Tech Tips : ಕಪ್ಪು ಬಿಳಿ ಬಣ್ಣದಲ್ಲಿ ಈ ಮೊಬೈಲ್‌ ಚಾರ್ಜರ್‌ ಯಾಕೆ ಇದೆ? ಇದಕ್ಕೊಂದು ನಿರ್ದಿಷ್ಟ ಕಾರಣ ಉಂಟು!

Mobile charger: ಹೇಳಿ ಕೇಳಿ ಇದು ಡಿಜಿಟಲ್ ಯುಗ. ಇಂದಿನ ಕಾಲದಲ್ಲಿ ಮೊಬೈಲ್ ಎಂಬ ಸಾಧನದ ಬಳಕೆ ಮಾಡದವರೆ ವಿರಳ. ಮೊಬೈಲ್ ಎಂಬ ಸಾಧನದ ಹೆಚ್ಚಿನವರ ಪಾಲಿನ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ. ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ಎಲ್ಲರ ಕೈಯಲ್ಲೂ ಸ್ಮಾರ್ಟ್ ಫೋನ್ ಗಳು ಹರಿದಾಡಿ ಸಂಚಲನ ಮೂಡಿಸುತ್ತಿದೆ. ಮೊಬೈಲ್ ಬಳಕೆ ಮಾಡಲು ಚಾರ್ಜ್ ಮಾಡುವುದು ಅವಶ್ಯಕ. ಮೊಬೈಲ್ (Mobile) ಎಷ್ಟು ಮುಖ್ಯವೋ ಅಷ್ಟೇ ಬ್ಯಾಟರಿ ಬ್ಯಾಕ್ ಅಪ್ ಕೂಡ ಅಷ್ಟೇ ಮುಖ್ಯ ಪಾತ್ರ ವಹಿಸುತ್ತದೆ. ಇವುಗಳ ಕುರಿತ ಕುತೂಹಲಕಾರಿ ವಿಷಯಗಳ ಬಗ್ಗೆ ಗೊತ್ತಿದೆಯೇ?

ನಾವೆಲ್ಲ ಬಳಕೆ ಮಾಡುವ ಸ್ಮಾರ್ಟ್ ಫೋನ್ ಹಲವಾರು ಬಣ್ಣಗಳಲ್ಲಿ ಲಭ್ಯವಾಗುತ್ತವೆ. ಅಷ್ಟೆ ಏಕೆ ಒಂದೇ ಸ್ಮಾರ್ಟ್ ಫೋನ್ ವಿಭಿನ್ನ ಬಣ್ಣಗಳಲ್ಲಿ ಮಾರುಕಟ್ಟೆಯಲ್ಲಿ ದೊರೆಯುತ್ತದೆ. ಆದರೆ, ಚಾರ್ಜರ್ ಗಳು ಹೀಗೆ ತರಹೇವಾರಿ ಬಣ್ಣಗಳಲ್ಲಿ ಮಾರುಕಟ್ಟೆಯಲ್ಲಿ ಸಿಗುವುದಿಲ್ಲ ಅನ್ನೋ ವಿಚಾರ ನಿಮಗೂ ಗೊತ್ತಿರುತ್ತೆ!! ಆದ್ರೆ ಇದಕ್ಕೆ ಕಾರಣವೇನು ಎಂಬ ಪ್ರಶ್ನೆ ನಿಮಗೆ ಸಹಜವಾಗಿ ಕಾಡಿರಬಹುದು. ಮೊಬೈಲ್​ ಗಳಂತೆ ಕೆಂಪು, ನೀಲಿ ಹೀಗೆ ಮೊಬೈಲ್​ ಚಾರ್ಜರ್​ಗಳು ಬೇರೆ ಬಣ್ಣಗಳಲ್ಲಿರದೆ ಕೇವಲ ಕಪ್ಪು ಮತ್ತು ಬಿಳಿ ಬಣ್ಣಗಳಲ್ಲಿ ಮಾತ್ರ ಲಭ್ಯವಾಗುತ್ತದೆ.

ಸ್ಮಾರ್ಟ್​​​​​ಫೋನ್​ನಲ್ಲಿ ಬಿಳಿ( White Mobile Charger)ಮತ್ತು ಕಪ್ಪು ಬಣ್ಣದ ಚಾರ್ಜರ್​ಗಳ
(Black Color Mobile Charger)ಬದಲಿಗೆ ಬೇರೆ ಯಾವುದೇ ಬಣ್ಣದ ಚಾರ್ಜರ್​ಗಳು ಬರದೆ ಇರುವುದಕ್ಕೆ ಕಾರಣವೇನು ಎಂದು ಗಮನಿಸಿದರೆ, ಮೊಬೈಲ್ ಕಂಪನಿಗಳು ಕಪ್ಪು ಬಿಳಿ ಬಣ್ಣಗಳನ್ನು ಹೊರತುಪಡಿಸಿ ಬೇರೆ ಬಣ್ಣಗಳಲ್ಲಿ ಚಾರ್ಜರ್‌ಗಳನ್ನು ತಯಾರಿಸಿದರೆ ಅದರ ಬಾಳಿಕೆ ಮತ್ತು ವೆಚ್ಚ ದುಬಾರಿಯಾಗುತ್ತದೆ. ಅಷ್ಟೆ ಅಲ್ಲದೇ, ಕಪ್ಪು ಮತ್ತು ಬಿಳಿ ಬಣ್ಣಗಳು ಚಾರ್ಜರ್‌ನ ಜೀವಿತಾವಧಿಯನ್ನು ಹೆಚ್ಚಿಸುವುದು ಮಾತ್ರವಲ್ಲ ಬೇರೆ ಬಣ್ಣಗಳಿಗೆ ಹೋಲಿಸಿದರೆ ಕಪ್ಪು ಅಥವಾ ಬಿಳಿ ಬಣ್ಣದಲ್ಲಿ ಚಾರ್ಜರ್‌ಗಳನ್ನು ತಯಾರಿಸಲು ಕಂಪೆನಿಗಳಿಗೆ ತಗುಲುವ ವೆಚ್ಚ ಕೂಡ ಕಡಿಮೆ ಎನ್ನಲಾಗಿದೆ.

ನಾವೆಲ್ಲ ಗಮನಿಸಿದಂತೆ ಹಳೆಯ ಬೇಸಿಕ್ ಸೆಟ್ ಹಾಗೂ ಫೀಚರ್​ ಫೋನ್​ಗಳಲ್ಲಿ ಕಪ್ಪು ಬಣ್ಣದ ಚಾರ್ಜರ್​ ಗಳು ಹೆಚ್ಚು ಲಭ್ಯವಾಗುತ್ತಿತ್ತು. ಇದು ಯಾಕೆ ಎಂದು ನಿಮಗೆ ಪ್ರಶ್ನೆ ಮೂಡಿರಬಹುದು.
ಬೇರೆ ಬಣ್ಣಗಳಿಗೆ ಹೋಲಿಕೆ ಮಾಡಿದರೆ ಕಪ್ಪು ಬಣ್ಣದ ವಸ್ತುಗಳು ಕೈಗೆ ಎಟಕುವ ದರದಲ್ಲಿ ಅಗ್ಗದ ಬೆಲೆಯಲ್ಲಿ ಲಭ್ಯವಾಗುತ್ತದೆ. ಹೀಗಾಗಿ, ಕಡಿಮೆ ಬೆಲೆಯಲ್ಲಿ ಚಾರ್ಜರ್ ತಯಾರಿಕೆಯ ವೆಚ್ಚವನ್ನು ಭರಿಸಬಹುದು. ಕಪ್ಪು ಬಣ್ಣಕ್ಕೆ (Black Color Mobile Charger)ಈ ವಿಶೇಷವಾದ ಶಕ್ತಿಯಿದ್ದು ಇದು ಶಾಖವನ್ನು ಬೇಗನೆ ಹೀರಿಕೊಳ್ಳುತ್ತದೆ. ಕಪ್ಪು ಬಣ್ಣವು ಬಾಹ್ಯ ಶಾಖವನ್ನು ಚಾರ್ಜರ್‌ಗೆ ಪ್ರವೇಶಿಸದಂತೆ ತಡೆ ಹಿಡಿಯುವುದರಿಂದ ಚಾರ್ಜ್ ಮಾಡುವ ಸಮಯದಲ್ಲಿ ಉಂಟಾಗುವ ಶಾಖದಿಂದ ಚಾರ್ಜರ್ ಅನ್ನು ಕಾಪಾಡಲು ನೆರವಾಗುತ್ತದೆ.

ಇದರ ಜೊತೆಗೆ ಕೆಲ ಮೊಬೈಲ್ಗಳಲ್ಲಿ ಬಿಳಿ ಬಣ್ಣದ ಚಾರ್ಜರ್ ನೀಡುವುದು ಗಮನಿಸಿರಬಹುದು. ಹಾಗಿದ್ರೆ, ಮೊಬೈಲ್ ನ ಜೊತೆಗೆ ಬಿಳಿ ಚಾರ್ಜರ್​​ (White Charger)ನೀಡಲು ಕಾರಣವೇನು?? ಬಿಳಿ ಬಣ್ಣವು ಸೌಮ್ಯತೆಯ ಸಂಕೇತ ಅಲ್ಲದೆ ನೋಡಿದಾಗ ಹೆಚ್ಚಿನವರ ಗಮನ ಸೆಳೆಯುವಲ್ಲಿ ಯಶಸ್ವಿಯಾಗುತ್ತದೆ. ಬಿಳಿ ಬಣ್ಣವು(White Colour) ಹೆಚ್ಚು ಶಾಖದ ಶಕ್ತಿಯನ್ನು ಪ್ರತಿಬಿಂಬಿಸುವ ಜೊತೆಗೆ ಕಡಿಮೆ ಶಾಖ ಶಕ್ತಿಯನ್ನು ಹೀರಿಕೊಳ್ಳುವುದರಿಂದ ಚಾರ್ಜರ್ ಕಡಿಮೆ ಬಿಸಿಯಾಗುವುದನ್ನು ನೀವು ಗಮನಿಸಿರಬಹುದು. ಇದಲ್ಲದೆ, ಬಿಳಿ ಬಣ್ಣ ಬಣ್ಣದ ಚಾರ್ಜರ್ ಬಾಹ್ಯ ಶಾಖವನ್ನು ಚಾರ್ಜರ್ ಒಳಗೆ ಹೋಗದಂತೆ ತಡೆಯುತ್ತದೆ. ನೀವು ಕತ್ತಲೆಯಲ್ಲಿ ಕೂಡ ಬಿಳಿ ಬಣ್ಣದ ಚಾರ್ಜರ್ ಅನ್ನು ಸುಲಭವಾಗಿ ಹುಡುಕಬಹುದು ಜೊತೆಗೆ ದೀರ್ಘ ಕಾಲ ಬಾಳಿಕೆ ಬರುತ್ತದೆ. ಹೀಗಾಗಿ, ಹೆಚ್ಚಿನ ಕಂಪನಿಗಳು ಬಿಳಿ ಬಣ್ಣದ ಚಾರ್ಜರ್ ಅನ್ನು ನೀಡುತ್ತವೆ.

Leave A Reply

Your email address will not be published.