ಕಡಿಮೆ ಖರ್ಚಿನಲ್ಲಿ ಅಡ್ಡಪರಿಣಾಮವಿಲ್ಲದ ಕೂದಲು ಕಪ್ಪಾಗಿಸುವ ಮಾರ್ಗ! ಒಮ್ಮೆ ಟ್ರೈ ಮಾಡಿ ನೋಡಿ!
Black hair : ಪ್ರತಿಯೊಬ್ಬರಿಗೂ ದಟ್ಟವಾದ ಕಪ್ಪು ಕೂದಲು (black hair )ತಮ್ಮದಾಗಬೇಕೆಂದು ಆಸೆ ಇದ್ದೇ ಇರುತ್ತದೆ. ಆದರೆ ಇತ್ತೀಚಿನ ಕಲಬೆರಕೆ ಆಹಾರ (food )ಸೇವನೆ ಮತ್ತು ಒತ್ತಡದ ಜೀವನ ಶೈಲಿ(lifestyle )ನಡುವೆ ಕೂದಲು ಬಿಳಿಯಾಗುವುದು ಒಂದು ದೊಡ್ಡ ಸಮಸ್ಯೆಯಾಗಿಬಿಟ್ಟಿದೆ. ಬಿಳಿ ಕೂದಲಿನಿಂದಾಗಿ ನಾವು ವಯಸ್ಸಾದವರಂತೆ ಕಾಣುವುದರ ಜೊತೆಗೆ ಮುಜುಗರವನ್ನು ಅನುಭವಿಸಬೇಕಾಗುತ್ತದೆ. ಆದರೆ ನಿಮ್ಮ ತಲೆ ಕೂದಲಿನ ಹಲವಾರು ತೊಂದರೆಗಳನ್ನು ಕೇವಲ ನಿಮ್ಮ ಅಡುಗೆ ಮನೆಯಲ್ಲಿ ಸಿಗುವ ಕೆಲವೊಂದು ನೈಸರ್ಗಿಕ ರೂಪದ ಆಹಾರ ಪದಾರ್ಥಗಳಿಂದ ಪರಿಹರಿಸಿಕೊಳ್ಳಬಹುದು.
ಹೌದು ನಿಮ್ಮ ತಲೆ ಕೂದಲು ಉದುರುವಿಕೆ ಸಮಸ್ಯೆಯನ್ನು, ತಲೆ ಹೊಟ್ಟು ತೊಂದರೆ ಯನ್ನು ಮತ್ತು ಚಿಕ್ಕ ವಯಸ್ಸಿಗೆ ತಲೆ ಕೂದಲು ಬೆಳ್ಳಗಾಗುವ ಸಾಧ್ಯತೆಯನ್ನು ತಡೆಯಬೇಕು ಎಂದು ಕೊಂಡರೆ ನೈಸರ್ಗಿಕ ವಿಧಾನದಲ್ಲಿ ಹಲವಾರು ಮಾರ್ಗಗಳಿವೆ. ಕಡಿಮೆ ಖರ್ಚಿನಲ್ಲಿ ಆಗುವುದರ ಜೊತೆಗೆ ಯಾವುದೇ ಅಡ್ಡ ಪರಿಣಾಮಗಳು ಆಗದಂತೆ ಇಲ್ಲಿ ಹಲವಾರು ಸುಲಭ ಪರಿಹಾರ ತಿಳಿಸಲಾಗಿದೆ.
• ಮೆಹೆಂದಿ ಮತ್ತು ಮೊಸರು : ಪರಿಶುದ್ಧವಾದ ಮೆಹೆಂದಿಯನ್ನು ಇದಕ್ಕೆ ಬಳಸಿ. ಅಂದರೆ ರಾಸಾಯನಿಕಗಳಿಂದ ಮುಕ್ತವಾದ ಮೆಹಂದಿಯನ್ನು ನೀರಿನ (water )ಬದಲಿಗೆ ಬ್ಲ್ಯಾಕ್ ಟೀಯಲ್ಲಿ(black tea )ನೆನೆಸಿ. ರಾತ್ರಿಯಿಡೀ ಇದನ್ನು ನೆನೆಯಲು ಬಿಟ್ಟು, ಬೆಳಗ್ಗೆ (morning )ಇದಕ್ಕೆ ಒಂದು ಟೇಬಲ್ ಚಮಚ ಆಲೀವ್ ಎಣ್ಣೆಯನ್ನು ಬೆರೆಸಿ
ನಂತರ ಅರ್ಧ ಕಪ್ ಮೊಸರು ಅಥವಾ ಒಂದು ಮೊಟ್ಟೆಯನ್ನು ಬೆರೆಸಿಕೊಳ್ಳಿ. ಆಮೇಲೆ ಇದನ್ನು ನಿಮ್ಮ ಕೂದಲಿಗೆ ಲೇಪಿಸಿ. 30 ನಿಮಿಷ ಬಿಟ್ಟು, ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ, ಹೀಗೆ ವಾರದಲ್ಲಿ ಎರಡು ಮೂರು ದಿನ ಮಾಡುವುದರಿಂದ ಹೊಳಪಿನ ನೈಸರ್ಗಿಕವಾಗಿ ಕಪ್ಪಗಾಗಿರುವ ಕೂದಲನ್ನು ಪಡೆಯಬಹುದು.
• ದಾಸವಾಳ ಹೂವು : ತಲೆ ಕೂದಲು ಉದುರುವಿಕೆಯನ್ನು ತಡೆಯುವುದರಿಂದ ಹಿಡಿದು ಕೂದಲಿಗೆ ಉತ್ತಮ ಹೊಳಪು ನೀಡುವಲ್ಲಿ ದಾಸವಾಳ ಪಾತ್ರ ತುಂಬಾ ಮಹತ್ವ ಆಗಿದೆ. ಮುಖ್ಯವಾಗಿ ತಲೆ ಕೂದಲಿನ ಭಾಗದಲ್ಲಿ ಕಲ್ಮಶಗಳನ್ನು ದೂರ ಮಾಡಿ ತಲೆಯನ್ನು ಆರೋಗ್ಯಕರವಾಗಿ ಇರಿಸುತ್ತದೆ. ಇದಕ್ಕಾಗಿ ನೀವು ನೀರಿನಲ್ಲಿ 20 ನಿಮಿಷಗಳ ಕಾಲ ಕೆಲವು ದಾಸವಾಳ ಹೂಗಳನ್ನು ಚೆನ್ನಾಗಿ ಕುದಿಸಿ, ತಣ್ಣಗಾಗಿಸಿ ಅದೇ ನೀರಿನ ಜೊತೆ ದಾಸವಾಳ ಹೂಗಳ ಪೇಸ್ಟ್ ತಯಾರಿಸಿ ಅದನ್ನು ನಿಮ್ಮ ತಲೆ ಕೂದಲಿಗೆ ಹಚ್ಚಿ ಹತ್ತರಿಂದ ಹದಿನೈದು ನಿಮಿಷಗಳು ಹಾಗೆ ಬಿಡಬೇಕು. ಆನಂತರದಲ್ಲಿ ಶಾಂಪೂ ಹಾಕಿ ಸ್ನಾನ ಮಾಡಿಕೊಳ್ಳಬಹುದು.
• ಹೀರೆಕಾಯಿ: ಕಳೆದು ಹೋದ ಪಿಗ್ಮೆಂಟ್ ಗಳನ್ನು ವಾಪಸ್ ತಂದು ತಲೆ ಕೂದಲಿನ ಬೇರುಗಳನ್ನು ಸದೃಢಪಡಿಸುತ್ತದೆ. ನೀವು ಇದಕ್ಕಾಗಿ ಹೀರೆಕಾಯಿ ಹೋಳುಗಳನ್ನು ನೆರಳಿನಲ್ಲಿ ಒಣಗಿ ಹಾಕಬೇಕು. ನಂತರ ಇವುಗಳನ್ನು ತೆಂಗಿನ ಎಣ್ಣೆಯಲ್ಲಿ ಮೂರು ದಿನಗಳ ಕಾಲ ನೆನೆ ಹಾಕಬೇಕು. ಇದೇ ಹೀರೆಕಾಯಿ ಮಿಶ್ರಿತ ತೆಂಗಿನ ಎಣ್ಣೆಯನ್ನು ಕಡಿಮೆ ಉರಿಯಲ್ಲಿ ಎಣ್ಣೆ ಕಪ್ಪು ಬಣ್ಣಕ್ಕೆ ಬರುವವರೆಗೆ ಸ್ಟೌವ್ ಮೇಲೆ ಕಾಯಿಸಬೇಕು. ನಂತರ ಇದನ್ನು ಸೋಸಿಕೊಂಡು ವಾರದಲ್ಲಿ ಎರಡರಿಂದ ಮೂರು ಬಾರಿ ತಲೆ ಕೂದಲಿಗೆ ಹಚ್ಚಬೇಕು.
• ಬಾದಾಮಿ ಎಣ್ಣೆ: ಸಮಪ್ರಮಾಣದಲ್ಲಿ ಬಾದಾಮಿ ಎಣ್ಣೆ, ಲಿಂಬೆರಸ ಮತ್ತು ನೆಲ್ಲಿಕಾಯಿಯ ರಸಗಳನ್ನು ಮಿಶ್ರಣಮಾಡಿಕೊಂಡು (ಬಿಸಿ ಮಾಡಬಾರದು) ನೇರವಾಗಿ ಕೂದಲಿಗೆ ಹಾಗೂ ಕೂದಲ ಬುಡಕ್ಕೆ ಹಚ್ಚಿ ಮಸಾಜ್ ಮಾಡುವುದರಿಂದ ಬಿಳಿಗೂದಲು ಶೀಘ್ರವೇ ಕಪ್ಪಗಾಗುತ್ತದೆ.
• ಕರಿ ಬೇವಿನ ಎಲೆ : ಸಣ್ಣ ಉರಿಯಲ್ಲಿ ಕೊಬ್ಬರಿ ಎಣ್ಣೆಯನ್ನು ಬಿಸಿಮಾಡಿ ಕೆಲವು
ಕರಿಬೇವಿನ ಎಲೆಗಳನ್ನು ಬೇಯಿಸಬೇಕು. ತಣ್ಣಗಾದ ಬಳಿಕ ಈ ಎಣ್ಣೆಯನ್ನು ಕೂದಲ ಬುಡಕ್ಕೆ ನಯವಾಗಿ ಮಸಾಜ್ ಮಾಡುವುದರಿಂದ ಬಿಳಿ ಕೂದಲು ಕಪ್ಪಗಾಗತೊಡಗುತ್ತದೆ. ಈ ಎಣ್ಣೆಗೆ ಕೊಂಚ ಮೊಸರನ್ನು ಅಥವಾ ಮಜ್ಜಿಗೆಯನ್ನು ಸೇರಿಸಿಯೂ ಬಳಸಬಹುದು.
• ಈರುಳ್ಳಿ (onion ): ಈರುಳ್ಳಿಯ ರಸವನ್ನು ಹಿಂಡಿಹೊಂಡು ಸ್ವಲ್ಪ, ಸ್ವಲ್ಪವಾಗಿಯೇ ಕೂದಲ ಬುಡಕ್ಕೆ ಹಚ್ಚಿ ಮಾಲಿಶ್ ಮಾಡುವುದರಿಂದ ಕೂದಲು ಬಳಿಯಾಗದಂತೆ ತಡೆಯಬಹುದು ಹಾಗೂ ಕೂದಲುದುರುವುದನ್ನೂ ತಡೆಯಬಹುದು.
• ಹರಿವೆ ಸೊಪ್ಪು: ತಲೆಕೂದಲು ಅರ್ಧಕ್ಕೆ ಮುರಿದು ಬೀಳುವುದು, ತಲೆಕೂದಲಿನ ಬಣ್ಣ ಚಿಕ್ಕ ವಯಸ್ಸಿಗೆ ಬಿಳಿ ಬಣ್ಣಕ್ಕೆ ತಿರುಗುವುದು, ಇವೆಲ್ಲವೂ ಒಳ್ಳೆಯ ಆರೋಗ್ಯಕರ ತಲೆ ಕೂದಲಿನ ಲಕ್ಷಣವಲ್ಲ. ಆದರೆ ಇಂತಹ ತೊಂದರೆಗಳನ್ನು ಬಹಳ ಸುಲಭವಾಗಿ ಹರಿವೆ ಸೊಪ್ಪು ಅಥವಾ ಅಮರನಾಥ್ ಸೊಪ್ಪು ರಸದ ಮೂಲಕ ದೂರ ಮಾಡಬಹುದು. ನೀರಿನಲ್ಲಿ ಹರಿವೆ ಸೊಪ್ಪು ರಸ ಮಿಶ್ರಣ ಮಾಡಿ ಅದನ್ನು ತಲೆಕೂದಲಿಗೆ ಹಚ್ಚಬೇಕು. ಒಂದ ರಿಂದ ಎರಡು ಗಂಟೆಗಳ ಕಾಲ ಇದನ್ನು ಹಾಗೆ ಬಿಟ್ಟು ಆನಂತರ ಸ್ನಾನ ಮಾಡಬಹುದು. ಬೇಕೆಂದರೆ ಅಮರನಾಥ್ ಎಲೆಗಳ ಪೇಸ್ಟ್ ಸಹ ತಲೆ ಕೂದಲಿಗೆ ಹಚ್ಚಬಹುದು.
• ಕ್ಯಾರೆಟ್ ಮತ್ತು ಎಳ್ಳು: ತಲೆ ಕೂದಲಿನ ಆರೋಗ್ಯಕ್ಕೆ ಇದು ಬೆಸ್ಟ್ ಕಾಂಬಿನೇಷನ್ ಎಂಬುದು ತಜ್ಞರ ಅಭಿಪ್ರಾಯ. ಚಿಕ್ಕ ವಯಸ್ಸಿಗೆ ತಲೆ ಕೂದಲು ಬೆಳ್ಳಗಾಗುವ ಸಾಧ್ಯತೆಯನ್ನು ಇದು ತಡೆಯುತ್ತದೆ. ಇದಕ್ಕಾಗಿ ನೀವು ಎಳ್ಳೆಣ್ಣೆ ಮತ್ತು ಕ್ಯಾರೆಟ್ ರಸವನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಅದಕ್ಕೆ ಒಂದು ಟೇಬಲ್ ಚಮಚ ಮೆಂತ್ಯ ಪುಡಿಯನ್ನು ಸೇರಿಸಬೇಕು.
ಇದನ್ನು 20 ದಿನಗಳ ಕಾಲ ಸೂರ್ಯನ ಬಿಸಿಲಿನಲ್ಲಿ ಇಟ್ಟು ಆನಂತರ ಅದನ್ನು ತಲೆ ಕೂದಲಿಗೆ ಮತ್ತು ನೆತ್ತಿಯ ಭಾಗಕ್ಕೆ ಹಾಕಿ ಚೆನ್ನಾಗಿ ಮಸಾಜ್ ಮಾಡಬೇಕು. ಹೀಗೆ ಮಾಡುವುದರಿಂದ ನಿಮ್ಮ ತಲೆ ಕೂದಲು ಚಿಕ್ಕ ವಯಸ್ಸಿಗೆ ಬೆಳಗಾಗುವ ಸಾಧ್ಯತೆ ಇರುವುದಿಲ್ಲ.
• ಶುಂಠಿ(ginger): ಕೇವಲ ನಿಮ್ಮ ದೇಹದ ಆರೋಗ್ಯಕ್ಕೆ ಮಾತ್ರವಲ್ಲ ನಿಮ್ಮ ತ್ವಚೆ, ನಿಮ್ಮ ತಲೆ ಕೂದಲಿಗೂ ಕೂಡ ಶುಂಠಿ ಅದ್ಭುತವಾದ ಪ್ರಯೋಜನಗಳನ್ನು ಒದಗಿಸುತ್ತದೆ. ಚಿಕ್ಕ ವಯಸ್ಸಿಗೆ ತಲೆ ಕೂದಲು ಬಿಳಿ ಬಣ್ಣಕ್ಕೆ ತಿರುಗುವ ಸಾಧ್ಯತೆಯನ್ನು ಇದು ತಡೆಯುತ್ತದೆ.
ಹಾಲು ಅಥವಾ ಜೋಜೋಬಾ ಆಯಿಲ್ ಜೊತೆಗೆ ತುರಿದ ಶುಂಠಿಯನ್ನು ಹಾಕಿ ಅದನ್ನು ನಿಮ್ಮ ನೆತ್ತಿಯ ಭಾಗದಲ್ಲಿ ಅನ್ವಯಿಸಿ. ಇದನ್ನು 10 ರಿಂದ 15 ನಿಮಿಷಗಳು ಹಾಗೆ ಇರಲು ಬಿಟ್ಟು ಆನಂತರ ಸ್ನಾನ ಮಾಡಿ. ಎರಡು ವಾರಗಳ ತನಕ ನಿರಂತರವಾಗಿ ಹೇಗೆ ಮಾಡಿದರೆ ನಿಮ್ಮ ತಲೆ ಕೂದಲು ಸಂಪೂರ್ಣವಾಗಿ ಬಿಳಿ ಕೂದಲ ಹೊರತಾಗಿರುತ್ತದೆ. ವಾರದಲ್ಲಿ ಎರಡು ಬಾರಿ ಈ ರೀತಿ ಮಾಡಬಹುದು.
• ಹಾಲಿನ(milk )ಕೆನೆ ಮತ್ತು ಮೊಟ್ಟೆಯ (egg) ಪ್ಯಾಕ್: ಒಂದು ಬಟ್ಟಲು ತೆಗೆದುಕೊಂಡು ಅದರಲ್ಲಿ ಎರಡು ಟೇಬಲ್ ಚಮಚ ತಾಜಾ ಹಾಲಿನ ಕೆನೆಯನ್ನು ಹಾಕಿಕೊಳ್ಳಿ, ಇದಕ್ಕೆ 2 ಮೊಟ್ಟೆಗಳನ್ನು ಒಡೆದು ಕಲೆಸಿ. ಇವೆರಡನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಈ ಪ್ಯಾಕನ್ನು ನಿಮ್ಮ ಕೂದಲು ಮತ್ತು ಅದರ ಬುಡಕ್ಕೆ ಲೇಪಿಸಿ. ಶವರ್ ಕ್ಯಾಪ್‍ನಿಂದ ಮುಚ್ಚಿಕೊಳ್ಳಿ. 30 ನಿಮಿಷಗಳ ನಂತರ ತಣ್ಣೀರಿನಲ್ಲಿ ಶಾಂಪೂ ಮಾಡಿಕೊಂಡು ಇದನ್ನು ತೊಳೆಯಿರಿ.
• ಸಾಸಿವೆ : ಎರಡರಿಂದ ಮೂರು ಟೇಬಲ್ ಚಮಚದಷ್ಟು ಸಾಸಿವೆ ಎಣ್ಣೆಗೆ ಸ್ವಲ್ಪ ಮದರಂಗಿ ಎಲೆಗಳನ್ನು ಹಾಕಿ ಚಿಕ್ಕ ಉರಿಯಲ್ಲಿ ಎಲೆಗಳು ಪೂರ್ಣವಾಗಿ ಕರಗುವವರೆಗೆ ಕುದಿಸಬೇಕು. ತಣ್ಣಗಾದ ಬಳಿಕ ಈ ಎಣ್ಣೆಯನ್ನು ಪ್ರತಿದಿನ ಕೂದಲಿಗೆ ಹಚ್ಚಿಕೊಳ್ಳುವ ಮೂಲಕ ಹೊಳಪಿನ ನೈಸರ್ಗಿಕವಾಗಿ ಕಪ್ಪಗಾಗಿರುವ ಕೂದಲನ್ನು ಪಡೆಯಬಹುದು.
• ಲೋಳೆ ರಸ ಮತ್ತು ಮೊಟ್ಟೆ : ಅರ್ಧ ಕಪ್ ಲೋಳೆ ರಸ ಜೊತೆಗೆ ಒಂದು ಮೊಟ್ಟೆಯ ಬಿಳಿಭಾಗವನ್ನು ಮಿಶ್ರಣ ಮಾಡಿಕೊಂಡು ಪೇಸ್ಟ್‌ನಂತೆ ತಯಾರಿಸಿಕೊಳ್ಳಿ. ಈ ಪೇಸ್ಟನ್ನು ನಿಮ್ಮ ಕೂದಲು ಮತ್ತು ಅದರ ಬುಡಕ್ಕೆ ಲೇಪಿಸಿ. ಇದನ್ನು 30 ನಿಮಿಷ ಬಿಡಿ, ನಂತರ ತೊಳೆಯಿರಿ. ಈ ಹೇರ್ ಮಾಸ್ಕ್ ನಿಮ್ಮ ಕೂದಲಿಗೆ ಹೊಳಪನ್ನು ನೀಡುವುದರ ಜೊತೆಗೆ, ಬಿಳಿಗೂದಲು ಶೀಘ್ರವೇ ಕಪ್ಪಗಾಗುತ್ತದೆ (Black hair).
ಈ ಎಲ್ಲಾ ವಿಧಾನದಿಂದ ತಲೆ ಕೂದಲು ಉದುರುವಿಕೆ ಸಮಸ್ಯೆಯನ್ನು, ತಲೆ ಹೊಟ್ಟು ತೊಂದರೆ ಯನ್ನು ಮತ್ತು ಚಿಕ್ಕ ವಯಸ್ಸಿಗೆ ತಲೆ ಕೂದಲು ಬೆಳ್ಳಗಾಗುವ ಸಾಧ್ಯತೆಯನ್ನು ನಿವಾರಿಸಬಹುದು. ಅಲ್ಲದೆ ದುಬಾರಿ ರಾಸಾಯನಿಕ ಅಂಶಗಳನ್ನು ಒಳಗೊಂಡಿರುವ ಶಾಂಪೂ ಅವಶ್ಯಕತೆ ಕೂಡ ಇರುವುದಿಲ್ಲ.