Ration Card : ಆಸ್ತಿ ಇಲ್ಲದವರಿಗೆ 24 ಗಂಟೆಯಲ್ಲಿ ಬಿಪಿಎಲ್ ಕಾರ್ಡ್; ಮೀಸಲಾತಿ ನೀಡಲು ಶಿಫಾರಸು
Development Activity: ರಾಜ್ಯದ ಜನರಿಗೆ ನೆರವಾಗುವ ನಿಟ್ಟಿನಲ್ಲಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಪಡಿತರ ವಿತರಣೆ ಕೂಡ ಒಂದಾಗಿದೆ. ಇದೀಗ, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ನ್ಯಾಯ ಬೆಲೆ ಅಂಗಡಿಗಳ ಮಂಜೂರಾತಿಯಲ್ಲಿ ಶೇಕಡ 24.1 ರಷ್ಟು ಮೀಸಲಾತಿ ಕಲ್ಪಿಸಲು ವಿಧಾನ ಮಂಡಲದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣ ಸಮಿತಿ (Scheduled Castes and Scheduled Tribes Welfare Committee)ಶಿಫಾರಸು ಮಾಡಲಾಗಿದೆ.
ದೇಶದಲ್ಲಿ ವಿದ್ಯಾರ್ಹತೆ ಹೊಂದಿದ್ದರು ಕೂಡ ಅಪೇಕ್ಷಿತ ಉದ್ಯೋಗ ಸಿಗದೇ ಹೆಚ್ಚಿನವರು ನಿರುದ್ಯೋಗಿಗಳಾಗಿದ್ದಾರೆ. ಹೀಗಾಗಿ, ನಿರುದ್ಯೋಗ ಸಮಸ್ಯೆ( Unemployment)ಹೆಚ್ಚಿರುವ ಹಿನ್ನೆಲೆ ಪರಿಶಿಷ್ಟ ಜಾತಿ ಪಂಗಡದವರಿಗೆ ಶೇಕಡ 24.1 ರಷ್ಟು ಮೀಸಲಾತಿ ನೀಡಬೇಕೆಂಬ ಸೂಚನೆ ನೀಡಲಾಗಿದೆ. ಇದೇ ವೇಳೆ, ಕುಟುಂಬದ ಆಧಾರವಾಗಿ ಯಾರು ಇಲ್ಲದೆ ಹಾಗೂ ಒಬ್ಬರೇ ಇರುವವರಿಗೆ ಜೊತೆಗೆ ಯಾವುದೇ ಆಸ್ತಿ ಹೊಂದಿರದೆ ಇದ್ದವರಿಗೆ 24 ಗಂಟೆಯಲ್ಲಿ ಬಿಪಿಎಲ್ ಕಾರ್ಡ್(Bpl Card) ವಿತರಿಸಲು ನಿಯಮ ರೂಪಿಸಬೇಕೆಂದು ಸಮಿತಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣ ಸಮಿತಿ ಅಭಿಪ್ರಾಯ ವ್ಯಕ್ತಪಡಿಸಿದೆ. ಈ ಸಮಿತಿಯು ತನ್ನ 7ನೇ ವರದಿಯನ್ನು ವಿಧಾನಸಭೆಯಲ್ಲಿ ಗುರುವಾರ ಮಂಡನೆ ಮಾಡಿದೆ.
ಇದನ್ನೂ ಓದಿ : ಬ್ಯಾಂಕ್ ಖಾತೆಯಿಂದ ಗ್ಯಾಸ್ ಬೆಲೆವರೆಗೆ, ಬದಲಾಗಲಿದೆ ಮಾರ್ಚ್1ರಿಂದ ಈ ಎಲ್ಲಾ ನಿಯಮಗಳು!
ಪರಿಶಿಷ್ಟ ವಿದ್ಯಾರ್ಥಿಗಳ ಶುಲ್ಕವನ್ನು( Students Fees) ಕಾಲೇಜಿಗೆ(College), ವಿದ್ಯಾರ್ಥಿ ವೇತನವನ್ನು ವಿದ್ಯಾರ್ಥಿಗಳ ಖಾತೆಗೆ ನೇರವಾಗಿ ಜಮೆಯಾಗುವಂತೆ ನೋಡಿಕೊಳ್ಳಲು ಸೂಚಿಸಲಾಗಿದೆ. ಸೊಸೈಟಿ, ಬ್ಯಾಂಕ್ ಮತ್ತು ಸಂಘ ಸಂಸ್ಥೆಗಳಲ್ಲಿ ಪರಿಶಿಷ್ಟರಿಗೆ ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಸಹಕಾರ ಇಲಾಖೆಗೆ ಶಿಫಾರಸು ಮಾಡಲಾಗಿದೆ. ಸಿಎಸ್‌ಆರ್ ನಿಧಿಯಲ್ಲಿ ಶೇಕಡ 25ರಷ್ಟು ಬೆಳೆ ಪರಿಹಾರ ಮೊತ್ತವನ್ನು ಹೆಚ್ಚಿಸಿ ಶೇಕಡ 50ರಷ್ಟು ಮಾಡಬೇಕು. ಎಸ್.ಸಿ.ಎಸ್.ಪಿ., ಟಿ.ಎಸ್.ಪಿ. ಅನುದಾನವನ್ನು ಕಟ್ಟಡ, ಹಾಸ್ಟೆಲ್ ಮತ್ತು ಕಾಲೇಜುಗಳ ನಿರ್ಮಾಣಕ್ಕೆ ಉಪಯೋಗ ಮಾಡಿಕೊಳ್ಳದೆ ಸಮುದಾಯದ ಕಲ್ಯಾಣ ಕಾರ್ಯಕ್ಕಾಗಿ(Development activity) ಸದ್ವಿನಿಯೋಗ ಮಾಡಿಕೊಳ್ಳಬೇಕು ಎಂದು ಆದೇಶಿಸಲಾಗಿದೆ.