Top Selling Cars : ಜನವರಿಯಲ್ಲಿ ಭರ್ಜರಿ ಸೇಲ್‌ ಕಂಡ ಕಾರುಗಳಿವು !

Top Selling Cars : ರಸ್ತೆಗಳಲ್ಲಿ ಕಾರುಗಳ (car)ಹವಾ ಜೋರಾಗಿದೆ. ಜೊತೆಗೆ ಕಾರುಗಳ ಬೇಡಿಕೆ ಸಹ ಹೆಚ್ಚುತ್ತಿದೆ. ಜನವರಿ 2023ರಲ್ಲಿ ಕಾರು ಮಾರಾಟದ ಸಂಖ್ಯೆಯು ಕಳೆದ ವರ್ಷಕ್ಕೆ ಹೋಲಿಸಿದ್ರೆ 10% ಅಧಿಕ ಏರಿಕೆಗೊಂಡಿದೆ. 2023ರ ಅಂಕಿ ಅಂಶ ಪ್ರಕಾರ ಕಾರು ಉದ್ಯಮದ ಮಾರುಕಟ್ಟೆಯಲ್ಲಿ ಭಾರತದಲ್ಲಿ (india )ಅತಿ ಹೆಚ್ಚು ಮಾರಾಟವಾದ ಟಾಪ್ 5 ಕಾರುಗಳ (Top Selling Cars) ಪೈಕಿ ಮಾರುತಿ ಸುಜುಕಿ ಅಗ್ರಗಣ್ಯ ಸ್ಥಾನದಲ್ಲಿದ್ದು, ಇದರ ನಾಲ್ಕು ಮಾದರಿ ಕಾರುಗಳು ಮುಂಚೂಣಿ ಸ್ಥಾನವನ್ನು ಪಡೆದುಕೊಂಡಿದೆ. ಹೊಸ ವರ್ಷದಲ್ಲಿ ಆಟೊಮೊಬೈಲ್ (automobile )ಕ್ಷೇತ್ರವು ಸಾಕಷ್ಟು ಸುಧಾರಣೆ ಕಂಡಿದ್ದು, ಕಾರುಗಳ ಅತಿ ಹೆಚ್ಚು ಮಾರಾಟವನ್ನು ಇಲ್ಲಿ ಕಾಣಬಹುದಾಗಿದೆ.

ಹೌದು ಮಾರುತಿ ಸುಜುಕಿ ಆಲ್ಟೋ 21,411 ಯುನಿಟ್ ಗಳನ್ನು ಮಾರಾಟ ಮಾಡುವ ಮೂಲಕ ಭಾರತದಲ್ಲಿಯೇ ಅತಿ ಹೆಚ್ಚು ಮಾರಾಟವಾದ ಕಾರು ಎಂಬ ಸ್ಥಾನವನ್ನು ಹಿಂಪಡೆದುಕೊಂಡಿದೆ. ಮಾತ್ರವಲ್ಲ ಇದು 72 ಪ್ರತಿಶತದಷ್ಟು ಬೆಳವಣಿಗೆ ಕಂಡಿದೆ. ಈ ಮದ್ಯೆ ಮಾರುತಿ ಸುಜುಕಿ ವ್ಯಾಗನ್ ಆರ್ 2022 ಡಿಸೆಂಬರ್ ನಲ್ಲಿ 10ನೇ ಸ್ಥಾನದಿಂದ 2023ರ ಜನವರಿಯಲ್ಲಿ ಎರಡನೇ ಸ್ಥಾನಕ್ಕೇರಿದೆ. ಮಾರುತಿ ಸುಜುಕಿ ಸ್ವಿಫ್ಟ್ ಮೂರನೇ ಸ್ಥಾನದಲ್ಲಿ ಉಳಿಸಿಕೊಂಡಿದ್ದು, ಮಾರುತಿ ಸುಜುಕಿ ಬಲೆನೊ ನಾಲ್ಕನೇ ಸ್ಥಾನದಲ್ಲಿದೆ. ಇನ್ನು 5ರ ಸ್ಥಾನದಲ್ಲಿ ಟಾಟಾ ನೆಕ್ಸನ್ ಇದ್ದು ಇದು ಮಾರುತಿ ಸುಜುಕಿಯೇತರ ಕಾರು ಆಗಿದೆ. ಈ ಬಗೆಗಿನ ಪೂರ್ಣ ಮಾಹಿತಿ ಇಲ್ಲಿದೆ.

• ಮಾರುತಿ ಸುಜುಕಿ ಆಲ್ಟೋ 2023 ಜನವರಿಯಲ್ಲಿ 21,411 ಯುನಿಟ್ ಗಳನ್ನು ಮಾರಾಟ ಮಾಡಿದ್ದು, ಇದು ಕಳೆದ ವರ್ಷಕ್ಕೆ ಹೋಲಿಸಿದರೆ 73% ದಷ್ಟು ಹೆಚ್ಚಳ ಕಂಡಿದೆ. ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ಹಲವು ವರ್ಷಗಳಿಂದ ದೇಶದಲ್ಲಿ ಮುಂಚೂಣಿಯಲ್ಲಿದೆ. ಅದರ ಉತ್ಪನ್ನ ಬಂಡವಾಳ, ಮಾರಾಟ, ಸೇವಾ ನೆಟ್‌ವರ್ಕ್ ಮತ್ತು ಕೈಗೆಟುಕುವ ಬೆಲೆಗಳಿಂದಾಗಿ ಕಂಪನಿಯ ವಾಹನಗಳು ಗ್ರಾಹಕರ ಆಯ್ಕೆಯಾಗಿ ಉಳಿದಿವೆ. ಅದಲ್ಲದೆ ಮಾರುತಿ ಸುಜುಕಿಯ 40 ನೇ ವಾರ್ಷಿಕೋತ್ಸವವನ್ನು ಆಚರಣೆ ಸಹ ಮಾಡಿಕೊಂಡಿದೆ.

• ಮಾರುತಿ ಸುಜುಕಿ ವ್ಯಾಗನ್ ಆರ್ 2023 ಜನವರಿಯಲ್ಲಿ ಮಾರುತಿ ಸುಜುಕಿ ವ್ಯಾಗನ್ ಆರ್ 20,466 ಯುನಿಟ್ ಮಾರಾಟವಾಗಿದ್ದು, ಈ ಮೂಲಕ 10ನೇ ಸ್ಥಾನದಿಂದ ಇದೀಗ ಟಾಪ್ 2 ಸ್ಥಾನಕ್ಕೆ ಜಿಗಿದಿದೆ. ವ್ಯಾಗನ್ ಆರ್ ಇಂಧನ ದಕ್ಷತೆ ಮತ್ತು ಪ್ರಾಕ್ಟಿಕ್ಯಾಲಿಟಿಯಿಂದ ಜನಪ್ರಿಯವಾಗಿದ್ದು ಒಂದು ಲೀಟರ್ ಮತ್ತು 1.2 ಲೀಟರ್ ನ ಎರಡು ಪೆಟ್ರೋಲ್ ಇಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಇದಲ್ಲದೆ ಸಿಎನ್‌ಜಿ ಕಿಟ್ ನೊಂದಿಗೂ ದೊರಕುತ್ತದೆ.

• ಮಾರುತಿ ಸುಜುಕಿ ಸ್ವಿಫ್ಟ್ ಅತಿ ಹೆಚ್ಚು ಮಾರಾಟವಾದ ಕಾರುಗಳ ಪೈಕಿ ಮಾರುತಿ ಸುಜುಕಿ ಸ್ವಿಫ್ಟ್ ತನ್ನ ಮೂರನೇ ಸ್ಥಾನವನ್ನು ಉಳಿಸಿಕೊಂಡಿದೆ. 2023 ಜನವರಿಯಲ್ಲಿ ಇದು 16,440 ಯುನಿಟ್ ಮಾರಾಟವಾಗಿದೆ. ಇದು 1.2 ಲೀಟರ್ ಡ್ಯುಯೆಲ್ ಜೆಟ್ ಪೆಟ್ರೋಲ್ ಇಂಜಿನ್ ಒಳಗೊಂಡ , ಪೆಟ್ರೋಲ್ 22.38 ಕಿ.ಮೀ./ಲೀ. ಮತ್ತು ಸಿಎನ್‌ಜಿ 30.90ಕಿ.ಮೀ./ಲೀ.ಅತ್ಯುತ್ತಮ ಇಂಜಿನ್ ದಕ್ಷತೆ ನೀಡುವ ವಿಶಾಲವಾದ 5 ಸೀಟರ್ ಕಾರು ಇದಾಗಿದೆ.

• ಮಾರುತಿ ಸುಜುಕಿ ಬಲೆನೊ ಇದು ತನ್ನ ಅಗ್ರ ಸ್ಥಾನವನ್ನು ಕಳೆದುಕೊಂಡರೂ, ಖರೀದಿದಾರರ ಜನಪ್ರಿಯ ಆಯ್ಕೆಯಾಗಿ ಮುಂದುವರಿದಿದೆ. 2023 ಜನವರಿಯಲ್ಲಿ ಇದು 16,357 ಯುನಿಟ್ ಮಾರಾಟ ಕಂಡಿದೆ. ಇದು 141 ಪ್ರತಿಶತ ಬೆಳವಣಿಗೆಯಾಗಿದ್ದು ಸಿಎನ್‌ಜಿ ಅವೃತ್ತಿ ಕಾರಿನ ಬಿಡುಗಡೆಯೂ ಇದರ ಮಾರಾಟ ಬೆಳವಣಿಗೆಗೆ ಗಣನೀಯ ಕೊಡುಗೆ ನೀಡಿದೆ. ಮಾರುತಿ ಸುಜುಕಿ ಬಲೆನೊ ಸೆಕೆಂಡ್ ಜನರೇಷನ್ ನಲ್ಲಿದ್ದು ಸುಧಾರಿತಾ ಸುರಕ್ಷತಾ ಮತ್ತು ಪ್ರೀಮಿಯಂ ವೈಶಿಷ್ಟ್ಯಗಳನ್ನು ಹೊಂದಿದೆ.

• ಟಾಟಾ ನೆಕ್ಸನ್ ಅಗ್ರ 5ರ ಸ್ಥಾನದಲ್ಲಿ ಮಾರುತಿ ಸುಜುಕಿಯೇತರವಾಗಿರುವ ಟಾಟಾ ನೆಕ್ಸಾನ್, ಕಾಂಪ್ಯಾಕ್ಟ್ ಎಸ್‌ಯುವಿ ಜನವರಿಯಲ್ಲಿ15,567 ಯುನಿಟ್ ಗಳು ಮಾರಾಟವಾಗಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಪೆಟ್ರೋಲ್, ಡಿಸೇಲ್ ಮತ್ತು ವಿದ್ಯುತ್ ಚಾಲಿತ ರೂಪದಲ್ಲಿ ಲಭ್ಯವಿರುವ ನೆಕ್ಸನ್ ಭಾರತದಲ್ಲಿ ಸುರಕ್ಷಿತ ಕಾರುಗಳಲ್ಲಿ ಒಂದಾಗಿದೆ. ಟಾಟಾದ ನೆಕ್ಸಾನ್ ಮಾರಾಟದ ವಿಷಯದಲ್ಲಿ ಕ್ರೆಟಾ ಮಾದರಿಯನ್ನು ಸತತವಾಗಿ ಸೋಲಿಸುತ್ತಿದೆ. ಜನವರಿ 2023 ರಲ್ಲಿ ಕಂಪನಿಯ ಒಟ್ಟು ಮಾರಾಟದ ಅಂಕಿ-ಅಂಶ 47,990 ಆಗಿತ್ತು. ಕಳೆದ ವರ್ಷ (ಜನವರಿ 2022) ಇದೇ ಅವಧಿಯಲ್ಲಿ 40,780 ಟಾಟಾ ವಾಹನಗಳನ್ನು ಮಾರಾಟ ಮಾಡಲಾಗಿತ್ತು. ವಾರ್ಷಿಕ ಆಧಾರದಲ್ಲಿ ಈ ಬಾರಿ ಶೇ.17.7ರಷ್ಟು ಮಾರಾಟ ಹೆಚ್ಚಳವಾಗಿದೆ.

ಹೌದು ಕಳೆದ ವರ್ಷದಲ್ಲಿ ಉತ್ತಮ ಮಾರಾಟದ ದಾಖಲೆಯನ್ನು ಹೊಂದಿರುವ ಕಾರು ಕಂಪನಿಗಳು ಜನವರಿ 2023ರಲ್ಲಿ ಹೆಚ್ಚಿನ ಕಾರುಗಳ ಮಾರಾಟವನ್ನು ಕಂಡಿವೆ. ಇದು 2023ರ ಜನವರಿ ನಂತರ ಹೊರಬಂದ ಅಂಕಿ ಅಂಶಗಳಿಂದ ಬಹಿರಂಗವಾಗಿದ್ದು, ಅಲ್ಲದೆ ಹೊಸ ವರ್ಷದ ಮೊದಲ ತಿಂಗಳಿನಲ್ಲಿ, ಹೆಚ್ಚಿನ ಕಾರು ತಯಾರಕರು ಮಾರಾಟದಲ್ಲಿ ಧನಾತ್ಮಕ ಬೆಳವಣಿಗೆಯನ್ನು ದಾಖಲಿಸಿದ್ದಾರೆ.

Leave A Reply

Your email address will not be published.