SSLC, Second Puc ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌!

SSLC and Second PUC : ಈಗಾಗಲೇ ಕೊರೋನ (corona )ಮಹಾಮಾರಿ ಹಲವಾರು ಕ್ಷೇತ್ರಗಳಲ್ಲಿ ಪರಿಣಾಮ ಬೀರಿದ್ದು, ಜೊತೆಗೆ ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿಯೂ ಶೈಕ್ಷಣಿಕ ಅವಧಿ ಕಡಿಮೆ ಆದ ಕಾರಣ ಕಲಿಕೆಯ ಮೇಲೆ ಉಂಟಾದ ಪರಿಣಾಮದಿಂದ ಮಕ್ಕಳು(children )ಇನ್ನು ಪೂರ್ಣ ಪ್ರಮಾಣದಲ್ಲಿ ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿ ಹೊಸ ನಿರ್ಧಾರ ಒಂದನ್ನು ಕೈಗೊಂಡಿದೆ.

ಹೌದು ಸದ್ಯ ಎಸ್‌ಎಸ್‌ಎಲ್ ಸಿ ಮತ್ತು ದ್ವಿತೀಯ ಪಿಯುಸಿ (SSLC and Second PUC)ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಈ ವರ್ಷವೂ ಹೆಚ್ಚುವರಿ ಅಂಕ ನೀಡಲಾಗುತ್ತದೆ ಎಂದು ನಿರ್ಧರಿಸಲಾಗಿದೆ. ಒಟ್ಟಾರೆ ಕನಿಷ್ಠ ಅಂಕ ಪಡೆಯುವ ಎಸ್‌ಎಸ್‌ಎಲ್ಸಿ ವಿದ್ಯಾರ್ಥಿಗಳಿಗೆ ಶೇಕಡ 10ರಷ್ಟು ಮತ್ತು ಪಿಯುಸಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಶೇಕಡ 5ರಷ್ಟು ಅಂಕ ನೀಡಲಾಗುವುದು ಎಂದು ನಿರ್ಧರಿಸಲಾಗಿದೆ.

ಪ್ರಸ್ತುತ ಎಸ್‌ಎಸ್‌ಎಲ್ಸಿಯಲ್ಲಿ 6 ವಿಷಯಗಳ ಪೈಕಿ 3 ವಿಷಯಗಳಲ್ಲಿ ಉತ್ತೀರ್ಣರಾಗಿದ್ದರೆ ಉಳಿದ ಮೂರು ವಿಷಯಗಳಲ್ಲಿ ಗರಿಷ್ಠ 26 ಅಂಕಗಳು ದೊರೆಯುತ್ತವೆ.

ಇನ್ನು ದ್ವಿತೀಯ ಪಿಯುಸಿಯಲ್ಲಿ ಕನಿಷ್ಠ 210 ಅಂಕ ಪಡೆದವರಿಗೆ ಎರಡು ವಿಷಯಗಳಲ್ಲಿ ಅಂದರೆ ತಲಾ 5 ಅಂಕ ಸೇರಿ ಗರಿಷ್ಠ 10 ಅಂಕ ಪಡೆದುಕೊಳ್ಳಬಹುದು ಎಂದು ತಿಳಿಸಲಾಗಿದೆ.

ಈಗಾಗಲೇ ಕೊರೊನಾ ಹಿನ್ನೆಲೆಯಲ್ಲಿ 2020ರಲ್ಲಿ ಪರೀಕ್ಷೆ ನಡೆಯದೇ ಇದ್ದ ಕಾರಣ 2021 ರಲ್ಲಿ ಎಲ್ಲಾ ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗಿತ್ತು. ಜೊತೆಗೆ 2022ರಲ್ಲಿ ಶೇಕಡ 10ರಷ್ಟು ಹೆಚ್ಚುವರಿ ಅಂಕ ನೀಡಲಾಗಿತ್ತು. ಹಾಗೆಯೇ ಈ ವರ್ಷವೂ ಕೃಪಾಂಕ ನೀಡಲು ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿ ತೀರ್ಮಾನಿಸಿದೆ.

 

Leave A Reply

Your email address will not be published.