ಬ್ಯಾಂಕ್‌ ಖಾತೆಯಿಂದ ಗ್ಯಾಸ್‌ ಬೆಲೆವರೆಗೆ, ಬದಲಾಗಲಿದೆ ಮಾರ್ಚ್‌1ರಿಂದ ಈ ಎಲ್ಲಾ ನಿಯಮಗಳು!

New Rules In March : ಮಾರ್ಚ್ ನಲ್ಲಿ ಹಲವು ಬದಲಾವಣೆ ಆಗಲಿದ್ದು, ಮಾರ್ಚ್ 1 ರಿಂದ ಕೆಲವು ನಿಯಮಗಳು(rules) ಬದಲಾಗಿ, ಹೊಸ ನಿಯಮಗಳು ಜಾರಿಗೆ ಬರಲಿವೆ. ಸದ್ಯ ಮಾರ್ಚ್ ನಂತರ ಏನೆಲ್ಲಾ ಬದಲಾವಣೆ ಆಗಲಿದೆ. ಯಾವ ಹೊಸ ನಿಯಮ ಜಾರಿಗೆ (New Rules In March) ಬರಲಿದೆ ನೋಡೋಣ.

ಮಾರ್ಚ್ 1 ರಿಂದ ಸೋಷಿಯಲ್ ಮೀಡಿಯಾದ ನಿಯಮದಲ್ಲಿ ಬದಲಾವಣೆ ಆಗಲಿದ್ದು, ಫೇಸ್ಬುಕ್(Facebook), ಇನ್ಸ್ಟಾಗ್ರಾಮ್(Instagram) ಮತ್ತು ಟ್ವಿಟರ್(Twitter) ನಂತಹ ಸಾಮಾಜಿಕ ಮಾಧ್ಯಮ ಕಂಪನಿಗಳ ಅನಿಯಂತ್ರಿತತೆಯನ್ನು ನಿಗ್ರಹಿಸಲಾಗುತ್ತದೆ. ಇದಕ್ಕೆ, ಕೇಂದ್ರ ಸರ್ಕಾರ ಮೂರು ದೂರು ಮೇಲ್ಮನವಿ ಸಮಿತಿಗಳನ್ನು (ಜಿಎಸಿ) ರಚಿಸಲಾಗುತ್ತದೆ ಎಂದು ಘೋಷಣೆ ಮಾಡಿದೆ. ಈ ಸಮಿತಿಗಳು ಮಾರ್ಚ್ 1, 2023 ರಿಂದ ಕಾರ್ಯನಿರ್ವಹಿಸಲು ಆರಂಭಿಸಲಿದ್ದು, ಇವುಗಳು ಬಳಕೆದಾರರ ದೂರುಗಳನ್ನು 3೦ ದಿನಗಳಲ್ಲಿ ನಿರ್ವಹಿಸುತ್ತವೆ. ಅಲ್ಲದೆ, ಇನ್ಸ್ಟಾಗ್ರಾಮ್ ಮತ್ತು ವಾಟ್ಸಾಪ್ನಲ್ಲಿ(whatsapp) ಧಾರ್ಮಿಕ ಭಾವನೆಗಳನ್ನು ಪ್ರಚೋದಿಸುವಂತಹ ಪೋಸ್ಟ್ ಗಳಿಗೆ ಹೊಸ ನಿಯಮ ಬರಲಿದೆ ಎನ್ನಲಾಗಿದೆ.

ಮಾರ್ಚ್ ನಂತರ ಹಲವು ಬ್ಯಾಂಕು(bank)ಗಳ ಇಎಂಐ(EMI) ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಆರ್ ಬಿ ಐ(RBI) ರೆಪೋ ದರ ಹೆಚ್ಚಿಸಿದ ಬೆನ್ನಲ್ಲೆ, ಹಲವು ಬ್ಯಾಂಕುಗಳು ತಮ್ಮ ಎಂಸಿಎಲ್‌ಆರ್ ಅನ್ನು ಹೆಚ್ಚಿಸಿವೆ. ಇದರ ಹೆಚ್ಚಿದ ದರಗಳು ಮಾರ್ಚ್ 1 ರಿಂದ ಅನ್ವಯವಾಗಲಿವೆ. ಇದರ ಹೆಚ್ಚಳದಿಂದ ಜನಸಾಮಾನ್ಯರ ಮೇಲೆ ನೇರ ಪರಿಣಾಮ ಬೀರಲಿದೆ.

ಹಾಗೆಯೇ ಗ್ಯಾಸ್ ಸಿಲಿಂಡರ್(gas cylinder) ನಿಯಮದಲ್ಲೂ ಬದಲಾವಣೆ ಆಗಲಿದ್ದು, ಮಾರ್ಚ್ 1 ರಂದು ಗ್ಯಾಸ್ ಸಿಲಿಂಡರ್ ಬುಕಿಂಗ್(gas cylinder booking) ನಲ್ಲಿ ಕೆಲವು ಬದಲಾವಣೆಗಳು ಆಗುತ್ತವೆ ಎನ್ನಲಾಗಿದೆ. ಕಳೆದ ಆರು ತಿಂಗಳಿನಿಂದ ವಾಣಿಜ್ಯ ಸಿಲಿಂಡರ್ಗಳ ಬೆಲೆಯನ್ನು ಕಡಿತಗೊಳಿಸಲಾಗಿದ್ದು, ದೇಶೀಯ ಸಿಲಿಂಡರ್ ಬೆಲೆ ಏರಿಕೆಯಾಗಿವೆ. ಹಾಗಾಗಿ ದೇಶೀಯ ಸಿಲಿಂಡರ್ಗಳ (ಎಲ್ಪಿಜಿ ಬೆಲೆಗಳು) ಬೆಲೆಯಲ್ಲಿ ಸ್ವಲ್ಪ ಪ್ರಮಾಣ ಇಳಿಕೆಯಾಗುವ ಸಾಧ್ಯತೆಯಿದೆ ಎನ್ನಲಾಗಿವೆ.

ರೈಲು(train) ನಿಯಮದಲ್ಲಿ ಬದಲಾವಣೆ ಆಗಲಿದ್ದು, ಮಾರ್ಚ್ 1 ರಿಂದ, 10 ಸಾವಿರ ಪ್ರಯಾಣಿಕರ ರೈಲುಗಳು ಮತ್ತು 5 ಸಾವಿರ ಸರಕು ರೈಲುಗಳು ಬದಲಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಈ ಎಲ್ಲಾ ಬದಲಾವಣೆಗಳು ಮಾರ್ಚ್ 1 ರಿಂದ ಆಗಲಿದೆ.

Leave A Reply

Your email address will not be published.