Astro Tips : ನಿಮ್ಮ ಮನೆಯ ನಕಾರಾತ್ಮ ಶಕ್ತಿ ಹೋಗಲಾಡಿಸಬೇಕೇ? ಇಲ್ಲಿದೆ ಸುಲಭ ಪರಿಹಾರ!!

Astro Tips : ವೈಜ್ಞಾನಿಕವಾಗಿ Cinnamomum Camphor ಎಂದು ಕರೆಯಲ್ಪಡುವ ಕರ್ಪೂರದ ಬಗ್ಗೆ ಹಲವಾರು ಅದ್ಭುತ ಪ್ರಯೋಜನ (Astro Tips) ಗಳು ಇವೆ. ಹೌದು ಕರ್ಪೂರ, ಪೂಜೆಯಲ್ಲಿ ಬೆಳಗಿಸಲು ಬಳಸುವ ಚಿಕ್ಕ ಅರೆಪಾರದರ್ಶಕ ಬಿಳಿ ಬಿಲ್ಲೆಯಾಗಿದ್ದರೂ ಸಹ ಇದರ ಬಳಕೆ ಅಪರಿಮಿತವಾಗಿದೆ.

ವಾಸ್ತು(Vastu )ಶಾಸ್ತ್ರ ಪ್ರಕಾರ ಕರ್ಪೂರವನ್ನು ಯಾವ ರೀತಿಯಾಗಿ ಬಳಸಬಹುದು ಎಂದು ಸಂಪೂರ್ಣವಾಗಿ ತಿಳಿಸಲಾಗಿದೆ. ಹಿಂದೂ ಧರ್ಮದಲ್ಲಿ ಕರ್ಪೂರವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಕರ್ಪೂರವನ್ನು ಪ್ರತಿದಿನ ಬೆಳಗ್ಗೆ(morning )ಮತ್ತು ಸಂಜೆ(evening )ಮನೆಯಲ್ಲಿ ಹಚ್ಚಿದರೆ ನಕಾರಾತ್ಮಕ(negative)ಶಕ್ತಿ ಮನೆಯಿಂದ ದೂರವಾಗುತ್ತದೆ ಜೊತೆಗೆ ಸಕರಾತ್ಮಕತೆ (positive )ತುಂಬಿಕೊಳ್ಳುತ್ತದೆ. ಮುಖ್ಯವಾಗಿ ಪೂಜೆಯ ಸಮಯದಲ್ಲಿ ಕರ್ಪೂರವನ್ನು ಉರಿಸಬೇಕು ಎಂದು ಹೇಳಲಾಗುತ್ತದೆ.

ಸಾಮಾನ್ಯವಾಗಿ ಮನೆಯ ನಕಾರಾತ್ಮಕ ಶಕ್ತಿ ( Astro Tips) ತೊಡೆದುಹಾಕಲು ಜನರು ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ನಕಾರಾತ್ಮಕ ಶಕ್ತಿ ಮನೆಯನ್ನು ಆವರಿಸಿದ್ದಾಗ ಮನೆಯ ಮನೆಯು ಶಾಂತಿ ನೆಮ್ಮದಿಯನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಜೊತೆಗೆ ಕುಟುಂಬದ ಸದಸ್ಯರಲ್ಲಿ ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ನೀವು ಮಾಡುವ ಕೆಲಸವೂ ಹಾಳಾಗುತ್ತದೆ. ಕುಟುಂಬದ ಸದಸ್ಯರಿಗೆ ಅನಾರೋಗ್ಯ, ಚಿಕಿತ್ಸೆ ನೀಡಿದರೂ ರೋಗ ವಾಸಿಯಾಗುವುದಿಲ್ಲ ಮತ್ತು ಸಮಸ್ಯೆಗಳ ಮೇಲೆ ಸಮಸ್ಯೆ ಬರುತ್ತವೆ ಈ ಎಲ್ಲಾ ಸಮಸ್ಯೆಗಳಿಗೆ ಮುಕ್ತಿ ಹೊಂದಲು ಕರ್ಪೂರ ನಿಮಗೆ ನೇರವಾಗಲಿದೆ.

ಆದರೆ ನಿಮ್ಮ ಮನೆಯಲ್ಲಿ ನೆಗೆಟಿವ್ ಎನರ್ಜಿ ಇದೆಯೋ ಇಲ್ಲವೋ ಎಂದು ತಿಳಿದುಕೊಳ್ಳಬೇಕಿದ್ದರೆ 1 ಲೋಟದಲ್ಲಿ ಗಂಗಾಜಲತೆಗೆದುಕೊಂಡು ಅದರಲ್ಲಿ ಗುಲಾಬಿ ಹೂ ಹಾಕಿ, 24 ಗಂಟೆ ಅದನ್ನು ಮನೆಯ ಯಾವುದಾದರೂ ಮೂಲೆಯಲ್ಲಿ ಇರಿಸಿ . ನಂತರ 24 ಗಂಟೆಗಳಲ್ಲಿ ಅದರ ಬಣ್ಣ ಬದಲಾದರೆ ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿಯಿದೆ ಎಂದರ್ಥ. ಈ ಹೂವುಗಳು ಬಣ್ಣ ಬದಲಾಯಿಸದಿದ್ದರೆ ಮತ್ತು ತಾಜಾ ಆಗಿಯೇ ಉಳಿದರೆ ಧನಾತ್ಮಕ ಶಕ್ತಿ ನಿಮ್ಮ ಮನೆಯಲ್ಲಿದೆ ಎಂದು ನೀವು ತಿಳಿದುಕೊಳ್ಳಬಹುದಾಗಿದೆ.

ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಕರ್ಪೂರವನ್ನು ಉರಿಸಿದರೆ ಮನೆಯಿಂದ ನೆಗೆಟಿವ್ ಎನರ್ಜಿ ದೂರವಾಗುತ್ತದೆ. ಪೂಜೆಯ ಸಮಯದಲ್ಲಿ ಕರ್ಪೂರವನ್ನು ಉರಿಸಬೇಕು, ಜೊತೆಗೆ ಪ್ರತಿ ಶುಭ ಕಾರ್ಯದಲ್ಲಿಯೂ ಕರ್ಪೂರದ ಆರತಿಯನ್ನು ಮಾಡಲಾಗುತ್ತದೆ. ಕರ್ಪೂರಕ್ಕೆ ಅಪಾರ ಶಕ್ತಿ ಇರುವುದರಿಂದಲೇ ಈ ರೀತಿ ಕರ್ಪೂರವನ್ನು ಉರಿಸಲಾಗುತ್ತೆ.

ಇದರ ಜೊತೆಗೆ ವಿಜ್ಞಾನಿಗಳು ಸಹ ಕರ್ಪೂರದ ಮಹತ್ವವನ್ನು ಹೇಳಿದ್ದಾರೆ. ವಿಜ್ಞಾನಿಗಳ ಪ್ರಕಾರ ಪ್ರತಿದಿನ ಕರ್ಪೂರವನ್ನು ಸುಡುವ ಮನೆಯಲ್ಲಿ ಬ್ಯಾಕ್ಟೀರಿಯಾಗಳ ಸಮಸ್ಯೆ ಇರುವುದಿಲ್ಲ. ಹೀಗೆ ಮಾಡುವುದರಿಂದ ಮನೆಯೂ ಸ್ವಚ್ಛ ಮತ್ತು ಅಚ್ಚುಕಟ್ಟಾಗಿ ಉಳಿಯುತ್ತದೆ. ಮನೆಯಲ್ಲಿ ಯಾವಾಗಲೂ ಭೀಮಸೇನಿ ಕರ್ಪೂರವನ್ನು ಬಳಸಬೇಕು.

ನೀವು ಸಹ ಈ ವಿಧಾನ ಪ್ರಯೋಗಿಸಿ, ಹೌದು ಮನೆಯನ್ನು ಚೆನ್ನಾಗಿ ಸ್ವಚ್ಛಗೊಳಿಸಿ, ನಂತರ ಒಂದು ಮೂಲೆಯಲ್ಲಿ ಕರ್ಪೂರವನ್ನು ಬೆಳಗಿಸಿ. ಮನೆಯಲ್ಲಿ ನಕಾರಾತ್ಮಕ ಶಕ್ತಿ ಇದ್ದರೆ ಅದು ಹೊರಗೆ ಹೋಗುತ್ತದೆ. ನೀವು ಮಲಗುವಾಗ ನಿಮ್ಮ ದಿಂಬಿನ ಕೆಳಗೆ ಕರ್ಪೂರವನ್ನು ಇಟ್ಟುಕೊಳ್ಳಬಹುದು. ಇದು ನಿಮಗೆ ಉತ್ತಮ ನಿದ್ರೆಯನ್ನು ನೀಡುತ್ತದೆ ಮತ್ತು ನೀವು ಬೆಳಗ್ಗೆ ಧನಾತ್ಮಕ ಶಕ್ತಿಯೊಂದಿಗೆ ಎಚ್ಚರಗೊಳ್ಳುತ್ತೀರಿ. ಕರ್ಪೂರವನ್ನು ಸುಡುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಉಂಟಾಗುತ್ತದೆ.

ಕರ್ಪೂರ ದ ಇತರ ಪ್ರಯೋಜನಗಳು :
• ಬೇಸಿಗೆಯಲ್ಲಿ ಯಾರಿಗಾದರೂ ತಲೆನೋವಿನ ಸಮಸ್ಯೆ ಇದ್ದರೆ, ಶುಂಠಿ, ಅರ್ಜುನ ತೊಗಟೆ ಮತ್ತು ಬಿಳಿ ಚಂದನದ ಪೇಸ್ಟ್ ಅನ್ನು ಕರ್ಪೂರದೊಂದಿಗೆ ಬೆರೆಸಿ ಹಚ್ಚುವುದರಿಂದ ತಲೆನೋವು ನಿವಾರಣೆಯಾಗುತ್ತದೆ.

• ನೆಗಡಿ ಮತ್ತು ಜ್ವರದ ಸಂದರ್ಭದಲ್ಲಿ ಬಿಸಿನೀರಿನಲ್ಲಿ ಕರ್ಪೂರವನ್ನು ಸೇರಿಸಿ ಹಬೆ ತೆಗೆದುಕೊಂಡರೆ ತತ್‌ಕ್ಷಣ ಶಮನವಾಗುತ್ತದೆ. ಕೆಮ್ಮಿನ ಸಂದರ್ಭದಲ್ಲಿ ಕರ್ಪೂರವನ್ನು ಸಾಸಿವೆ ಅಥವಾ ಎಳ್ಳೆಣ್ಣೆಯೊಂದಿಗೆ ಬೆರೆಸಿ ಬೆನ್ನು ಮತ್ತು ಎದೆಯನ್ನು ಹಗುರವಾದ ಕೈಗಳಿಂದ ಮಸಾಜ್ ಮಾಡುವುದರಿಂದ ಪರಿಹಾರ ಸಿಗುತ್ತದೆ.

• ಸ್ವಲ್ಪ ಕರ್ಪೂರವನ್ನು ತೆಗೆದುಕೊಂಡು ಅದನ್ನು ಪುಡಿಮಾಡಿ. ಅದರಲ್ಲಿ ಎರಡು ಚಮಚ ಲ್ಯಾವೆಂಡರ್ ಎಣ್ಣೆಯನ್ನು ಬೆರೆಸಿ ಸ್ಪ್ರೇ ಬಾಟಲಿಗೆ ಹಾಕಿ ಮನೆಯಲ್ಲಿ ಉದುರಿಸಿದರೆ ಮನೆ ಪರಿಮಳದಿಂದ ಕೂಡಿರುತ್ತದೆ. ಇದು ರೂಮ್ ಫ್ರೆಶ್ನರ್ ಆಗಿ ಕಾರ್ಯನಿರ್ವಹಿಸುತ್ತದೆ.

• ಚರ್ಮದ ತುರಿಕೆ ಮತ್ತು ಉರಿಯುವಿಕೆಗೆ ಒಂದು ಚಮಚ ಕೊಬ್ಬರಿ ಎಣ್ಣೆಯಲ್ಲಿ ಒಂದು ಚಮಚ ಕರ್ಪೂರವನ್ನು ಬೆರೆಸಿ ಲೇಪಿಸಿ. ಚಳಿಗಾಲದಲ್ಲಿ ಬಿರುಕು ಬಿಟ್ಟ ಹಿಮ್ಮಡಿಗಳಿಗೆ ಕರ್ಪೂರ ಅತ್ಯುತ್ತಮ ಪರಿಹಾರವೆಂದು ಪರಿಗಣಿಸಲಾಗಿದೆ.

• ಕೊಂಚ ಕರ್ಪೂರದ ಬಿಲ್ಲೆಗಳನ್ನು ನುಣ್ಣಗೆ ಪುಡಿಮಾಡಿ ಕೊಂಚ ನೀರು ಬೆರೆಸಿ ನಯವಾದ ಲೇಪ ತಯಾರಿಸಿ. ಈ ಲೇಪವನ್ನು ತೆಳ್ಳಗೆ ಕೆಂಪಗಾಗಿರುವ ಚರ್ಮದ ಮೇಲೆ ಹಚ್ಚಿ ಒಣಗಲು ಬಿಡಿ. ರಾತ್ರಿ ಮಲಗುವ ಮುನ್ನ ಹಚ್ಚಿ ಬೆಳಗ್ಗೆ ಉಪ್ಪುನೀರಿನಿಂದ ತೊಳೆದುಕೊಳ್ಳಿ. ಒಂದೆರಡು ದಿನಗಳಲ್ಲಿಯೇ ಉರಿ ಮತ್ತು ಗುಳ್ಳೆಗಳು ಇಲ್ಲವಾಗುತ್ತವೆ.

• ಕರ್ಪೂರದ ತೈಲ ಅತಿ ಪ್ರಬಲವಾದ ಕಾರಣ ಇವನ್ನು ನೇರವಾಗಿ ಹಚ್ಚುವ ಬದಲು ನಿಮ್ಮ ನಿತ್ಯದ ಬಳಕೆಯ ಎಣ್ಣೆ ಅಥವಾ ಕೊಬ್ಬರಿ ಎಣ್ಣೆಯಲ್ಲಿ ಬೆರೆಸಿ. ಒಂದು ಪ್ರಮಾಣದ ಕರ್ಪೂರದ ತೈಲಕ್ಕೆ ಹತ್ತು ಪ್ರಮಾಣದ ಕೊಬ್ಬರಿ ಎಣ್ಣೆ ಬೆರೆಸಿ. ಈ ಮಿಶ್ರಣವನ್ನು ನಿಮ್ಮ ನಿತ್ಯದ ಎಣ್ಣೆಯ ರೂಪದಲ್ಲಿ ಬಳಸುತ್ತಾ ಬನ್ನಿ. ರಾತ್ರಿ ಮಲಗುವ ಮುನ್ನವೂ ತಲೆಗೆ ಮಸಾಜ್ ಮಾಡಿಕೊಂಡು ಹಚ್ಚಿ ಮರುದಿನ ಬೆಳಿಗ್ಗೆ ತಲೆಸ್ನಾನ ಮಾಡಿ. ಇದು ಕೂದಲ ಬುಡಗಳಿಗೆ ಪ್ರಚೋದನೆ ನೀಡಿ ರಕ್ತ ಪರಿಚಲನೆ ಹೆಚ್ಚಿಸುವ ಮೂಲಕ ಕೂದಲ ಆರೋಗ್ಯವನ್ನು ವೃದ್ದಿಸುತ್ತದೆ ಹಾಗೂ ಕೂದಲ ಬೆಳವಣಿಗೆಯನ್ನೂ ಉತ್ತೇಜಿಸುತ್ತದೆ.

• ಪುಡಿ ಮಾಡಿದ ಕರ್ಪೂರದ ಕೆಲವು ಬಿಲ್ಲೆಗಳನ್ನು ಕೊಬ್ಬರಿ ಎಣ್ಣೆಯಲ್ಲಿ ಬೆರೆಸಿ ಮಲಗುವ ಮುನ್ನ ನೆತ್ತಿ ಮತ್ತು ಕೂದಲಿಗೆ ಚೆನ್ನಾಗಿ ಆವರಿಸುವಂತೆ ಹಚ್ಚಿಕೊಳ್ಳಿ ಮರುದಿನ ನಿಮ್ಮ ಕೂದಲನ್ನು ನಿಮ್ಮ ನಿತ್ಯದ ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳಿ. ಏಕೆಂದರೆ ಕರ್ಪೂರ ಪುಡಿ ಪರೋಪಜೀವಿಗಳನ್ನು ಉಸಿರುಗಟ್ಟಿಸುತ್ತದೆ ಮತ್ತು ಈ ಮೂಲಕ ಅವುಗಳನ್ನು ಕೊಲ್ಲುತ್ತದೆ. ಸ್ನಾನದ ಬಳಿಕ ಚಿಕ್ಕ ಹಲ್ಲುಗಳಿರುವ ಬಾಚಣಿಗೆಯಿಂದ ಬಾಚಿಕೊಂಡು ಸತ್ತ ಹೇನುಗಳನ್ನೆಲ್ಲಾ ನಿವಾರಿಸಿ.

• ಉಗುರಿನಲ್ಲಿ ಫಂಗಸ್ ಸಮಸ್ಯೆಯಿದ್ದರೆ ಕರ್ಪೂರದಿಂದ ಪರಿಹಾರ ಸಿಗುತ್ತದೆ. ಸಮಸ್ಯೆಯಿರುವ ಸ್ಥಳದಲ್ಲಿ ಕರ್ಪೂರವನ್ನು ಹಚ್ಚಿಕೊಂಡರೆ ಬಹು ಬೇಗನೆ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ.

• ಕರ್ಪೂರದ ಎಣ್ಣೆಯ ಸುವಾಸನೆ ನಿದ್ದೆಯ ಸಮಸ್ಯೆ ಇರುವವರಿಗೆ ರಾಮಬಾಣ. ನೀವು ಕೆಲ ಹನಿ ಕರ್ಪೂರದ ಎಣ್ಣೆಯನ್ನು ತಲೆ ದಿಂಬಿಗೆ ಹಚ್ಚಿದರೆ ಒಳ್ಲೆಯ ನಿದ್ರೆ ಬರುತ್ತದೆ.

• ಬಿರುಕು ಬಿಟ್ಟ ಹಿಮ್ಮಡಿಗಳಿಗೆ ಚಿಕಿತ್ಸೆ ನೀಡಲು ನೀವು ಕರ್ಪೂರವನ್ನು ಸಹ ಬಳಸಬಹುದು. ಒಡೆದ ಹಿಮ್ಮಡಿಗಳು ಬ್ಯಾಕ್ಟಿರಿಯಾದ ಸೋಂಕಿನಿಂದ ಉಂಟಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ಸೋಂಕನ್ನು ಗುಣಪಡಿಸಲು ಚರ್ಮಕ್ಕೆ ಮಾಯಿಶ್ಚರೈಸರ್ ಅಗತ್ಯವಿದೆ. ಈ ಸಂದರ್ಭದಲ್ಲಿ ಕರ್ಪೂರವನ್ನು ಬಳಸಬಹುದು.

• ಯಾವುದೇ ಕಾರಣದಿಂದ ನಿಮಗೆ ಸುಟ್ಟು ಗಾಯವಾದರೆ, ಕರ್ಪೂರದ ಪೇಸ್ಟ್ ಅನ್ನು ಅನ್ವಯಿಸುವುದು ನಿಮಗೆ ಪ್ರಯೋಜನಕಾರಿಯಾಗಿದೆ. ಸುಟ್ಟ ಗಾಯವನ್ನು ಗುಣಪಡಿಸಲು ನೀವು ತಯಾರಿಸಿದ ಕರ್ಪೂರ ಪೇಸ್ಟ್ ಅಥವಾ ಕೆನೆ ಬಳಸಬಹುದು. ಇದು ನಂಜುನಿರೋಧಕ. ಇದಕ್ಕೆ ಕರ್ಪೂರವನ್ನು ಅರೆದು ಅದಕ್ಕೆ ಜೇನುತುಪ್ಪ ಬೆರೆಸಬೇಕು. ನಂತರ ಅದನ್ನು ನಿಮ್ಮ ಗಾಯದ ಮೇಲೆ ಹಚ್ಚಿ, ಮೊದಲು ಅದು ನಿಮ್ಮ ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ ಮತ್ತು ನಂತರ ಗಾಯವನ್ನು ಗುಣಪಡಿಸಲು ಸಹಾಯ ಮಾಡುತ್ತದೆ.

• ಕರ್ಪೂರದ ಎಣ್ಣೆಯು ಚರ್ಮದ ರಕ್ತ ಪರಿಚಲನೆಯನ್ನು ಸರಿಯಾಗಿಡುತ್ತದೆ. ಉರಿಯೂತ, ಮೊಡವೆ ಮತ್ತು ಎಣ್ಣೆಯುಕ್ತ ಚರ್ಮದ ಚಿಕಿತ್ಸೆಯಲ್ಲಿ ಇದನ್ನು ಬಳಸಲಾಗುತ್ತದೆ. ಸಂಧಿವಾತ ನೋವಿನಿಂದ ಪರಿಹಾರ ಪಡೆಯಲು ಕರ್ಪೂರ ಮಿಶ್ರಿತ ಮುಲಾಮುವನ್ನು ಬಳಸಲಾಗುತ್ತದೆ. ಕುತ್ತಿಗೆ ನೋವಿನ ಮೇಲೆ ಕರ್ಪೂರ ಇರುವ ಮುಲಾಮು ಹಚ್ಚುವುದರಿಂದ ಪರಿಹಾರ ಸಿಗುತ್ತದೆ. ಕಫದಿಂದಾಗಿ ಎದೆಯ ಬಿಗಿತಕ್ಕೆ ಕರ್ಪೂರದ ಎಣ್ಣೆಯನ್ನು ಉಜ್ಜಿದರೆ ಪರಿಹಾರ ದೊರೆಯುತ್ತದೆ.

ಈ ಮೇಲಿನಂತೆ ನೀವು ಸಹ ಕರ್ಪೂರವನ್ನು ಉಪಯೋಗಿಸಿ ನಕಾರಾತ್ಮಕ ಶಕ್ತಿ ನಿವಾರಣೆ ಜೊತೆಗೆ ಇತರ ಪ್ರಯೋಜನಗಳನ್ನು ಪಡೆಯಬಹುದಾಗಿದೆ.

Leave A Reply

Your email address will not be published.