ಹೆಂಡತಿ ಗಂಡನಿಗೆ ಕೊಡಲಾಗದ್ದು ಇದು, ಏನದು? ವ್ಯಕ್ತಿಯೋರ್ವ ನೀಡಿದ ಈ ಉತ್ತರ ಸಖತ್ ವೈರಲ್!
Hilarious Answer: Viral video: ಸೋಷಿಯಲ್ ಮೀಡಿಯಾದಲ್ಲಿ ಅದೆಷ್ಟೋ ವಿಡಿಯೋಗಳು ದಿನಂಪ್ರತಿ ವೈರಲ್ ಆಗುತ್ತಿರುತ್ತದೆ. ಅವುಗಳಲ್ಲಿ ಕೆಲವು ನಮ್ಮನ್ನು ಅಚ್ಚರಿಯ ಕದ ತಟ್ಟಿದರೆ ಮತ್ತೆ ಕೆಲವು ನಮ್ಮನ್ನು ನಗೆಗಡಲಲ್ಲಿ ತೇಲುವಂತೆ ಮಾಡುತ್ತವೆ. ಸದ್ಯ ವೈರಲ್ (Viral Video)ಆಗುತ್ತಿರುವ ವಿಡಿಯೋ ತುಣುಕುಗಳು ನೆಟ್ಟಿಗರ ಯೋಚನೆಗೆ ತಳ್ಳಿ ಹೊಟ್ಟೆ ಹುಣ್ಣಾಗುವಂತೆ ನಗಿಸುವಲ್ಲಿ ಯಶಸ್ವಿಯಾಗಿದೆ. ಹಾಗಿದ್ರೆ, ಅಂತಹದ್ದೇನು ಕಹಾನಿ ಅನ್ನೋ ಕುತೂಹಲ ನಿಮಗೂ ಇದ್ದರೆ ನೀವೂ ಇಂಟರೆಸ್ಟಿಂಗ್ ವಿಷಯ ಕೇಳಲೇಬೇಕು.
ಪ್ರೀತಿಸಿ ಮದುವೆಯಾಗಿ ಸಪ್ತಪದಿ ತುಳಿದು ಮನೆ ಸೇರುವ ಮೊದಲೇ ಏನೋ ಒಂದು ರಾಮಾಯಣ ರಂಪಾಟ ಮಾಡಿ ನಾನೊಂದು ತೀರ. ನೀನೊಂದು ತೀರ ಎಂದು ಬೀದಿ ಗಲಾಟೆ ಮಾಡಿ ಗಂಡ ಹೆಂಡತಿ(Wife) ನಡುವೆ ಸಣ್ಣ ಪುಟ್ಟ ವಿಚಾರಕ್ಕೂ ಜಗಳ ನಡೆಯೋದು ಕಾಮನ್. ಗಂಡ (Husband)ಹೆಂಡಿರ ಜಗಳ ಉಂಡು ಮಲಗುವ ತನಕ ಅಂತ ಸುಖಿ ಸಂಸಾರ ನಡೆಸುವವರು ಕೂಡ ಇದ್ದಾರೆ ಅನ್ನೋದು ಕೂಡ ಅಷ್ಟೇ ಸತ್ಯ. ಈಗಾಗಲೇ ಗಂಡ ಹೆಂಡತಿ ಕುರಿತ ಅದೆಷ್ಟೋ ಹಾಸ್ಯ(Joke) ವಿಡಂಬನಾತ್ಮಕ ಹಾಗೂ ವರ್ಣನೆ ಮಾಡುವ ಅನೇಕ ಕವನಗಳನ್ನು ನಾವು ಕೇಳಿದ್ದೇವೆ. ಸದ್ಯ, ವೈರಲ್(Viral Video) ಆಗಿರುವ ವೀಡಿಯೋ ನಿಮ್ಮ ಮುಖದಲ್ಲಿ ಒಂದು ಸುಂದರ ನಗು ತರಿಸುವುದರಲ್ಲಿ ಸಂಶಯವಿಲ್ಲ.
ಹೆಣ್ಣು (women)ಅರ್ಥಕ್ಕೆ ನಿಲುಕದ ಕಗ್ಗಂಟು ಎನ್ನುವುದನ್ನು ಹೆಚ್ಚಿನವರು ಹೇಳೋದನ್ನು ನೀವು ಕೇಳಿರುತ್ತೀರಿ. ಅಷ್ಟೆ ಏಕೆ ನಿಮಗೂ ಈ ಅನುಭವ ಆಗಿರಬಹುದು. ಏನೋ ಕೇಳಲು ಹೋಗಿ ಪೆಚ್ಚು ಮೋರೆ ಹಾಕಿಕೊಂಡು ಬಂದು ಹೆಂಗಸರ ಮನಸ್ಥಿತಿ ಅರಿಯಲು ಸಾಧ್ಯವೆ ಇಲ್ಲ ಎನ್ನುವ ಕನ್ಕ್ಲುಷನ್ ಗೆ ಬಂದಿರುತ್ತೀರಿ. ಆದರೆ, ಎಲ್ಲರಿಗೂ ಒಂದೇ ರೀತಿಯ ಅನುಭವ ಅಗಬೇಕೆಂದೆನು ಇಲ್ಲ!! ಹಾಗಾಗಿ, ಯಾವುದೇ ವಿಚಾರವನ್ನು, ವ್ಯಕ್ತಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅರ್ಥೈಸಿಕೊಳ್ಳುವುದು ಕಷ್ಟವೇನಲ್ಲ ಎಂಬ ಅಭಿಪ್ರಾಯ ಕೆಲವರಿಗೆ ಮೂಡಿದರೂ ಅಚ್ಚರಿಯಿಲ್ಲ. ಈ ವಿಚಾರಕ್ಕೂ ವೈರಲ್ ಆಗಿರುವ ಸುದ್ದಿಗೂ ಎಲ್ಲಿಂದೆಲ್ಲಿಯ ನಂಟು? ಅಂತೀರಾ?
ಪಾಕಿಸ್ತಾನಿ ವರದಿಗಾರ್ತಿ ಹೆಂಡತಿಯ ಕುರಿತು ಪ್ರಶ್ನೆಯೊಂದನ್ನು ಕೇಳಿದ್ದು, ಅದಕ್ಕೆ ಪುರುಷರು ವಿಭಿನ್ನ ರೀತಿಯಲ್ಲಿ ಉತ್ತರ ನೀಡಿದ್ದಾರೆ. ಆದರೆ, ಈ ನಡುವೆ ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತಿಯೊಬ್ಬ ಇಂಟರೆಸ್ಟಿಂಗ್ ಉತ್ತರ ನೀಡಿದ್ದು (Hilarious Answer) ಸದ್ಯ ಈ ವಿಡಿಯೋ ತುಣಕುಗಳು ವೈರಲ್ ಆಗಿ ಸಂಚಲನ ಸೃಷ್ಟಿ ಮಾಡಿದೆ. ಹಾಗಿದ್ರೆ, ಆತ ಹೇಳಿದ್ದಾದರು ಏನು?
ಪಾಕಿಸ್ತಾನಿ ವರದಿಗಾರ್ತಿಯೊಬ್ಬಳು ಸಹಜವಾಗಿ ಪ್ರಶ್ನೆ ಕೇಳಿದ್ದು,ಅದಕ್ಕೆ ಆತ ನೀಡಿದ ಪ್ರತಿಕ್ರಿಯೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಸಂದರ್ಶಕಿ ಕೇಳುವ ಸಾಮಾನ್ಯ ಜ್ಞಾನದ ಪ್ರಶ್ನೆಗೆ ಉತ್ತರ ನೀಡುವಂತೆ ಕೇಳಿದ್ದು, ಈ ಸಂದರ್ಭದಲ್ಲಿ ಪತ್ನಿ ಎಂದಿಗೂ ಪತಿಗೆ ನೀಡದ ಆ ಒಂದು ವಿಷಯ ಯಾವುದು ಎಂದು ಸಂದರ್ಶಕಿ ಪ್ರಶ್ನೆ ಮಾಡಿದ್ದಾಳೆ. ಆಗ ಉತ್ತರ ನೀಡಲು ವ್ಯಕ್ತಿ ಕೆಲವು ಸೆಕೆಂಡ್ ಯೋಚಿಸಿ ಹಾಸ್ಯಸ್ಪದವಾಗಿ ಶಾಂತಿ ಎಂದು ಹೇಳ್ತಾನೆ. ಈತನ ಉತ್ತರ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದ್ದು, ಇನ್ಸ್ಟಾಗ್ರಾಮ್ ನಲ್ಲಿ ಈ . funny__baba__100k ಹೆಸರಿನ ಖಾತೆಯಲ್ಲಿ ಶೇರ್ ಆಗಿ ವೈರಲ್ ಆಗಿದೆ.
ಸಂದರ್ಶಕಿ ಕೇಳಿದ ಪ್ರಶ್ನೆಗೆ ಉತ್ತರ ಏನು ಎಂಬುದು ನಿಮಗೆಲ್ಲ ಕುತೂಹಲ ಮೂಡಬಹುದು. ಪತ್ನಿ ಗಂಡನ ಶವಕ್ಕೆ ಹೆಗಲು ಕೊಡಲು ಸಾಧ್ಯವಿಲ್ಲ ಅನ್ನೋದು ನಿಜ ಉತ್ತರ. ಹೆಂಡತಿಯನ್ನು ಹಾಸ್ಯದ ವಿಚಾರವಾಗಿ ಕಾಣುವ ಅಭ್ಯಾಸದಿಂದ ಈ ವ್ಯಕ್ತಿ ಕೂಡ ಹಾಗೇ ಉತ್ತರ ನೀಡಿರಬಹುದೇನೋ!! ಆದ್ರೆ ಪ್ರಶ್ನೆಗೆ ತಮಾಷೆಯಾಗಿ ಉತ್ತರಿಸಿದ ವ್ಯಕ್ತಿಗೆ ನಾನಾ ಬಗೆಯ ಕಾಮೆಂಟ್ ಗಳು ಹರಿದು ಬರುತ್ತಿವೆ. ನೆಟ್ಟಿಗರೊಬ್ಬರು ಮೊದಲ ಸಲ ನಿಜ ಹೇಳಿದ್ದಕ್ಕೆ ನೀವು ತುಂಬಾ ಖುಶಿ ಯಿಂದ ಕಾಣ್ತಾ ಇದೀಯಾ!! ಈತನ ಶಬ್ಧದಲ್ಲಿ ಎಷ್ಟು ನೆಮ್ಮದಿ ಅಡಗಿದೆ ಆದರೆ, ನೀನು ಒಮ್ಮೆ ಮನೆಗೆ ಹೋಗು ಆಗ ನಿನಗೆ , ಶಾಂತಿ ಎಂದರೆ ಏನು ಎಂಬ ನೈಜ ಚಿತ್ರಣ ಅನಾವರಣ ಆಗುತ್ತೆ ಎಂದು ಬಳಕೆದಾರರೊಬ್ಬ ಕಾಮೆಂಟ್ ಮಾಡಿದ್ದು, ಸದ್ಯ ಈ ವೈರಲ್ ವೀಡಿಯೋವನ್ನೂ ಅನೇಕ ಮಂದಿ ವೀಕ್ಷಿಸಿದ್ದಾರೆ.