Krushi : ಕುಸುಬೆ ಎಣ್ಣೆಯ ಬಹುಮುಖ್ಯವಾದ ಪ್ರಯೋಜನ ಏನು ಗೊತ್ತಾ?
Safflower oil: ಇಂದಿನ ಒತ್ತಡಯುತ ಜೀವನಶೈಲಿಗೆ ಅನುಗುಣವಾಗಿ ಆಹಾರ ಕ್ರಮದಲ್ಲಿ ವ್ಯತ್ಯಾಸ ಉಂಟಾಗಿ ಅನೇಕ ರೋಗ ರುಜಿನಗಳು ಕಂಡುಬರುತ್ತವೆ. ಅಷ್ಟೇ ಅಲ್ಲದೆ ನಿದ್ರಾ ಹೀನತೆ, ಒತ್ತಡ, ಮಾನಸಿಕ ಕಿರಿಕಿರಿ, ಪೋಷಕಾಂಶ ರಹಿತ ಜಂಕ್ ಫುಡ್ ಸೇವನೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆದರೆ, ಹಿಂದಿನವರ ಆಹಾರ ಕ್ರಮದಲ್ಲಿ ಕಟ್ಟುನಿಟ್ಟಿನ ಪದ್ಧತಿಯ ಜೊತೆಗೆ ದೇಹ ದಂಡನೆ ಮಾಡುತ್ತಿದ್ದರಿಂದ ಆರೋಗ್ಯ ಸಮಸ್ಯೆಗಳು ಹತ್ತಿರ ಕೂಡ ಸುಳಿಯುತ್ತಿರಲಿಲ್ಲ. ಹಿರಿಯರು ಕುಸುಬೆಯನ್ನು ಬೆಳೆದು ಗಾಣಕ್ಕೆ ಹಾಕಿಸಿ ಶುದ್ಧವಾದ ಎಣ್ಣೆಯನ್ನು ಸೇವಿಸುತ್ತಿದ್ದರು. ಆದರೆ ಈ ಕುಸುಬಿನ ಎಣ್ಣೆಯ ಪ್ರಯೋಜನವೇನು?
ಕುಸುಬೆ ಬೀಜದ ಎಣ್ಣೆಯು(Safflower oil) ಗಮನಾರ್ಹ ಪ್ರಮಾಣದ ವಿಟಮಿನ್ ಇ(VitaminE) ಅನ್ನು ಹೊಂದಿದ್ದು, ಆಲಿವ್ ಎಣ್ಣೆಗಿಂತ ಹೆಚ್ಚು, ಆದರೆ ಸೂರ್ಯಕಾಂತಿ ಎಣ್ಣೆಗಿಂತ(Sunflower oil) ಕಡಿಮೆ ಪ್ರಮಾಣದಲ್ಲಿರುತ್ತದೆ. ಇದು ಉತ್ತಮ ಪ್ರಮಾಣದ ಒಮೆಗಾ 6 ಕೊಬ್ಬಿನಾಮ್ಲವನ್ನು ಹೊಂದಿರುತ್ತದೆ, ಆದ್ದರಿಂದ ಇದು ಹೃದಯ-ಆರೋಗ್ಯಕರ ಎಣ್ಣೆಯಾಗಿದೆ. ಇದು ದೇಹದಲ್ಲಿ ಶಾಖವನ್ನು ಹೆಚ್ಚಿಸುತ್ತದೆ, ಆದ್ದರಿಂದ ಇದು ಚಳಿಗಾಲದಲ್ಲಿ ಸೂಕ್ತವಾಗಿದ್ದು, ಶೀತ ಸ್ಥಳಗಳಲ್ಲಿ ವಾಸಿಸುವ ಜನರಿಗೆ ಪ್ರಯೋಜನಕಾರಿಯಾಗಿದೆ.
ಸ್ಯಾಫ್ಲವರ್ ಆಯಿಲ್ ಹೃದಯ (Heart), ರಕ್ತನಾಳಗಳು, ಕೂದಲು(HAIR), ಚರ್ಮ(Skin), ಸ್ನಾಯುಗಳು ಮತ್ತು ಪ್ರತಿರಕ್ಷಣಾ ವ್ಯವಸ್ಥೆಗೆ ನೆರವಾಗುತ್ತದೆ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಉಸಿರಾಟದ ಕಾಯಿಲೆಗಳಲ್ಲಿ, ಇದು ಕಫವನ್ನು(cough) ಕಡಿಮೆ ಮಾಡಲು ನೆರವಾಗುತ್ತದೆ. ಹೀಗಾಗಿ, ಇದು ಶ್ವಾಸಕೋಶವನ್ನು ತೆರವುಗೊಳಿಸಲು ಮತ್ತು ಉಸಿರಾಟವನ್ನು ಸುಲಭಗೊಳಿಸಲು ಸಹಾಯ ಮಾಡುತ್ತದೆ. ಒಮೆಗಾ -6 ಕೊಬ್ಬಿನಾಮ್ಲವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಲು ನೆರವಾಗುತ್ತದೆ. ಇದರಿಂದಾಗಿ ಮಧುಮೇಹದಿಂದ ಬಳಲುತ್ತಿರುವವರಿಗೆ ತಮ್ಮ ರಕ್ತದಲ್ಲಿನ ಸಕ್ಕರೆಯನ್ನು ಸಮ ಪ್ರಮಾಣದಲ್ಲಿಡಲು ನೆರವಾಗುತ್ತದೆ.
ಕುಸುಬೆ ಎಣ್ಣೆಯು(Safflower oil) ಹೆಚ್ಚಿನ ಪ್ರಮಾಣದಲ್ಲಿ ಒಮೆಗಾ -6(Omega-6) ಕೊಬ್ಬಿನಾಮ್ಲಗಳ ಹೊಂದಿದ್ದು, ಇದು ನಮ್ಮ ದೇಹಕ್ಕೆ ಅಗತ್ಯವಿರುವ ಕೊಬ್ಬಿನಾಮ್ಲದ ಪ್ರಯೋಜನಕಾರಿ ವಿಧವಾಗಿದೆ. ಸ್ಯಾಫ್ಲವರ್ ಆಯಿಲ್ ಹೃದಯಕ್ಕೆ ಬಳಕೆಯಾಗುವ ಆರೋಗ್ಯಕರ ಎಣ್ಣೆಯಾಗಿದೆ. ಇದು ಎರಡು ವಿಧಗಳಲ್ಲಿ ಲಭ್ಯವಿದ್ದು, ಹೈ-ಓಲಿಕ್ ಸ್ಯಾಫ್ಲವರ್ ಆಯಿಲ್ ಮತ್ತು ಹೈ-ಲಿನೋಲಿಕ್ ಸ್ಯಾಫ್ಲವರ್ ಆಯಿಲ್ ಮೂಲಕ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿಕೊಳ್ಳಬಹುದು. ಹೃದಯವನ್ನು ಅರೋಗ್ಯವಾಗಿರಿಸಲು ನೆರವಾಗುತ್ತದೆ. ಇವುಗಳಲ್ಲಿರುವ ಒಮೆಗಾ-6 ಜ್ಞಾನವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಹೆಚ್ಚಿನ ಲಿನೋಲಿಕ್ ಸ್ಯಾಫ್ಲವರ್ ಎಣ್ಣೆಯು ಚರ್ಮದ ಪರಿಸ್ಥಿತಿಗಳಲ್ಲಿ ಪ್ರಯೋಜನಕಾರಿಯಾಗಿದೆ ಮತ್ತು ಮೊಡವೆ ಮತ್ತು ಕಲೆಗಳನ್ನು ಕಡಿಮೆ ಮಾಡಲು ನೆರವಾಗುತ್ತದೆ.
ಒಮೆಗಾ -6 ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿರುವಂತಹ ಕುಸುಬೆ ಎಣ್ಣೆಯ ದೇಹದಲ್ಲಿರುವ ಕೊಬ್ಬನ್ನು ಕರಗಿಸುತ್ತದೆ. ಹೀಗಾಗಿ,ತೂಕ ಇಳಿಸಿಕೊಳ್ಳಲು ಕೂಡ ಕಸುಬು ಎಣ್ಣೆ ಬಳಕೆ ಮಾಡಲಾಗುತ್ತದೆ. ಕುಸುಬೆ ಎಣ್ಣೆಯು ಪ್ರೋಸ್ಟ್ಗ್ಲಾಂಡಿನ್ಗಳನ್ನು ಸೃಷ್ಟಿಸುವ ಒಮೆಗಾ-6 ಕೊಬ್ಬಿನಾಮ್ಲಗಳಿಗೆ ಕೊಡುಗೆ ನೀಡುವ ಜೊತೆಗೆ ಇವು ಹಾರ್ಮೋನ್ ರೀತಿಯ ಪದಾರ್ಥವಾಗಿದ್ದು, ಇದು ಪ್ರತಿರಕ್ಷಣಾ ವ್ಯವಸ್ಥೆಯ ಪ್ರಕ್ರಿಯೆಗಳನ್ನು ಒಳಗೊಂಡಂತೆ ದೇಹವು ಸಾಮಾನ್ಯವಾಗಿ ಕಾರ್ಯನಿರ್ವಹಿಸಲು ನೆರವಾಗುತ್ತದೆ. ಕುಸುಬೆ ಎಣ್ಣೆಯಲ್ಲಿ ಲಿನೋಲಿಕ್ ಆಮ್ಲದ ಹೆಚ್ಚಿನ ಅಂಶವು ನಿಮ್ಮ ಚರ್ಮದ ಗುಣಮಟ್ಟ ಸುಧಾರಣೆಗೆ ನೆರವಾಗಿ ಕಪ್ಪು ಚುಕ್ಕೆ, ಮೊಡವೆಗಳನ್ನು ಕಡಿಮೆ ಮಾಡುತ್ತದೆ.ಕುಸುಬೆ ಎಣ್ಣೆಯಲ್ಲಿ ಒಲೀಕ್ ಆಮ್ಲದಲ್ಲಿ ಸಮೃದ್ಧವಾಗಿದ್ದು, ಇದು ನೆತ್ತಿ ಮತ್ತು ಕೂದಲಿಗೆ ತುಂಬಾ ಪ್ರಯೋಜನಕಾರಿಯಾಗಿದೆ.
ಇದನ್ನೂ ಓದಿ : Business Tips : ಈ ಹುಲ್ಲು ಬೆಳೆಸಿ ಲಕ್ಷಾಧೀಶ್ವರರಾಗಿ,ಇದಕ್ಕೆ ಮಾಡಬೇಕಾಗಿರುವುದು ಇಷ್ಟೇ!