ULPIN : ಸ್ವಂತ ಜಮೀನು ಹೊಂದಿದ್ದೀರಾ ? ಸರಕಾರದಿಂದ ನಿಮಗೊಂದು ಮಹತ್ವದ ಮಾಹಿತಿ!

ULPIN : ಆಧಾರ್ 12-ಅಂಕಿಯ ವಿಶಿಷ್ಟ ಸಂಖ್ಯೆಯಾಗಿದ್ದು, ಇದನ್ನು ಗುರುತಿನ ಉದ್ದೇಶಗಳಿಗಾಗಿ ಭಾರತ ಸರ್ಕಾರವು ಹೊರತಂದಿದ್ದು, ಸರಕಾರದ ಮೂಲಭೂತ ಸೌಕರ್ಯಗಳನ್ನು ಪಡೆಯುವ ನಿಟ್ಟಿನಲ್ಲಿ ಭಾರತದಲ್ಲಿ ಪ್ರತಿಯೊಬ್ಬ ನಾಗರಿಕ ಕೂಡ ಆಧಾರ್ ಕಾರ್ಡ್ (Aadhaar card) ಹೊಂದಿರುವುದು ಅತ್ಯಗತ್ಯವಾಗಿದೆ.ಇಂದು ಯಾವುದೇ ಬ್ಯಾಂಕ್ ಇನ್ನಿತರ ಕಾರ್ಯಗಳಿಗೆ ಪ್ರಮುಖ ದಾಖಲೆಗಳೊಂದಿಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡುವಂತೆ ಸರ್ಕಾರ ಸೂಚನೆ ನೀಡೋದು ಗೊತ್ತಿರುವ ವಿಚಾರವೇ.ಇದೀಗ, ಸರ್ಕಾರ ಭೂಮಿಗೂ ಆಧಾರ್ ಸಂಖ್ಯೆ ಅವಶ್ಯಕವೆಂದು ತಿಳಿಸಿದೆ.

ಭಾರತದ ನಾಗರಿಕರಿಗೆ ಆಧಾರ್‌ ಎನ್ನುವ ವಿಶೇಷ ಗುರುತಿನ ಸಂಖ್ಯೆ(UDI) ನೀಡುವ ಉದ್ದೇಶದಿಂದ ಯುಐಡಿಎಐ ಇದನ್ನು ಸ್ಥಾಪಿಸಿದ್ದು, ಒಂದು ದೇಶ ಒಂದು ನೋಂದಣಿ ಯೋಜನೆಯಡಿ ಕೇಂದ್ರ ಸರ್ಕಾರ ಹೊಸ ನಿಯಮವನ್ನು ಜಾರಿಗೆ ತರಲು ಮುಂದಾಗಿದ್ದು, ಈ ಯೋಜನೆಯಡಿಯಲ್ಲಿ ಭೂ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಇರಿಸಲಾಗುತ್ತದೆ.

ಡಿಜಿಟಲ್ ಭೂ ದಾಖಲೆಗಳಿಂದ ಜನರಿಗೆ ಅನೇಕ ರೀತಿಯ ಪ್ರಯೋಜನವಾಗಲಿದೆ. ಭೂಮಿ ನೋಂದಣಿಯಲ್ಲಿ 14 ಅಂಕಿಗಳ ULPIN ಸಂಖ್ಯೆಯನ್ನು ನೀಡಲಾಗಲಿದ್ದು, ಇದರ ಅಡಿಯಲ್ಲಿ ಸೆಂಟ್ರಲ್ ಆಫ್ ರೆಕಾರ್ಡ್, ಕಲೆಕ್ಷನ್ ಆಫ್ ರೆಕಾರ್ಡ್ ಮೂಲಕ ಸಾರ್ವಜನಿಕರಿಗೆ ಹೆಚ್ಚಿನ ಪ್ರಯೋಜನ ಉಂಟಾಗಲಿದೆ. ಈ ಕುರಿತು ಬಿಡುಗಡೆ ಮಾಡಿರುವ ಮಾಹಿತಿ ಅನುಸಾರ, ಭೂ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಇರಿಸಲು ಐಪಿ ಆಧಾರಿತ ತಂತ್ರಜ್ಞಾನವನ್ನು ಬಳಕೆ ಮಾಡಲಾಗುತ್ತದೆ. ಇದನ್ನು 3C ಸೂತ್ರದ ಅಡಿಯಲ್ಲಿ ವಿತರಣೆ ಮಾಡಲಾಗುತ್ತದೆ. ಇದು ನಿಮ್ಮ ಜಮೀನಿನ ಆಧಾರ್ ಸಂಖ್ಯೆಯಾಗಿದ್ದು, ಈ ಭೂಮಿ ಆಧಾರ್ ಸಂಖ್ಯೆಯೊಂದಿಗೆ ಒಂದೇ ಕ್ಲಿಕ್ನಲ್ಲಿ ನಿಮ್ಮ ಭೂಮಿ ಸಂಬಂಧಿತ ಎಲ್ಲಾ ದಾಖಲೆಗಳನ್ನು ಮನೆಯಿಂದ ಪರಿಶೀಲನೆ ನಡೆಸಬಹುದಾಗಿದೆ.

ಇನ್ನೂ ಮುಂದಿನ ದಿನಗಳಲ್ಲಿ ಡಿಜಿಟಲ್ ದಾಖಲೆಯಿಂದ ಹೆಚ್ಚಿನ ಪ್ರಯೋಜನ ಪಡೆಯಬಹುದಾಗಿದೆ. ಮೊದಲು ಜಮೀನಿನ ವಾಸ್ತವ ಸ್ಥಿತಿ ತಿಳಿದುಕೊಳ್ಳಬಹುದು. ಡ್ರೋನ್ ಕ್ಯಾಮೆರಾದ ನೆರವಿನಿಂದ ಇಲ್ಲಿ ಭೂಮಿಯನ್ನು ಅಳೆಯಲಾಗುತ್ತದೆ. ಹೀಗಾಗಿ ಯಾವುದೇ ರೀತಿಯ ತಪ್ಪಾಗುವ ಸಾಧ್ಯತೆಗಳು ಕಡಿಮೆ ಎಂದೇ ಹೇಳಬಹುದು. ಡಿಜಿಟಲ್ ದಾಖಲೆಯ ಬಳಿಕ ನಗರದ ಸಾಮಾನ್ಯ ಸೇವಾ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ತಮ್ಮ ಭೂಮಿಯ ಬಗ್ಗೆ ಮಾಹಿತಿಯನ್ನು ಪಡೆಯಬಹುದಾಗಿದೆ.

ಈ ULPIN ಸಂಖ್ಯೆಯ ಮೂಲಕ ಜಮೀನು ಖರೀದಿದಾರ ಮತ್ತು ಮಾರಾಟಗಾರರ ಬಗ್ಗೆ ಎಲ್ಲಾ ಸಂಪೂರ್ಣ ಮಾಹಿತಿ ಪಡೆಯಬಹುದು. ಒಂದು ವೇಳೆ ನಿಮ್ಮಲ್ಲಿರುವ ಜಮೀನು ವಿಭಜನೆಯಾದಲ್ಲಿ ಆಗ ಅದರ ಆಧಾರ್ ಸಂಖ್ಯೆ ಕೂಡ ಬದಲಾಗಲಿದೆ. ಇದರ ಜೊತೆಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯಂತಹ ಅನೇಕ ಯೋಜನೆಗಳಿಗೆ ಈ ULPIN ಅನ್ನು ಬಳಕೆ ಮಾಡಬಹುದು. ಈ ULPIN ಸಂಖ್ಯೆಯ ಜೊತೆಗೆ ಎಲ್ಲಿ ಬೇಕಾದರೂ ಭೂಮಿಯನ್ನು ಖರೀದಿಸುವ ಹಾಗೂ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ಪ್ರಕ್ರಿಯೆಯಲ್ಲಿ ಯಾವುದೇ ಅನುಮಾನ ಗೊಂದಲವಿರದು.

Leave A Reply

Your email address will not be published.