ಜಿಮ್ ನಲ್ಲಿ ವರ್ಕೌಟ್ ಮಾಡುವಾಗ ಹೃದಯಾಘಾತ ಏಕೆ ಆಗುತ್ತೆ?
Heart attack: ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ ಅನೇಕ ಘಟನೆಗಳು ವರದಿಯಾಗುತ್ತಿದೆ. ಅದರಲ್ಲಿಯೂ ಬೇರೆ ಖಾಯಿಲೆಗೆ ಹೋಲಿಸಿದರೆ ಇದ್ದಕ್ಕಿದ್ದಂತೆ ಎದೆ ನೋವು ಕಾಣಿಸಿಕೊಂಡು ಕೆಲವೇ ಕ್ಷಣಗಳಲ್ಲಿ ಕಣ್ಮುಚ್ಚಿ ನೆನ್ನೆಯಿದ್ದವರು ಇಂದಿಲ್ಲ ಅನ್ನೋ ಹಾಗೆ ಸಾವಿನ ಕದ ತಟ್ಟಿದ ಅನೇಕ ನಿದರ್ಶನಗಳು ನಮ್ಮ ಕಣ್ಣ ಮುಂದೆಯೇ ಇವೆ. ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದಾಗ ಹೃದಯಾಘಾತವಾಗಿ ಮೃತಪಟ್ಟ ಘಟನೆಯೊಂದು ಬೆಳಕಿಗೆ ಬಂದಿದೆ.
ತೆಲಂಗಾಣದ ಸಿಕಂದರಾಬಾದ್‌ನ ಬೋಯಿನಪಲ್ಲಿ ಜಿಮ್‌ನಲ್ಲಿ ವ್ಯಾಯಾಮ (Exercise) ಮಾಡುವಾಗ ಹೃದಯ ಸ್ತಂಭನದಿಂದ ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದ 24 ವರ್ಷದ ವ್ಯಕ್ತಿ ವಿಶಾಲ್ ಹೃದಯಾಘಾತದಿಂದ(Heart attack) ಮೃತ ಪಟ್ಟಿರುವ (Death) ಘಟನೆ ನಡೆದಿದೆ. ಈತ 2020ರ ಬ್ಯಾಚ್‌ನಲ್ಲಿ ಕಾನ್‌ಸ್ಟೇಬಲ್ ಹುದ್ದೆಯನ್ನು ಪಡೆದುಕೊಂಡಿದ್ದ. ಅಷ್ಟೆ ಅಲ್ಲದೇ, ಆಸಿಫ್ ನಗರ ಪೊಲೀಸ್ ಠಾಣೆಗೆ ನಿಯೋಜನೆ ಕೂಡ ಆಗಿತ್ತು. ಆದರೆ, ವಿಧಿಯಾಟವೇ ಬೇರೆ ಇತ್ತು. ವಿಶಾಲ್ ವ್ಯಾಯಾಮ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಉಸಿರು ಬಿಗಿ ಹಿಡಿದು ನೆಲದ ಮೇಲೆ ಕುಸಿದು ಬಿದ್ದಿದ್ದು, ಸದ್ಯ, ಈ ದೃಶ್ಯಾವಳಿಗಳು ಜಿಮ್ ನಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ವಿಶಾಲ್ ವ್ಯಾಯಾಮ ( Excercise) ಹಾಗೂ ಪುಷ್ ಅಪ್ ಮಾಡಿದ್ದು, ವ್ಯಾಯಮ ಮಾಡಿದ ನಂತರ ಮತ್ತೊಂದೆಡೆ ತೆರಳುವಾಗ ಕೆಮ್ಮುತ್ತಾ ಮುಂದಕ್ಕೆ ವಾಲುವಂತಾಗಿ ಅಧಾರಕ್ಕಾಗಿ ಅಲ್ಲೇ ಇದ್ದ ಮೆಷಿನ್ ಒಂದನ್ನು ಹಿಡಿದು ಕೆಲ ಸಮಯದಲ್ಲೇ ವಿಶಾಲ್ ನೆಲಕ್ಕುರುಳಿದ ದೃಶ್ಯಗಳ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social Media)ಹರಿದಾಡುತ್ತಿದೆ. ವಿಶಾಲ್ ಬಿದ್ದ ಕೂಡಲೇ ಅಲ್ಲಿದ್ದವರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಈ ವೇಳೆ ವೈದ್ಯರು ಆತ ಸಾವನ್ನಪ್ಪಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : AIDS : HIV ಏಡ್ಸ್ ಗೆ ಸಿಕ್ತು ಷರತ್ತುಬದ್ಧ ಚಿಕಿತ್ಸೆ!
ಘಟನೆಗಳನ್ನು ಗಮನಿಸಿದಾಗ ಸಣ್ಣ ಹರೆಯದಲ್ಲೇ ಹೃದಯಾಘಾತಕ್ಕೆ ಈಡಾಗಲು ಕಾರಣವೇನು ಎಂಬ ಪ್ರಶ್ನೆ ಸಹಜವಾಗಿ ಎಲ್ಲರಿಗೂ ಕಾಡುತ್ತದೆ. ಜಿಮ್ ನಲ್ಲಿ ವರ್ಕೌಟ್ ಮಾಡಿ ದೇಹ ದಂಡಿಸಿ ಕಟ್ಟು ಮಸ್ತಾದ ದೇಹ ಸಿರಿ ಹೊಂದಿದ್ದ ಅಪ್ಪು ಕೂಡ ಇದ್ದಕ್ಕಿದಂತೆ ಕುಸಿದು ಬಿದ್ದು ಎದೆ ನೋವು ಕಾಣಿಸಿಕೊಂಡು ಸಾವಿನ ಕದ ತಟ್ಟಿದಾಗ ಈ ಪ್ರಶ್ನೆ ಮುನ್ನಲೆಗೆ ಬಂದು ಅನೇಕ ಆರೋಗ್ಯ ತಜ್ಞರು ಈ ಬಗ್ಗೆ ಮಾಹಿತಿ ನೀಡಿದ್ದರು.
ಜಿಮ್ ವರ್ಕೌಟ್ ಆರೋಗ್ಯಕ್ಕೆ ಒಳ್ಳೆಯದು, ಆದರೆ ಅತಿಯಾದರೆ ಯಾವುದೂ ಒಳ್ಳೆಯದಲ್ಲ. ಅದು ವರ್ಕೌಟ್ ಗೆ ಕೂಡ ಅನ್ವಯವಾಗುತ್ತದೆ. ಜಿಮ್‌ನಲ್ಲಿ ಹೆಚ್ಚಿನ ಭಾರವನ್ನು (Weight) ಎತ್ತುವ ಹಾಗೂ ದೇಹವನ್ನು ಹೆಚ್ಚಿನ ಒತ್ತಡಕ್ಕೆ ಒಳಪಡಿಸುವ ಸಂದರ್ಭದಲ್ಲಿ ದೇಹಕ್ಕೆ ಹೆಚ್ಚಿನ ಆಮ್ಲಜನಕ ಬೇಕಾಗುತ್ತದೆ. ಇದರಿಂದಾಗಿ ರಕ್ತನಾಳಗಳಲ್ಲಿ ರಕ್ತ ಪೂರೈಕೆಯ ವೇಗ ತೀವ್ರವಾಗಿ ನಾಳಗಳ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ಹೃದಯಾಘಾತ ಸಂಭವಿಸಲು ಕಾರಣವಾಗುತ್ತದೆ. ತಜ್ಞರ ಪ್ರಕಾರ ವರ್ಕೌಟ್ ಮಾಡುವರು ಮಾಡುವ ಕೆಲವೊಂದು ತಪ್ಪಿನಿಂದಾಗಿ ಎದೆನೋವು, ಹೃದಯಾಘಾತದ ಅಪಾಯ ಉಂಟಾಗುತ್ತದೆ. ಹೈಪರ್‌ಟೆನ್ಷನ್, ಅತ್ಯಧಿಕ ಕೊಲೆಸ್ಟ್ರಾಲ್, ಮಧುಮೇಹ, ಹೃದ್ರೋಗಕ್ಕೆ ಸಂಬಂಧ ಪಟ್ಟ ಸಮಸ್ಯೆ ಇರುವವರು ಹೆಚ್ಚಿನ ಜಾಗ್ರತೆವಹಿಸಬೇಕು. ವಾರಕ್ಕೆ 450 ನಿಮಿಷಗಳ ಕಾಲ ಕಡಿಮೆ ವ್ಯಾಯಾಮ ಮಾಡುವವರಿಗೆ ಆರೋಗ್ಯ ಸಮಸ್ಯೆ ಅಭಿವೃದ್ಧಿಪಡಿಸುವ ಅಪಾಯ 27 ಪ್ರತಿಶತದಷ್ಟು ಇರಲಿದೆ ಎನ್ನಲಾಗಿದೆ.
ತಮ್ಮ ದೇಹಕ್ಕೆ (Body) ಅಗತ್ಯಕ್ಕಿಂತ ಹೆಚ್ಚಿನ ಆಹಾರ ಸೇವಿಸಿದಾಗ ಅಜೀರ್ಣ ಆಗುವಂತೆ ದೇಹವನ್ನೂ ದಂಡಿಸುವಾಗ ಕೂಡ ಎಚ್ಚರಿಕೆ ಅವಶ್ಯಕ. ನಮ್ಮ ದೇಹಕ್ಕೆ ಸಾಧ್ಯವಾಗುವಷ್ಟು ಮಾತ್ರ ವ್ಯಾಯಾಮ ಮಾಡುವುದು ಉತ್ತಮ. ದೇಹಕ್ಕೆ ಸಂಭಾಳಿಸಲು ಆಗದೇ ಇರುವಷ್ಟು ವ್ಯಾಯಾಮದಲ್ಲಿ ದೇಹವನ್ನು ತೊಡಗಿಸಿಕೊಂಡರೆ ಪರಿಧಮನಿಯ ಕ್ಯಾಲ್ಸಿಫಿಕೇಶನ್ ಸಮಸ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ. ಕೆಲವರು ಬಾಡಿ ಬಿಲ್ಡ್‌ಗಾಗಿ ಸ್ಟಿರಾಯ್ಡ್ ತೆಗೆದುಕೊಳ್ಳುತ್ತಾರೆ. ಆದರೆ ಸ್ಟಿರಾಯ್ಡ್ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುವ ಜೊತೆಗೆ ದೇಹದ ಅಂಗಾಂಗಗಳಿಗೆ ಹಾನಿಯುಂಟಾಗುತ್ತದೆ. ಹೀಗಾಗಿ, ಆರೋಗ್ಯ ಕಾಪಾಡಿಕೊಳ್ಳಲು ಮುಂಜಾಗ್ರತೆ ವಹಿಸುವುದು ಒಳ್ಳೆಯದು.