ದಾಖಲೆಯತ್ತ ಅತೀ ವೇಗದಲ್ಲಿ ಮುನ್ನುಗ್ತುತ್ತಿದೆ Maruti ಸುಜುಕಿ ಇಕೋ ವ್ಯಾನ್‌ ! ಏನಿದರ ಫೀಚರ್ಸ್‌?

Maruti Suzuki Eeco: ಇಂದಿನ ದಿನಗಳಲ್ಲಿ ಓಡಾಟ ನಡೆಸಲು ವಾಹನಗಳು ಅತ್ಯಗತ್ಯವಾಗಿದ್ದು, ಪ್ರತಿಯೊಬ್ಬರ ಮನೆಯಲ್ಲಿ ಕೂಡ ವಾಹನಗಳು ಇರೋದು ಸಾಮಾನ್ಯವಾಗಿ ಬಿಟ್ಟಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಪ್ರೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಹೆಚ್ಚಳ ಕಂಡುಬರುತ್ತಿರುವ ಹಿನ್ನೆಲೆ ಹೆಚ್ಚಿನವರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಕೆಲ ಕಾರು ತಯಾರಿಕಾ ಕಂಪನಿಗಳು ಆಗಾಗ ಹೊಸ ಮಾದರಿಗಳನ್ನು ಪರಿಚಯಿಸಿ ಜನರ ಗಮನ ಸೆಳೆಯುವತ್ತ ಲಕ್ಷ್ಯ ವಹಿಸುತ್ತವೆ. ಆದರೆ ಕೆಲ ಬ್ರಾಂಡ್ ಗಳ ಕಾರುಗಳು ಜನರ ಮನದಲ್ಲಿ ವಿಶೇಷ ಸ್ಥಾನ ಪಡೆದುಕೊಂಡು ಬಿಟ್ಟಿವೆ. ಸದ್ಯ ಈ ಲಿಸ್ಟಲ್ಲಿ ಮಾರುತಿ ಸುಜುಕಿಯ Eeco ಕೂಡ ಸೇರಿಕೊಂಡಿದೆ.

ಭಾರತದಲ್ಲಿ ಮಧ್ಯಮ ವರ್ಗದ ಜನರ ಪಾಲಿನ ನೆಚ್ಚಿನ ಓಮ್ನಿ (omni) ಯ ಜಾಗವನ್ನು ಆಕ್ರಮಿಸಿಕೊಂಡ ಮಾರುತಿ ಸುಜುಕಿಯ Eeco ಎಂಪಿವಿಯನ್ನು ಗ್ರಾಹಕರು ಮೆಚ್ಚಿಕೊಂಡು ಕೊಂಡುಕೊಳ್ಳಲು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಸದ್ಯ ಕಂಪನಿಯು ಮಾರಾಟದ ವಿಷಯದಲ್ಲಿ ದೊಡ್ಡ ದಾಖಲೆ ಸೃಷ್ಟಿ ಮಾಡಿದೆ. 2010ರಿಂದ ಖರೀದಿ ಆರಂಭವಾಗಿ ಸದ್ಯ ಈ Eeco ವ್ಯಾನ್ ಈವರೆಗೆ ಬರೋಬ್ಬರಿ 10 ಲಕ್ಷ ಯುನಿಟ್ ಮಾರಾಟವಾಗಿದೆ.

ಮಾರುತಿ ಸುಜುಕಿಯ Eeco (Maruti Suzuki Eeco) ವಿಶೇಷತೆ ಕಡೆ ಗಮನ ಹರಿಸಿದರೆ, ಮಾರುತಿ ಸುಜುಕಿಯ Eeco ವ್ಯಾನ್ ಇಂಧನ ದಕ್ಷತೆ ಉತ್ತಮವಾಗಿದೆ. 1.2-ಲೀಟರ್ ಪೆಟ್ರೋಲ್ ಹಾಗೂ CNG ಎಂಜಿನ್ ಆಯ್ಕೆಯನ್ನು ಒಳಗೊಂಡಿದೆ. ಇದರ ಜೊತೆಗೆ 5 ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಾಗುತ್ತದೆ.ಮಾರುತಿ ಸುಜುಕಿಯ ಎಂಟ್ರಿ ಲೆವೆಲ್ ಎಂಪಿವಿಯಾಗಿರುವ Eeco, ಹೆಚ್ಚಿನ ಖರೀದಿದಾರರ ಆಯ್ಕೆಗಳಲ್ಲಿ ಒಂದಾಗಿದೆ.

ಇದು 13 ರೂಪಾಂತರಗಳಲ್ಲಿ 5 ಅಥವಾ 7 ಆಸನದ ಆಯ್ಕೆಯೊಂದಿಗೆ ಖರೀದಿಗೆ ದೊರೆಯುತ್ತದೆ. ಇದರ 1.2- ಪೆಟೋಲ್ ಎಂಜಿನ್ 81 PS ಗರಿಷ್ಠ ಪವರ್ ಹಾಗೂ 104.4 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. CNG ಆವೃತ್ತಿಯು 72 PS ಗರಿಷ್ಠ ಪವರ್ ಹಾಗೂ 95 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇತ್ತೀಚೆಗೆ ಮಾರುತಿ ಸುಜುಕಿ ಮಾರುಕಟ್ಟೆಯ ಬೇಡಿಕೆಗೆ ಅನುಸಾರ, ಇದರ ಎಂಜಿನ್ ಅನ್ನು ನವೀಕರಿಸಲಾಗಿದೆ. ನೂತನ Eeco ವ್ಯಾನ್, K ಸೀರಿಯಸ್ 1.2 – ಲೀಟರ್ ಯುನಿಟ್ ಎಂಜಿನ್ ಹಾಗೂ ಡುಯಲ್ VVT ಆಯ್ಕೆಯನ್ನು ಹೊಂದಿದೆ. ಆಲ್ಟೊ ಕೆ10,(Alto K10) ಎಸ್-ಪ್ರೆಸ್ಸೊ ಹಾಗೂ ಸೆಲೆರಿಯೊ ಕಾರುಗಳು ಒಳಗೊಂಡಂತೆ ಈ Eeco ವ್ಯಾನ್ ಕೂಡ ಡಿಜಿಟಲ್ ಇನ್ಸ್ರುಮೆಂಟಲ್ ಕ್ಲಸ್ಟರ್ ಹಾಗೂ ಸ್ಟೇರಿಂಗ್ ವೀಲ್ಸ್ ಇದ್ದು ವಿನ್ಯಾಸದ ದೃಷ್ಟಿಯಿಂದ ಕೂಡ ಆಕರ್ಷಕ ಲುಕ್ ಹೊಂದಿದೆ.

ಭಾರತದ ಮಾರುಕಟ್ಟೆಯಲ್ಲಿ Eeco ವ್ಯಾನ್ ಬೆಲೆ ಎಷ್ಟು ಎಂದು ಗಮನಿಸಿದರೆ, ರೂ. 5.22 ಲಕ್ಷದಿಂದ ರೂ.6.51 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಾಗಲಿದೆ. ದೇಶದಲ್ಲಿ ಜಾರಿಯಾಗುವ ಕಡ್ಡಾಯ ಎಮಿಷನ್ ಮಾನದಂಡಗಳಿಗೆ ಅನುಸಾರವಾಗಿ ಇದರ ಎಂಜಿನ್ ಅನ್ನು ಕಂಪನಿ ನವೀಕರಿಸುತ್ತದೆ. ನವೀಕರಣಗೊಂಡಿರುವ ಈ ಎಂಪಿವಿಯ ಎಂಜಿನ್ ಪೆಟ್ರೋಲ್ ಮೋಡ್ ನಲ್ಲಿ 19.71 kpl ಮೈಲೇಜ್ ನೀಡುತ್ತದೆ. ಈ ಮೊದಲು ಇದ್ದ ಎಂಜಿನ್ 16.11kpl ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದ್ದು, ಆದರೆ CNG ರೂಪಾಂತರಗಳು ಉತ್ತಮ ಕಾರ್ಯಕ್ಷಮತೆಯನ್ನು ಒಳಗೊಂಡಿವೆ. 20.88kg/km ರಿಂದ 26.78kg/km ಮೈಲೇಜ್ ನೀಡಲಿದೆ.ಹೀಗಾಗಿ, ಹೆಚ್ಚಿನ ಮಂದಿ ಈ ವ್ಯಾನ್ ಖರೀದಿ ಮಾಡಲು ಮುಂದಾಗುತ್ತಾರೆ.

ಮಾರುತಿ ಸುಜುಕಿ Eeco ಸುರಕ್ಷತೆ ದೃಷ್ಟಿಯಿಂದ ನೋಡಿದರೆ ಉತ್ತಮ ಆಯ್ಕೆಯಾಗಿದ್ದು, ಡುಯಲ್ ಫ್ರಂಟ್ ಏರ್ ಬಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕಿಂಗ್ ಸಿಸ್ಟಮ್) ಸೀಟ್ ಬೆಲ್ಟ್ ರೆಮಿಂಡರ್, ಸ್ವೀಡ್ ಅಲರ್ಟ್, ರೇರ್ ಪಾರ್ಕಿಂಗ್ ಸೆನ್ಸರ್ಸ್ ಒಳಗೊಂಡಂತೆ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಮೆಟಾಲಿಕ್ ಗ್ಲಿಸ್ಟೆನಿಂಗ್ ಗ್ರೇ, ಪರ್ಲ್ ಮಿಡ್ ನೈಟ್ ಬ್ಲ್ಯಾಕ್, ಮೆಟಾಲಿಕ್ ಬ್ರಿಸ್ಕ್ ಬ್ಲೂ, ಮೆಟಾಲಿಕ್ ಸಿಲ್ಕಿ ಸಿಲ್ವರ್ ಹಾಗೂ ಸಾಲಿಡ್ ವೈಟ್ ಬಣ್ಣಗಳನ್ನು ಒಳಗೊಂಡಿವೆ.

Leave A Reply

Your email address will not be published.