Anasuya Bharadwaj: ‘ನಿಮಗೆ ಅದರ ‘ ಅನುಭವ ಇದೆಯೇ ? ಈ ಮುದ್ದು ಮುಖದ ನಟಿಗೆ ಆತ ಪಬ್ಲಿಕ್‌ನಲ್ಲೇ ಕೇಳಿದ್ದ !
Anasuya Bharadwaj : ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಗಳು ಪ್ರಶ್ನೆ ಕೇಳಿ ಅನ್ನೋದು, ಯಾವುದು ಕೇಳಬೇಕು ಬಿಡಬೇಕು ಅನ್ನುವ ಪರಿಜ್ಞಾನ ಇಲ್ಲದ ಹುಡುಗರು ಕಾಮ ಕೇಳಿಯ ಬಗ್ಗೆ ಕೇಳೋದು ಚಾಳಿ ಆಗಿ ಬಿಟ್ಟಿದೆ. ಇದೀಗ ಟಾಲಿವುಡ್ನ( Tollywood) ಜನಪ್ರಿಯ ನಟಿ ಮತ್ತು ನಿರೂಪಕಿ ಅನಸೂಯ ಭಾರದ್ವಾಜ್ (Anasuya Bharadwaj) ಅವರನ್ನು ‘ ಕೇಳಿ’ ಬಗ್ಗೆ ನೆಟ್ಟಿಗನೊಬ್ಬ ಕೇಳಿದ್ದಾನೆ. ಆತನ ಅಶ್ಲೀಲ ಪ್ರಶ್ನೆಗೆ ಆಕೆ ನಾಚಿಕೊಳ್ಳದೆ ಬೋಲ್ಡ್ ಉತ್ತರವನ್ನೇ ನೀಡಿದ್ದಾಳೆ.
ಇನ್ಸ್ಟಾಗ್ರಾಂನಲ್ಲಿ ( Instagram) ಅಭಿಮಾನಿಗಳ ಜೊತೆ ಅನಸೂಯ ನಡೆಸಿದ ಲೈವ್ ಚಾಟಿಂಗ್ ( Live Chatting) ವೇಳೆ ನೆಟ್ಟಿಗನೊಬ್ಬ ವೈಯಕ್ತಿಕ ಹಾಗೂ ಅಶ್ಲೀಲ ಪ್ರಶ್ನೆಯನ್ನು ಕೇಳಿದ್ದಾನೆ. ಆದರೆ, ಅನಸೂಯ ಅವರು ಸ್ವಲ್ಪವೂ ಮುಜುಗರಪಟ್ಟುಕೊಳ್ಳದೇ ನೇರವಾಗಿ ಉತ್ತರ ನೀಡಿದ್ದಾರೆ.
ನೀವು ನಿಜವಾಗಿಯೂ ಪ್ರಬುದ್ಧ ಮತ್ತು ಉದಾರ ಮಹಿಳೆಯಾಗಿದ್ದರೆ ನನ್ನ ಪ್ರಶ್ನೆಗೆ ಉತ್ತರಿಸಿ ಎಂದ ಆತನು, ಮೊದಲು ತನ್ನ ಚಮತ್ಕಾರಿ ಪ್ರಶ್ನೆಯ ಮೂಲಕ ಆಕೆಯನ್ನು ಉತ್ತರ ಕೊಡಲೇಬೇಕಾದ ಹಾಗೆ ಮಾಡಿದ್ದಾನೆ. ” ನೀವು ಯಾವಾಗಲಾದರೂ ಸಲಿಂಗಕಾಮ ನಡೆಸಿರುವಿರಾ? ” ಎಂದು ಆತ ಪ್ರಶ್ನೆ ಮಾಡಿದ್ದಾನೆ. ಇದಕ್ಕೆ ತಕ್ಷಣ ಉತ್ತರ ನೀಡಿರುವ ಅನಸೂಯ, ನಮ್ಮ ಕುಟುಂಬ ಮತ್ತು ಸ್ನೇಹಿತರಲ್ಲಿ ಅನೇಕರು ಸಲಿಂಗಕಾಮಿಗಳಿದ್ದಾರೆ. ಆದರೆ, ವೈಯಕ್ತಿಕವಾಗಿ ನಾನು ಯಾವುದೇ ಅಂತಹ ಅನುಭವ ಹೊಂದಿಲ್ಲ. ಆದರೆ, ಆನ್ಲೈನ್ನಲ್ಲಿ ಅಂತಹ ಅನುಭವವನ್ನು ಅನೇಕ ಬಾರಿ ಎದುರಿಸಿದ್ದೇನೆ ಎಂದು ಬೋಲ್ಡ್ ಆಗಿ ಉತ್ತರಿಸಿದ್ದಾರೆ.
ವಾಸ್ತವವಾಗಿ ಈ ಹಿಂದೆ ಅನಸೂಯಾಳು ಕೆಲವು ವಿಚಾರಗಳಲ್ಲಿ ಜಾಲತಾಣಿಗರ ವಿರುದ್ಧ ಕಿಡಿಕಾರಿದ ಅನೇಕ ಪ್ರಸಂಗಗಳಿವೆ. ತಮ್ಮ ಉಡುಪಿನ ಮೇಲೆ ಅಥವಾ ತನ್ನ ಕುಟುಂಬವನ್ನು ಗುರಿಯಾಗಿಸುವ ನೆಟ್ಟಿಗರಿಗೆ ಖಡಕ್ ತಿರುಗೇಟು ನೀಡಿರುವ ಉದಾಹರಣೆಗಳು ಹಿಂದೆ ಆಗಿತ್ತು. ಆದರೆ ಈ ಬಾರಿ ಆಕೆ ಸಂಯಮ ಕಾಯ್ದುಕೊಂಡಿದ್ದಾಳೆ.
ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಅನಸೂಯ ಪ್ರಸ್ತುತ ಅನೇಕ ಸಿನಿಮಾಗಳಲ್ಲಿ ಬಿಜಿ. ಒಂದು ಕಡೆ ಆಕೆಯ ನಟನೆಯ ಪುಷ್ಪ-2(Pushpa 2) ಸಿನಿಮಾದ ಚಿತ್ರೀಕರಣಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ಕೃಷ್ಣ ವಂಶಿ ನಿರ್ದೇಶನದ ರಂಗ ಮಾರ್ತಾಂಡ ಸಿನಿಮಾದ ಪ್ರಮುಖ ಪಾತ್ರದಲ್ಲಿ ಅನಸೂಯ ನಟಿಸಿದ್ದಾರೆ. ಹಲವು ಆಫರ್ ಕೈಯಲ್ಲಿ ಇಟ್ಟುಕೊಂಡ ಆಕೆ ಸಾಮಾಜಿಕ ಜಾಲತಾಣದಲ್ಲಿ ಕೂಡ ಬಿಸಿ.