ ಪ್ರಸಿದ್ಧ
ದ್ವಿಚಕ್ರ ತಯಾರಕ ಕಂಪನಿಯಾದ ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ (scooter )ಇಂಡಿಯಾ (HMSI) ಹೆಚ್ಚಿನ ಮೈಲೇಜ್ ನೀಡುವ ಹೊಸ 100cc ಬೈಕ್ ಅನ್ನು ಬಿಡುಗಡೆಗೊಳಿಸಲು ಮುಂದಾಗಿದೆ. ಹೌದು ಈ ಹೊಸ ಹೋಂಡಾ 100cc (New Honda 100CC) ಬೈಕ್ 2023ರ ಮಾರ್ಚ್ 15 ರಂದು ಬಿಡುಗಡೆಯಾಗಲಿದೆ. ಅಲ್ಲದೆ ಹೊಸ 100cc ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ(market )97.2cc ಎಂಜಿನ್‌ನೊಂದಿಗೆ ಬರುವ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕಿಗೆ ಪೈಪೋಟಿ ನೀಡುತ್ತದೆ ಎನ್ನಲಾಗುತ್ತಿದೆ.
ಸದ್ಯ ಈ ಹೊಸ ಹೋಂಡಾ 100cc ಬೈಕ್ ಹೆಸರನ್ನು ಕೂಡ ಬಹಿರಂಗಪಡಿಸಿಲ್ಲ. ಈ ಹೊಸ (new )ಹೋಂಡಾ 100cc ಬೈಕ್ ಸಣ್ಣ ಸಾಮರ್ಥ್ಯದ ಎಂಜಿನ್‌ನೊಂದಿಗೆ ಬರುವ ಸಾದ್ಯತೆಗಳಿದೆ ಎನ್ನಲಾಗುತ್ತಿದೆ. ಪ್ರಸ್ತುತ, ಹೋಂಡಾ ಎರಡು 110cc ಮೋಟಾರ್ ಸೈಕಲ್‌ಗಳ ಮಾದರಿ ಹೊಂದಿದ್ದು, ಅದು CD 110 DLX ಮತ್ತು Livo ಆಗಿದೆ.
ಹೋಂಡಾ 100cc ಬೈಕ್ ವಿಶೇಷತೆ :
• ಈ ಬೈಕ್ ಗಳು 109.51cc ಸಿಂಗಲ್-ಸಿಲಿಂಡರ್ ಎಂಜಿನ್‌ನಿಂದ ಚಾಲಿತವಾಗಿದೆ.
• ಈ ಎಂಜಿನ್ 7,500 rpm ನಲ್ಲಿ ಗರಿಷ್ಠ 8.7 bhp ಪವರ್ ಮತ್ತು 5,500 rpm ನಲ್ಲಿ 9.3 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
• ಈ ಎಂಜಿನ್ ಅನ್ನು 4-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ.
• ಈ ಬೈಕ್ 65 ಕಿ.ಮೀ ಗಿಂತ ಹೆಚ್ಚು ಮೈಲೇಜ್ ಅನ್ನು ನೀಡುತ್ತದೆ.
• ಈ ಬೈಕಿನಲ್ಲಿ ಅಲಾಯ್ ವ್ಹೀಲ್ ಗಳು, ಸಿಂಗಲ್-ಪೀಸ್ ಸೀಟ್ ಮತ್ತು ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್ ಅನ್ನು ಹೊಂದಿರುತ್ತದೆ.
• 100cc ಹೋಂಡಾ ಬೈಕ್ ಸಸ್ಪೆಕ್ಷನ್ ಸೆಟಪ್ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಟ್ವಿನ್-ಸೈಡೆಡ್ ರಿಯರ್ ಶಾಕ್ ಅಬ್ಸಾರ್ಬರ್‌ಗಳನ್ನು ಹೊಂದಿರುತ್ತದೆ.
• ಇನ್ನು ಸಂಯೋಜಿತ ಬ್ರೇಕಿಂಗ್ ಸಿಸ್ಟಮ್, ಎಲೆಕ್ಟ್ರಿಕ್ ಸ್ಟಾರ್ಟ್ ಫಂಕ್ಷನ್, ಗಟ್ಟಿಮುಟ್ಟಾದ ಗ್ರ್ಯಾಬ್ ರೈಲ್ ಮುಂತಾದವನ್ನು ಒಳಗೊಂಡಿದೆ .
• ಅದಲ್ಲದೆ ನೇರವಾದ ಹ್ಯಾಂಡಲ್‌ಬಾರ್, ಸೆಮಿ -ಡಿಜಿಟಲ್ ಕ್ಲಸ್ಟರ್ ಇತ್ಯಾದಿಗಳು ಲಭ್ಯವಿರುತ್ತವೆ.
ಸದ್ಯ ಹೋಂಡಾ 100cc ಬೈಕಿಗೆ ಸುಮಾರು ರೂ.60,000 ರಿಂದ ರೂ.70,000 ವರೆಗೆ ಬೆಲೆ ಹೊಂದಿದ್ದು, ಹೋಂಡಾ ಕಂಪನಿಯು 100cc ವಿನ್ಯಾಸವು ಶೈನ್ ಬೈಕಿನ ರೀತಿಯಲ್ಲಿ ಇರಬಹುದು ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಆಕರ್ಷಕ ಬೆಲೆ, ಸ್ಮಾರ್ಟ್ ಸ್ಟೈಲಿಂಗ್, ಅತ್ಯುತ್ತಮ ಇಂಧನ ದಕ್ಷತೆಯ ಅಂಕಿಅಂಶಗಳು ಈ ಬೈಕಿನ ಬೇಡಿಕೆಯನ್ನು ಇನ್ನೂ ಹೆಚ್ಚಿಸಬಹುದು.