ನಿಮಗಿದು ತಿಳಿದಿರಲಿ, ಪಾಕಿಸ್ತಾನದ ಟ್ರೈನ್ ಗೂ ಭಾರತದ ಟ್ರೈನ್ ಗೆ ಇರುವ ವ್ಯತ್ಯಾಸ ಏನು?

Pakistan Railways: ರೈಲು ಪ್ರಯಾಣ ಎಂದರೆ ಹೆಚ್ಚಿನವರ ಪಾಲಿಗೆ ಅಚ್ಚು ಮೆಚ್ಚು. ನೆಚ್ಚಿನ ತಾಣಗಳ ಸೌಂದರ್ಯ ಸವಿಯುತ್ತಾ ಸಾಗುವ ಪಯಣದ ಹಾದಿಯ ಖುಷಿಯೇ ಬೇರೆ. ಭಾರತೀಯ ರೈಲ್ವೆ ತನ್ನ ಪ್ರಯಾಣಿಕರ ಅನುಕೂಲಕ್ಕಾಗಿ ಅನೇಕ ರೈಲ್ವೆ ನಿಲ್ದಾಣಗಳಲ್ಲಿ ವೈ-ಫೈ ವ್ಯವಸ್ಥೆ, ಎಸ್ಕಲೇಟರ್ ಗಳು ಸೇರಿದಂತೆ ಅನೇಕ ಸೌಲಭ್ಯಗಳನ್ನು ಆರಂಭಿಸಿ ರೈಲ್ವೇ ಪ್ರಯಾಣಿಕರಿಗೆ ಅನೇಕ ಸೌಕರ್ಯಗಳನ್ನು ಒದಗಿಸಿದೆ. ನಮ್ಮ ರೈಲ್ವೇ ಸೇವೆಗಳ ಬಗ್ಗೆ ನಮಗಿಂತ ಹೆಚ್ಚಾಗಿ ಬೇರೆ ಯಾರಿಗೆ ತಾನೇ ಗೊತ್ತಿರಲು ಸಾಧ್ಯ !! ಆದರೆ, ನಮ್ಮ ಶತ್ರು ರಾಷ್ಟ್ರ ಎಂದೇ ಗುರುತಿಸಿಕೊಂಡ ಪಾಕಿಸ್ತಾನ ರೈಲ್ವೇ( Pakistan Railways) ಸೇವೆಗಳು ಹೇಗಿವೆ ಎಂಬ ಕುತೂಹಲ ಹೆಚ್ಚಿನವರಿಗೆ ಕಾಡಿರುತ್ತೆ. ಈ ಕುರಿತ ಡೀಟೇಲ್ಸ್ ನಿಮಗಾಗಿ:

ಪಾಕಿಸ್ತಾನದ ಈಗಿನ ಸ್ಥಿತಿ ಎಲ್ಲರಿಗೂ ಗೊತ್ತಿರುವ ವಿಚಾರವೇ. ಪಾಕಿಸ್ತಾನದ ಪರಿಸ್ಥಿತಿ (Pakistan Economic Crisis)ಆರ್ಥಿಕ ಬಿಕ್ಕಟ್ಟು ಹೆಚ್ಚಾಗಿ ದಿನಂಪ್ರತಿ ಸಮಸ್ಯೆಗಳು ಉಲ್ಬಣವಾಗಿ ಬೆಲೆಯೇರಿಕೆಯ ಬಿಸಿ ಜನರನ್ನು ಹೈರಾಣಾಗಿ ಸಿದೆ. ಅಲ್ಲಿಯ ಜನರ ಕನಿಷ್ಠ ಮೂಲ ಸೌಕರ್ಯಗಳನ್ನು ನಿಭಾಯಿಸಲು ಕೂಡ ಸರ್ಕಾರಕ್ಕೆ ಆಗುತ್ತಿಲ್ಲ. ಸೈನಿಕರಿಗೆ ನೀಡುವ ಆಹಾರದ ಅನುದಾನವನ್ನೇ ಕಡಿತಗೊಳಿಸಲಾಗಿದೆ ಎನ್ನಲಾಗುತ್ತಿದೆ. ಈ ನಡುವೆ ಅಲ್ಲಿನ ರೈಲ್ವೆ ಸೇವೆಗಳು ಹೇಗಿವೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಬ್ರಿಟಿಷರ ಕಾಲದಲ್ಲಿಯೇ ಪಾಕಿಸ್ತಾನದಲ್ಲಿ ಸುಮಾರು 1861 ರಲ್ಲಿ ರೈಲು ಸೇವೆಗಳು ಶುರುವಾಗಿದೆಯಂತೆ. ಭಾರತೀಯ ರೈಲ್ವೆಗೆ(Indian Railways) ಹೋಲಿಕೆ ಮಾಡಿದರೆ ಪಾಕಿಸ್ತಾನ ರೈಲ್ವೆ (Pakistan Railways) ಬಹಳ ಹಿಂದುಳಿದಿದೆ ಎನ್ನಲಾಗಿದೆ. ಸದ್ಯ, ಪಾಕಿಸ್ತಾನವು ಸುಮಾರು 11881 ಕಿಲೋಮೀಟರ್‌ಗಳಷ್ಟು ಉದ್ದದ ರೈಲು ಜಾಲವನ್ನು ಒಳಗೊಂಡಿದೆ.

DAILY PRIZE DRAW
23:59:59
Daily Prize
Enter Now and Earn $50
View this ad to enter today's drawing
1,453 entries today

ಭಾರತದಲ್ಲಿ ರೈಲ್ವೇ ಕೆಲಸ ಗಿಟ್ಟಿಸಿಕೊಳ್ಳಲು ಜನರು ಮಾಡುವ ಹರಸಾಹಸ ಅಷ್ಟಿಷ್ಟಲ್ಲ. ಆದರೆ, ಪಾಕಿಸ್ತಾನದ ಪರಿಸ್ಥಿತಿಯೇ ಬೇರೆ. ಪಾಕಿಸ್ತಾನ ಆರ್ಥಿಕ ಬಿಕ್ಕಟ್ಟಿನಲ್ಲಿ ಮುಳುಗಿರುವ ಹಿನ್ನೆಲೆ, ಪಾಕಿಸ್ತಾನದಲ್ಲಿ ರೈಲುಗಳ ಓಡಾಟ ನಡೆಸಲು ಪೂರಕ ಹಣದ ವ್ಯವಸ್ಥೆ ಯಿಲ್ಲದೆ ಪರದಾಡುತ್ತಿದೆ. ಅಷ್ಟೇ ಅಲ್ಲದೆ, ರೈಲ್ವೆ ನೌಕರರಿಗೆ ಸಂಬಳ ನೀಡಲು ಕೂಡ ಪಾಕ್ ಸೆಣಸಾಡುತ್ತಿದೆ ಎನ್ನಲಾಗಿದೆ. ಕೆಲ ಮಾಧ್ಯಮ ವರದಿ ಅನುಸಾರ, ಪಾಕಿಸ್ತಾನ ರೈಲ್ವೆ ಮೂಲಕ ಪ್ರತಿ ವರ್ಷ ಸುಮಾರು 70 ಮಿಲಿಯನ್ ಪ್ರಯಾಣಿಕರು ಪ್ರಯಾಣ ಬೆಳೆಸುತ್ತಾರೆ. ಭಾರತೀಯ ರೈಲ್ವೆ ಮತ್ತು ಪಾಕಿಸ್ತಾನದ ರೈಲ್ವೆ (Pakistan Railways)ನಡುವಣ ಹೆಚ್ಚು ವ್ಯತ್ಯಾಸ ಕಂಡು ಬರದೆ ಇದ್ದರೂ ಕೂಡ ಭಾರತೀಯ ರೈಲ್ವೇ ಸೇವೆಗಳು ಸೌಕರ್ಯಗಳು ಪಾಕ್ ರೈಲ್ವೇ ಸೇವೆಗಿಂತ ಉತ್ಕೃಷ್ಟ ಗುಣಮಟ್ಟ ಹೊಂದಿವೆ.

Leave A Reply

Your email address will not be published.