Tech Tips : ಸ್ಮಾರ್ಟ್ ಫೋನ್ ಸ್ಕ್ರಾಚ್ಚ್ ಆಗಿದೆಯೇ? ಈ ರೀತಿ ತೆಗೆಯಿರಿ!!!
Tech Tips : ಇತ್ತೀಚಿಗೆ ಸ್ಮಾರ್ಟ್ ಫೋನ್‌ಗಳ (smartphone )ಬಳಕೆ ಹೆಚ್ಚಾಗಿದ್ದು, ಸ್ಮಾರ್ಟ್‌ಫೋನ್ ಸ್ಕ್ರಾಚ್ ಆಗದೇ ಇರದ ಹಾಗೇ ನೋಡಿಕೊಳ್ಳುವುದು ಬಹಳ ದೊಡ್ಡ ಸವಾಲು ಕೂಡ ಹೌದು. ಯಾಕೆಂದರೆ ಸ್ಮಾರ್ಟ್ ಫೋನ್ ಗಳ ಡಿಸ್ ಪ್ಲೇ ಮೇಲೆ ಹಲವಾರು ಕಾರಣಗಳಿಂದ ಕಲೆ ಮತ್ತು ಗೀರು ಗಳಾಗುತ್ತಿರುತ್ತವೆ. ಇನ್ನು ಡಿಸ್ ಪ್ಲೇಗೆ (Display) ಸ್ಕ್ರೀನ್ ಕವರ್ ಹಾಕಿದ್ದರೂ ಅದು ಕೆಲವೊಂದು ಬಾರಿ ಉಪಯೋಗಕ್ಕೆ ಬರುವುದಿಲ್ಲ. ಹಾಗಾಗಿ ದಿನನಿತ್ಯದ ಬಳಕೆಯ ನಡುವೆ ಸ್ಮಾರ್ಟ್‌ಫೋನ್ ಸ್ಕ್ರಾಚ್ ಆಗಿಯೇ ಆಗುತ್ತದೆ.ಇದಕ್ಕಾಗಿ ಹೆಚ್ಚು ಶುಲ್ಕ ನೀಡಿ ಸರಿಪಡಿಸುವುದಕ್ಕಿಂತ ಕೆಲವೊಂದು ಸುಲಭ ವಿಧಾನಗಳ (Tech Tips) ಮೂಲಕ ಹೋಗಲಾಡಿಸಬಹುದು.
• ಬೇಬಿ ಪೌಡರ್ (baby powder )ಮೂಲಕವೂ ಡಿಸ್‌ಪ್ಲೇ ಸ್ಕ್ರಾಚ್ ರಿಮೂವ್ ಮಾಡಬಹುದು. ಒಂದು ಪಾತ್ರೆಗೆ ನೀರು (water )ಮತ್ತು ಬೇಬಿ ಪೌಡರ್ ಬೆರೆಸಿಕೊಳ್ಳಿ. ಇವೆರಡನ್ನು ನುಣ್ಣನೆ ಪೇಸ್ಟ್ ಮಾಡಿ ಮತ್ತು ಹತ್ತಿ ಬಟ್ಟೆ ಬಳಸಿ ಸ್ಕ್ರಾಚ್ ನಿವಾರಣೆ ಮಾಡಿ.
• ಮೊಟ್ಟೆಯ(egg )ಬಿಳಿಭಾಗ ಮತ್ತು ಪೊಟ್ಯಾಶಿಯಮ್ ಸಲ್ಫೇಟ್ ಬಳಸಿ ಫೋನ್ ಸ್ಕ್ರಾಚ್ ನಿವಾರಣೆ ಮಾಡಿಕೊಳ್ಳಬಹುದಾಗಿದೆ. ಇವೆರಡನ್ನು ಮಿಶ್ರಣ ಮಾಡಿ. ಮತ್ತು ಈ ಮಿಶ್ರಣದಿಂದ ಸ್ಮಾರ್ಟ್‌ಫೋನ್ ಪರದೆಯನ್ನು ಒರೆಸಿ.
• ಸ್ಕ್ರಾಚ್ ನಿವಾರಣೆಗಾಗಿ ಬೇಕಿಂಗ್ ಸೋಡಾ ಉತ್ತಮ ವಿಧಾನ. ಒಂದು ಪಾತ್ರೆಗೆ ನೀರು ಮತ್ತು ಸೋಡಾವನ್ನು ಬೆರೆಸಿಕೊಳ್ಳಿ. ಇವೆರಡನ್ನು ನುಣ್ಣನೆ ಪೇಸ್ಟ್ ಮಾಡಿ ಮತ್ತು ಹತ್ತಿ ಬಟ್ಟೆ ಬಳಸಿ ಸ್ಕ್ರಾಚ್ ನಿವಾರಣೆ ಮಾಡಿ.
• ಮಾರುಕಟ್ಟೆಯಲ್ಲಿ(market )ಹಲವಾರು ಕಾರು ಸ್ಕ್ರಾಚ್ ರಿಮೂವಲ್ ಕ್ರೀಮ್‌ಗಳಿವೆ. ಅವುಗಳಲ್ಲಿ ಯಾವುದಾದರೂ ಒಂದನ್ನು ಬಳಸಿ ನಿಮ್ಮ ಫೋನ್ ಡಿಸ್‌ಪ್ಲೇ ಸ್ಕ್ರಾಚ್ ಹೋಗಲಾಡಿಸಿ.
ಈ ರೀತಿಯಾಗಿ ಸುಲಭ ವಿಧಾನದಿಂದ ಸ್ಮಾರ್ಟ್‌ಫೋನ್ ಸ್ಕ್ರಾಚ್ ನ್ನು (Scratches Remover)ತೆಗೆಯಬಹುದಾಗಿದೆ.