Mankurad mangoes: ರುಚಿಯಲ್ಲಿ ನಂಬರ್ ವನ್! ಈ ಮಾವಿನ ಹಣ್ಣಿನ ಬೆಲೆ 6000 ರೂ.! ಯಾಕಂತೀರಾ?
Mankurad mangoes: ಸದ್ಯ ಮಾವಿನ ಹಣ್ಣು(mangoes )ಪ್ರತಿಯೊಬ್ಬರಿಗೂ ಇಷ್ಟವಾದ ಹಣ್ಣು(fruits). ನಿಮಗೂ ಒಂದು ಕ್ಷಣ ಬಾಯಲ್ಲಿ ನೀರೂರಬಹುದು. ಹೌದು ಈ ಸಮಯದಲ್ಲಿ ಮಾವಿನ ಹಣ್ಣಿಗೆ ವಿಶೇಷ ಬೇಡಿಕೆ. ಸದ್ಯ ದೇಶದ ದಕ್ಷಿಣ ಭಾಗಗಳಲ್ಲಿ, ಇನ್ಮುಂದೆ ಮಾವಿನ ಹಣ್ಣಿನ ಸೀಸನ್ ಶುರುವಾಗಲಿದೆ. ಇದೀಗ ಇಲ್ಲಿ ವಿಶೇಷ ಮಾವಿನ ಬಗ್ಗೆ ತಿಳಿಸಲಾಗಿದೆ.
ಹೌದು ಚಿನ್ನದ ಬಣ್ಣ ಹೊಂದಿರುವ ವಿಶೇಷ ಮಾವಿನ ಹಣ್ಣಿನ ಬಗ್ಗೆ ನೀವು ಕೇಳಿದ್ದೀರಾ. ಸದ್ಯ ವಿಶೇಷವೆಂದರೆ ಗೋವಾದಲ್ಲಿ ಮಂಕುರಾಡ್ ಪ್ರಭೇದದ ಒಂದು ಡಜನ್ ಹಳದಿ ರಸಭರಿತವಾದ ಹಣ್ಣನ್ನು ಪಣಜಿ ಮಾರುಕಟ್ಟೆಯಲ್ಲಿ ಪ್ರತಿ ಡಜನ್ಗೆ 6000 ರೂ. ಬೆಲೆಗೆ ಮಾರಾಟ ಮಾಡಲಾಗುತ್ತಿದೆಯಂತೆ. ಅಂದರೆ ಒಂದು ಹಣ್ಣಿಗೆ ಸುಮಾರು 500 ರೂ. ಪಾವತಿಸಬೇಕು.
ಸದ್ಯ ಗೋವಾದ ಮಂಕುರಾಡ್(mankurad mangoes)ಮಾವು ಸುಮಾರು 200-250 ಗ್ರಾಂ ತೂಗುತ್ತದೆ. ಇದು ರುಚಿಯಲ್ಲಿ ಸಮೃದ್ಧವಾಗಿದೆ ಮತ್ತು ಇದು ಚಿಕ್ಕದಾದ ಮತ್ತು ಚಪ್ಪಟೆಯಾದ ಮಾವಿನ ಬೀಜವನ್ನು ಹೊಂದಿದೆ ಆದ್ದರಿಂದ ಇದು ಹೆಚ್ಚು ತಿರುಳಿನ ಅಂಶಕ್ಕೆ ಕಾರಣವಾಗುತ್ತದೆ. ಈ ಮಾವಿನ ತಳಿಯು ಇತರ ಆಲ್ಫಾನ್ಸೊ ಮಾವಿನ ತಳಿಗಳಿಗಿಂತ ಹೆಚ್ಚು ರಸಭರಿತ ಮತ್ತು ತಿರುಳಾಗಿರುತ್ತದೆ ಎಂದು ಹೇಳಲಾಗುತ್ತದೆ. ಆದ್ದರಿಂದ ಈ ಮಾವಿನ ಹಣ್ಣಿಗೆ ವಿಶೇಷ ಬೇಡಿಕೆಯಂತೆ.
ಇದೀಗ ಪಣಜಿಯ ಹಣ್ಣು ಮಾರುಕಟ್ಟೆಯ ಮಾರಾಟಗಾರರ ಪ್ರಕಾರ, ಈಗ ಮಂಕುರಾಡ್ ಮಾವಿನ ಬೆಲೆಯು 6000 ರೂ.ನಿಂದ 5000 ರೂ.ಗೆ ಇಳಿದಿದೆ ಎಂದು ಹೇಳಿದ್ದಾರೆ. ಕಳೆದ ವಾರ, ನಾವು 6000 ರೂಪಾಯಿಗಳಿಗೆ ಮಾರಾಟ ಮಾಡುತ್ತಿದ್ದೆವು. ಈಗ ದರವು 5000 ರೂಪಾಯಿಗಳಿಗೆ ಇಳಿದಿದೆ. ಏಕೆಂದರೆ ಈಗ ಎರಡನೇ ವಿಧದ ಮಾವಿನಹಣ್ಣು ಸಹ ಮಾರುಕಟ್ಟೆಯಲ್ಲಿ ಬಂದಿದೆ” ಎಂದು ಹೇಳಿದ್ದಾರೆ. ಒಂದು ಮಂಕುರಾಡ್ ಮಾವಿನಹಣ್ಣಿನ ಬೆಲೆ 400 ರೂ ನಿಂದ 500 ರೂ ವರೆಗೆ ಇರುತ್ತದೆ. “ನಾವು ಉತ್ತಮ ಮಾರಾಟವನ್ನು ಮಾಡುತ್ತೇವೆ. ಆದರೆ ಅದರ ಬೆಲೆಯನ್ನು ನೀಡುವವರನ್ನು ಮಾತ್ರ ಖರೀದಿಸಬಹುದು” ಎಂದು ಮಾರಾಟಗಾರರು ಹೇಳುತ್ತಾರೆ.
ಈ ಹಣ್ಣಿನ ಬಗ್ಗೆ ಅಮೆರಿಕಾದಲ್ಲಿ ವಾಸಿಸುವ ಮಹಿಳೆಯೊಬ್ಬರು ಹೊರಡುವ ಮೊದಲು ಆರು ಮಂಕುರಾಡ್ ಮಾವಿನಹಣ್ಣನ್ನು ಖರೀದಿಸಿದ್ದಾರೆ. “ಮಂಕುರಾಡ್ ಗಿಂತ ಉತ್ತಮವಾದದ್ದೇನೂ ಇಲ್ಲ. ಅಮೆರಿಕಾದಲ್ಲಿ ಅದ್ಭುತವಾದ ಮಾವಿನಹಣ್ಣು ಕಂಡುಬಂದರೂ, ಮಂಕುರಾಡ್ ಮಾವಿನಹಣ್ಣನ್ನು ಅವುಗಳಿಗೆ ಹೋಲಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ
ಪ್ರಸ್ತುತ, ದುಬಾರಿ ಮಂಕುರಾಡ್ ಮಾವಿನಹಣ್ಣನ್ನು ಪ್ರತಿ ಹಣ್ಣಿಗೆ 400 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇತರ ಪ್ರಭೇದಗಳನ್ನು ಪ್ರತಿ ಕೆಜಿಗೆ 300-500 ರೂಗೆ ಮಾರಾಟವಾಗುತ್ತಿದೆ. ಕೆಲವು ಜನರು ಪ್ರಸ್ತುತ ಮಂಕುರಾಡ್ ಮಾವಿನ ಹಣ್ಣನ್ನು ಮಾರಾಟ ಮಾಡುತ್ತಿದ್ದಾರೆ. ಇತರ ಅನೇಕ ಸ್ಥಳೀಯ ಮಾವಿನ ಪ್ರಭೇದಗಳು ಇನ್ನೂ ಮಾರುಕಟ್ಟೆಗೆ ಬಂದಿಲ್ಲ ಎಂದು ತಿಳಿಸಲಾಗಿದೆ.