Xiaomi 13 Lite : ಭಾರತದ ಮಾರುಕಟ್ಟೆಗೆ ದಾಪುಗಾಲಿಡುತ್ತಾ ಬರಲಿದೆ Xiaomi 13 Lite ಸರಣಿ ಫೋನ್‌ !

Xiaomi 13 Lite : ಹೇಳಿ ಕೇಳಿ ಇದು ಡಿಜಿಟಲ್ ಯುಗ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರ ಕೈಯಲ್ಲಿ ಸ್ಮಾರ್ಟ್ ಫೋನ್ ಗಳು ಹರಿದಾಡಿ ಸಂಚಲನ ಮೂಡಿಸುತ್ತಿದೆ. ಇಂದಿನ ಕಾಲದಲ್ಲಿ ಮೊಬೈಲ್ ಎಂಬ ಸಾಧನದ ಬಳಕೆ ಮಾಡದವರೆ ವಿರಳ. ಮೊಬೈಲ್ ಎಂಬ ಸಾಧನದ ಹೆಚ್ಚಿನವರ ಪಾಲಿನ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ. ಅದರಲ್ಲಿಯೂ ದಿನದಿಂದ ದಿನಕ್ಕೆ ಹೊಸ ಹೊಸ ವೈಶಿಷ್ಟ್ಯದ ಮೂಲಕ ಮೊಬೈಲ್ ಗಳು ಮಾರುಕಟ್ಟೆಯಲ್ಲಿ ಲಗ್ಗೆ ಇಟ್ಟು ಟ್ರೆಂಡ್ ಸೃಷ್ಟಿಸುತ್ತಿವೆ. ಇದೀಗ, Xiaomi ಕಂಪೆನಿಯು ತನ್ನ ಹೊಸ ಸ್ಮಾರ್ಟ್ ಫೋನ್ ಲಾಂಚ್ ಮಾಡಲು ಮುಂದಾಗಿದೆ.

Xiaomi ಕಂಪೆನಿಯ ಅಧಿಕೃತ ವೆಬ್ಸೈಟ್ನಲ್ಲಿ, ಮಾತ್ರೆ ಆಕಾರದ ಕಟೌಟ್ ನಲ್ಲಿ ಡ್ಯುಯಲ್ ಸೆಲ್ಫಿ ಕ್ಯಾಮೆರಾ ಸೆಟಪ್ ಹಾಗೂ ಹಿಂಬದಿಯಲ್ಲಿ ಒಟ್ಟು ಮೂರು ಲೆನ್ಸ್ಗಳನ್ನು ಹೊಂದಿರುವ 50MP ಕ್ಯಾಮೆರಾ ಮಾಡ್ಯೂಲ್ ಇರುವ ಹೊಸ ವಿನ್ಯಾಸದಲ್ಲಿ ಹಾಗೂ Snapdragon 7 Gen 1 ಪ್ರೊಸೆಸರ್ ಅಡಿಯಲ್ಲಿ ಹೊಸ ‘Xiaomi 13 Lite’ ಸ್ಮಾರ್ಟ್ಫೋನನ್ನು ಬಿಡುಗಡೆ ಮಾಡಲು ರೆಡಿಯಾಗಿದೆ. ಪ್ರಪ್ರಥಮ ಬಾರಿಗೆ ‘Xiaomi 13 Lite’ ಸ್ಮಾರ್ಟ್ಫೋನ್ ಮಾರುಕಟ್ಟೆಗೆ ಲಗ್ಗೆ ಇಡುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಕಳೆದ ಡಿಸೆಂಬರ್ 2022ರಲ್ಲಿ ಚೀನಾದಲ್ಲಿ ಬಿಡುಗಡೆಯಾಗಿದ್ದ ನೂತನ Xiaomi 13 ಸರಣಿ ಸ್ಮಾರ್ಟ್ಫೋನ್ಗಳು ಮಾರುಕಟ್ಟೆಗೆ ಲಗ್ಗೆ ಇಡಲು ಅಣಿಯಾಗಿದೆ. Xiaomi ಕಂಪೆನಿಯು ಫೆಬ್ರವರಿ 27 ರಿಂದ ಆರಂಭವಾಗಲಿರುವ Mobile World Congress (MWC) ಕಾರ್ಯಕ್ರಮದಲ್ಲಿ ತನ್ನ ಹೊಸ ‘Xiaomi 13 Lite’ ಸ್ಮಾರ್ಟ್‌ಫೋನನ್ನು ಪರಿಚಯಿಸಲು ಮುಂದಾಗಿದೆ. ಮೊಬೈಲ್ Xiaomi 13 ಸರಣಿಯು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಪ್ರಮಾಣೀಕರಣವನ್ನು ಒಳಗೊಂಡ ಕಾರ್ಯಗಳನ್ನು ಮಾಡುತ್ತವೆ. ಈಗಾಗಲೇ ಚೀನಾದಲ್ಲಿ ಎಂಟ್ರಿ ಕೊಟ್ಟಿರುವ ಬಹುನಿರೀಕ್ಷಿತ Xiaomi 13 ಮತ್ತು Xiaomi 13 Pro ಸ್ಮಾರ್ಟ್ಫೋನ್ಗಳು ಭಾರತ ಮಾರುಕಟ್ಟೆಗೆ ಲಗ್ಗೆ ಇಡಲು ಮುಂದಾಗಿದೆ. ಹಾಗಿದ್ರೆ, ಇದರ ವಿಶೇಷತೆ ಏನು?

Xiaomi 13 ಸ್ಮಾರ್ಟ್‌ಫೋನಿನ ವೈಶಿಷ್ಟ್ಯಗಳು:

Xiaomi 13 ಸರಣಿಯಲ್ಲಿ ಮೂಲ ಮಾದರಿಯಾಗಿ ಬಿಡುಗಡೆಯಾಗಿರುವ Xiaomi 13 ಸ್ಮಾರ್ಟ್ಫೋನ್ ಚಿಕ್ಕದಾದ 6.36-ಇಂಚಿನ OLED ಡಿಸ್ಪ್ಲೇ ಹೊಂದಿದೆ. ಆದರೆ, Xiaomi 13 Pro ಸ್ಮಾರ್ಟ್ಫೋನಿನಂತೆಯೇ ಈ ಡಿಸ್ಪ್ಲೇಯು ಸಹ 120Hz ರಿಫ್ರೆಶ್ ರೇಟ್ ಸಾಮರ್ಥ್ಯದ ಜೊತೆಗೆ 1900 nits ಪೀಕ್ ಬ್ರೈಟ್ನೆಸ್, HDR10+ ಮತ್ತು ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ನಂತಹ ಪ್ರೀಮಿಯಂ ವೈಶಿಷ್ಟ್ಯಗಳನ್ನು ಒಳಗೊಂಡಿರುತ್ತದೆ. ಇತ್ತೀಚಿನ Qualcomm Snapdragon 8 Gen 2 ಪ್ರೊಸೆಸರ್ ಹೊಂದಿರುವ ಈ Xiaomi 13 Pro ಸಾಧನವು ಇತ್ತೀಚಿನ MIUI 14 (Android 13 ಆಧಾರಿತ) ನಲ್ಲಿ ಕಾರ್ಯನಿರ್ವಹಿಸುತ್ತದೆ.

Xiaomi 13 ಮತ್ತು Xiaomi 13 Pro ಎರಡು ಸ್ಮಾರ್ಟ್ಫೋನಿನ ನಡುವಿನ ಪ್ರಮುಖ ವ್ಯತ್ಯಾಸ ಏನಪ್ಪಾ ಅಂದರೆ, Xiaomi 13 Pro ಸ್ಮಾರ್ಟ್ಫೋನ್ Xiaomi 13 ಕೂಡ ಹಿಂಭಾಗದಲ್ಲಿ ಟ್ರಿಪಲ್-ಕ್ಯಾಮೆರಾ ಸೆಟಪ್ ಹೊಂದಿದೆ. ಆದರೆ, ಇದು 50MP ಪ್ರಾಥಮಿಕ ಲೆನ್ಸ್, 10MP ಟೆಲಿಫೋಟೋ ಲೆನ್ಸ್ ಮತ್ತು 12MP ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ಗಳನ್ನು ಒಳಗೊಂಡಿದೆ. ಮುಂಭಾಗದಲ್ಲಿ ಒಂದೇ ರೀತಿಯ 32MP ಸೆಲ್ಫಿ ಕ್ಯಾಮೆರಾ ಒಳಗೊಂಡಿದ್ದು, ಬ್ಯಾಟರಿ ವಿಭಾಗದಲ್ಲಿ, 67W ವೇಗದ ವೈರ್ಡ್ ಮತ್ತು 50W ವೈರ್ಲೆಸ್ ಚಾರ್ಜಿಂಗ್ ಬೆಂಬಲದ 4500mAh ಬ್ಯಾಟರಿ ಹೊಂದಿರುವ ಈ ಸ್ಮಾರ್ಟ್ಫೋನ್ ಕೂಡ 5G ಮತ್ತು ಟೈಪ್-ಸಿ ಪೋರ್ಟ್ ಸಪೋರ್ಟ್ ಹೊಂದಿದೆ.

Xiaomi 13 ಮತ್ತು Xiaomi 13 Pro ಸ್ಮಾರ್ಟ್ಫೋನ್ಗಳ ಬೆಲೆಗಳು
Xiaomi 13 Pro ಸ್ಮಾರ್ಟ್ಫೋನ್ ನಾಲ್ಕು ಮಾದರಿಗಳಲ್ಲಿ ಬಿಡುಗಡೆಯಾಗಿದೆ.
8GB+128GB = CNY 4999 (ಸುಮಾರು ರೂ. 59,200)
8GB+256GB = CNY 5399 (ಅಂದಾಜು ರೂ. 64,000)
12GB+256GB = CNY 5799 (ಅಂದಾಜು ರೂ. 68,700)
12GB+512GB = CNY 6299 (ಅಂದಾಜು ರೂ. 74,600)
Xiaomi 13 ಸ್ಮಾರ್ಟ್ಫೋನ್ ಕೂಡ ನಾಲ್ಕು ಮಾದರಿಗಳಲ್ಲಿ ಬಿಡುಗಡೆಯಾಗಿದೆ.
8GB+128GB = CNY 3999 (ಅಂದಾಜು ರೂ. 47,300)
8GB+256GB = CNY 4299 (ಅಂದಾಜು ರೂ. 51,000)
12GB+256GB = CNY 4599 (ಅಂದಾಜು ರೂ. 55,000)
12GB+512GB = CNY 4999 (ಅಂದಾಜು ರೂ. 59,200)

Xiaomi 13 Pro ಸ್ಮಾರ್ಟ್‌ಫೋನಿನ ವೈಶಿಷ್ಟ್ಯಗಳು
Xiaomi 13 ಸರಣಿಯಲ್ಲಿ ಪ್ರೊ ಮಾದರಿ ಸ್ಮಾರ್ಟ್ಫೋನ್ ಆಗಿ ಬಿಡುಗಡೆಯಾಗಿರುವ ನೂತನ Xiaomi 13 Pro ಸ್ಮಾರ್ಟ್ಫೋನ್ 6.73-ಇಂಚಿನ 2K OLED ಡಿಸ್ಪ್ಲೇ ಒಳಗೊಂಡಿದೆ. Xiaomi 13 Pro ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ ಟ್ರಿಪಲ್-ಕ್ಯಾಮೆರಾ ವ್ಯವಸ್ಥೆ ಇದ್ದು, ಇದು 50MP ಪ್ರಾಥಮಿಕ ಲೆನ್ಸ್, 50MP ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು 50MP ಟೆಲಿಫೋಟೋ ಮೂರು ಲೆನ್ಸ್‌ಗಳನ್ನು ಒಳಗೊಂಡಿದೆ. ಸೆಲ್ಫಿ ಮತ್ತು ವೀಡಿಯೋಗಳಿಗಾಗಿ, ಸ್ಮಾರ್ಟ್‌ಫೋನಿನ ಮುಂಭಾಗದಲ್ಲಿ 32MP ಲೆನ್ಸ್ ಅಳವಡಿಸಲಾಗಿದೆ. ಬ್ಯಾಟರಿ ವಿಭಾಗದಲ್ಲಿ, 120W ವೇಗದ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 4,820mAh ಬ್ಯಾಟರಿ ಹೊಂದಿರುವ ಈ Xiaomi 13 Pro ಸ್ಮಾರ್ಟ್‌ಫೋನ್ 5G ಸಾಧನವಾಗಿದ್ದು, ಚಾರ್ಜಿಂಗ್ ಮತ್ತು ವೈರ್ಡ್ ಡೇಟಾ ವರ್ಗಾವಣೆಗಾಗಿ ಟೈಪ್-ಸಿ ಪೋರ್ಟ್‌ ಅನ್ನು ಅಳವಡಿಸಲಾಗಿದೆ.

ಈ ಸ್ಮಾರ್ಟ್ ಫೋನ್ ಡಿಸ್‌ಪ್ಲೇಯು 120Hz ರಿಫ್ರೆಶ್ ರೇಟ್ ಸಾಮರ್ಥ್ಯದ ಜೊತೆಗೆ 1900 nits ಪೀಕ್ ಬ್ರೈಟ್‌ನೆಸ್, HDR10+ ಮತ್ತು ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ನಂತಹ ಪ್ರೀಮಿಯಂ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಹುಡ್ ಅಡಿಯಲ್ಲಿ, 12GB RAM ಮತ್ತು 512GB ಆಂತರಿಕ ಮೆಮೊರಿ ಜೊತೆಗೆ ಜೋಡಿಸಲಾಗಿರುವ ಇತ್ತೀಚಿನ Qualcomm Snapdragon 8 Gen 2 ಪ್ರೊಸೆಸರ್ ಹೊಂದಿರುವ ಈ Xiaomi 13 Pro ಸಾಧನವು ಇತ್ತೀಚಿನ MIUI 14 (Android 13 ಆಧಾರಿತ) ನಲ್ಲಿ ಕಾರ್ಯನಿರ್ವಹಿಸುತ್ತದೆ.

Leave A Reply

Your email address will not be published.