RD Rates: SBI,HDFCಯಲ್ಲಿ ಆರ್​ಡಿಗೆ ದೊರಕುವ ಬಡ್ಡಿ ಎಷ್ಟು? ಇಲ್ಲಿದೆ ಉತ್ತರ

RD Interest Rates : ಆರ್​ಡಿ(RD) ಅಥವಾ ರೆಕರಿಂಗ್ ಡೆಪಾಸಿಟ್ (RD- Recurring Deposit) ಜನರಿಗೆ ಬಹಳ ಉಪಯುಕ್ತವಾಗಿದ್ದು, ಇದರಲ್ಲಿ ಹೆಚ್ಚಿನ ಜನರು ಹೂಡಿಕೆ(investment) ಮಾಡುತ್ತಾರೆ. ಬ್ಯಾಂಕ್ ಖಾತೆಯಲ್ಲಿ ಇಚ್ಛಿಸಿದಷ್ಟು ನಿರ್ದಿಷ್ಟ ಹಣವನ್ನು ಪ್ರತೀ ತಿಂಗಳೂ ಹೂಡಿಕೆ ಮಾಡಬಹುದು. ಹಾಗಿದ್ದರೆ, ಎಸ್​ಬಿಐ(SBI), ಎಚ್​ಡಿಎಫ್​ಸಿ(HDFC) ಯಲ್ಲಿ ಆರ್​ಡಿಗೆ ಬಡ್ಡಿ(RD Interest Rates) ಎಷ್ಟು ಸಿಗುತ್ತದೆ? ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.

 

ಎಲ್ಲಾ ಬ್ಯಾಂಕುಗಳೂ ಉತ್ತಮ ಬಡ್ಡಿ ದರಗಳನ್ನು ನೀಡುತ್ತವೆ. ಆದರೆ, ಎಚ್​ಡಿಎಫ್​ಸಿ ಬ್ಯಾಂಕ್, ಎಸ್​ಬಿಐ, ಪೋಸ್ಟ್ ಆಫೀಸ್(post office), ಪಂಜಾಬ್ ನ್ಯಾಷನಲ್ ಬ್ಯಾಂಕ್​(Punjab National Bank) ನಲ್ಲಿ ಹಿರಿಯ ನಾಗರಿಕರ ಆರ್​ಡಿಗೆ ಅತಿಹೆಚ್ಚು ಬಡ್ಡಿ ಕೊಡಲಾಗುತ್ತದೆ. ಹೆಚ್​ಡಿಎಫ್​ಸಿ ಬ್ಯಾಂಕಿನಲ್ಲಿ ಹಿರಿಯ ನಾಗರಿಕರು ಇರಿಸುವ ರೆಕರಿಂಗ್ ಡೆಪಾಸಿಟ್​ಗಳಿಗೆ ಅತಿ ಹೆಚ್ಚು ಬಡ್ಡಿ ದರ ಸಿಗುತ್ತದೆ. ಎಷ್ಟು ಸಿಗುತ್ತದೆ? ನೋಡೋಣ.

HDFC: ಹೆಚ್​ಡಿಎಫ್​ಸಿ ಬ್ಯಾಂಕ್​(HDFC Bank) ನಲ್ಲಿ ಹಿರಿಯ ನಾಗರಿಕರ ಆರ್​ಡಿಗೆ ಶೇ. 7.75ರವರೆಗೂ ಬಡ್ಡಿ ಸಿಗುತ್ತದೆ. ಇನ್ನು 6ರಿಂದ 10 ವರ್ಷ ಅವಧಿಯ ಆರ್​​ಡಿ ಠೇವಣಿಗಳಿಗೆ ಗರಿಷ್ಠ ಬಡ್ಡಿ ಇದ್ದು, 24ರಿಂದ 60 ತಿಂಗಳ ಅವಧಿಯ ಆರ್​ಡಿಗಳಿಗೆ ಶೇ. 7.5ರಷ್ಟು ಬಡ್ಡಿ ಸಿಗುತ್ತದೆ.

SBI: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ದಲ್ಲಿ ನಿಶ್ಚಿತ ಠೇವಣಿಗೆ ಎಷ್ಟು ಬಡ್ಡಿ ನೀಡಲಾಗುತ್ತದೋ ಅಷ್ಟೇ ಬಡ್ಡಿಯನ್ನು ಆರ್​ಡಿಗೂ ನೀಡಲಾಗುತ್ತದೆ. ಹಿರಿಯ ನಾಗರಿಕರು 1-2 ವರ್ಷ ಕಾಲ ಇರಿಸುವ ಆರ್​ಡಿಗೆ ಶೇ. 7.3ರಷ್ಟು ಬಡ್ಡಿ ಸಿಗುತ್ತದೆ. ಹಾಗೆಯೇ 5-10 ವರ್ಷ ಕಾಲದ ಠೇವಣಿಗೆ ಶೇ. 7.5ರಷ್ಟು ಬಡ್ಡಿ ನೀಡಲಾಗುತ್ತದೆ.

PNB: ಪಂಜಾಬ್ ನ್ಯಾಷನಲ್ ಬ್ಯಾಂಕ್​(PNB) ನಲ್ಲಿ 2-3 ವರ್ಷಗಳ ಅವಧಿಯ ಠೇವಣಿಗೆ ಶೇ. 7.55ರಷ್ಟು ಬಡ್ಡಿ ಲಭ್ಯವಾಗುತ್ತದೆ. ಆಗೆಯೇ 5ರಿಂದ 10 ವರ್ಷಗಳ ಆರ್​ಡಿಗೆ ಶೇ. 7.35ರಷ್ಟು ಬಡ್ಡಿ ದೊರೆಯುತ್ತದೆ.

ಅಂಚೆ ಕಚೇರಿಯ ಆರ್​ಡಿ: ಅಂಚೆ ಕಚೇರಿಯ ನ್ಯಾಷನಲ್ ಸೇವಿಂಗ್ಸ್(Post Office National Savings) ಆರ್​ಡಿ ಖಾತೆ ತೆರೆದರೆ ಶೇ. 5.8ರಷ್ಟು ಬಡ್ಡಿ ಸಿಗುತ್ತದೆ. ಆದರೆ, 5 ವರ್ಷಕ್ಕೆ ಆರ್​ಡಿ ಮೆಚ್ಯೂರ್(mature) ಆಗುತ್ತದೆ.

Leave A Reply

Your email address will not be published.