ಸಾವು ಸಂಭವಿಸುವ ಮೊದಲು ಏನಾಗುತ್ತೆ? ಅಧ್ಯಯನ ಬಿಚ್ಚಿಟ್ಟಿತು ಅಚ್ಚರಿಯ ಸಂಗತಿ !

Before death : ಸಾವು(death) ಯಾವಾಗ, ಹೇಗೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಇತ್ತೀಚೆಗಂತೂ ಸಾವಿನ ಸಂಖ್ಯೆ ಹೆಚ್ಚಾಗಿದೆ. ಯುವ ವಯಸ್ಸಿನಲ್ಲೇ ಹಲವಾರು ಜನರು ಸಾವಿನ ಬಾಗಿಲು ತಟ್ಟುತ್ತಿದ್ದಾರೆ. ಇನ್ನು ಈ ಸಾವು ಸಮೀಪಿಸುವಾಗ ಯಾವ ರೀತಿ ಅನುಭವವಾಗುತ್ತದೆ? ಸಾವು ಹೇಗಿರುತ್ತೆ? (Before death) ಎಂಬುದನ್ನು ಅಧ್ಯಯನದ ವರದಿಯೊಂದು ಅಚ್ಚರಿ ಸಂಗತಿ ಬಹಿರಂಗಪಡಿಸಿದೆ.

ಸಾವಿನ ಸಮೀಪದ ಅನುಭವ (NDE) ವಿಷಯಗಳ ಕುರಿತು ಡಾ. ಬ್ರೂಸ್ ಗ್ರೇಸನ್ ಸುಮಾರು 50 ವರ್ಷಗಳಿಂದ ಸಂಶೋಧನೆ ನಡೆಸುತ್ತಿದ್ದಾರೆ. ಈ ವೇಳೆ ಸಾವಿನ ಸಮೀಪದ ಅನುಭವಗಳ ಮಾಹಿತಿ ತಿಳಿದುಬಂದಿದ್ದು, ಸಾವಿನ ಸಮೀಪ ಬಂದಾಗ ನಿಧಾನಗತಿಯ ಭಾವನೆ ಮೂಡುತ್ತದೆ. ಸಾವಿನ ಸಮಯದಲ್ಲಿ ಬಹಳ ಬಲವಾದ ಭಾವನೆಗಳಿದ್ದು, ಅವರಲ್ಲಿ ಹೆಚ್ಚಿನವರು ಪ್ರೀತಿ ಮತ್ತು ಶಾಂತಿಯಂತಹ ಸಕಾರಾತ್ಮಕ ಭಾವನೆಗಳನ್ನು ಹೊಂದಿದ್ದಾರೆ ಎಂದರು.

ಈ ಭಾವನೆಯನ್ನು ‘ಅಧಿಸಾಮಾನ್ಯ ಸಂವೇದನೆಗಳು’ ಎಂದು ಹೆಸರಿಸಲಾಗಿದೆ. ಆ ಸಮಯದಲ್ಲಿ ದೇಹದಿಂದ ಬೇರ್ಪಡುವ ಭಾವನೆ ಇರುತ್ತದೆ. ಕೆಲವೊಮ್ಮೆ ಅವರು ತಮ್ಮ ಪ್ರೀತಿಪಾತ್ರರನ್ನು, ಮರಣ ಹೊಂದಿದವರನ್ನು ಅಥವಾ ಪವಿತ್ರ ಆತ್ಮಗಳನ್ನು ಸಹ ಅನುಭವಿಸುತ್ತಾರೆ ಎನ್ನಲಾಗಿದೆ. ಇದಿಷ್ಟೇ ಅಲ್ಲ, ಕೆಲವರು ಹಿಂತಿರುಗಿ ತಮ್ಮ ಜೀವಿತಾವಧಿಯನ್ನು ಪರಿಶೀಲಿಸಲು ಪ್ರಯತ್ನಿಸುತ್ತಾರೆ ಎಂದು ಡಾ. ಗ್ರೇಸನ್ ತಿಳಿಸಿದ್ದಾರೆ.

ಇನ್ನು, ವರ್ಜೀನಿಯಾ ವಿಶ್ವವಿದ್ಯಾನಿಲಯದ ವೈದ್ಯರ ಪ್ರಕಾರ, ಅನುಭವಗಳು ವಿಪರೀತ ಸಂದರ್ಭಗಳಲ್ಲಿ ಮಾತ್ರ ಅನುಭವವಾಗುತ್ತದೆ. ಗಾಯ, ಮೆದುಳಿನ ವೈಫಲ್ಯ, ಬಲವಾದ ಅರಿವಳಿಕೆ ಅಥವಾ ಹೃದಯ ಸ್ತಂಭನ ಇಂತಹ ಸಂದರ್ಭಗಳಲ್ಲಿ ಸಾವಿನ ಸಮೀಪದ ಅನುಭವಗಳು ಆಗಬಹುದು ಎಂದು ವೈದ್ಯರು ಹೇಳಿದ್ದಾರೆ. ಹಾಗೆಯೇ ಈ ಅನುಭವಗಳು ಎಲ್ಲರಿಗೂ ಒಂದೇ ರೀತಿ ಆಗುವುದಿಲ್ಲ. ಸಾವಿನ ಸಮೀಪದಲ್ಲಿರುವ ಜನರು ತುಂಬಾ ಆರಾಮದಾಯಕ ಮತ್ತು ಎಲ್ಲ ನೋವಿನಿಂದ ಮುಕ್ತರಾಗಿರುತ್ತಾರೆ. ಆದ್ರೆ, ದೇಹದ ಹೊರಗಿನ ಸಂವೇದನೆ ಸಂಭವಿಸಬಹುದು. ಕೆಲವರು ತಮ್ಮ ಭೌತಿಕ ದೇಹವನ್ನ ಸಹ ನೋಡಬಹುದು ಎಂದು ತಜ್ಞರು ಹೇಳುತ್ತಾರೆ.

Leave A Reply

Your email address will not be published.