ಫೇಸ್ ಬುಕ್ ನಲ್ಲಿ IAS ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಮತ್ತೆ IPS ರೂಪಾ ಫೋಸ್ಟ್, ಸರ್ಕಾರದ ನಿರ್ದೇಶನಕ್ಕೂ ಡೋಂಟ್ ಕೇರ್ !

Rohini and Roopa: ಐಪಿಎಸ್‌ ಅಧಿಕಾರಿ ಡಿ.ರೂಪಾ ಮತ್ತು ಐಎಎಸ್‌ ಅಧಿಕಾರಿ ರೋಹಿಣಿ( Rohini and Roopa) ಸಿಂಧೂರಿ ನಡುವಿನ ಜಗಳ ಸದ್ಯಕ್ಕೆ ನಿಲ್ಲೋ ಸೂಚನೆ ಕಾಣುತ್ತಿಲ್ಲ. ಯಾವುದೇ ಕಾರಣಕ್ಕೂ ಇನ್ಮುಂದೆ ಸಾರ್ವಜನಿಕವಾಗಿ, ಸಾಮಾಜಿಕ ಜಾಲತಾಣ, ಮಾಧ್ಯಮಗಳಿಗೆ ಹೇಳಿಕೆ ನೀಡುವಂತಿಲ್ಲ ಎಂದು ಇಬ್ಬರು ಉನ್ನತ ಅಧಿಕಾರಿಗಳಿಗೆ ಸಿಬ್ಬಂದಿ ಮತ್ತು ಆಡಳಿತ ಇಲಾಖೆಯಿಂದ ನೋಟಿಸ್ ನೀಡಲಾಗಿತ್ತು. ಆದರೆ, ಈ ನೋಟಿಸ್ ಗೂ ಡೋಂಟು ಕೇರ್ ಎಂದ ಐಪಿಎಸ್ ಅಧಿಕಾರಿ ರೂಪಾ ಡಿ. ಅವರು ಮತ್ತೆ ರೋಹಿಣಿ ಸಿಂಧೂರಿ ಮೇಲೆ ಫೇಸ್ ಬುಕ್ ನಲ್ಲಿ ಫೋಸ್ಟ್ ಮಾಡಿದ್ದಾರೆ.

ತಮ್ಮ ಫೇಸ್ ಬುಕ್ ಖಾತೆಯಲ್ಲಿ ವರದಿಯೊಂದನ್ನು ಹಂಚಿಕೊಂಡಿರುವ ಡಿ. ರೂಪಾ, ಮೈಸೂರು ಎಟಿಐನಿಂದ ರೋಹಿಣಿ ಸಿಂಧೂರಿ ತೆಗೆದುಕೊಂಡು ಹೋದ ಸರ್ಕಾರಿ ಸಾಮಾನುಗಳು ಡಿಸಿ ಮನೆಯಲ್ಲಿ ಕೂಡಾ ಇಲ್ಲ, ಎಲ್ಲಿ ಹೋದವು ಅಂದು ಪ್ರಶ್ನಿಸಿದ್ದಾರೆ. ಅವತ್ತು ರೋಹಿಣಿ ಸಿಂಧೂರಿ ಅವರಿಗೆ ನೊಟೀಸ್ ಜಾರಿ ಮಾಡಿದ್ದು ವರದಿಯಾಗಿದೆ. ಇದರ ಮೇಲೆ ಕ್ರಮ ಆಯಿತೇ ? ಎಂದು ರೂಪಾ ಫೇಸ್ ಬುಕ್ ನಲ್ಲಿ ಪ್ರಶ್ನಿಸಿದ್ದಾರೆ.

ಸರ್ಕಾರಿ ವಸ್ತು 50 ರೂಪಾಯಿ ಇರಲಿ, 50 ಕೋಟಿ ಇರಲಿ, ತಪ್ಪು ತಪ್ಪೇ. 1000 ರೂಪಾಯಿ ಲಂಚ ತೆಗೆದುಕೊಂಡವರು ಕೂಡ ಲೋಕಾಯುಕ್ತ ವಿಚಾರಣೆಗೆ ಒಳಗಾಗಿದ್ದಾರೆ. ಕಾನೂನು ಡಿಸಿಗೂ, ಗುಮಾಸ್ತನಿಗೂ ಒಂದೇ ಎಂದು ಡಿ. ರೂಪಾ ಮೌದ್ಗಿಲ್ ಅವರು ಹೇಳಿದ್ದಾರೆ. ರೂಪಾ ಪೋಸ್ಟ್ ನಿಂದಾಗಿ ಮತ್ತೆ ಜಡೆ ಜಗಳ ಇನ್ನಷ್ಟು ಬಿರುಸಾಗೋ ಲಕ್ಷಣ ಇದೆ.

ಅವರಿಬ್ಬರ ಜಗಳ ಸಾಮಾಜಿಕ ತಾಣಗಳಲ್ಲಿ, ಆನಂತರ ಮಾಧ್ಯಮಗಳಲ್ಲಿ ದೊಡ್ಡದಾಗಿ ಸುದ್ದಿಯಾದ ನಂತರ ಸರ್ಕಾರವು ಅವರಿಬ್ಬರನ್ನೂ ಸ್ಥಳ ನಿಗದಿ ಮಾಡದೆ ಟ್ರಾನ್ಸಫರ್ ಮಾಡಿತ್ತು. ಅಲ್ಲದೆ, ತನ್ನ ವಿರುದ್ಧ ಮಾನ ಹಾನಿಕರ ಪೋಸ್ಟ್ ಮಾಡದಂತೆ ರೋಹಿಣಿ ಕೋರ್ಟು ಮೆಟ್ಟಲೇರಿದ್ದರು. ಕೋರ್ಟು ಕೂಡಾ ರೋಹಿಣಿಯ ಮನವಿಗೆ ಸ್ಪಂದಿಸಿತ್ತು. ಇದೀಗ ರೂಪಾ ಮತ್ತೆ ಸಿಡಿದು ನಿಂತಿದ್ದಾರೆ. ತನ್ನ ಗಂಡನಿಗೂ ರೋಹಿಣಿಗೂ ಗೆಳೆತನ ಇರುವುದೇ ರೂಪಾ ಅವರ ಕೋಪಾರೋಪಕ್ಕೆ ಕಾರಣ ಎನ್ನಲಾಗಿದೆ. ರೋಹಿಣಿಯಿಂದಾಗಿ ತನ್ನ ಸಂಸಾರದಲ್ಲಿ ಬಿರುಕು ಮೂಡಿದೆ ಎಂದು ರೂಪಾ ಅವರು ಹೇಳಿಕೊಂಡಿದ್ದರು.

Leave A Reply

Your email address will not be published.