Vaseline Brand Story : ಭರ್ಜರಿ 150 ವರ್ಷಗಳ ಕಾಲದಿಂದ ಬೇಡಿಕೆಯಲ್ಲಿರುವ ʼವ್ಯಾಸಲೀನ್ʼ! ಗಾಯ ವಾಸಿ ಮಾಡುವ ಮೇಣ ವ್ಯಾಸಲೀನ್ ಆಗಿದ್ದು ಹೇಗೆ? ರೋಚಕ ಕಥೆ ನಿಮಗಾಗಿ
Vaseline Brand Story : ಭರ್ಜರಿ 150 ವರ್ಷಗಳ ಕಾಲದಿಂದ ಬೇಡಿಕೆಯಲ್ಲಿರುವ ʼವ್ಯಾಸಲೀನ್ʼ! ಗಾಯ ವಾಸಿ ಮಾಡುವ ಮೇಣ ವ್ಯಾಸಲೀನ್ ಆಗಿದ್ದು ಹೇಗೆ? ರೋಚಕ ಕಥೆ ನಿಮಗಾಗಿ
ವ್ಯಾಸಲೀನ್ ಇದನ್ನು ಕೇಳದವರು ಯಾರಿದ್ದಾರೆ? ಭಾರತದಾದ್ಯಂತ ಇದನ್ನು ಉಪಯೋಗಿಸದ ಜನವೇ ಇರಲಿಕ್ಕಿಲ್ಲ. ಅಂತಿಪ್ಪ ಈ ವ್ಯಾಸಲೀನ್ ಕಂಡು ಹಿಡಿದದ್ದು ಯಾರು? ಎಲ್ಲಾ ವಿವರಗಳನ್ನು (Vaseline Brand Story) ಇಲ್ಲಿ ನೀಡಲಾಗಿದೆ.
ಬರೋಬ್ಬರಿ 150 ವರ್ಷಗಳಿಂದ ವ್ಯಾಸಲೀನ್ ಚರ್ಮದ ಆರೈಕೆಗೆಂದೇ ಇರುವ ನಿರಂತರ ಬೇಡಿಕೆಯಲ್ಲಿರುವ ಉತ್ಪನ್ನವಾಗಿದೆ. ವಿಶ್ವದ 70ಕ್ಕೂ ಹೆಚ್ಚು ದೇಶಗಳಲ್ಲಿ ಈ ಬ್ರ್ಯಾಂಡ್ ಮಾರಾಟವಾಗುತ್ತಿದೆ. ಕೋಟಿಗಟ್ಟಲೆ ಜನರು ಇದನ್ನು ಬಳಸುತ್ತಿದ್ದಾರೆ. ವ್ಯಾಸಲೀನ್ ಅನ್ನು ಚರ್ಮದ ಆರೈಕೆಗಾಗಿ ಮಾತ್ರವಲ್ಲ, ಸಣ್ಣ ಗಾಯಗಳನ್ನು ಗುಣಪಡಿಸಲು ಸಹ ಬಳಸಲಾಗುತ್ತದೆ. ಇಂತಹ ವಿಶ್ವಪ್ರಸಿದ್ಧ ಉತ್ಪನ್ನವನ್ನು ಕಂಡು ಹಿಡಿದ ವ್ಯಕ್ತಿ, ಹಾಗೂ ಇದರ ಸಂಪೂರ್ಣ ಶ್ರೇಯಸ್ಸು ಸಲ್ಲಬೇಕಾದದ್ದು ಅಮೇರಿಕನ್ ರಸಾಯನಶಾಸ್ತ್ರಜ್ಞ ರಾಬರ್ಟ್ ಆಗಸ್ಟಸ್ಗೆ.
ವ್ಯಾಸಲಿನ್ ಹುಟ್ಟಿಕೊಂಡ ಬಗೆ
22 ನೇ ವಯಸ್ಸಿನಲ್ಲಿ ರಾಬರ್ಟ್ ಪೆನ್ಸಿಲ್ವೇನಿಯಾ ಪ್ರವಾಸದ ಸಮಯದಲ್ಲಿ, ಹಡಗಿನಲ್ಲಿ ಕೆಲಸ ಮಾಡುವ ಕೆಲಸಗಾರರು ತೈಲ ಪೈಪ್ನಿಂದ ಮೇಣವನ್ನು ತೆಗೆದು ತಮ್ಮ ಗಾಯಗಳ ಮೇಲೆ ಲೇಪಿಸುತ್ತಿದ್ದುದನ್ನು ಗಮನಕ್ಕೆ ಬಂದಿತ್ತು. ಈ ಬಗ್ಗೆ ಓರ್ವ ಕೆಲಸಗಾರರನ್ನು ಮಾತನಾಡಿಸಿದಾಗ ಅದು ಗಾಯ ವಾಸಿ ಮಾಡುವ ಕೆಲಸ ಮಾಡುತ್ತದೆ ಎಂಬುದಷ್ಟು ಆತನಿಂದ ತಿಳಿಯಿತು. ಇದಾದ ನಂತರವೇ ನಡೆದದ್ದು ಆ ಮೇಣದ ಸಂಶೋಧನೆ.
ವ್ಯಾಸಲೀನ್ ಹೆಸರು ಬಂದಿದ್ದು ಹೇಗೆ
ಮೇಣವು ಒಣ ಚರ್ಮ ಮತ್ತು ಗಾಯಗಳನ್ನು ಗುಣಪಡಿಸುವ ಪೆಟ್ರೋಲಿಯಂ ಜೆಲ್ಲಿಯ ಒಂದು ವಿಧವಾಗಿದೆ ಎಂದು ಸಂಶೋಧನೆಯ ಸಮಯದಲ್ಲಿ ರಾಬರ್ಟ್ ಅವರಿಗೆ ಗೊತ್ತಾಗಿದೆ. ಅಂದ ಹಾಗೆ ರಾಬರ್ಟ್ ಅವರು 1872 ರಲ್ಲಿ ಆ ಮೇಣಕ್ಕೆ ವ್ಯಾಸಲೀನ್ ಎಂದು ಹೆಸರಿಟ್ಟರು. ಇದು ಎರಡು ಪದಗಳಿಂದ ಮಾಡಲ್ಪಟ್ಟಿದೆ. ವಾಸರ್ ಮತ್ತು ಅಲಿಯೋನ್. WASSER ಎಂಬುದು ಜರ್ಮನ್ ಪದವಾಗಿದೆ, ಇದರರ್ಥ ನೀರು ಮತ್ತು ALLIONE ಎಂದರೆ ಆಲಿವ್ ಎಣ್ಣೆ. ಆಲಿವ್ ಎಣ್ಣೆಯಂತೆ, ವ್ಯಾಸಲೀನ್ ಚರ್ಮವನ್ನು ತೇವಗೊಳಿಸಲು ಮತ್ತು ಗಾಯಗಳನ್ನು ಗುಣಪಡಿಸಲು ಬಳಸಲಾಗುತ್ತದೆ. ಹೀಗಾಗಿ ಇದಕ್ಕೆ ವ್ಯಾಸಲೀನ್ ಎಂಬ ಹೆಸರು ಬಂದಿದೆ. ಅದಕ್ಕೆ ಯಾವುದೇ ಬಣ್ಣವಾಗಲೀ ವಾಸನೆಯಾಗಲೀ ಇರಲಿಲ್ಲ.
ಬಾಟಲಿಗಳಲ್ಲಿ ಮಾರಾಟವಾಗುತ್ತಿತ್ತು ವ್ಯಾಸಲಿನ್:
ಉತ್ತರ ಅಮೆರಿಕಾದ ಕಾರ್ಖಾನೆಯೊಂದರಲ್ಲಿ ವ್ಯಾಸಲಿನ್‌ನ ಮೊದಲ ಉತ್ಪನ್ನವನ್ನು ರಾಬರ್ಟ್ ಬ್ರೂಕ್ಲಿನ್‌ನಲ್ಲಿ ಪ್ರಾರಂಭಿಸಿದರು. ಈ ಉತ್ಪನ್ನವನ್ನು ಹಿಡಿದುಕೊಂಡು, ರಾಬರ್ಟ್ ಕುದುರೆ ಸವಾರಿಯ ಮೂಲಕ ಅಮೆರಿಕದ ಹಲವು ರಾಜ್ಯಗಳಿಗೆ ಪ್ರಯಾಣ ಮಾಡಿ, ಜನರಿಗೆ ಉತ್ಪನ್ನದ ಪ್ರಯೋಜನಗಳನ್ನು ವಿವರಿಸಿದರು. ಎರಡು ವರ್ಷಗಳ ಕಾಲ ಬ್ರ್ಯಾಂಡಿಂಗ್ ಮಾಡಿದ ನಂತರ, ಇದು ಅಮೇರಿಕನ್ ಜನರಲ್ಲಿ ಎಷ್ಟು ಜನಪ್ರಿಯವಾಯಿತು ಎಂದರೆ ಒಂದು ದಿನದಲ್ಲಿ 1400 ಟಿನ್‌ಗಳು ಮಾರಾಟವಾದವು.
ಕ್ರಮೇಣ, ಪ್ರಪಂಚದ ಅನೇಕ ದೇಶಗಳಲ್ಲಿ ವ್ಯಾಸಲೀನ್ ಬಳಕೆಯು ಹೆಚ್ಚಾಯಿತು. ಕಂಪನಿಯು ಅದಕ್ಕೆ ಸಂಬಂಧಿಸಿದ ಇತರ ಉತ್ಪನ್ನಗಳನ್ನು ತಯಾರಿಸಲು ಪ್ರಾರಂಭಿಸಿತು. 1968 ರಲ್ಲಿ US ನಲ್ಲಿ ವ್ಯಾಸಲೀನ್ ಲೋಷನ್ ಅನ್ನು ಪ್ರಾರಂಭಿಸಲಾಯಿತು. ಇದನ್ನು ಸೂರ್ಯನ ನಂತರದ ಮಾಯಿಶ್ಚರೈಸರ್ ಎಂದು ಬ್ರಾಂಡ್ ಮಾಡಲಾಯಿತು. ಇದರ ನಂತರ ವ್ಯಾಸಲೀನ್‌ನ ಲಿಪ್ ಕೇರ್ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಯಿತು ಮತ್ತು ಒಂದರ ನಂತರ ಒಂದರಂತೆ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಯಿತು. 1987 ರಲ್ಲಿ, ಯೂನಿಲಿವರ್ ರಾಬರ್ಟ್ ಕಂಪನಿಯನ್ನು ಖರೀದಿ ಮಾಡಿತು.
ವ್ಯಾಸಲೀನ್ ಭಾರತಕ್ಕೆ ಯಾವಾಗ ಬಂತು?
ಅಮೇರಿಕಾದಲ್ಲಿ ಜನಪ್ರಿಯವಾದ ನಂತರ, ವ್ಯಾಸಲೀನ್ ಇತರ ದೇಶಗಳಿಗೆ ಪಸರಿಸಿತು. ಈ ಕಂಪನಿಯು 1947 ರಲ್ಲಿ ಭಾರತವನ್ನು ತಲುಪಿತು, ಆದರೆ ಆರಂಭಿಕ ಹಂತದಲ್ಲಿ ಕಂಪನಿಯು ಭಾರತಕ್ಕಿಂತ ಚೀನಾದಲ್ಲಿ ಹೆಚ್ಚಿನ ಯಶಸ್ಸನ್ನು ಪಡೆಯಿತು. ಭಾರತದಲ್ಲಿ ಅದರ ಪ್ರಚಾರ ಮತ್ತು ಉತ್ಪನ್ನಗಳ ರೀತಿಯಲ್ಲಿ ನಿರಂತರ ಬದಲಾವಣೆಯೊಂದಿಗೆ, ಜನರ ಒಲವು ಹೆಚ್ಚಾಯಿತು. ಕಂಪನಿಯು ತನ್ನ ಉತ್ಪನ್ನಗಳನ್ನು ಭಾರತದಲ್ಲಿ ಜಾಹೀರಾತುಗಳ ಮೂಲಕ ‘ರೌನಕ್ ಕಿ ಡಿಬ್ಬಿಯಾ ಖುಲ್ ಗಯೀ ರೇ’ ಎಂಬ ಸಾಲಿನಿಂದ ಪ್ರಚಾರ ಮಾಡಿತು.
ನಂತರ ಇದು ಭಾರತದಲ್ಲಿ ಜನಪ್ರಿಯತೆಯನ್ನು ಪಡೆಯಿತು. ಹಾಗೂ ಕಂಪನಿಗೂ ಲಾಭವಾಯಿತು. ಮೊದಲು ಇದು ಚರ್ಮದ ಉತ್ಪನ್ನವಾಗಿ ಆಯ್ಕೆಯಾಗಿತ್ತು. ಅನಂತರ 2022ರಲ್ಲಿ ಭಾರತೀಯರ ಅಗತ್ಯತೆ ಮತ್ತು ಹವಾಮಾನವನ್ನು ಪರಿಗಣನೆ ಮಾಡಿ ಅನೇಕ ಉತ್ಪನ್ನಗಳನ್ನು ಬಿಡುಗಡೆ ಮಾಡಿತು.