Re Hunter 350 Craze : ಭರ್ಜರಿ 1 ಲಕ್ಷ ಬೈಕ್ ಗಳ ಮಾರಾಟ 6 ತಿಂಗಳಲ್ಲಿ! ಏನಿದು RE ಹಂಟರ್ 350 ಮಾಡಿರೋ ವಿಸ್ಮಯ!!!
Re Hunter 350 Craze : ಯುವಕರು ತಮ್ಮ ಟ್ರೆಂಡಿಗೆ ತಕ್ಕಂತೆ ಬೈಕನ್ನು ಬದಲಿಸುವುದು ಸಹಜವಾಗಿದೆ. ಅದಲ್ಲದೆ ರಾಯಲ್ ಎನ್‌ಫೀಲ್ಡ್ ದುಬಾರಿ (costly)ಆಗಿದ್ದರೂ ಸಹ ಹೆಚ್ಚಾಗಿ ಖರೀದಿ ಮಾಡುತ್ತಾರೆ . ಇನ್ನು ಮಹೇಂದ್ರ ಸಿಂಗ್ ಧೋನಿ ಟೀಮ್ ಇಂಡಿಯಾ( team India )ಮಾಜಿ ನಾಯಕನ (captain)ಬೈಕ್ (bike )ಕ್ರೇಸ್ ಬಗ್ಗೆ ಕೇಳಿದರೆ ನೀವು ಆಶ್ಚರ್ಯ ಪಡುವುದು ಖಂಡಿತಾ. ಹೌದು ಧೋನಿ ಅವರ ಗ್ಯಾರೇಜ್ ನಲ್ಲಿ ಹಲವಾರು ಬೈಕ್ ಗಳ ಸಂಗ್ರಹ ಇದ್ದು, ಅವುಗಳಲ್ಲಿ ರಾಯಲ್ ಎನ್‌ಫೀಲ್ಡ್ ಹಂಟರ್(Re hunter 350 Craze) ಮಾದರಿ ಕೂಡ ಇದೆ.
ಈಗಾಗಲೇ ರಾಯಲ್ ಎನ್‌ಫೀಲ್ಡ್ ಹಂಟರ್ 350 ಅನ್ನು ಆಗಸ್ಟ್ 2022 ರಲ್ಲಿ ಬಿಡುಗಡೆ ಮಾಡಿದ್ದು, ಕೇವಲ 6 ತಿಂಗಳೊಳಗೆ ಈ ಬೈಕು ಭಾರತೀಯರ ನೆಚ್ಚಿನ 350cc ಬೈಕ್ ಆಗಿ ಜನಪ್ರಿಯತೆ ಪಡೆದಿದೆ. ಹೌದು ರಾಯಲ್ ಎನ್‌ಫೀಲ್ಡ್ ಕಂಪನಿಯು ಇತ್ತೀಚೆಗಷ್ಟೇ ಹಂಟರ್ 350 ಬೈಕ್(bike )ಅನ್ನು ಬಿಡುಗಡೆ ಮಾಡಿದ್ದು, ಇದು ಪ್ರತಿ ತಿಂಗಳ ಮಾರಟದಲ್ಲಿ ಉತ್ತಮ ಬೆಳವಣಿಗೆ ಸಾಧಿಸುತ್ತಿರುವ ಹಂಟರ್ ಮಾದರಿಯನ್ನು ಇಲ್ಲಿಯವರೆಗೆ 1 ಲಕ್ಷಕ್ಕೂ ಹೆಚ್ಚು ಯುನಿಟ್‌ಗಳನ್ನು ಮಾರಾಟ ಮಾಡಿರುವುದಾಗಿ ಕಂಪನಿ ಮಾಹಿತಿ ನೀಡಿದೆ.
ಸದ್ಯ ಹಂಟರ್ 350 ಅನ್ನು ಹೊಸ ಮಸ್ಕ್ಯುಲರ್-ರೆಟ್ರೊ ಸ್ಟೈಲಿಂಗ್‌ನಲ್ಲಿ ಪರಿಚಯಿಸಲಾಗಿದ್ದು , ಜೊತೆಗೆ ಹಂಟರ್ 350 ಭಾರತದ ಪ್ರತಿಷ್ಠಿತ ಇಂಡಿಯನ್ ಮೋಟಾರ್‌ಸೈಕಲ್ ಆಫ್ ದಿ ಇಯರ್ 2023 ಪ್ರಶಸ್ತಿಯನ್ನು ಸಹ ಗೆದ್ದಿದೆ. ಇನ್ನು ಕಂಪನಿಯು (company )ಹಂಟರ್ 350 ಬೈಕನ್ನು ರಫ್ತು ಮಾಡಲು ಕೂಡ ಪ್ರಾರಂಭಿಸಿದೆ. ಇವುಗಳಲ್ಲಿ ಫ್ರಾನ್ಸ್, ಜರ್ಮನಿ, ಇಟಲಿ, ಯುಕೆ, ಅರ್ಜೆಂಟೀನಾ, ಕೊಲಂಬಿಯಾ, ಮೆಕ್ಸಿಕೊ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಂತಹ ದೇಶಗಳು ಸೇರಿವೆ. ಹಾಗಿದ್ದರೆ ನೀವು ಈ ಬೈಕ್ ವಿಶೇಷತೆ ತಿಳಿದುಕೊಳ್ಳಲೇ ಬೇಕು.
ರಾಯಲ್ ಎನ್‌ಫೀಲ್ಡ್ ಹಂಟರ್ 350 ವೈಶಿಷ್ಯ :
• ರಾಯಲ್ ಎನ್‌ಫೀಲ್ಡ್ ಹಂಟರ್ 350 ಮಾದರಿಯು 349cc, ಸಿಂಗಲ್-ಸಿಲಿಂಡರ್, ಏರ್ ಮತ್ತು ಆಯಿಲ್-ಕೂಲ್ಡ್, ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್ ಅನ್ನು ಒಳಗೊಂಡಿದ್ದು, ಇದು 20.2 Bhp ಪವರ್ ಮತ್ತು 27 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
• ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಇದು ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡಿಸ್ಕ್/ಡ್ರಮ್ ಆಯ್ಕೆಯನ್ನು ಸಿಂಗಲ್ ಅಥವಾ ಡ್ಯುಯಲ್-ಚಾನೆಲ್ ಎಬಿಎಸ್‌ನೊಂದಿಗೆ ಪಡೆಯುತ್ತದೆ.
• ರಾಯಲ್ ಎನ್‌ಫೀಲ್ಡ್ ಹಂಟರ್ 350 ನ ಒಟ್ಟು ವಾಹನದ ತೂಕ 360 ಕೆ.ಜಿ ಇದೆ. ಉದ್ದ 2,055 ಎಂಎಂ, 800 ಎಂಎಂ ಅಗಲ ಮತ್ತು 1,055 ಎಂಎಂ ಎತ್ತರವನ್ನು ಹೊಂದಿದ್ದು, ವೀಲ್‌ಬೇಸ್ ಉದ್ದವು 1,370 ಎಂಎಂ ಆಗಿದೆ.
• ಹಂಟರ್ ಟಿಯರ್-ಡ್ರಾಪ್ ಆಕಾರದ ಇಂಧನ ಟ್ಯಾಂಕ್, ಉದ್ದವಾದ ಸಿಂಗಲ್-ಪೀಸ್ ಸೀಟ್, ವೃತ್ತಾಕಾರದ ಹೆಡ್‌ಲ್ಯಾಂಪ್‌ಗಳು, ಟರ್ನ್ ಇಂಡಿಕೇಟರ್‌ಗಳು, ರಿಯರ್-ವ್ಯೂ ಮಿರರ್‌ಗಳು ಮತ್ತು ಸ್ವಲ್ಪ ಎತ್ತರದ ಸ್ಕ್ರ್ಯಾಂಬ್ಲರ್ ಮಾದರಿಯ ಮೋಟಾರ್‌ಸೈಕಲ್ ಆಗಿದೆ.
• ಹಂಟರ್ 350 ಬೈಕಿನಲ್ಲಿ ಸೆಮಿ-ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಜೊತೆಗೆ ಟ್ರಿಪ್ಲರ್ ನ್ಯಾವಿಗೇಷನ್ ಅನ್ನು ಹೈ ಎಂಡ್ ಮಾದರಿಯಲ್ಲಿ ಮಾತ್ರ ನೀಡಲಾಗಿದೆ.
• ಆರಂಭಿಕ ಮಾದರಿಯಲ್ಲಿ ಸೆಮಿ-ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಮಾತ್ರ ನೀಡಲಾಗಿದ್ದು, ಟ್ರಿಪ್ಲರ್ ನ್ಯಾವಿಗೇಷನ್ ಅನ್ನು ಆಕ್ಸೆಸರಿಸ್‌ನಲ್ಲಿ ಖರೀದಿ ಮಾಡಬಹುದಾಗಿದೆ.
• ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕಿನ ಮುಂಭಾಗದಲ್ಲಿ ಕಂಪನಿಯು 41MM ಟೆಲಿಸ್ಕೋಪಿಕ್ ಫೋರ್ಕ್‌ಗಳೊಂದಿಗೆ ಟ್ವಿನ್ ಡೌನ್‌ಟ್ಯೂಬ್ ಸ್ಪೈನ್ ಫ್ರೇಮ್ ಸೆಟಪ್ ಮತ್ತು ಹಿಂಭಾಗದಲ್ಲಿ ಪ್ರಿಲೋಡ್-ಅಡ್ಜಸ್ಟಬಲ್ ಟ್ವಿನ್ ಶಾಕ್‌ಗಳನ್ನು ನೀಡಿದೆ.
ಸದ್ಯ ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕಿನ ಹೊಸ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 1.50 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 1.69 ಲಕ್ಷ ಬೆಲೆ ಹೊಂದಿವೆ.
ಭಾರತೀಯ ಮಾರುಕಟ್ಟೆಯಲ್ಲಿ (market )ಹಂಟರ್ 350 ಬೈಕ್ ನೇರವಾಗಿ ಟಿವಿಎಸ್ ರೋನಿನ್ 225 ಬೈಕಿಗೆ ಪೈಪೋಟಿ ನೀಡುತ್ತಿದ್ದು, ಹಂಟರ್ 350 ಮಾದರಿಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪ್ರಮುಖ ಎರಡು ವೆರಿಯೆಂಟ್‌ಗಳಾದ ಮೆಟ್ರೋ ಮತ್ತು ರೆಟ್ರೋ ಎನ್ನುವ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ.