Tata Nexon Ev : ದಾರಿ ಬಿಡಿ ಇಂಧನ ಚಾಲಿತ ವಾಹನಗಳೇ, ಬರುತ್ತಿದೆ ಟಾಟಾ ನೆಕ್ಸಾನ್ ಇವಿ!!
Tata Nexon : ಅಡ್ವೆಂಚರ್ ಪ್ರಯಾಣ ವಿಭಿನ್ನವಾಗಿದ್ದು ದೂರದ ಪ್ರಯಾಣಗಳಿಗೆ ಸೂಕ್ತ ವಾಹನಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಇದೀಗ ಇಂಧನ ಚಾಲಿತ ವಾಹನಗಳಿಗೆ ಟಾಂಗ್ ಕೊಡಲು ಸಜ್ಜಾದ ಟಾಟಾ ನೆಕ್ಸಾನ್ ಇವಿ K2K (ಕಾಶ್ಮೀರ-ಕನ್ಯಾಕುಮಾರಿ) ಎಂಬ ಟ್ಯಾಗ್ ಸಾಹಸಿ ಪ್ರಯಾಣಿಕರ ಮನಸು ಗೆಲ್ಲಲು ಮತ್ತಷ್ಟು ಸಾಧನೆ ಮಾಡಲಿದೆ.
ಸಾಮಾನ್ಯವಾಗಿ ಪೆಟ್ರೋಲ್ (petrol )ಮತ್ತು ಡೀಸೆಲ್ ವಾಹನಗಳಲ್ಲಿ K2K ಟ್ರಿಪ್‌ಗಳನ್ನು ಮಾಡುತ್ತಾರೆ. ಆದರೆ ಮೊದಲ ಬಾರಿಗೆ ಎಲೆಕ್ಟ್ರಿಕ್ ಕಾರಿನ(electric car )ಮೂಲಕ ಈ ಟ್ರಿಪ್ ಮಾಡಲು ಟಾಟಾ ಯೋಜಿಸಿದೆ. ಎಲೆಕ್ಟ್ರಿಕ್ ವಾಹನಗಳಲ್ಲಿ ಅಷ್ಟು ದೂರವನ್ನು ಕ್ರಮಿಸುವುದು ತುಂಬಾ ಕಷ್ಟ. ಆದರೆ ಭಾರತೀಯ(india )ಮಾರುಕಟ್ಟೆಯಲ್ಲಿ (market )ಎಲೆಕ್ಟ್ರಿಕ್ ಕಾರುಗಳಲ್ಲಿ ಒಂದಾದ ಟಾಟಾ ನೆಕ್ಸಾನ್ EV ಕಾರಿನ ಮೂಲಕ ಅಡ್ವೆಂಚರ್ ಟ್ರಿಪ್ ಅನ್ನು ಯಶಸ್ವಿಯಾಗಿ ನಡೆಸಲು ಮುಂದಾಗಿದೆ.
ಸದ್ಯ ಟಾಟಾ ನೆಕ್ಸಾನ್ EV (Tata Nexon) ಎಲೆಕ್ಟ್ರಿಕ್ ತನ್ನ K2K ಪ್ರಯಾಣವನ್ನು ಫೆಬ್ರವರಿ 25 ರಂದು ಪ್ರಾರಂಭಿಸಲಿದೆ. ಪ್ರಯಾಣವು ಕಾಶ್ಮೀರದಿಂದ ಆರಂಭ ಆಗಿ ಕನ್ಯಾಕುಮಾರಿಯಲ್ಲಿ ಕೊನೆಗೊಳ್ಳಲಿದ್ದು, ಕೇವಲ 4 ದಿನಗಳಲ್ಲಿ ಪ್ರಯಾಣವನ್ನು ಪೂರ್ಣಗೊಳಿಸಲು ಯೋಜಿಸಲಾಗಿದೆ.
ಸದ್ಯ 4 ದಿನಗಳಲ್ಲಿ 4,000 ಕಿ.ಮೀ ದೂರ ಕ್ರಮಿಸಬೇಕು. ಹಾಗಾಗಿ ಪ್ರತಿದಿನ 1,000 ಕಿ.ಮೀ ಪ್ರಯಾಣಿಸಲು ಯೋಜಿಸಲಾಗಿದ್ದು, ಸದ್ಯ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ನಡುವೆ ಚಾರ್ಜ್ ಮಾಡಲು ಮಾತ್ರ ನಿಲ್ಲುತ್ತದೆ ಎಂದು ತಿಳಿದುಬಂದಿದೆ. ಈ ಯಶಸ್ವಿ ಅಡ್ವೆಂಚರ್ ಪ್ರಯಾಣ ಮೂಲಕ ಜನರ ಮನಸ್ಸು ಗೆಲ್ಲಲಿದೆ. ಜೊತೆಗೆ ಈ ಟ್ರಿಪ್‌ನ ಮೂಲಕ ಟಾಟಾ ನೆಕ್ಸಾನ್ EV ಎಲೆಕ್ಟ್ರಿಕ್ ಕಾರು K2K ಪ್ರಯಾಣವನ್ನು ಪೂರ್ಣಗೊಳಿಸಿದ ಅತ್ಯಂತ ವೇಗದ ಎಲೆಕ್ಟ್ರಿಕ್ ವಾಹನ ಎಂಬ ದಾಖಲೆಯನ್ನು ನಿರ್ಮಿಸಲಿದೆ.
ಈ ಪ್ರಯಾಣದಲ್ಲಿ ಟಾಟಾ ಮೋಟಾರ್ಸ್‌ನ ಪ್ರಮುಖ ಮಾದರಿ ಹಾಗೂ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಹೊಂದಿರುವ ನೆಕ್ಸಾನ್ ಇವಿ ಮ್ಯಾಕ್ಸ್ ಎಲೆಕ್ಟ್ರಿಕ್ ಕಾರನ್ನು ಬಳಸಲಾಗುವುದು. ಅಲ್ಲದೆ ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ ಟಾಟಾ ನೆಕ್ಸಾನ್ ಇವಿ ಎಲೆಕ್ಟ್ರಿಕ್ ಕಾರಿನ ‘ಲಾಂಗ್ ರೇಂಜ್’ ಆವೃತ್ತಿಯಾಗಿದೆ.
ಮುಖ್ಯವಾಗಿ ಈ ಎಲೆಕ್ಟ್ರಿಕ್ ಕಾರ್ 40.5 kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ ಬರೋಬ್ಬರಿ 453 ಕಿಲೋಮೀಟರ್ ಕ್ರಮಿಸಬಹುದು ಎಂದು ಕಂಪನಿ ತಿಳಿಸಿದೆ. 50 kW DC ವೇಗದ ಚಾರ್ಜರ್ ಅನ್ನು ಬಳಸಿ, ಈ ಎಲೆಕ್ಟ್ರಿಕ್ ಕಾರಿನ ಬ್ಯಾಟರಿಯನ್ನು ಕೇವಲ 56 ನಿಮಿಷಗಳಲ್ಲಿ ಶೇ 80 ರವರೆಗೆ ಚಾರ್ಜ್ ಮಾಡಬಹುದು ಎಂದು ಹೇಳಿದೆ.
ಪ್ರಸ್ತುತ, ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ ಎಲೆಕ್ಟ್ರಿಕ್ ಕಾರಿನ ಪ್ರವೇಶ ಮಟ್ಟದ ರೂಪಾಂತರಕ್ಕೆ 16.49 ಲಕ್ಷ ರೂ. ಬೆಲೆ ಇದ್ದು, ಟಾಪ್ ವೇರಿಯೆಂಟ್ ಬೆಲೆ 18.99 ಲಕ್ಷ ರೂ. ಇವು ಎಕ್ಸ್ ಶೋ ರೂಂ ಬೆಲೆಗಳಾಗಿವೆ ಎಂಬ ಮಾಹಿತಿ ಇದೆ.
ಒಟ್ಟಿನಲ್ಲಿ K2K ಪ್ರಯಾಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ Nexon EV Max ಎಲೆಕ್ಟ್ರಿಕ್ ಕಾರಿನ ಮಾರಾಟವು ಹೆಚ್ಚಾಗುವ ನಿರೀಕ್ಷೆಯಿದೆ. ಸದ್ಯ 4 ದಿನಗಳಲ್ಲಿ 4,000 ಕಿ.ಮೀ ದೂರ ಕ್ರಮಿಸುವ ಮೂಲಕ ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ ಎಲೆಕ್ಟ್ರಿಕ್ ಕಾರು ಯೋಜಿಸಿದಂತೆ ಕಾಶ್ಮೀರದಿಂದ ಕನ್ಯಾಕುಮಾರಿ ಪ್ರಯಾಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ನಿರೀಕ್ಷೆಯಿದೆ.