Sunglasses : ನೂರಡಿ ಎತ್ತರದಿಂದ ಎಸೆದರೂ ಏನೂ ಆಗಲ್ಲ ! ನಂಬರ್ ವನ್ ರಿ ಸೈಕಲ್ ಸನ್ ಗ್ಲಾಸ್ ಇದು!!!
Sunglasses: ಈಗಾಗಲೇ ಸನ್‌ಗ್ಲಾಸ್ ಸೀಸನ್ ಆರಂಭ ಆಗಿದೆ. ಹೌದು ಬಿಸಿಲಿನ ತಾಪ ತಡೆಯಲಾಗದೆ ನಗರ ಪ್ರದೇಶದಲ್ಲಿ ಹೆಚ್ಚಾಗಿ ಜನರು ಸನ್‌ಗ್ಲಾಸ್ ಹಾಕಿಕೊಂಡೆ ಓಡಾಡುತ್ತಾರೆ. ಅದಲ್ಲದೆ ಸನ್‌ಗ್ಲಾಸ್ ಗೆ ಬೇಸಿಗೆಯಲ್ಲಿ ಎಲ್ಲಿಲ್ಲದ ಬೇಡಿಕೆ ಅಂದರೂ ತಪ್ಪಾಗಲಾರದು. ಜೊತೆಯಲ್ಲಿ ನಾನಾ ರೀತಿಯ ಸನ್‌ಗ್ಲಾಸ್ ಗಳು (Sunglasses) ಮಾರುಕಟ್ಟೆಯಲ್ಲಿ(market )ಸಿಗುತ್ತವೆ. ಆದರೆ ಇಲ್ಲೊಂದು ಕನ್ನಡಕ ಬಗ್ಗೆ ಕೇಳಿದರೆ ನೀವು ಶಾಕ್ ಆಗ್ತೀರಾ ಖಂಡಿತಾ. ಅಷ್ಟೇ ಅಲ್ಲ ನೀವು ಸಹ ಖರೀದಿ ಮಾಡಬಹುದು.
ಹೌದು ಈ ಕನ್ನಡಕವನ್ನು ನೂರಡಿ ಎತ್ತರದಿಂದ ಎಸೆದರೂ ಒಡೆಯೋದಿಲ್ವಂತೆ, ನಿಮ್ಮ ಮುಖಕ್ಕೆ ಸರಿಹೊಂದುವಂತೆ ನೀವು ಈ ಸನ್ ಗ್ಲಾಸ್ ಅನ್ನು ಬಗ್ಗಿಸಬಹುದು. ಈ ಸನ್ ಗ್ಲಾಸ್‌ಗಳ ಮೇಲೆ ಕುಳಿತಲ್ಲಿಂದ ಅಥವಾ ಎತ್ತರದಿಂದ ಎಸೆದರೂ ಒಡೆಯುವುದಿಲ್ಲ. ಪ್ರಪಂಚದ ಮೊದಲ ರಿ ಸೈಕಲ್ ಸನ್‌ಗ್ಲಾಸ್ ಇದಾಗಿದೆ. ಈ ವಿಶೇಷ ಸನ್‌ಗ್ಲಾಸ್ ನ್ನು ಪುಣೆಯಲ್ಲಿ ತಯಾರಿಸಲಾಗಿದ್ದು,ಈ ಸನ್‌ಗ್ಲಾಸ್‌ಗಳ ಹೆಸರು ವಿತೌಟ್ ಆಗಿದೆ.ಹೌದು ಪುಣೆ ಮೂಲದ ಕಂಪನಿಯೊಂದು ಇಂತಹ ವಿನ್ಯಾಸದ ಸನ್‌ಗ್ಲಾಸ್‌ಗಳನ್ನು ರಚಿಸಿದ್ದು, ಜಗತ್ತಿನಲ್ಲಿ ಎಲ್ಲಿಯೂ ಕಾಣಲು ಸಿಗೋದಿಲ್ಲ.
ಇನ್ನು ಈ ಸನ್‌ಗ್ಲಾಸ್‌ಗಳು ಒಡೆದರೆ, ಅವುಗಳನ್ನು ಕಂಪನಿಗೆ ಮರಳಿ ಕಳುಹಿಸಿ ಮತ್ತು ಕಂಪನಿ ಅವುಗಳನ್ನು ಮತ್ತೆ ಉಚಿತವಾಗಿ ತಯಾರಿಸಿ ನೀಡುತ್ತೆ ಎಂದು ಕಂಪನಿಯ ವೆಬ್‌ಸೈಟ್ ತಿಳಿಸಿದೆ .
ವಿಶೇಷವೆಂದರೆ ಸನ್‌ಗ್ಲಾಸ್ ಗಳನ್ನು ಚಿಪ್ಸ್ ಪ್ಯಾಕೆಟ್‌ಗಳು, ಚಾಕೊಲೇಟ್ ರಾಪರ್ ಗಳಿಂದ ತಯಾರಿಸಲಾಗುತ್ತದೆ ಮತ್ತು ಈ ಸನ್‌ಗ್ಲಾಸ್‌ಗಳ ತೂಕ ಕೇವಲ 26 ಗ್ರಾಂ.
ಇದ್ದು, ಈ ಸನ್‌ಗ್ಲಾಸ್‌ಗಳನ್ನು ಸನ್‌ಗ್ಲಾಸ್ ಫ್ರೇಮ್ ಅನ್ನು 5 ಪ್ಯಾಕೆಟ್ ಚಿಪ್ಸ್ ನಿಂದ ತಯಾರಿಸಲಾಗುತ್ತದೆ. ಈ ಸನ್‌ಗ್ಲಾಸ್‌ಗಳನ್ನು ತಯಾರಿಸಿರುವ ಪುಣೆ ಮೂಲದ ಅಸಯ ಎಂಬ ಕಂಪನಿ, ಚಿಪ್ಸ್ಗಳ ಪ್ಯಾಕೆಟ್‌ಗಳಿಂದ(package)ತಯಾರಿಸಿದ ವಿಶ್ವದ ಮೊದಲ ಮರುಬಳಕೆಯ ಸನ್‌ಗ್ಲಾಸ್‌ಗಳು ಎಂದು ಹೇಳಿಕೊಂಡಿದೆ.
ಇನ್ನು ಸನ್ ಗ್ಲಾಸ್‌ಗಳ ಮೇಲೆ ಕ್ಯೂಆರ್ ಕೋಡ್ ನೀಡಲಾಗಿದ್ದು ಅದನ್ನು ಸ್ಕ್ಯಾನ್ (Scan)ಮಾಡಿದಾಗ ಈ ಸನ್‌ಗ್ಲಾಸ್‌ಗಳನ್ನು ತಯಾರಿಸಿದ ವೆಸ್ಟ್ ಎಲ್ಲಿಂದ ಮತ್ತು ಹೇಗೆ ಬಂದಿದೆ ಎಂಬುದು ಸಹ ಜನರಿಗೆ ತಿಳಿಯುತ್ತದೆ.
ಅದಲ್ಲದೆ ಈ ಸನ್‌ಗ್ಲಾಸ್‌ಗಳ ತಯಾರಿಕೆಯು ತ್ಯಾಜ್ಯ ತೆಗೆಯುವವರಿಗೆ ಹಣವನ್ನು ನೀಡುತ್ತಿದ್ದು ಮತ್ತು ಅವರ ಮಕ್ಕಳಿಗೆ ಶಿಕ್ಷಣ ಪಡೆಯಲು ಸಹಾಯ ಮಾಡುತ್ತಿದ್ದು ಕಂಪನಿ ಉತ್ತಮ ಉದ್ದೇಶವನ್ನು ಹೊಂದಿದೆ. ಈ ಸನ್ ಗ್ಲಾಸ್ ಗಳ ಬೆಲೆ ರೂ.1099 ಆಗಿದ್ದು ಈ ಕಪ್ಪು ಬಣ್ಣದ ಸನ್‌ಗ್ಲಾಸ್ ಅನ್ನು ಪುರುಷರು ಮತ್ತು ಮಹಿಳೆಯರು ಇಬ್ಬರೂ ಬಳಸಬಹುದಾಗಿದೆ.