Nisha Noor: ಚಿತ್ರರಂಗದಿಂದ ವೇಶ್ಯಾವಾಟಿಕೆಯ ಕೂಪಕ್ಕೆ, ಏಡ್ಸ್‌ನಿಂದ ಸುಟ್ಟು ಹೋಯ್ತು ಈ ಸುಂದರ ನಟಿಯ ಬದುಕು !

Nisha Noor : ಬಣ್ಣದ ಬದುಕಿನ ಮೋಹ, ಅಲ್ಲಿ ಗಳಿಸಿದ ಸಂಪಾದನೆ, ಅದು ಖರ್ಚು ಮಾಡಿಸುವ ಕಾರಣ ಉಂಟಾದ ಬಡತನದಿಂದ ಓರ್ವ ಸುಂದರ ನಟಿಯ ಜೀವನ ಸತ್ತು ಹೋಗಿದೆ. ಇಡೀ ನಿಶಾ ನೂರ್ (Nisha Noor) ಎಂಬ ದುರದೃಷ್ಟ ನಟಿಯ ಯಾತನಾಮಯ ಬದುಕಿನ ಕಥೆ.

Nisha Noor Life Story : ದಕ್ಷಿಣ ಭಾರತದ ಚಿತ್ರರಂಗದ ಖ್ಯಾತ ನಟಿ ನಿಶಾ ನೂರ್ ತಮ್ಮ ಸೌಂದರ್ಯ ಮತ್ತು ನಟನೆಯ ಕಾರಣದಿಂದ ಒಳ್ಳೆಯ ಹೆಸರು ಮಾಡಿದ್ದಳು. ಆಕೆಗೆ ಸಾಕಷ್ಟು ಅಭಿಮಾನಿಗಳು ಕೂಡಾ ಇದ್ದರು. ಮುಖದಲ್ಲಿ ಮಿನುಗುವ ಸೌಂದರ್ಯ, ಕೈಯಲ್ಲಿ ಹಲವು ಚಿತ್ರಗಳು, ಹಣೆಯಲ್ಲಿ ಮಿಂಚುತ್ತಿದ್ದ ಅದೃಷ್ಟ ರೇಖೆ – ಎಲ್ಲವೂ ಸರಿಯಾಗಿಯೇ ಇತ್ತು. ಆಕೆ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮಿಂಚುತ್ತಿದ್ದಳು.

ಮುಸ್ಲಿಂ ಕುಟುಂಬದಲ್ಲಿ ಹುಟ್ಟಿದ ಹುಡುಗಿ ನಿಶಾ ನೂರ್. ನಿಶಾ ನೂರ್ ತನ್ನ ಬಾಲ್ಯವನ್ನು ಬಡತನದಲ್ಲಿ ಕಳೆದರೂ, ತನ್ನ ಸೌಂದರ್ಯ ಮತ್ತು ಪ್ರತಿಭೆಯ ಕಾರಣದಿಂದ ಗಮನ ಸೆಳೆದವು. ಹೆಸರು ದುಡ್ಡು ಎರಡೂ ಬಂತು. ಆದರೆ ಚಿತ್ರರಂಗ ಅನ್ನುವುದು ಸರ್ಕಾರಿ ಜಾಬ್ ಅಲ್ಲವಲ್ಲ. ಅದು ಕನಿಷ್ಟ ಪ್ರೈವೇಟ್ ಜಾಬ್ ಕೂಡಾ ಅಲ್ಲ. ಪ್ರೈವೇಟ್ ಜಾಬಿನಲ್ಲಿ ಕೂಡಾ ತಕ್ಕಮಟ್ಟಿಗೆ ಭದ್ರತೆ ಇರುತ್ತದೆ. ಆದ್ರೆ ಚಿತ್ರರಂಗ ಅನ್ನುವ, ಕೇವಲ ಸಕ್ಸಸ್ ನ ಹಿಂದೆ ಮಾತ್ರ ಓಡುವ ಮಾಯಾ ಜಿಂಕೆಯ ನಡವಳಿಕೆಯ ಬಗ್ಗೆ ಆಕೆಗೆ ಅರ್ಥ ಆಗಲೇ ಇಲ್ಲ. ಅದೇ ಕಾರಣಕ್ಕೆ ಆಕೆ ಅವಕಾಶ ವಂಚಿತರಾದ ಸಂದರ್ಭದಲ್ಲಿ ಪ್ರಪಾತಕ್ಕೆ ಬೀಳಬೇಕಾಯಿತು.

ಅವತ್ತು ನಿಶಾ ನೂರ್ ತಮಿಳುನಾಡಿನ ನಾಗಪಟ್ಟನಂ ನ ತನ್ನ ಮುರುಕು ಮನೆಯಿಂದ ಓಡಿಹೋಗಿ ಚಲನಚಿತ್ರಗಳಿಗೆ ಬಂದಾಗ, ತನ್ನ ಜೀವನದ ಅತ್ಯಂತ ಕೆಟ್ಟ ಮತ್ತು ನೋವಿನ ಹಂತ ಈಗ ಶುರುವಾಗುತ್ತಿದೆ ಎಂದು ಅವಳು ಯೋಚಿಸಿರಲಿಕ್ಕಿಲ್ಲ. ಹಣ ಬರುವಷ್ಟರಲ್ಲೇ ಬದುಕುವುದು. ಮತ್ತು ಕಷ್ಟಕಾಲಕ್ಕೆ ಒಂದಿಷ್ಟು ಸಣ್ಣ ಮೊತ್ತ ಕೂಡಿಟ್ಟಿದ್ದಿದ್ದರೂ ಸಾಕಿತ್ತು, ಪಾಪದ ಹುಡುಗಿ ಒಂದು ಗೂಡಂಗಡಿ ಹಾಕಿಕೊಂಡು, ಬೀಡಿ ಪಾನ್ ಮತ್ತಿತರ ಚಿಲ್ಲರೆ ಸಾಮಾನ್ ಮಾರಿಕೊಂಡು ಬದುಕಿರುತ್ತಿದ್ದಳು. ಆದರೆ ಆಕೆ ಮಾರಬಾರದನ್ನ ಮಾರಲು ಹೋದಳು, ಅದು ಹಾಗೆ ಆಕೆಯ ಜೀವವನ್ನೇ ಬಲಿ ತೆಗೆದುಕೊಂಡಿತು !

ನಿಶಾ ನೂರ್ ಅವರು ಸೆಪ್ಟೆಂಬರ್ 18, 1962 ರಂದು ತಮಿಳುನಾಡಿನ ನಾಗಪಟ್ಟಣಂನಲ್ಲಿ ಜನಿಸಿದಳು. 80 ರ ದಶಕದಲ್ಲಿ ಆಕೆ ಬಹಳ ಜನಪ್ರಿಯ ನಟಿ. ಆಕೆ ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲಿ ಅಲ್ಲದೆ ಕೆಲವು ತೆಲುಗು ಮತ್ತು ಕನ್ನಡ ಚಿತ್ರಗಳಲ್ಲಿಯೂ ಕಾಣಿಸಿಕೊಂಡರು. ನಿಶಾ ನೂರ್ ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಕಮಲ್ ಹಾಸನ್ ಅವರಂತಹ ದಿಗ್ಗಜ ನಟರೊಂದಿಗೆ ಕೆಲಸ ಮಾಡಿದ ಹುಡುಗಿ. ವೃತ್ತಿಜೀವನದ ಉತ್ತುಂಗದಲ್ಲಿ ಇದ್ದ ಸಮಯ. ಎಲ್ಲವೂ ಸರಿಯಾಗಿಯೇ ಇತ್ತು. ಸಹಜವಾಗಿ ಏಕಾಏಕಿ ಆಕೆಗೆ ಇದ್ದ ಬೇಡಿಕೆ ಕಮ್ಮಿಯಾಗಿ ಹೋಯಿತು. ಆಗ ಬೇರೆ ಉದ್ಯಮದ ಕಡೆಗೆ, ಸಣ್ಣ ಪುಟ್ಟ ಪಾತ್ರದ ಕಡೆಗೆ ಹೊರಲಿಕೊಳ್ಳುವ ಬದಲು ಆಕೆ ಅದೇ ಚಿತ್ರ ಉದ್ಯಮದಲ್ಲಿ ಬದುಕಿ ಮೆರೆಯಲು ಕಾಂಪ್ರೋ ಮಾಡಿಕೊಳ್ಳಬೇಕಾಯಿತು. ಚಿತ್ರ ಜಗತ್ತಿನಲ್ಲಿ ಬದುಕಲು ಆಕೆ ಕಾಸ್ಟಿಂಗ್ ಕೌಚ್‌ಗೆ ಒಪ್ಪಿಕೊಂಡಳು. ಅಲ್ಲಿಂದ ಶುರುವಾಯಿತು ಮಹಾ ಪತನ.

ಅದು ಒಂದಷ್ಟು ಕ್ಷಣಿಕ ಕಾಲ ಸಿಕ್ಕ ಅವಕಾಶ, ಅಷ್ಟೇ. ಮುಂದಕ್ಕೆ ಮತ್ತೆ ಅವಕಾಶಗಳ ಕೊರತೆ. ಅದೊಂದು ಬಾರಿ ಕೆಲಸದ ಕೊರತೆಯಿಂದ ನಿಶಾ ನೂರ್ ಬಳಿ ಊಟಕ್ಕೆ ಕೂಡ ಹಣವಿರಲಿಲ್ಲವಂತೆ. ಆಗ ಆಕೆ ಆಯ್ದುಕೊಂಡ ಮಾರ್ಗ ಮಾಂಸ ಮಾರಾಟ ! ಹಾಗೆ ವೇಶ್ಯಾವಾಟಿಕೆಯ ಮಾರ್ಗವನ್ನು ಆರಿಸಿಕೊಂಡ ಅವಳದ್ದು ಆಕೆಯ ಈವರೆಗಿನ ನಿರ್ಧಾರಗಳಲ್ಲಿಯೇ ಅತ್ಯಂತ ಕೆಟ್ಟ ನಿರ್ಧಾರವಾಗಿತ್ತು. ಅದು ಆಕೆಯ ಜೀವವನ್ನೇ ಬೇಡಿತ್ತು !!

ಹೀಗೆ ಒಂದಷ್ಟು ದಿನಗಳ ಕಾಲ ವೇಶ್ಯಾವಾಟಿಕೆಯಲ್ಲಿ ದೊಡ್ಡ ಸಂಪಾದಿಸಿ ಬದುಕುತ್ತಿದ್ದಳು ನಿಶಾ ನೂರ್. ಆಕೆಯ ಬಹುದೊಡ್ಡ ದುರದೃಷ್ಟ ಏನೆಂದರೆ ಆತಿಗೆ ತಿಳಿ ಹೇಳಬಲ್ಲ ಮತ್ತು ರಕ್ಷಣೆ ಒದಗಿಸಬಲ್ಲ ಗೆಳೆಯರಾಗಲಿ, ಕುಟುಂಬಸ್ಥರಾಗಲಿ ಯಾರು ಇರಲಿಲ್ಲ. ಹಾಗೆ ಚಿತ್ರರಂಗದಿಂದ ದೂರವಾಗಿ ಹೋದ ಹುಡುಗಿ ಸ್ವಲ್ಪ ದಿನಗಳ ನಂತರ ಏಕಾಏಕಿ ಮರೆಯಾಗಿ ಹೋಗಿದ್ದಳು. ಎಲ್ಲೂ ಆಕೆಯ ಸುದ್ದಿ ಮತ್ತು ಸುಳಿವು ಸಿಗುತ್ತಲೇ ಇರಲಿಲ್ಲ. ಬಹಳ ದಿನಗಳ ನಂತರ, ಅದೊಂದು ದಿನ ಹಾಗೆ ನಾಪತ್ತೆಯಾಗಿದ್ದ ಆಕೆ ಅದೊಂದು ದರ್ಗಾದ ಹೊರಗೆ ಕಾಣಿಸಿಕೊಂಡಳು. ಅದ್ಯಾರೋ ಆಕೆಯ ಗುರುತು ಪತ್ತೆ ಮಾಡಿಬಿಟ್ಟರು.

ಅಷ್ಟರಲ್ಲಾಗಲೇ ದುರ್ಘಟನೆ ನಡೆದು ಹೋಗಿತ್ತು. ಆಕೆಯ ಸಂಪೂರ್ಣ ಸೌಂದರ್ಯ ಸವೆದು ಆಕೆ ರಸ್ತೆಯ ಮೇಲೆ ಭಿಕ್ಷುಕಿಯ ಥರ ಮಲಗಿದ್ದಳು. ಮತ್ತು ದೇಹವು ಅಸ್ಥಿಪಂಜರದಂತೆ ಗೋಚರವಾಗುತ್ತಿದ್ದವು. ಆದಾಗಲೇ ಆಕೆಯ ದೇಹದ ಮೇಲೆ ಕೀಟಗಳು ಮತ್ತು ಇರುವೆಗಳು ಮುತ್ತಿ ಕಾಟ ಕೊಡಲು ಶುರುಮಾಡಿದ್ದವು. ಆಕೆ ಆತನ ಸೋದರ ಸಂಬಂಧಿಯೊಬ್ಬನ ಕಣ್ಣಿಗೆ ಬಿದ್ದಿದ್ದಲಂತೆ. ಆತ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ ಬಳಿಕ ಆಕೆಯನ್ನು ಬಿಟ್ಟು ಓಡಿ ಹೋಗಿದ್ದಾನೆ. ನಂತರ ಆಸ್ಪತ್ರೆಯಲ್ಲಿ ಪರೀಕ್ಷೆಯ ನಂತರ ಗೊತ್ತಾಗಿದ್ದು, ಈ ನಟಿ ಏಡ್ಸ್ ನಿಂದ ಬಳಲುತ್ತಿದ್ದಾರೆ ಎಂದು. ಆಕೆಗೂ ಅಲ್ಲಿಯ ತನಕ ಅದರ ಬಗ್ಗೆ ತಿಳಿದಿರಲಿಲ್ಲ ಎಂದರೆ ನೀವೇ ಊಹಿಸಿ ಆಕೆಯ ಸ್ಥಿತಿ : ಆಕೆ ತನಗೆ ಅಸೌಖ್ಯ ಎಂದಾಗ ಆಸ್ಪತ್ರೆಯನ್ನು ಕೂಡ ತಲುಪಲಾಗದಷ್ಟು ಆರ್ಥಿಕವಾಗಿ ಜರ್ಜರಿತಾಗಿದ್ದಳು. ಕೊನೆಗೆ, 2007 ರಲ್ಲಿ ಏಡ್ಸ್ ರೋಗವೇ ಆಕೆಯನ್ನು ಬಳಿ ಪಡೆಯಿತು.

ಆಕೆಯ ಕೊನೆಯ ಕ್ಷಣಗಳಲ್ಲಿ ಕೂಡಾ ಆಕೆಯ ಕುಟುಂಬದಿಂದ ಯಾರೊಬ್ಬರೂ ಆಕೆಯ ಪೋಷಕರೆಂದು ಹೇಳಿಕೊಂಡು ಮುಂದೆ ಬರಲಿಲ್ಲ. ಕೊನೆಗೆ, ಅಲ್ಲಿನ ದರ್ಗಾ ಒಂದರಲ್ಲಿನ NGO ಒಂದು ಆಕೆಯ ಅಂತ್ಯಸಂಸ್ಕಾರ ನೆರವೇರಿಸಿತ್ತು. ಇದು ಕಲರ್ಫುಲ್ ಲೋಕದ ಮೂಲಕ ಬದುಕು ಬರಿದು ಮಾಡಿಕೊಂಡು ಮಣ್ಣಾದ ಓರ್ವ ಹುಡುಗಿಯ ಕಥೆ. ನಿಶಾ ನೂರ್ ನಂತೆ ಅದ್ಯಾರ ಬಾಳು ಕೂಡಾ ಆಗದಿರಲಿ ಅನ್ನುವುದೇ ಈ ಕ್ಷಣದ ನಿರೀಕ್ಷೆ.

Leave A Reply

Your email address will not be published.