ಗಾಯಕ ಸಿಧು ಮೂಸೆವಾಲಾ ಕೊಲೆ ಪ್ರಕರಣದ ಆರೋಪಿಗಳ ನಡುವೆ ರಕ್ತಸಿಕ್ತ ಘರ್ಷಣೆ: ಇಬ್ಬರ ಸಾವು, ಮೂರನೆಯವನ ಸ್ಥಿತಿ ಗಂಭೀರ !
Sidhu Moosewala : ಸಿಧು ಮೂಸೆವಾಲಾ(Sidhu Moosewala) ಹತ್ಯೆ ಪ್ರಕರಣದ ಆರೋಪಿಗಳಾದ ಮನದೀಪ್(Mandeep) ತೂಫಾನ್(Thufan), ಮನಮೋಹನ್ ಸಿಂಗ್(Manamohan Sing) ಮತ್ತು ಕೇಶವ್(Keshav) ಅವರ ನಡುವೆಯೇ ಘರ್ಷಣೆ ನಡೆದಿದ್ದು, ಗ್ಯಾಂಗ್ ಸ್ಟರ್ ಗಳಾದ ಮನದೀಪ್ ತೂಫಾನ್ ಮತ್ತು ಮನಮೋಹನ್ ಸಾವನ್ನಪ್ಪಿದ್ದಾರೆ.
ಈ ಜಗಳದಲ್ಲಿ ಗ್ಯಾಂಗ್ ಸ್ಟರ್ ಆದ ಕೇಶವ್ ಗಂಭೀರವಾಗಿ ಗಾಯಗೊಂಡಿದ್ದಾನೆ. ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ಮೂವರು ಆರೋಪಿಗಳನ್ನು ಪಂಜಾಬ್ನ(Panjab) ಗೋಯಿಂದ್ವಾಲ್(Goindwal) ಜೈಲಿನಲ್ಲಿ ಇರಿಸಲಾಗಿದ್ದು, ಅಲ್ಲಿ ಅವರ ನಡುವೆ ಘರ್ಷಣೆ ನಡೆದಿದೆ. ಆ ಘರ್ಷಣೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕೇಶವ್ ಅವರನ್ನು ಅಮೃತಸರದ ಗುರುನಾನಕ್ ದೇವ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಪೊಲೀಸರು ದಾಖಲಿಸಿದ್ದು, ಚಿಕಿತ್ಸೆ ಮುಂದುವರಿದಿದೆ. ಗ್ಯಾಂಗ್ ಸ್ಟರ್ ಕೇಶವನ ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ವರ್ಷ ಮೇ 29ರಂದು ಪಂಜಾಬಿನ ಮಾನ್ಸಾ ಜಿಲ್ಲೆಯಲ್ಲಿ ಸಿಧು ಮುಸೇವಾಲಾ ಎಂಡೇ ಖ್ಯಾತರಾಗಿದ್ದ ಪಂಜಾಬಿ ಗಾಯಕ ಶುಭದೀಪ್ ಸಿಂಗ್(Shubadeep Sing) ಸಿಧುರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ತಂಡದ ಸದಸ್ಯ ಸತೀಂದರ್ಜಿತ್ ಸಿಂಗ್ ಅಲಿಯಾಸ್ ಗೋಲ್ಡಿ ಬ್ರಾರ್ ಈ ಹತ್ಯೆಯ ಹೊಣೆ ಹೊತ್ತಿದ್ದ. ಮೂಸೆವಾಲಾ ಹತ್ಯೆಯಲ್ಲಿ ಭಾಗಿಯಾಗಿದ್ದ ಇಬ್ಬರು ದರೋಡೆಕೋರರಾದ ಮನದೀಪ್ ತೂಫಾನ್ ಮತ್ತು ಮನಮೋಹನ್ ಸಿಂಗ್ ಈಗ ಪರಸ್ಪರ ಮೂಡಿದ ವೈಮನಸ್ಸಿನಿಂದ ತಮ್ಮ ತಮ್ಮಲ್ಲೇ ಜಗಳ ಆಡಿಕೊಂಡಿದ್ದಾರೆ. ಅದರಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. .
ಗ್ಯಾಂಗ್ ಸ್ಟರ್ ಮನದೀಪ್ ತೂಫಾನ್ ಜಗ್ಗು ಭಗವಾನ್ಪುರಿ ಗ್ಯಾಂಗ್ನ ಶಾರ್ಪ್ ಶೂಟರ್ ಆಗಿದ್ದು, ಆತನನ್ನು ತರ್ನ್ ತರನ್ನ ವೈರೋವಾಲ್ ಪೊಲೀಸ್ ಠಾಣೆಯ ಖಾಖ್ ಗ್ರಾಮದಿಂದ ಬಂಧಿಸಲಾಗಿತ್ತು. ಈಗ ಹಲ್ಲೆ ಮಾಡಿಕೊಂಡ ಮೂವರ ತಲೆಯ ಮೇಲೆ ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಲಾಗಿದ್ದು, ಇಬ್ಬರು ಗ್ಯಾಂಗ್ ಸ್ಟರ್ ಗಳು ಸಾವನ್ನಪ್ಪಿದ್ದಾರೆ, ಮೂರನೇ ಗ್ಯಾಂಗ್ ಸ್ಟರ್ ಕೇಶವನ ಸ್ಥಿತಿ ಚಿಂತಾಜನಕವಾಗಿದೆ ಎಂದು ಡಿಎಸ್ಪಿ ಜಸ್ಪಾಲ್ ಸಿಂಗ್ ಧಿಲ್ಲೋನ್ ಹೇಳಿದ್ದಾರೆ.
ಗತಿಂಡಾ ನಿವಾಸಿ ಕೇಶವ್ ಮತ್ತು ಬದ್ಲಡಾ ನಿವಾಸಿ ಮನಮೋಹನ್ ಸಿಂಗ್ ಮೋಹನ ಅವರನ್ನು ಸಿವಿಲ್ ಆಸ್ಪತ್ರೆಗೆ ತರನ್ ತರನ್ಗೆ ದಾಖಲಿಸಲಾಗಿತ್ತು. ಚಿಕಿತ್ಸೆ ವೇಳೆ ಮನಮೋಹನ್ ಸಿಂಗ್ ಸಾವನ್ನಪ್ಪಿದ್ದಾರೆ. ಮತ್ತೊಬ್ಬನಿಗೆ ಚಿಕಿತ್ಸೆ ನಡೆಯುತ್ತಿದೆ. ಈ ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆಸಲಾಗುತ್ತಿದೆ ಎಂದು ಎಸ್ಎಸ್ಪಿ ಗುರ್ಮೀತ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.