Paper Cup : ಪೇಪರ್ ಕಪ್‌ನಲ್ಲಿ ಕಾಫಿ, ಟೀ ಕುಡಿಯುತ್ತೀರಾ? ಎಚ್ಚರ!
drinking coffee in paper cup: ಟೀ (tea )ಅಥವಾ ಕಾಫಿ(coffee)ಕುಡಿಯುವ ಅಭ್ಯಾಸ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಕೆಲವರಂತೂ ದಿನದ ಆರಂಭದಿಂದ, ದಿನ ಮುಗಿಯುವರೆಗೆ ಬಿಸಿ ಕಾಫಿ ಅಥವಾ ಟೀ ಕುಡಿಯುತ್ತಲೇ ಇರುತ್ತಾರೆ. ಇನ್ನು ಮನೆಯಲ್ಲಿದ್ದಾಗ ಮಾತ್ರ ಟೀ ಕುಡಿಯಲು ಸ್ಟೀಲ್ ಗ್ಲಾಸ್ ಬಳಸುವ ನೀವು ಹೊರಗಡೆ ಹೋದಾಗ ಪ್ಲಾಸ್ಟಿಕ್ ಕಪ್‌ನಲ್ಲಿ (plastic cup )ಅಥವಾ ಪೇಪರ್ ಕಪ್ ನಲ್ಲಿ ಕುಡಿಯುತ್ತೀರಾ? ಹಾಗಿದ್ದರೆ ಇಲ್ಲಿ ಓದಿ
ಸದ್ಯ ಕೆಲವರು ಕಾಫಿ ಅಥವಾ ಟೀಯನ್ನು ಪೇಪರ್ ಕಪ್‌ನಲ್ಲಿ ಕುಡಿಯುತ್ತಾರೆ(drinking coffee in paper cup). ಪ್ಲಾಸ್ಟಿಕ್ ಕಪ್‌ಗಳಿಗೆ ಹೋಲಿಸಿದರೆ ಪೇಪರ್ ಕಪ್ ಪರಿಸರ ಹಾಗೂ ಆರೋಗ್ಯಕ್ಕೆ ಉತ್ತಮ ನಿಜ. ಆದರೆ ಪೇಪರ್ ಕಪ್‌ಗಳೂ ಕೂಡ ಆರೋಗ್ಯಕ್ಕೆ ಹಾನಿ ಉಂಟುಮಾಡುತ್ತವೆ. ಯಾಕೆಂದರೆ ಇದರ ಒಳಗಡೆ ಪ್ಲಾಸ್ಟಿಕ್ ಕೋಟ್ ಅಳವಡಿಸಿರಲಾಗುತ್ತದೆ. ಸಂಶೋಧನೆಯ ಪ್ರಕಾರ ಪೇಪರ್ ಕಪ್‌ನಲ್ಲಿ 15 ನಿಮಿಷಗಳ ಕಾಲ ಬಿಸಿಯಾದ ವಸ್ತುವನ್ನು ಇರಿಸುವುದರಿಂದ ಸಾವಿರಕ್ಕೂ ಅಧಿಕ ಚಿಕ್ಕ ಪ್ಲಾಸ್ಟಿಕ್ ಕಣಗಳು ಆ ವಸ್ತುವಿನೊಂದಿಗೆ ಸೇರುತ್ತವೆ. ಒಬ್ಬ ವ್ಯಕ್ತಿ ಪೇಪರ್ ಕಪ್‌ನಲ್ಲಿ 3 ಕಪ್ ಕಾಫಿ ಕುಡಿದರೆ 75000ದಷ್ಟು ಮೈಕ್ರೋ ಪ್ಲಾಸ್ಟಿಕ್ ಕಣಗಳನ್ನು ಸೇವಿಸುವುದಕ್ಕೆ ಸಮ ಎನ್ನಲಾಗುತ್ತದೆ.
ಹೌದು ಪಾಲಿಯೆಸ್ಟರ್ನಿಂದ ತಯಾರಿಸಲಾದ ಈ ಕಪ್‌ನಲ್ಲಿ ಬಿಸಿ ಟೀ ಅಥವಾ ಕಾಫಿ ಹಾಕಿದಾಗ ಅದರಲ್ಲಿ ಅಂಟಿರುವ ಹಾನಿಕಾರಕ ಅಂಶಗಳು ಚಹಾದೊಡನೆ ಸೇರಿಕೊಳ್ಳುತ್ತವೆ ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಪ್ರಸ್ತುತ ದಿನದಲ್ಲಿ ನಾವು ಎಷ್ಟು ಪ್ಲಾಸ್ಟಿಕ್ ವಸ್ತುಗಳನ್ನು ಅಪರಿಮಿತವಾಗಿ ಬಳಸುತ್ತೇವೆ. ಮೈಕ್ರೋಪ್ಲಾಸ್ಟಿಕ್‌ಗಳು ನಮ್ಮ ದೇಹವನ್ನು ಒಂದಲ್ಲಾ ಒಂದು ರೀತಿಯಲ್ಲಿ ಸೇರುತ್ತವೆ. ಆ ಕಾರಣಕ್ಕೆ ಹಲವು ದೇಶಗಳು ಒಂದು ಬಾರಿ ಬಳಸಿ ಎಸೆಯುವ ಪ್ಲಾಸ್ಟಿಕ್ ಅನ್ನು ಬ್ಯಾನ್ ಮಾಡಿವೆ. ಇದೆಲ್ಲದರ ನಡುವೆ ಪೇಪರ್ ಕಪ್‌ನಲ್ಲಿ ಬಿಸಿ ಕಾಫಿ ಅಥವಾ ಟೀ ಕುಡಿಯುವುದು ಅಪಾಯ ಎಂಬ ಅಂಶ ಅಧ್ಯಯನ ಪ್ರಕಾರ ಸಾಬೀತಾಗಿದೆ.
ಪೇಪರ್ ಕಪ್‌ನ ಅಪಾಯಗಳು :
• ಥರ್ಮೊಕೋಲ್ ಕಪ್‌ನಲ್ಲಿ ಚಹಾ ಕುಡಿದರೆ ಚರ್ಮದ ಸೋಂಕು ಕಾಡುತ್ತದೆ. ಇದರಿಂದ ನಿಮ್ಮ ಚರ್ಮದ ಮೇಲೆ ಕೆಂಪು ಕಲೆಗಳು, ತುರಿಕೆ ಕಾಣಿಸಿಕೊಳ್ಳುಬಹುದು.
• ಪೇಪರ್ ಕಪ್‌ನಲ್ಲಿ ಬಿಸಿ ಕಾಫಿ ಅಥವಾ ಟೀ ಕುಡಿಯುವುದರಿಂದ ಫಲವಂತಿಕೆಯ ಸಮಸ್ಯೆ, ಜರಠದ ಸಮಸ್ಯೆಗೆ ಕಾರಣವಾಗಬಹುದು. ಪೇಪರ್ ಕಪ್‌ನ ಒಳಭಾಗವು ಪ್ಲಾಸ್ಟಿಕ್‌ನಿಂದ ಲೇಪಿತವಾಗಿದ್ದು, ವಿಷಕಾರಿ ರಾಸಾಯನಿಕಗಳನ್ನು ನಿಮ್ಮ ಬಿಸಿ ಪಾನೀಯಕ್ಕೆ ಸೇರಿಸುತ್ತದೆ ಎನ್ನುತ್ತಾರೆ ತಜ್ಞರು.
• ಮೈಕ್ರೋಪ್ಲಾಸ್ಟಿಕ್ ಅಂಶ ಇರುವ ಪೇಪರ್ ಕಪ್‌ನಲ್ಲಿ ಬಿಸಿ ಕಾಫಿ ಅಥವಾ ಟೀ ಕುಡಿಯುವುದರಿಂದ ಹಾರ್ಮೋನುಗಳ ಅಸಮತೋಲನ, ಸಂತಾನೋತ್ಪತ್ತಿಯ ಸಮಸ್ಯೆ, ಕರುಳಿನ ಸಮಸ್ಯೆ, ಕ್ಯಾನ್ಸರ್ ಹಾಗೂ ನರದ ಸಮಸ್ಯೆಗಳು ಉಂಟಾಗಬಹುದು.
ಖಗರ್‌ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಂಶೋಧಕರು ಈ ಕುರಿತು ಅಧ್ಯಯನ ಮಾಡಿದ ಪ್ರಕಾರ, 15 ನಿಮಿಷಗಳ ಕಾಲ ಪ್ಲಾಸ್ಟಿಕ್ ಕಪ್‌ನಲ್ಲಿ ಬಿಸಿ ಪದಾರ್ಥವಿದ್ದರೆ ಆ ಕಪ್‌ಗಳು 25,000ದಷ್ಟು ಪ್ರಮಾಣದ ಮೈಕ್ರೊ ಪ್ಲಾಸ್ಟಿಕ್ ಕಣಗಳು, ಹಾನಿಕಾರಕ ಅಯಾನುಗಳು ಹಾಗೂ ಭಾರೀ ಲೋಹವನ್ನು ಬಿಸಿ ಪದಾರ್ಥಕ್ಕೆ ಬಿಡುಗಡೆ ಮಾಡುತ್ತವೆ. ಬಿಸಿ ಕಾಫಿ ಇರುವ ಪೇಪರ್ ಕಪ್‌ನಲ್ಲಿ ಫ್ಲೋರೈಡ್, ಕ್ಲೋರೈಡ್, ನೈಟ್ರೇಟ್ ಹಾಗೂ ಸಲ್ಫೇಟ್‌ನಂತಹ ವಿಷಕಾರಿ ಲೋಹದಂತಹ ಅಯಾನುಗಳನ್ನು ಸಂಶೋಧಕರು ಕಂಡುಕೊಂಡಿದ್ದಾರೆ.
ಅದೇ ರೀತಿ ಪ್ಲಾಸ್ಟಿಕ್ ಕಪ್ ತಯಾರಿಸುವ ವೇಳೆ ಸೋರದಂತೆ ತಡೆಯಲು ಕೃತಕ ಮೇಣದ ಬತ್ತಿಯನ್ನು ಲೇಪನ ಮಾಡಿರುತ್ತಾರೆ. ಬಿಸಿ ಚಹಾ 45 ಡಿಗ್ರಿಗಿಂತ ಹೆಚ್ಚಾದಾಗ ಮೇಣ ಕರಗಿ ಚಹಾದೊಂದಿಗೆ ಸೇರುತ್ತದೆ. ಇದನ್ನು ಸವಿಯುದರಿಂದ ಕರುಳಿನ ಸೋಂಕು ಅಥವಾ ಜೀರ್ಣಾಂಗ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿರುತ್ತದೆ.
ಇನ್ನು ಐಐಟಿ ಸಂಶೋಧಕರ ಪ್ರಕಾರ ಕೋಣೆಯ ತಾಪಮಾನದಲ್ಲಿ ಪ್ಲಾಸ್ಟಿಕ್‌ನಲ್ಲಿ ನೀರು ಹಾಕುವುದರಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಆ ಕಾರಣದಿಂದ ಪೇಪರ್ ಕಪ್‌ನಲ್ಲಿ ಕೋಲ್ಡ್ ಡ್ರಿಂಕ್ಸ್ ಕುಡಿಯಲು ಸಮಸ್ಯೆ ಇಲ್ಲ.
ಆದರೆ ಮೈಕ್ರೋಪ್ಲಾಸ್ಟಿಕ್ ಬಿಡುಗಡೆ ಮಾಡುವ ಪೇಪರ್ ಕಪ್‌ಗಿಂತ ಸ್ಟೀಲ್ ಅಥವಾ ಪಿಂಗಾಣಿ ಅಥವಾ ಗಾಜಿನ ಲೋಟಗಳಲ್ಲಿ ಚಹಾವನ್ನು ಕುಡಿಯಬಹುದು. ಮುಖ್ಯವಾಗಿ ಪ್ಲಾಸ್ಟಿಕ್ ಮತ್ತು ಪೇಪರ್ ಕಪ್‌ಗಳಿಂದ ದೂರವಿರಿ. ಇದು ನಿಮ್ಮ ಆರೋಗ್ಯವನ್ನು ಕಾಪಾಡುತ್ತೆ. ಜೊತೆಗೆ ಪರಿಸರ ಮಾಲಿನ್ಯವನ್ನು ಸಹ ಕಡಿಮೆ ಮಾಡುವಲ್ಲಿ ನಿಮ್ಮದೊಂದು ಅಳಿಲು ಸೇವೆ ಆಗಲಿ.