2000 ಭೂಮಾಪಕರ ಹುದ್ದೆಗೆ ಆನ್‌ಲೈನ್‌ ಅರ್ಜಿ ದಿನಾಂಕ ವಿಸ್ತರಣೆ!

Karnataka Surveyor Jobs 2023 : ಉದ್ಯೋಗ ಅರಸುತ್ತಿರುವ ನಿರುದ್ಯೋಗಿಗಳಿಗೆ ಉತ್ತಮ ಅವಕಾಶ ಇಲ್ಲಿದೆ. ಈ ಹಿಂದೆ ಭೂಮಾಪನ ಕಂದಾಯ ವ್ಯವಸ್ಥೆ (Land Survey Revenue System) ಮತ್ತು ಭೂದಾಖಲೆಗಳ ಇಲಾಖೆ (Land Records Department) ಖಾಲಿ ಇರುವ ಹುದ್ದೆಗಳ ಅರ್ಜಿ ಆಹ್ವಾನದ ಬಗ್ಗೆ ಅಧಿಸೂಚನೆ ಹೊರಡಿಸಿತ್ತು. ಹಾಗೆಯೇ ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಫೆಬ್ರವರಿ 20 ರವರೆಗೆ ಅವಕಾಶ ನೀಡಿದ್ದು, ಇದೀಗ ಈ ದಿನಾಂಕದಲ್ಲಿ ವಿಸ್ತರಣೆ ಆಗಿದೆ. ಫೆಬ್ರವರಿ 27, 2023 ರವರೆಗೆ ವಿಸ್ತರಣೆ ಆಗಿದ್ದು, ಅರ್ಜಿ ಸಲ್ಲಿಸಲು ಆಸಕ್ತಿ ಇರುವವರು ಈ ಕೂಡಲೇ ಸದರಿ ಹುದ್ದೆ(job) ಗಳಿಗೆ ಅರ್ಜಿ ಸಲ್ಲಿಸಿ.

ಹುದ್ದೆಯ ವಿವರ: ಒಟ್ಟು 2000 ಭೂಮಾಪಕರ ಹುದ್ದೆ (Karnataka Surveyor Jobs 2023 ) ಖಾಲಿಯಿದ್ದು, ಆಸಕ್ತ ಅಭ್ಯರ್ಥಿಗಳು ಆನ್ ಲೈನ್(online) ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಆನ್‌ಲೈನ್‌ ಅಪ್ಲಿಕೇಶನ್‌ ಶುಲ್ಕ ರೂ.1000 ಇರಲಿದೆ.

ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 27-02-2023

ಜಿಲ್ಲಾವಾರು ಭೂಮಾಪಕರ ಹುದ್ದೆಗಳ ವಿವರ :
ದಕ್ಷಿಣ ಕನ್ನಡ(dakshina Kannada) -36, ಉಡುಪಿ(Udupi) -86, ಬಿಜಾಪುರ – 32, ಬೆಳಗಾವಿ – 85, ಬಳ್ಳಾರಿ – 55, ವಿಜಯನಗರ – 47, ಬಾಗಲಕೋಟೆ – 47, ಬೀದರ್ -35, ಮಂಡ್ಯ -71, ಮೈಸೂರು – 40, ಯಾದಗಿರಿ – 20, ರಾಮನಗರ – 100, ಉತ್ತರಕನ್ನಡ – 75, ಕೊಡಗು -25, ಕೋಲಾರ- 53, ಗದಗ – 54, ಚಿಕ್ಕಮಗಳೂರು- 83, ಚಿತ್ರದುರ್ಗ- 73, ದಾವಣಗೆರೆ – 95, ಧಾರವಾಡ – 92, ಬೆಂಗಳೂರು ಗ್ರಾಮಾಂತರ- 66, ಬೆಂಗಳೂರು(Bengaluru) ಜಿಲ್ಲೆ – 125, ರಾಯಚೂರು – 40, ಶಿವಮೊಗ್ಗ – 125, ಹಾವೇರಿ -152, ಹಾಸನ – 60, ಕೊಪ್ಪಳ – 28, ಕಲಬುರಗಿ – 10, ಚಿಕ್ಕಬಳ್ಳಾಪುರ – 45, ಚಾಮರಾಜನಗರ – 35, ತುಮಕೂರು – 110.

ಆಯ್ಕೆ ಪ್ರಕ್ರಿಯೆ: ಈ ಹುದ್ದೆಗಳಿಗೆ ಲೈಸನ್ಸ್‌ ನೀಡಲು ಮೊದಲು ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಿದ್ದು, ಇದನ್ನು ನಿರ್ಧಿಷ್ಟಪಡಿಸಿದ ಜಿಲ್ಲಾ ಕೇಂದ್ರಗಳಲ್ಲಿ ಮಾರ್ಚ್‌ ಅಥವಾ ಏಪ್ರಿಲ್ 2023 ರಂದು ನಡೆಸಲಾಗುವುದು ಎನ್ನಲಾಗಿದೆ.

ಹೆಚ್ಚಿನ ಮಾಹಿತಿಗೆ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ವೆಬ್‌ಸೈಟ್‌ಗೆ ಭೇಟಿ ನೀಡಿ.

Leave A Reply

Your email address will not be published.