BS Yediyurappa : ಬಿಎಸ್ವೈ ಜನ್ಮದಿನದಂದೇ ‘ಡೈರಿ’ ಬಾಂಬ್ ಸಿಡಿಸಿದ ಪುತ್ರಿ! ಸಮಯ ಬಂದಾಗ ಅದು ಹೊರಬಂದು ಎಲ್ಲರ ಬಣ್ಣ ಬಯಲಾಗಲಿದೆ: ಅರುಣಾ ದೇವಿ
BS Yediyurappa: ಇಂದು ಬಿಎಸ್ ಯಡಿಯೂರಪ್ಪಗೆ(BS Yediyurappa) (ಫೆ.27) 80ನೇ ಹುಟ್ಟು ಹಬ್ಬದ (Birthday) ಸಂಭ್ರಮ. ಬಿಜೆಪಿ ಕಾರ್ಯಕರ್ತರು, ಅಭಿಮಾನಿ ಬಳಗದವರು, ಕುಟುಂಬದವರು ಎಲ್ಲರೂ ಸಂಭ್ರಮಿಸೋ ದಿನ. ಇನ್ನು ವಿಶೇಷ ಅಂದ್ರೆ ಪ್ರಧಾನಿ ನರೇಂದ್ರ ಮೋದಿ(PM Narendra Modi) ಬರ್ತ್ಡೇ ದಿನವೇ ಶಿವಮೊಗ್ಗ ಏರ್ಪೋರ್ಟ್(Shivmogga Airport) ಲೋಕಾರ್ಪಣೆ ಮಾಡುವ ಮೂಲಕ ಯಡಿಯೂರಪ್ಪನವರಿಗೆ ಗಿಫ್ಟ್ ನೀಡಲಿದ್ದಾರೆ. ಯಡಿಯೂರಪ್ಪನವರ ಕನಸಾಗಿದ್ದ ಇದು ತಮ್ಮ ಜನ್ಮದಿನದಂದು ಉದ್ಘಾಟನೆಯಾಗುತ್ತಿದ್ದರಿಂದ ಸಂತಸಗೊಂಡಿದ್ದಾರೆ. ಆದರೆ ತಂದೆಯ ಈ ಜನ್ಮದಿನದ ಸಂಭ್ರಮದ ಮಧ್ಯೆ ಅವರ ಪುತ್ರಿ ಅರುಣಾ ದೇವಿ(Aruna devi) ಅವರು ಡೈರಿ ಬಾಂಬ್ ಸಿಡಿಸಿ, ರಾಜಕೀಯ ರಂಗದಲ್ಲಿ ಸಂಚಲನ ಸೃಷ್ಟಿಸಿದ್ದಾರೆ.
ಹೌದು, ಇಂದು ಶಿವಮೊಗ್ಗ(Shivmogga)ದಲ್ಲಿ ತಮ್ಮ ತಂದೆಯ ಬಗ್ಗೆ ಮಾತನಾಡಿದ ಯಡಿಯೂರಪ್ಪನವರ ಪುತ್ರಿ ಅರುಣಾದೇವಿ, ತಂದೆಯವರಿಗೆ ಇಡೀ ದೇಶಾದ್ಯಂತ ಹುಟ್ಟುಹಬ್ಬದ ಶುಭಾಶಯಗಳು ಬರ್ತಿದೆ. ನನ್ನ ಜೀವನ ಹಿಂದಿರುಗಿ ನೋಡಿದಾಗ ತೃಪ್ತಿ ತಂದಿದೆ ಎಂದಿದ್ದಾರೆ. 25 ವರ್ಷನ ಯುವಕನ ಶಿಸ್ತು ಇನ್ನೂ ಅವರಲ್ಲಿದೆ. ಯುವಕರಿಗೆ ಅವಕಾಶ ಕೊಟ್ಟಿದ್ದಾರೆ. ಅವರು ಮೂಲೆಯಲ್ಲಿ ಕೂರುತ್ತಿಲ್ಲ ರಾಜ್ಯ ಸುತ್ತಿ ಕೆಲಸ ಮಾಡುತ್ತಿದ್ದಾರೆ ಎಂದಿದ್ದಾರೆ.
ಇದಲ್ಲದೆ ನಮ್ಮ ತಂದೆ ಜೈಲಿಗೆ ಹೋದಂತಹ ಸಂದರ್ಭಗಳನ್ನು ನೆನದ ಅವರು, ‘ಅಪ್ಪ ಜೈಲಿಗೆ ಹೋಗಿದ್ದು ಕರಾಳದಿನಗಳು. ಆ ಸಮಯದಲ್ಲಿ ಅನೇಕರು ಅವರ ಖುರ್ಚಿ ಅಲ್ಲಾಡಿಸಲು ಎಂತಹ ಕೃತ್ಯಗಳು ಮಾಡಿದ್ದರು ಗೊತ್ತಾ? ಆಗ ರಾಜಕೀಯ(Political) ತುಂಬಾ ಅಸಹ್ಯ ಅನ್ನಿಸಿತ್ತು. ಜೈಲಿನಲ್ಲಿದ್ದಾಗ ನಮ್ಮ ತಂದೆ ಡೈರಿ ಬರೆದಿದ್ದು, ಪ್ರತಿಯೊಂದು ಘಟನೆಯನ್ನು ಅದರಲ್ಲಿ ಉಲ್ಲೇಖಿಸಿದ್ದಾರೆ. ಸಂದರ್ಭ ಬಂದಾಗ ಅದು ಹೊರಬರುತ್ತೆ. ಹಲವರ ಬಣ್ಣ ಏನೆಂದು ಆಗ ಬಯಲಾಗುತ್ತದೆ’ ಎಂದು ತಿಳಿಸಿದ್ದಾರೆ.
ಅಲ್ಲದೆ ಈ ಸಮಯದಲ್ಲಿ ‘ನೋವನ್ನು ಮರೆಯಲು ಹೊನ್ನಳ್ಳಿ(Honnalli)ಯಲ್ಲಿ 1ಎಕರೆ ಜಾಗ ತೆಗದುಕೊಂಡು ಗದ್ದೆ ಮಾಡಿದ್ರು. ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ರು. ಹೊಲದಲ್ಲಿ ನೇಗಿಲು ಹಿಡಿದು ಕೆಲಸ ಮಾಡಿದ್ದಾರೆ. ನಮ್ಮ ತಾಯಿ ಮೈತ್ರಾದೇವಿ(Mytridevi)ಯರು ಸದಾ ನಮ್ಮ ಜೊತೆಗಿದ್ದಾರೆ. ಪ್ರತಿ ಶಿವರಾತ್ರಿ ದಿನ ನನ್ನ ತಾಯಿಯನ್ನು ನೆನೆದು ನಮ್ಮ ತಂದೆ ಬಿಎಸ್ವೈ ಕಣ್ಣೀರು ಹಾಕುತ್ತಾರೆ’ ಎಂದು ಬಾವುಕರಾದರು.
ಇನ್ನು ಅರುಣಾದೇವಿ(Arunadevi) ತಮ್ಮ ತಂದೆಯ ಹುಟ್ಟುಹಬ್ಬದ ದಿನವೇ ರಾಜ್ಯ ರಾಜಕಾರಣದಲ್ಲಿ ಡೈರಿ ಬಾಂಬ್ ಸಿಡಿಸಿದ್ದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಇದು ಯಾವಾಗ ಹೊರ ಬರುತ್ತದೆ ಎಂದು ಕಾಯಬೇಕಾಗಿದೆ? ಸಿಡಿಯುತ್ತೆ ಎನ್ನುವುದು ಕುತೂಹಲ ಮೂಡಿಸಿದೆ. ಯಡಿಯೂರಪ್ಪ ಅವರನ್ನು ಸಿಎಂ ಕುರ್ಚಿಯಿಂದ ಕೆಳಗಿಳಿಸಿದ್ದಾರೆ ಎನ್ನುವ ಬೇಸರ ಅವರ ಅಭಿಮಾನಿಗಳಲ್ಲಿದೆ. ಇದರ ಮಧ್ಯೆ ಇದೀಗ ಅರುಣಾ ಅವರು ತಂದೆಯ ಡೈರಿ ಬಗ್ಗೆ ಬಹಿರಂಗಪಡಿಸಿದ್ದು, ಆ ಡೈರಿಯಲ್ಲಿ ಏನಿದೆ? ಬಿಎಸ್ವೈ ತಮ್ಮ ಡೈರಿಯಲ್ಲಿ ತಮ್ಮ ಪಕ್ಷದ ನಾಯಕರ ಬಗ್ಗೆಯಯೇ ಬರೆದುಕೊಂಡಿದ್ದಾರಾ? ಎನ್ನುವ ಕುತೂಹಲ ಹುಟ್ಟುಹಾಕಿರುವುದಂತೂ ಸತ್ಯ.
ಇದನ್ನೂ ಓದಿ : ನಾನು ಅಮೆರಿಕಾದ ಅಧ್ಯಕ್ಷಳಾದರೆ, ಶತ್ರು ರಾಷ್ಟ್ರಗಳಿಗೆ ನಯಾ ಪೈಸೆ ಹೋಗದಂತೆ ಮಾಡುತ್ತೇನೆ : ನಿಕ್ಕಿ ಹ್ಯಾಲೆ