ಸಾಲ ಪಡೆಯಲು ಯೋಚಿಸುತ್ತಿರುವವರಲ್ಲಿ ನೀವೂ ಕೂಡ ಒಬ್ಬರಾಗಿದ್ದೀರಾ? : ಹಾಗಿದ್ರೆ ಕಡಿಮೆ ಬಡ್ಡಿ ಗೆ ಲೋನ್ ಸಿಗುವ ಬ್ಯಾಂಕ್ ಗಳ ಪಟ್ಟಿ ಇಲ್ಲಿದೆ ನೋಡಿ

Home loan: ಸಾಲಗಾರರ ದೊಡ್ಡ ಚಿಂತೆ ಬಡ್ಡಿ ಕಟ್ಟುವುದು ಆಗಿದೆ. ಯಾಕಂದ್ರೆ, ಸಾಲದ ಮೊತ್ತ ಹೇಗಾದ್ರು ಪಾವತಿಸಬಹುದು ಆದ್ರೆ ಅದಿಕೆ ಬೀಳೋ ಬಡ್ಡಿಯೇ ಹೆಚ್ಚು ತಲೆಬಿಸಿ. ದಿನದಿಂದ ದಿನಕ್ಕೆ ಬಡ್ಡಿ ಮೊತ್ತ ಏರಿಕೆ ಮಾಡುತ್ತಿರುವ ಕಾಲದಲ್ಲಿ ಕೆಲವೊಂದು ಬ್ಯಾಂಕ್ ಮಾತ್ರ ಸಾಲದ ಬಡ್ಡಿದರವನ್ನು ಕಡಿಮೆ ಮಾಡಿದೆ.

ಹೌದು. ಕೆಲವೊಂದು ಹೌಸಿಂಗ್ ಫೈನಾನ್ಸ್ ಕಂಪನಿಗಳು ಮತ್ತು ಬ್ಯಾಂಕುಗಳು ಶೇಕಡಾ 8.75 ಕ್ಕಿಂತ ಕಡಿಮೆ ಬಡ್ಡಿದರಗಳನ್ನು ನೀಡುತ್ತಿವೆ ಎಂದು ಬ್ಯಾಂಕ್ ಬಜಾರ್ ಸಂಗ್ರಹಿಸಿದ ಅಂಕಿ ಅಂಶಗಳು ತಿಳಿಸಿದೆ. ಅಂತಹ ಕಡಿಮೆ ಬಡ್ಡಿ ದರದ ಕೆಲವು ಕಂಪನಿಗಳ ಮಾಹಿತಿಯನ್ನು ನಿಮಗೆ ತಿಳಿಸುತ್ತೇವೆ ನೋಡಿ.

ಪಿಎನ್‌ಬಿ ಹೌಸಿಂಗ್ ಫೈನಾನ್ಸ್:
ಸರ್ಕಾರಿ ಸ್ವಾಮ್ಯದ ಪಿಎನ್‌ಬಿ ಹೌಸಿಂಗ್ ಫೈನಾನ್ಸ್ (Home loan) ಪ್ರಸ್ತುತ ಶೇಕಡಾ 8.5 ರಷ್ಟು ಬಡ್ಡಿಯನ್ನು ವಿಧಿಸುತ್ತದೆ. ಈ ಸಂದರ್ಭದಲ್ಲಿ ಇಎಂಐ 65,087 ರೂಪಾಯಿಯಾಗುತ್ತದೆ.

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ:
ಸಾರ್ವಜನಿಕ ವಲಯದ ಬ್ಯಾಂಕ್ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಗೃಹ ಸಾಲದ ಮೇಲೆ ಶೇಕಡಾ 8.55 ರಷ್ಟು ಬಡ್ಡಿದರವನ್ನು ನೀಡುತ್ತದೆ. ಇದರ ಇಎಂಐ 65,324 ರೂಪಾಯಿಯಾಗುತ್ತದೆ.

ಬ್ಯಾಂಕ್ ಸಾಲ :
ಬ್ಯಾಂಕ್ ಆಫ್ ಮಹಾರಾಷ್ಟ್ರ, ಇಂಡಿಯನ್ ಓವರ್ಸೀಸ್ ಬ್ಯಾಂಕ್ ಮತ್ತು ಬಜಾಜ್ ಫಿನ್ ಸರ್ವ್ ಜೊತೆಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನೀಡುವ ಗೃಹ ಸಾಲದ ಬಡ್ಡಿದರಗಳು ಶೇಕಡಾ 8.6 ರಷ್ಟಿದೆ. 20 ವರ್ಷಗಳ ಅವಧಿಯ 75 ಲಕ್ಷ ರೂಪಾಯಿಗಳ ಸಾಲದ ಮೇಲಿನ ಇಎಂಐ 65,562 ರೂಪಾಯಿಯಾಗಿರುತ್ತದೆ.

ಕೋಟಕ್ ಮಹೀಂದ್ರಾ ಮತ್ತು ಎಲ್‌ಐಸಿ ಹೌಸಿಂಗ್ ಫೈನಾನ್ಸ್ :
ಕೋಟಕ್ ಬ್ಯಾಂಕ್ ಪ್ರಸ್ತುತ ಗೃಹ ಸಾಲದ ಮೇಲೆ ಶೇಕಡಾ 8.65 ರಷ್ಟು ಬಡ್ಡಿಯನ್ನು ವಿಧಿಸುತ್ತದೆ. 20 ವರ್ಷಗಳ ಅವಧಿಯೊಂದಿಗೆ 75 ಲಕ್ಷ ರೂಪಾಯಿಗಳ ಗೃಹ ಸಾಲದ ಮೇಲಿನ ಇಎಂಐ 65,801 ರೂಪಾಯಿ ಆಗಿರುತ್ತದೆ.

ಆದಿತ್ಯ ಬಿರ್ಲಾ ಹೌಸಿಂಗ್ ಫೈನಾನ್ಸ್:
ಆದಿತ್ಯ ಬಿರ್ಲಾ ಹೌಸಿಂಗ್ ಫೈನಾನ್ಸ್ ಪ್ರಸ್ತುತ ತನ್ನ ಗೃಹ ಸಾಲಗಳ ಮೇಲೆ ಶೇಕಡಾ 8.75 ರಷ್ಟು ಬಡ್ಡಿಯನ್ನು ವಿಧಿಸುತ್ತಿದೆ. 75 ಲಕ್ಷ ರೂಪಾಯಿ ಸಾಲಕ್ಕೆ ಇಎಂಐ 66,278 ರೂಪಾಯಿ ಆಗಿರುತ್ತದೆ.

ಅಗ್ಗದ ಸಾಲದಾತರ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನಗಳನ್ನು ಎಚ್‌ಎಫ್‌ಸಿ ಗಳು ಪಡೆದಿವೆ, ಮತ್ತೊಂದು ಸರ್ಕಾರಿ ಸ್ವಾಮ್ಯದ ಸಂಸ್ಥೆ ರೆಪ್ಕೊ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಇದು ಶೇಕಡಾ 8.3 ರಷ್ಟು ಬಡ್ಡಿದರವನ್ನು ನೀಡುತ್ತದೆ ಮತ್ತು ಇದಕ್ಕೆ ಇಎಂಐ 64,141 ರೂಪಾಯಿಯಾಗುತ್ತದೆ.

Leave A Reply

Your email address will not be published.