Electric Bike: ಸೈಕಲ್ನಂತೇ ಇರುವ ಎಲೆಕ್ಟ್ರಿಕ್ ಬೈಕ್ ಮಾರುಕಟ್ಟೆಯಲ್ಲಿ! ಫೀಚರ್ಸ್ ಸೂಪರ್!
Electric Bike : ಜನರ ಬೇಡಿಕೆಗಳು ಒಬ್ಬರಿಗಿಂತ ಒಬ್ಬರಿಗೆ ಭಿನ್ನಾವಾಗಿರುತ್ತದೆ. ಹಾಗಿರುವಾಗ ಮಾರುಕಟ್ಟೆಯಲ್ಲಿ(market )ಕಂಪನಿಗಳು (company )ಹಲವಾರು ರೀತಿಯ ವಾಹನಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತವೆ. ಅದೇ ರೀತಿ ಇದೀಗ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್(electric )ಸಾಧನಗಳಿಗೆ ಬೇಡಿಕೆ ಹೆಚ್ಚಾಗಿದೆ. ಅದರಲ್ಲೂ ಮಾರುಕಟ್ಟೆಗೆ ಹೊಸ ಮಾದರಿಯಲ್ಲಿ ಎಲೆಕ್ಟ್ರಿಕ್ ಬೈಕ್ (Electric Bike)ಗಳು ಕಾಲಿಟ್ಟಿದೆ.
ಹೌದು ಇದೀಗ ಸರಳ, ವೇಗದ ಮತ್ತು ಮೋಜಿನ ಎಲೆಕ್ಟ್ರಿಕ್ ಬೈಕ್ (bike )ಹೊಂದುವ ಉದ್ದೇಶದಿಂದ ಗ್ರಾಹಕರಿಗಾಗಿ ಈ ರೈಡ್1ಅಪ್ ಕಂಪನಿ ಸೈಕಲ್ ಮಾದರಿಯ ರೋಡ್‌ಸ್ಟರ್ ವಿ2 ಗ್ರಾವೆಲ್ ಎಲೆಕ್ಟ್ರಿಕ್ ಬೈಕ್ ನ್ನು ತಂದಿದೆ. ಈ ವಿಶೇಷ ಸೈಕಲ್ ಮಾದರಿಯ ಎಲೆಕ್ಟ್ರಿಕ್ ಬೈಕ್ ಬಗ್ಗೆ ನೀವು ಸಂಪೂರ್ಣ ಮಾಹಿತಿ ತಿಳಿದುಕೊಳ್ಳಬಹುದು.
• ಈ ಬೈಕಿನ ಬ್ಯಾಟರಿಯನ್ನು ಬಹಳ ಉತ್ತಮವಾಗಿ ರಚಿಸಲಾಗಿದೆ. ಇದು 36 ವೋಲ್ಟ್‌ಗಳಿಂದ ಚಾಲಿತವಾಗಿದೆ. ಹಾಗಾಗಿ ಈ ಬ್ಯಾಟರಿಯನ್ನು ಒಮ್ಮೆ ಚಾರ್ಜ್ ಮಾಡಿದರೆ 32 ಕಿಲೋಮೀಟರ್ ವರೆಗೆ ಹೋಗಬಹುದು.
• ಇನ್ನು ಈ ಬೈಕ್ನಲ್ಲಿ ಪೆಡಲ್ ಮಾಡುವ ಅವಕಾಶವಿದ್ದು, ಈ ಮೂಲಕ 38 ಕಿ.ಮೀ ಹೋಗುವ ಅವಕಾಶವಿದೆ.
• ಈ ಬ್ಯಾಟರಿಯನ್ನು ಬೈಕ್‌ನಿಂದ ತೆಗೆಯಲು ಆಗುವುದಿಲ್ಲ.
• ಈ ಬೈಕ್ 5 ರೀತಿಯ ವೇಗದ ಮಿತಿಗಳನ್ನು ಸಹ ಹೊಂದಿದೆ. ಹಾಗಾಗಿ ಎತ್ತರದ ಸ್ಥಳಗಳಲ್ಲಿಯೂ ಸುಲಭವಾಗಿ ಈ ಬೈಕ್ನಲ್ಲಿ ಹೋಗಬಹುದು.
• ಈ ಬೈಕ್ ಸವಾರಿ ಮಾಡುವಾಗ ಸ್ಪೀಡ್ (speed )ಅನ್ನು ತಿಳಿಯಲು ಹ್ಯಾಂಡಲ್‌ಬಾರ್‌ನಲ್ಲಿ ಕಾಂಪ್ಯಾಕ್ಟ್ ಎಲ್‌ಸಿಡಿ ಡಿಸ್ಪ್ಲೇಯನ್ನು (LCD display )ನೀಡಿದ್ದಾರೆ.
• ರೋಡ್‌ಸ್ಟರ್ ವಿ2 ಗ್ರಾವೆಲ್ 160 ಎಂಎಂ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ. ಇವುಗಳು ವೇಗವಾಗಿ ಹೋಗುವಾಗ ಸುರಕ್ಷಿತ ಹಠಾತ್ ಬ್ರೇಕಿಂಗ್ ಅನ್ನು ಸಕ್ರಿಯಗೊಳಿಸುತ್ತವೆ.
• ರೋಡ್‌ಸ್ಟರ್ ವಿ2 ಗ್ರಾವೆಲ್ ಎಲೆಕ್ಟ್ರಿಕ್ ಬೈಕ್ 160 ಎಂಎಂ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ. ಈ ಮೂಲಕ ವೇಗವಾಗಿ ಹೋಗುವ ಸಂದರ್ಭದಲ್ಲಿ ಅಥವಾ ಅಗತ್ಯವಾಗಿ ಬ್ರೇಕ್ ಹಾಕುವಾಗ ಸುರಕ್ಷಿತವಾಗಿ ಬೈಕ್ ಅನ್ನು ನಿಯಂತ್ರಣ ಮಾಡಬಹುದು.
• ಬೈಕ್ 6061 ಅಲ್ಯೂಮಿನಿಯಂ ಮಿಶ್ರಲೋಹದ ವಿನ್ಯಾಸವನ್ನು ಹೊಂದಿದೆ.
• ರೋಡ್‌ಸ್ಟರ್ ವಿ2 ಗ್ರಾವೆಲ್ 2 ಫ್ರೇಮ್ ಆಯ್ಕೆಗಳನ್ನು ಹೊಂದಿದೆ. ಒಂದು 52 ಸೆಂ.ಮೀ ಮತ್ತು ಇನ್ನೊಂದು 58 ಸೆಂ.ಮೀ. ಇದರಲ್ಲಿ ಗ್ರಾಹಕರಿಗೆ ಯಾವುದು ಸೆಟ್ ಆಗುತ್ತದೇ ಅದನ್ನು ಖರೀದಿ ಮಾಡಬಹುದು .
ಇನ್ನು ಕಂಪನಿಯು ರೋಡ್‌ಸ್ಟರ್ ವಿ2 ಗ್ರಾವೆಲ್ ಬೆಲೆ $1,095 ಅಂದರೆ ಭಾರತದಲ್ಲಿ ಸುಮಾರು 90,803 ರೂಪಾಯಿ ಆಗಿದೆ. ಈ ಬೈಕ್ ಖರೀದಿ ಮಾಡಬೇಕಾದರೆ Ride1Up ಕಂಪೆನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ $69 (₹5721) ಕ್ಕೆ ಬುಕ್ ಮಾಡಬಹುದು.
ಒಟ್ಟಿನಲ್ಲಿ ಇತರ ಬೈಕ್‌ಗಳಿಗೆ ಹೋಲಿಸಿದರೆ ಇದರ ತೂಕ 15 ಕೆ.ಜಿ. ಆದ್ದರಿಂದ ಹಗುರವಾದ ಬೈಕ್ ಖರೀದಿ ಮಾಡುವ ಪ್ಲ್ಯಾನ್ನಲ್ಲಿದ್ದವರಿಗೆ ಈ ಬೈಕ್ ಉತ್ತಮವಾಗಿದೆ. ಈ ಮೂಲಕ ಗ್ರಾಹಕರನ್ನು ಬೇಗನೆ ಆಕರ್ಷಿಸುತ್ತದೆ ಎಂದು ಕಂಪೆನಿ ಅಭಿಪ್ರಾಯ ತಿಳಿಸಿದೆ. ಅಲ್ಲದೆ ನಗರಗಳಲ್ಲಿ ಓಡಿಸುವವರಿಗಾಗಿ ಈ ಬೈಕ್ ಹೇಳಿ ಮಾಡಿಸಿದ್ದು ಎನ್ನಬಹುದು. ಇನ್ನು ಈ ಎಲೆಕ್ಟ್ರಿಕ್ ಬೈಕ್ 4 ಬಣ್ಣಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಅವುಗಳೆಂದರೆ ಬರ್ಗಂಡಿ ಮ್ಯಾಟ್, ಗ್ರೇ, ಬ್ಲ್ಯಾಕ್ ಮ್ಯಾಟ್, ಸಿಲ್ವರ್ ಮ್ಯಾಟ್ ಆಗಿದೆ. ಇನ್ನು ಕೆಲವರಿಗೆ ಬೈಕ್ ಹಗುರವಾಗಿರಬೇಕು. ಸರಳವಾಗಿರಬೇಕು ಎಂದು ಬಯಸುತ್ತಾರೆ. ಇನ್ನು ಕೆಲವರು ನಿರ್ವಹಣೆಗೆ ಹೆಚ್ಚು ಖರ್ಚು ಮಾಡುವುದಿಲ್ಲ ಅಂತಹವರು ಈ ಹೊಸ ಎಲೆಕ್ಟ್ರಿಕ್ ಬೈಕ್ ಅನ್ನು ಆಯ್ಕೆ ಮಾಡಬಹುದು.