Mens Beauty Tips : ಪುರುಷರೇ ಈ ರೀತಿಯಾಗಿ ನಿಮ್ಮ ಸೌಂದರ್ಯವನ್ನು ಹೆಚ್ಚಿಸಿ, ಚಿಟಿಕೆ ಹೊಡೆಯುವುದರಲ್ಲಿ ನೀವು ಮಿಂಚಿಂಗ್‌!

Men’s beauty care : ಸೌಂದರ್ಯ ಎನ್ನುವುದು ನೋಡುವವರ ಕಣ್ಣಿನಲ್ಲಿದೆ ಎನ್ನುವುದು ಪ್ರಚಲಿತ ಮಾತು. ಆದರೆ, ಸೌಂದರ್ಯ ಎಂದೊಡನೆ ಹೆಚ್ಚಿನವರಿಗೆ ನೆನಪಾಗುವುದು ಹೆಣ್ಣು. ಅಂದ ಸೌಂದರ್ಯದ ಕಾಳಜಿ ಹೆಣ್ಣಿಗಷ್ಟೇ ಸೀಮಿತ ಎಂದುಕೊಂಡು ಎಷ್ಟೋ ಪುರುಷರು ಚರ್ಮದ ಕಾಳಜಿಯ ಕಡೆಗೆ ಹೆಚ್ಚಿನ ಗಮನ ವಹಿಸುವುದಿಲ್ಲ. ಆದರೆ, ಮಹಿಳೆಯರು ಹಾಗಲ್ಲ. ತಮ್ಮ ದಿನದ ಹೆಚ್ಚಿನ ಸಮಯವನ್ನು ದೇಹ, ಚರ್ಮದ ಕಾಂತಿ ಹೆಚ್ಚಿಸುವ ನಿಟ್ಟಿನಲ್ಲಿ ಏನೇನೋ ಹರಸಾಹಸ ಪಡುತ್ತಾರೆ. ಚರ್ಮದ ಆರೋಗ್ಯದ ದೃಷ್ಠಿಯಿಂದ ಇದು ಅವಶ್ಯಕವೆಂದರು ತಪ್ಪಾಗದು.

ಪುರುಷರು ಚರ್ಮದ ಕಾಳಜಿ (Men’s beauty care )ಮಾಡುವುದರಿಂದ ಸುಂದರವಾಗಿ ಕಾಣುವುದು ಮಾತ್ರವಲ್ಲ ಚರ್ಮ ಮೃದುವಾಗಿ ಸೌಮ್ಯವಾಗುತ್ತದೆ. ಅಷ್ಟೇ ಅಲ್ಲದೆ, ಬಿಸಿಲಿನಲ್ಲಿ ಓಡಾಟ ಮಾಡುವಾಗ ಧೂಳು, ಕಲುಷಿತ ಗೊಂಡ ವಾತಾವರಣ ಪ್ರತಿಯೊಬ್ಬರ ಚರ್ಮದ ಆರೋಗ್ಯ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ, ಪುರುಷರು ಕೂಡ ಚರ್ಮದ ಆರೈಕೆ ಮಾಡೋದು ಒಳ್ಳೆಯದು. ಹಾಗಿದ್ರೆ, ಪುರುಷರು ಚರ್ಮದ ಆರೈಕೆ(Men’s beauty care) ಮಾಡಲು ಏನು ಮಾಡಬೇಕು ಅಂತೀರಾ? ಇಲ್ಲಿದೆ ನೋಡಿ ಡೀಟೈಲ್ಸ್:

ಸಾಮಾನ್ಯವಾಗಿ ನಾವು ಸೇವಿಸುವ ಆಹಾರ ಪದಾರ್ಥಗಳು ಚರ್ಮದ ಮೇಲೆ ಪ್ರಭಾವ ಬೀರುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಕೆಲವೊಮ್ಮೆ ಕಾದ ಎಣ್ಣೆಯಲ್ಲಿ ಕರಿದ ತಿಂಡಿಗಳು, ಜಂಕ್ ಫುಡ್ ತಿಂದಾಗ ಮುಖದಲ್ಲಿ ಮೊಡವೆಗಳು ಏಳುವ ಇಲ್ಲವೇ ಇನ್ನಿತರ ಚರ್ಮ ಸಂಬಂಧಿ ಸಮಸ್ಯೆಗಳು ಉಂಟಾಗುವುದನ್ನು ನೀವು ಗಮನಿಸಿರಬಹುದು. ಹೀಗಾಗಿ, ವಿಟಮಿನ್, ಖನಿಜಾಂಶ, ಆಂಟಿಆಕ್ಸಿಡೆಂಟ್ ಅಧಿಕವಿರುವ ಆಹಾರ ಪದಾರ್ಥಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಕು. ನಿಮ್ಮ ಆಹಾರ ಕ್ರಮದಲ್ಲಿ ಹಣ್ಣುಗಳು ತರಕಾರಿಗಳು ಸಮತೋಲಿತ ಪ್ರಮಾಣದಲ್ಲಿರಬೇಕಾಗುತ್ತದೆ. ಪೋಷಕಾಂಶಯುಕ್ತ ಆಹಾರ ಸೇವನೆಯಿಂದ ಚರ್ಮದ ಉರಿಯೂತವನ್ನು ಕಡಿಮೆಯಾಗುವ ಜೊತೆಗೆ ನಿಮ್ಮ ಚರ್ಮದ ಆರೋಗ್ಯ ಕೂಡ ಕಾಪಾಡಬಹುದು.

ಮಾಯಿಶ್ಚರೈಸಿಂಗ್
ಚರ್ಮದ ಆರೈಕೆ ವಿಷಯದಲ್ಲಿ ಪುರುಷರು ಸಹಜವಾಗಿ ಅಸಡ್ಡೆ ತೋರುತ್ತಾರೆ. ಪುರುಷರು ಹೆಚ್ಚಿನ ಸಮಯದಲ್ಲಿ ಹೊರಗಿನ ವಾತಾವರಣ, ಧೂಳುಗಳ ನಡುವೆ ಕೆಲಸ ನಿರ್ವಹಿಸುವ ಹಿನ್ನೆಲೆ ಚರ್ಮ ಹೆಚ್ಚು ಒಣಗಿದ ಅನುಭವವಾಗುತ್ತದೆ. ಶುಷ್ಕ ಅಥವಾ ಅಪೌಷ್ಟಿಕ ಚರ್ಮವು ಇನ್ನಿತರ ಚರ್ಮದ ಸಮಸ್ಯೆಗಳು ಕೂಡ ಉಂಟಾಗಬಹುದು. ಹೀಗಾಗಿ ಪುರುಷರು ಚರ್ಮದ ಆರೈಕೆ ಗೆ ಮಾಯಿಶ್ಚರೈಸ್ ಮಾಡಿಕೊಳ್ಳಬೇಕಾಗುತ್ತದೆ. ಪುರುಷರು ಮಹಿಳೆಯರಿಗಿಂತ ಹೆಚ್ಚು ಹೊರಗಿನ ವಾತಾವರಣಕ್ಕೆ ತಮ್ಮನ್ನು ತೆರೆದುಕೊಳ್ಳುತ್ತಾರೆ. ಇದರಿಂದ ಚರ್ಮ ಹೆಚ್ಚು ಒಣಗಿದಂತಿರುತ್ತದೆ. ಹೀಗಾಗಿ, ದೇಹವನ್ನು ಮಾಯಿಶ್ಚರೈಸರ್ ಆಗಿರಿಸಲು ಪ್ರತಿನಿತ್ಯ ನೀರು ಕುಡಿಯುವುದು ಉತ್ತಮ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಸೇವಿಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.

ಏಕ್ಸಫೊಲಿಯೇಷನ್
ಪುರುಷರು ತಮ್ಮ ಚರ್ಮದ ಕಾಂತಿಯನ್ನು ಕಾಪಾಡಲು ಜೊತೆಗೆ ಚರ್ಮದಲ್ಲರುವ ನಿರ್ಜೀವ ಕಳೆಯನ್ನು ತೊಡೆದು ಹಾಕಲು ಚರ್ಮಕ್ಕೆ ಹೊಂದುವ ರಾಸಾಯನಿಕಗಳಿಂದ ಏಕ್ಸ್ಫೊಲಿಯೇಷನ್ ಮಾಡಿಕೊಳ್ಳಬೇಕಾಗುತ್ತದೆ. ಚರ್ಮದಲ್ಲಿರುವ ಶುಷ್ಕತೆಯನ್ನು ನಿವಾರಿಸಲು ಮಾಯಿಶ್ಚರೈಸರ್ ಜೊತೆಗೆ ರಾಸಾಯನಿಕ ಏಕ್ಸಫೊಲಿಯೇಷನ್ ಬಳಕೆ ಮಾಡಿದರೆ ಉತ್ತಮ.ಇದು ಚರ್ಮದ ನಿರ್ಜೀವ ಕೋಶಗಳನ್ನು ತಡೆಗಟ್ಟಲು ನೆರವಾಗಿ ರಂಧ್ರಗಳನ್ನು ಮುಚ್ಚಲು ಸಹಕರಿಸುತ್ತದೆ.

ಸನ್ಸ್ಕ್ರೀನ್ ಕ್ರೀಮ್ ಬಳಕೆ
ಮಹಿಳೆಯರು ಸಹಜವಾಗಿ ಮನೆಯಿಂದ ಹೊರಗೆ ಕಾಲಿಟ್ಟರೆ ಸೂರ್ಯನ ಕಿರಣಗಳು ಮೈಗೆ ತಾಕಿ ಚರ್ಮದ ಬಣ್ಣ ಕಪ್ಪಾಗುವುದನ್ನು ತಪ್ಪಿಸಲು ಸನ್ಸ್ಕ್ರೀನ್ ಹಚ್ಚಿಕೊಳ್ಳುವ ಅಭ್ಯಾಸ ರೂಡಿಸಿಕೊಂಡಿರುತ್ತಾರೆ. ಇದು ಕೇವಲ ಮಹಿಳೆಯರಿಗೆ ಮಾತ್ರವಲ್ಲ ಪುರುಷರಿಗೂ ಕೂಡ ಅನ್ವಯವಾಗುತ್ತದೆ. ಬಿಸಿಲು, ಚಳಿ ಹೀಗೆ ಯಾವುದೇ ವಾತಾವರಣವಿದ್ದರು ಕೂಡ ಪುರುಷರು ಕೂಡ ಸೂರ್ಯನ ಬೆಳಕಿನಿಂದ ಹೊರ ಹೊಮ್ಮುವ ಯುವಿ ಕಿರಣಗಳಿಂದ ಚರ್ಮವನ್ನು ರಕ್ಷಿಸಲು ಮನೆಯಿಂದ ಹೊರ ಹೋಗುವಾಗ ಸನ್ಸ್ಕ್ರೀನ್ ಹಚ್ಚಿಕೊಳ್ಳುವುದು ಉತ್ತಮ. ಅಷ್ಟೇ ಅಲ್ಲದೆ, ಹೆಚ್ಚಿನವರಿಗೆ ವಯಸ್ಸಾದಂತೆ ನೆರಿಗೆಗಳು ಮೂಡುತ್ತವೆ. ಸನ್ ಸ್ಕ್ರೀನ್ ಹಚ್ಚುವುದರಿಂದ ಚರ್ಮದ ಕ್ಯಾನ್ಸರ್ನಂತಹ ಕಾಯಿಲೆಗಳನ್ನೂ ತೊಡೆದು ಹಾಕಲು ಸಾಧ್ಯ. ಬಿರು ಬಿಸಿಲಿನಲ್ಲಿ 2, 3 ಗಂಟೆಗಳಿಗೊಮ್ಮೆ ಸನ್ಸ್ಕ್ರೀನ್ ಬಳಕೆ ಮಾಡಬಹುದು. ಇದರ ಜೊತೆಗೆ ಎಸ್ಪಿಎಫ್ ಅಂಶ ಅಧಿಕವಾಗಿರುವಂತೆ ನೋಡಿಕೊಳ್ಳಬೇಕಾಗುತ್ತದೆ. ಆದರೆ ಯಾವುದೇ ಕ್ರೀಮ್ ಇಲ್ಲವೇ ಸೋಪ್ ಹೀಗೆ ಸೌಂದರ್ಯ ವರ್ಧಕ ಬಳಸುವ ಮುನ್ನ ನಿಮ್ಮ ಚರ್ಮಕ್ಕೆ ಈ ಕ್ರೀಮ್ ಹೊಂದಿಕೆಯಾಗುತ್ತದೆಯೇ ಎಂದು ಪರಿಶೀಲಿಸುವುದು ಉತ್ತಮ.

ಫೇಸ್ವಾಶ್ ಬಳಕೆ (Facewash)
ಪುರುಷರು ಚರ್ಮದ ಆರೈಕೆಗೆ ಉತ್ತಮವಾದ ಫೇಸ್ವಾಶ್ ಬಳಕೆ ಮಾಡಬಹುದು. ಫೇಸ್ವಾಶ್ ಬಳಕೆಯಿಂದ ಮುಖದಲ್ಲಿನ ದೂಳು, ಎಣ್ಣೆಯಂಶವನ್ನು ತೊಡೆದು ಹಾಕಬಹುದು. ಈಗ ಮಾರುಕಟ್ಟೆಯಲ್ಲಿ ವಿಭಿನ್ನ ಚರ್ಮಕ್ಕೆ ಅನುಗುಣವಾಗಿ (Facewash ) ಫೇಸ್ವಾಷ್ ಗಳು ಲಭ್ಯವಿದ್ದು, ನಿಮ್ಮ ಚರ್ಮಕ್ಕೆ ಸೂಕ್ತವಾದ ಬ್ರಾಂಡ್ ( Brand) ಬಳಕೆ ಮಾಡಿ ಪ್ರಯೋಜನ ಪಡೆದುಕೊಳ್ಳಬಹುದು.

Leave A Reply

Your email address will not be published.