Tata ದ ಹ್ಯಾರಿಯರ್, ಸಫಾರಿ ಮತ್ತು ನೆಕ್ಸಾನ್ SUVಗಳ ರೆಡ್ಡಾರ್ಕ್ ಆವೃತ್ತಿ ಬಿಡುಗಡೆ!
Tata Red Dark Edition : ಭಾರತದ ಮಾರುಕಟ್ಟೆಯಲ್ಲಿ ಹೊಸ ಹೊಸ ವಾಹನಗಳು, ಗ್ಯಾಜೆಟ್ ಗಳು ಲಗ್ಗೆ ಇಡುತ್ತಿವೆ. ಗ್ರಾಹಕರನ್ನು ಆಕರ್ಷಿಸಲು ಪೈಪೋಟಿ ನಡೆಸುತ್ತಿವೆ. ಹಾಗೆಯೇ ಇದೀಗ ಮಾರುಕಟ್ಟೆಯಲ್ಲಿ ಟಾಟಾದ(tata) ಹ್ಯಾರಿಯರ್ (harrier), ಸಫಾರಿ (safari) ಮತ್ತು ನೆಕ್ಸಾನ್ (Nexon) ಎಸ್ಯುವಿಗಳ ರೆಡ್ ಡಾರ್ಕ್ ಆವೃತ್ತಿ (Tata Red Dark Edition) ಬಿಡುಗಡೆಯಾಗಿದೆ.
ಈ ಮೂರು ಎಸ್ಯುವಿಗಳು (SUV) ಹಲವು ಕಾಸ್ಮೆಟಿಕ್ ನವೀಕರಣಗಳನ್ನು ಪಡೆದುಕೊಂಡಿದ್ದು, 10.25-ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್ ಹಾಗೂ ಹ್ಯಾರಿಯರ್, ಸಫಾರಿ ಎಸ್ಯುವಿಗಳು ADAS ತಂತ್ರಜ್ಞಾನವನ್ನು ಪಡೆದಿವೆ.
ಈ ಮೂರು ಎಸ್ಯುವಿಗಳ ಮುಖ್ಯ ಬದಲಾವಣೆ ಅದರ ಬಣ್ಣ. ಇವುಗಳು ಕೆಂಪು (RED), ಕಪ್ಪು (Oberon Black) ಮತ್ತು ಫ್ರಂಟ್ ಗ್ರೀಲ್ ಕೆಂಪು ಬಣ್ಣವನ್ನು ಹೊಂದಿದೆ. ನೆಕ್ಸಾನ್ ರೆಡ್ ಡಾರ್ಕ್ ಆವೃತ್ತಿಯು 16-ಇಂಚಿನ ಅಲಾಯ್ ವೀಲ್ಸ್, ಹ್ಯಾರಿಯರ್ ಮತ್ತು ಸಫಾರಿ ಎಸ್ಯುವಿ 18-ಇಂಚಿನ ಅಲಾಯ್ ವೀಲ್ಸ್ ಪಡೆದಿದೆ.
ಈ ಎಸ್ಯುವಿಗಳ ಕ್ಯಾಬಿನ್ ಒಳಭಾಗದಲ್ಲಿ ಡ್ಯಾಶ್ಬೋರ್ಡ್, ಸೆಂಟರ್ ಕನ್ಸೋಲ್, ಡೋರ್ ಗ್ರಾಬ್ ಹ್ಯಾಂಡಲ್ಸ್, ಆಸನಗಳು ಹಾಗೂ ಸ್ಟೀರಿಂಗ್ ವೀಲ್ಗಳಲ್ಲಿ ಕೆಂಪು ಬಣ್ಣ (RED)ವಿದ್ದು, ಗ್ರಾಹಕರನ್ನು ಆಕರ್ಷಿಸುತ್ತದೆ. ಹಾಗೆಯೇ ಇವುಗಳು 2.0-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದು, 70 bhp ಪವರ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿದೆ. ಜೊತೆಗೆ 6-ಸ್ವೀಡ್ ಮ್ಯಾನುವಲ್ ಟ್ರಾಸ್ಮಿಷನ್ ಅಥವಾ ಆಟೋಮೆಟಿಕ್ ಟ್ರಾಸ್ಮಿಷನ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಾಗಲಿದೆ. ನೆಕ್ಸಾನ್ ರೆಡ್ ಡಾರ್ಕ್ ಎಡಿಷನ್ 108 bhp ಪವರ್ ಉತ್ಪಾದಿಸುವ 1.2-ಲೀಟರ್ ಡೀಸೆಲ್ ಎಂಜಿನ್ ಹಾಗೂ 118 bhp ಪವರ್ ಉತ್ಪಾದಿಸುವ 1.2 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ.
ಇನ್ನು ಸುರಕ್ಷತೆಯ ದೃಷ್ಟಿಯಿಂದ ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್), AEB (ಆಟೋಮೆಟಿಕ್ ಎಮರ್ಜೆನ್ಸಿ ಬ್ರೇಕಿಂಗ್), ಫಾರ್ವರ್ಡ್ ಕಲಿಸಿಯೋನ್ ಅಲರ್ಟ್, ಲೇನ್ ಡಿಪಾರ್ಚರ್ ವಾರ್ನಿಂಗ್, ಲೇನ್ ಚೇಂಜ್ ಅಸಿಸ್ಟ್, ಟ್ರಾಫಿಕ್ ಸಿಗ್ನಲ್ ರೆಕಗ್ನಿಷನ್, 10.25-ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್, 7-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಮತ್ತು 360-ಡಿಗ್ರಿ ಕ್ಯಾಮೆರಾ ಸೇರಿದಂತೆ ಹಲವಾರು ವೈಶಿಷ್ಟ್ಯಗಳನ್ನು ಈ ಮೂರು ಎಸ್ ಯುವಿಗಳು ಒಳಗೊಂಡಿದೆ.
ಸದ್ಯ ಇವುಗಳ ಎಕ್ಸ್ ಶೋರೂಂ ಬೆಲೆ ಎಷ್ಟೆಂದರೆ, ಟಾಟಾ ನೆಕ್ಸಾನ್ ರೆಡ್ ಡಾರ್ಕ್ ಎಡಿಷನ್ ಬೆಲೆ ಸುಮಾರು ರೂ.12.35 ಲಕ್ಷದಿಂದ ರೂ.14.35 ಲಕ್ಷ ಇದೆ. ಟಾಟಾ ಹ್ಯಾರಿಯರ್ ರೆಡ್ ಡಾರ್ಕ್ ಆವೃತ್ತಿ ದರ ರೂ.21.77 ಲಕ್ಷದಿಂದ ರೂ. ರೂ 24.07 ಲಕ್ಷ ಇದೆ. ಹಾಗೂ ಟಾಟಾ ಸಫಾರಿ ರೆಡ್ ಡಾರ್ಕ್ ಸಫಾರಿ ಬೆಲೆ ರೂ.22.61 ಲಕ್ಷದಿಂದ ರೂ.24.91 ಲಕ್ಷ ಆಗಿದೆ.