Realme GT 3: ಅತ್ಯಂತ ವೇಗದ ಚಾರ್ಜಿಂಗ್‌ ಮೊಬೈಲ್‌, ಜಾಗತಿಕ ಮಾರುಕಟ್ಟೆಯಲ್ಲಿ ಬಿರುಗಾಳಿ ಎಬ್ಬಿಸಲು ರೆಡಿಯಾದ ರಿಯಲ್‌ GT 3 ಫೋನ್‌!

Realme GT 3 : ಮಾರುಕಟ್ಟೆಯಲ್ಲಿ (market )ಸ್ಮಾರ್ಟ್​ಫೋನ್​ಗಳ (smartphone )ಹವಾ ಯಾವತ್ತಿಗೂ ಕಡಿಮೆ ಆಗಲ್ಲ. ಹಾಗಿರುವಾಗ ಸ್ಮಾರ್ಟ್ ಫೋನ್ ನ ವ್ಯಾಪಕವಾದ ಬಳಕೆಯಿಂದಾಗಿ ಕಂಪನಿಗಳು(company )ಕೂಡ ಹೊಸ ಹೊಸ ರೀತಿಯ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡುತ್ತಲೇ ಇದೆ. ಸದ್ಯ ಇದೀಗ ರಿಯಲ್​ಮಿ​ ಕಂಪನಿ (Realme) ತನ್ನ ಬ್ರಾಂಡ್​ನ ಅಡಿಯಲ್ಲಿ ಸ್ಮಾರ್ಟ್​ಫೋನ್​ಗಳನ್ನು ಬಿಡುಗಡೆ ಮಾಡುವುದು ವಿರಳವಾಗಿದೆ. ಇದೀಗ ರಿಯಲ್ ಮಿ ಕಡೆಯಿಂದ ಸಿಹಿಸುದ್ದಿ ಇದೆ.

ಕೊನೆಗೂ ಮಾರುಕಟ್ಟೆಗೆ ರಿಯಲ್ ಮಿ ಕಂಪನಿ ಹೊಸ ಮೊಬೈಲ್ ಒಂದನ್ನು ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ. ಅದುವೇ ರಿಯಲ್‌ ಮಿ ಜಿಟಿ 3 (Realme GT 3). ಇದು ಅತ್ಯಂತ ವೇಗದ(speed )ಚಾರ್ಜಿಂಗ್‌ ಮೊಬೈಲ್‌ ಆಗಿದ್ದು ಇದೇ ಫೆಬ್ರವರಿ 28 ರಂದು ಮೊಬೈಲ್ ವರ್ಲ್ಡ್ ಕಾಂಗ್ರೆಸ್ 2023 ಈವೆಂಟ್‌ನಲ್ಲಿ ರಿಲೀಸ್ ಆಗಲಿದೆಯಂತೆ. ಸದ್ಯ ರಿಯಲ್‌ ಮಿ GT 3 ಸ್ಮಾರ್ಟ್‌ಫೋನ್​ನಲ್ಲಿ ಏನೆಲ್ಲ ಫೀಚರ್​ಗಳು ಇರಲಿದೆ ಎಂಬ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೆ ಮೂಲಗಳ ಪ್ರಕಾರ ಕೆಲವು ಮಾಹಿತಿ ತಿಳಿದಿದೆ.

ರಿಯಲ್‌ ಮಿ ಜಿಟಿ 3 (Realme GT 3) ಫೀಚರ್ಸ್:

• ಮೂಲಗಳ ಪ್ರಕಾರ ಇದು 1080 x 2412 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.7 ಇಂಚಿನ ಫುಲ್‌ ಹೆಚ್‌ಡಿ ಡಿಸ್‌ಪ್ಲೇ ಹೊಂದಿರಲಿದೆ ಎಂದು ವರದಿಯಾಗಿದೆ.
• ಡಿಸ್‌ಪ್ಲೇ ಸ್ಕ್ರೀನ್ ಟು ಬಾಡಿ ಅನುಪಾತ 87.79 % ಇರಲಿದ್ದು, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ v5 ಪ್ರೊಟೆಕ್ಷನ್‌ ಪಡೆದುಕೊಂಡಿರುವ ಸಾಧ್ಯತೆ ಇದೆ.
• ಬಲಿಷ್ಠವಾದ ಮೀಡಿಯಾಟೆಕ್‌ ಡೈಮೆನ್ಸಿಟಿ 8100 SoC ಪ್ರೊಸೆಸರ್‌ ವೇಗವನ್ನು ಹೊಂದಿರಲಿದೆ.
• ಇದು ಆಂಡ್ರಾಯ್ಡ್‌ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ.
• ಇದು ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್‌ ಸೆನ್ಸಾರ್‌, ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಸೆನ್ಸಾರ್‌ ಅನ್ನು ಹೊಂದಿರಲಿದೆ .
• ಇದಲ್ಲದೆ ಈ ಸ್ಮಾರ್ಟ್‌ಫೋನ್‌ 16 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿರಬಹುದು.
• ಇದು 240W ವೇಗದ ಚಾರ್ಜಿಂಗ್‌ ಬೆಂಬಲಿಸುವ 4,500mAh ಸಾಮರ್ಥ್ಯ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿರುವುದು ಬಹುತೇಕ ಖಚಿತವಾಗಿದೆ.
• ಇದು 10 ನಿಮಿಷಗಳ ಒಳಗೆ 0-100% ಫುಲ್ ಚಾರ್ಜ್ ಆಗುತ್ತಂತೆ.
• ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, ಹಾಟ್‌ಸ್ಪಾಟ್‌, ಬ್ಲೂಟೂತ್‌, ವೈಫೈ, ಯುಎಸ್‌ಬಿ ಸಿ ಪೋರ್ಟ್‌ ಅನ್ನು ಒಳಗೊಂಡಿರಬಹುದು.

ಈ ಫೋನಿನ ಬೆಲೆ ಇನ್ನು ಕೂಡ ಬಹಿರಂಗವಾಗಿಲ್ಲ. ಆದರೆ, ಸುಮಾರು 25,000-30,000 ರೂ. ಒಳಗಡೆ ಇರಬಹುದು ಎಂದು ಅಂದಾಜಿಸಲಾಗಿದೆ. ಒಟ್ಟಿನಲ್ಲಿ ರಿಯಲ್‌ ಮಿ GT 3 ಸ್ಮಾರ್ಟ್‌ಫೋನ್​ನ ಮುಖ್ಯ ಹೈಲೇಟ್ ಇದರ ಬ್ಯಾಟರಿ ಹಾಗೂ ಫಾಸ್ಟ್ ಚಾರ್ಜಿಂಗ್ ಆಗಿದ್ದು ಇದು 10 ನಿಮಿಷಗಳ ಒಳಗೆ 0-100% ಫುಲ್ ಚಾರ್ಜ್ ಆಗುತ್ತಂತೆ. ಈ ಅಡ್ವಾಂಟೇಜ್ ನ್ನು ಜನರು ಇಷ್ಟಪಡುವ ಕಾರಣದಿಂದ ಮಾರುಕಟ್ಟೆಯಲ್ಲಿ ಈ ಫೋನಿಗೆ ಹೆಚ್ಚಿನ ಬೇಡಿಕೆ ಇರುವ ಸಾಧ್ಯತೆ ಇದೆ.

Leave A Reply

Your email address will not be published.