Breast Milk : ಮದ್ವೆ ಮಂಟಪಕ್ಕೆ ಬರೋ ಕೆಲವೇ ಕ್ಷಣಗಳ ಮೊದ್ಲು ತಾಯಿಯ ಎದೆಹಾಲು ಚೀಪುತಿದ್ದ ವರ, ಹೀಗೂ ಉಂಟಾ ?!
Breast Milk : ಕೊನೆಯ ಕ್ಷಣದಲ್ಲಿ ಹುಡುಗಿಗೆ ಹುಡುಗನ ಆ ದೊಡ್ಡ ಅಸಹ್ಯ ರಹಸ್ಯ ಗೊತ್ತಾಗಿದೆ. ಇಲ್ಲೊಬ್ಬಳು ಯುವತಿ, ಮದುವೆ ಮಂಟಪದಲ್ಲಿದ್ದ ಕೊನೆಯ ಕ್ಷಣದಲ್ಲಿ ತಾನು ಮದುವೆಯಾಗುವ ಹುಡುಗನ ಬಗ್ಗೆ ದೊಡ್ಡ ರಹಸ್ಯವನ್ನು ತಿಳಿದುಕೊಂಡಿದ್ದಾಳೆ. ಅದೂ ಕೂಡಾ ಯಾರೂಕೇಳಿರದ, ಕೇಳಬಾರದ ನಂಬಲಾಗದ ನಂಬದೆ ಇರಲಾಗದ ಮಹಾ ರಹಸ್ಯ. ಆಕೆಯ ಮದುವೆಗೆ ಕೆಲವೇ ಕ್ಷಣಗಳ ಮೊದಲು ಬಯಲಾಗಿತ್ತು ಹುಡುಗನ ರಹಸ್ಯ !
ಮನುಷ್ಯ ಅಂತಮೇಲೆ ಒಂದಷ್ಟು ಗುಟ್ಟುಗಳು ಇದ್ದೆ ಇರ್ತವೆ. ಕೆಲವರು ಮದ್ವೆಯ ನಂತರ ಅದನ್ನು ಹಂಚಿಕೊಳ್ತಾರೆ. ಅದರಿಂದ ಒಳ್ಳೆಯದೂ ಆಗಬೋದು ಕೆಟ್ಟದ್ದೂ ನಡೀಬೋದು. ಆದ್ರೂ ಕೆಲವು ವಿಚಾರಗಳು ರಹಸ್ಯ (Secret) ವಾಗಿಯೇ ಉಳಿಯುತ್ತವೆ. ಎಷ್ಟೋ ಬಾರಿ ಮದುವೆಯಾಗುವ ಕೊನೆಯ ಕ್ಷಣದಲ್ಲಿ ಕೆಲವೊಂದು ವಿಚಾರಗಳು ಬಹಿರಂಗಗೊಳ್ಳುವುದಿದೆ. ಅದು ಮದುವೆಯನ್ನೇ ಮುರಿದು ಹಾಕುವುದೂ ಇದೆ. ಇಲ್ಲೊಂದು ಕಡೆ ಇನ್ನೇನು ಮದುವೆ ನಡೆದೇ ಹೋಯ್ತು ಅನ್ನೋ ಹೊತ್ತಿಗೆ ಹುಡುಗಿಗೆ, ಹುಡುಗನ ಕುರಿತಾದ ಅತೀ ದೊಡ್ಡ ರಹಸ್ಯ ತಿಳಿದುಬಂದಿದ್ದು ಆಕೆ ಶಾಕ್ ಆಗಿದ್ದಾಳೆ. ಅದನ್ನು ರಹಸ್ಯ ಅಂತ ಅನ್ನಬೇಕಾ ಅಥವಾ ಅಸಹ್ಯ ಅಂತ ಅನ್ನಬೇಕಾ ಗೊತ್ತಿಲ್ಲ, ಇನ್ನೇನು ಮದುವೆಯಾಗುವ ಸ್ವಲ್ಪ ಹೊತ್ತಿನ ಮೊದಲು ವಾರ ತನ್ನ ಅಮ್ಮನ ಮೊಲೆಹಾಲು (Breast Feeding) ಚೀಪಿದ್ದಾನೆ !!!
ವೆಡ್ಡಿಂಗ್ ಪ್ಲಾನರ್ ಒಬ್ಬರು ಸೋಷಿಯಲ್ ಮೀಡಿಯಾದಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇಂಗ್ಲೆಂಡ್ (UK )ಯಲ್ಲಿ ವೃತ್ತಿಪರ ವೆಡ್ಡಿಂಗ್ ಪ್ಲಾನರ್ ಆಗಿರುವ ಜಾರ್ಜಿ ಮಿಚೆಲ್ ಎಂಬವರ ಕೊಲೀಗ್ ಜೆನ್ನಿ ಎಂಬವರು ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಅಲ್ಲಿ ತಾನು ಕಂಡ ಅನುಭವದ (Experience) ಬಗ್ಗೆ ಹೇಳಿಕೊಂಡಿದ್ದಾರೆ. ಈ ವಿಷಯ ಕೇವಲ ವಧುವಿಗೆ (Bride) ಮಾತ್ರವಲ್ಲ ಮನೆ ಮಂದಿ, ಸಂಬಂಧಿಕರನ್ನೂ ಯಾವ ರೀತಿ ದಿಗ್ಭ್ರಮೆಗೊಳಿಸಿತು ಎಂಬುದನ್ನು ವಿವರಿಸಿದ್ದಾರೆ.
ಮದುವೆಗೆ ಕೆಲವೇ ಕ್ಷಣಗಳ ಮುಂಚೆ ತಾಯಿ ಹಾಲನ್ನು ಕುಡಿಯುತ್ತಿದ್ದನಂತೆ ವರ, ಪೋಸ್ಟ್ ವೈರಲ್
ಮದುವೆಗೆ ಕೆಲವೇ ಕ್ಷಣಗಳ ಮುಂಚೆ ಈ ವರಮಹಾಶಯ, ತನ್ನ ತಾಯಿಯ ಎದೆಹಾಲು (Breast Milk) ಕುಡಿಯುತ್ತಿದ್ದದ್ದನ್ನು ವೆಡ್ಡಿಂಗ್ ಪ್ಲಾನರ್ (ವೆಡ್ಡಿಂಗ್ Planner ಗಮನಿಸಿದ್ದಾರೆ. ಮೇಕಪ್ ಆರ್ಟಿಸ್ಟ್ ಕೂಡಾ ಆಗಿರುವ ಜೆನ್ನಿ ವಧುವಿನ ಮೇಕಪ್, ಹೇರ್ ಸ್ಟೈಲ್ ಮಾಡಿಯಾದ ಬಳಿಕ ವಾಶ್‌ರೂಮ್‌ಗೆ ತೆರಳಿದ ಸಂದರ್ಭದಲ್ಲಿ, ಮದುವೆ ಗಂಡು ತನ್ನ ತಾಯಿಯ ಹಾಲನ್ನು ಕುಡಿಯುತ್ತಿರುವುದನ್ನು ಗಮನಿಸಿ ಬೆಚ್ಚಿಬಿದ್ದಿದ್ದಾರೆ. ತಕ್ಷಣ ಅವರು ವಧು ಹಾಗೂ ಇತರರಿಗೆ ಈ ವಿಷಯವನ್ನು ತಿಳಿಸಿದ್ದಾರೆ. ಅಲ್ಲಿದ್ದವರು ಈ ಬಗ್ಗೆ ತಿಳಿದುಕೊಂಡು ಗಾಬರಿಗೊಂಡಿದ್ದು ತಕ್ಷಣವೇ ಮದುವೆಯನ್ನು ನಿಲ್ಲಿಸಲಾಗಿದೆ. ಸದ್ಯ ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪೋಸ್ಟ್‌ಗೆ ಜನರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
ತಾಯಿಯ ಹಾಲು ಕುಡಿಯುವುದೇ, ಅದೂ ಮದುವೆಯಾಗುವ ವಯಸ್ಸಿನಲ್ಲಿ ಎಂದು ಜನ ಅಸಹ್ಯಪಟ್ಟುಕೊಂಡಿದ್ದಾರೆ. ಮತ್ತೆಕೆಲವರು ಈ ವೈರಲ್ ಪೋಸ್ಟ್ ಗೆ ಉತ್ತರಿಸಿ, ‘ ಇದಕ್ಕಿಂತ ವರನಿಗೆ ಬೇರೆ ಹುಡುಗಿಯ ಜೊತೆ ಸಂಬಂಧವಿದ್ದರೂ ಪರವಾಗಿರಲ್ಲಿಲ್ಲ ‘ ಎಂದು ಬರೆದಿದ್ದಾರೆ. ಇನ್ನು ಹಲವಾರು, ಅದು ಹೇಗೆ ಆ ಮಹಾತಾಯಿಯ ಎದೆಯಲ್ಲಿ ಯಾಕೆ ಇನ್ನೂ ಹಾಲಿದೆ ? ಅದು ಬತ್ತಿಲ್ಲವೇ, ಇಷ್ಟು ವರ್ಷಗಳ ನಂತರ ಕೂಡಾ ? ಎಂದು ಪ್ರಶ್ನಿಸಿದ್ದಾರೆ. ‘ ಈತ, ಅಮ್ಮನ ಮಗ ‘ ಎನ್ನುವುದನ್ನು ಮತ್ತೊಂದು ಲೆವೆಲ್‌ಗೆ ಕೊಂಡೊಯ್ದಿದ್ದಾನೆ ಎಂದಿದ್ದಾರೆ. ಮಗದೊಬ್ಬರು ‘ ನಾನಾಗಿದ್ದರೆ ತಕ್ಷಣ ಮದುವೆ ಮಂಟಪದಿಂದ ಓಡಿ ಹೋಗುತ್ತಿದ್ದೆ ‘ ಎಂದು ಹುಡುಗಿಯೊಬ್ಬಳು ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾಳೆ.