Street Dogs : ನಾಯಿಗಳು ಏಕೆ ನಿಮ್ಮ ಬೈಕ್‌ನ್ನು ಹಿಂಬಾಲಿಸುತ್ತೆ? ಇದರಿಂದ ತಪ್ಪಿಸಿಕೊಳ್ಳೋದು ಹೇಗೆ? ಇಲ್ಲಿದೆ ಟಿಪ್ಸ್
Street Dogs: ಕೆಲವೊಮ್ಮೆ ಬೈಕ್(bike) ನಲ್ಲಿ ಹೋಗುತ್ತಿದ್ದ ಹಾಗೇ ಹಿಂದೆಯಿಂದ ನಾಯಿಗಳು ಅಟ್ಟಿಸಿಕೊಂಡು ಬರುತ್ತದೆ. ಇದನ್ನು ಕೆಲವರು ಗಮನಿಸಿರಲಿಕ್ಕಿಲ್ಲವಾದರೂ, ಬೈಕ್ ನಲ್ಲಿ ಪ್ರಯಾಣಿಸುವವರಿಗೆ ಹಲವು ಬಾರಿ ಈ ಅನುಭವ ಆಗಿರುತ್ತದೆ. ಆದರೆ ಇನ್ನು ನಾಯಿಗಳು(Street Dogs) ಅಟ್ಟಾಡಿಸಿಕೊಂಡು ಬಂದರೆ, ಭಯಬೇಡಿ. ಕಾರಣ, ನಾಯಿಗಳಿಂದ ತಪ್ಪಿಸಿಕೊಳ್ಳಲು ಸಲಹೆ(tips) ಇಲ್ಲಿದೆ.
ನಾಯಿಗಳು ಬೈಕ್ ಹಿಂದೆ ಅಟ್ಟಾಡಿಸಿಕೊಂಡು ಬರುವಾಗ, ಭಯದಲ್ಲಿ ವೇಗವಾಗಿ ಸಾಗುತ್ತೇವೆ. ಇನ್ನು ಕೆಲವೊಮ್ಮೆ ನಾಯಿಗಳು ಇನ್ನೇನು ಕಚ್ಚೇಬಿಟ್ಟವು ಅನ್ನೋವಷ್ಟು ಹತ್ತಿರ ಬಂದಿರುತ್ತವೆ. ಅದರಿಂದ ತಪ್ಪಿಸಿಕೊಳ್ಳಲು ಶರವೇಗದಲ್ಲಿ ಸಾಗುವ ಅದೆಷ್ಟೋ ಜನ. ನಾಯಿಗಳಿಂದ ತಪ್ಪಿಸಿಕೊಳ್ಳಲು ವೇಗವಾಗಿ ಬೈಕ್ ಚಾಲನೆ ಮಾಡಿ, ಇನ್ನೇನೋ ಅನಾಹುತ ತಂದೊಡ್ಡಿಕೊಳ್ಳುವ ಬದಲು ಈ ಮಾಹಿತಿ ತಿಳಿದುಕೊಳ್ಳಿ.
• ರಸ್ತೆಗಳಲ್ಲಿ ವಾಹನ ಚಲಾಯಿಸುವಾಗ ನಾಯಿಗಳ ಗುಂಪು ಕಂಡರೆ ಅವುಗಳ ಮಧ್ಯದಲ್ಲಿ ಹೋಗುವುದಕ್ಕಿಂತ ಬದಿಯಿಂದ ಹೋಗುವುದು ಉತ್ತಮ. ಮಧ್ಯದಲ್ಲಿ ಹೋದರೆ ಖಂಡಿತ ನಿಮ್ಮನ್ನು ಅಟ್ಟಾಡಿಸಿಕೊಂಡು ಬರದೆ ಬಿಡುವುದಿಲ್ಲ. ಹಾಗಾಗಿ ಈ ವಿಚಾರ ನೆನಪಿರಲಿ.
• ಒಂದು ವೇಳೆ ನೀವು ಬೈಕ್‌ನಲ್ಲಿ ಹೋಗುವಾಗ ನಾಯಿಗಳು ಕಿರುಚುತ್ತಿದ್ದರೆ ಅಥವಾ ಬೈಕ್ನ ಹಿಂದೆ ನಾಯಿಗಳು ನಿಮ್ಮನ್ನು ಹಿಂಬಾಲಿಸುತ್ತಿದ್ದರೆ, ಒಮ್ಮೆ ನಿಲ್ಲಿಸಬೇಕು. ನಂತರ ಬೈಕ್ ಸ್ಟಾರ್ಟ್ ಮಾಡಿ ನಿಧಾನವಾಗಿ ಹೋಗಬೇಕು.
• ಬೀದಿ ನಾಯಿ ಕಂಡರೆ, ಅದನ್ನೇ ದುರುಗುಟ್ಟಿಕೊಂಡು ನೋಡಬೇಡಿ. ಅವು ನಿಮ್ಮ ಬಳಿಗೆ ಬರುವುದನ್ನು ನೋಡಿದರೆ, ಕಣ್ಣಿನ ಸಂಪರ್ಕವನ್ನು ತಪ್ಪಿಯೂ ಮಾಡಬೇಡಿ.