Aadhar : ಆಧಾರ್ ಏನಾದರೂ ಬ್ಲಾಕ್ ಮಾಡೋದಿದ್ದರೆ ಈ ನಂಬರ್‌ಗೆ ಮೆಸೇಜ್ ಮಾಡಿ
UIDAI update : ದೇಶದಲ್ಲಿ ಆಧಾರ್ ಕಾರ್ಡ್ ತುಂಬಾನೇ ಅತ್ಯಗತ್ಯ. ಇಂದಿನ ದಿನದಲ್ಲಿ ಪ್ರತಿಯೊಂದಕ್ಕೂ ಆಧಾರ್ ಕಾರ್ಡ್ (Aadhaar Card) ಬೇಕೇ ಬೇಕು. ಹಾಗೆಯೇ ಆಧಾರ್ ಕಾರ್ಡ್ ನಲ್ಲಿ ಹಲವು ಅಪ್ಡೇಟ್ (UIDAI update) ಬರುತ್ತಲೇ ಇವೆ. ಆದರೆ ಪ್ರಮುಖ ದಾಖಲೆಗಳಲ್ಲಿ ಒಂದಾದ ಈ ಆಧಾರ್ ಕಾರ್ಡ್ ದುರ್ಬಳಕೆ ಆದರೆ ಏನು ಮಾಡುವುದು. ಈ ಹಿಂದೆ ಆಧಾರ್ ದುರ್ಬಳಕೆ ಆದರೆ ಅದನ್ನು ಪರಿಕ್ಷಿಸುವುದು ಹೇಗೆ ಎಂಬುದರ ಮಾಹಿತಿ ನೀಡಿದ್ದು, ಸದ್ಯ ಆಧಾರ್ ದುರ್ಬಳಕೆ ಆದರೆ ಅದನ್ನು ಆಧಾರ್ ಬ್ಲಾಕ್ ಮಾಡಲು ಸಲಹೆ ಇಲ್ಲಿದೆ. ಅದಕ್ಕೆ ಇಲ್ಲಿ ನೀಡಿರುವ ಸಂಖ್ಯೆಗೆ ಎಸ್‌ಎಂಎಸ್ ಮಾಡಬೇಕು. ಯಾವ ಸಂಖ್ಯೆ? ಹೆಚ್ಚಿನ ಮಾಹಿತಿ ಇಲ್ಲಿದೆ.
ಆಧಾರ್ ಕಾರ್ಡ್ ಬಳಕೆದಾರರು ಒಂದು ಸಂಖ್ಯೆಗೆ ಎಸ್‌ಎಂಎಸ್ ಕಳುಹಿಸುವ ಮೂಲಕ ತಮ್ಮ ಆಧಾರ್ ಕಾರ್ಡ್ ಅನ್ನು ಲಾಕ್ ಮತ್ತು ಅನ್‌ಲಾಕ್ ಮಾಡಬಹುದು. ನೀವು ಆಧಾರ್ ಕಾರ್ಡ್ ಅನ್ನು ಲಾಕ್ ಮಾಡಿದ ನಂತರ ನಿಮ್ಮ ಆಧಾರ್ ಕಾರ್ಡ್ ನ ಮಾಹಿತಿಯನ್ನು ಯಾರೂ ಕೂಡ ದುರ್ಬಳಕೆ ಮಾಡಲು ಸಾಧ್ಯವಾಗುವುದಿಲ್ಲ. ನಿಮ್ಮ ಆಧಾರ್ ಸುರಕ್ಷಿತವಾಗಿರುತ್ತದೆ. ಅಲ್ಲದೆ, ನೀವು ಆಧಾರ್ ಕಾರ್ಡ್ ಅನ್ನು ಲಾಕ್ ಮಾಡಿದ ನಂತರ, ನೀವು ಆಧಾರ್ ಸಂಖ್ಯೆಯನ್ನು ವೇರಿಫಿಕೇಷನ್‌ಗಾಗಿ ಬಳಸುವುದಾದರೆ, ನೀವು ವರ್ಚುವಲ್ ಐಡೆಂಟಿಫಿಕೇಷನ್ ಬಳಸಬೇಕಾಗುತ್ತದೆ. ಇನ್ನು ಆಧಾರ್ ಕಾರ್ಡ್ ಬ್ಲಾಕ್ ಮಾಡುವುದು ಹೇಗೆ ಎಂದು ನೋಡೋಣ.
ಆಧಾರ್ ಕಾರ್ಡ್ ಬ್ಲಾಕ್ ಮಾಡುವುದು ಹೇಗೆ?
• ನಿಮ್ಮ ಆಧಾರ್ ಕಾರ್ಡ್ ಬ್ಲಾಕ್ ಮಾಡಲು ನೀವು ಒಂದು ಫಾರ್ಮಟ್ ನಲ್ಲಿ GETOTPLAST ಎಂದು ಎಸ್‌ಎಂಎಸ್ ಟೈಪ್ ಮಾಡಬೇಕು.
• LAST ಎಂಬಲ್ಲಿ ನಿಮ್ಮ ಆಧಾರ್ ಕಾರ್ಡ್‌ನ ಕೊನೆಯ ನಂಬರ್ ಅನ್ನು ಟೈಪ್ ಮಾಡಬೇಕು.
• ಲಾಕಿಂಗ್ ರಿಕ್ವೆಸ್ಟ್ ಅನ್ನು ಕಳುಹಿಸಲು LOCKUID Last ಎಂದು ಟೈಪ್ ಮಾಡಬೇಕು.
• ಕೊನೆಯಲ್ಲಿ ನಿಮ್ಮ ಆಧಾರ್ ಕಾರ್ಡ್‌ನ 4 ಮತ್ತು 8 ಸಂಖ್ಯೆಗಳನ್ನು ನಮೂದಿಸಿ.
• ಆಗ ನಿಮ್ಮ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ. ಅದನ್ನು 1947 ನಂಬರ್‌ಗೆ ಕಳುಹಿಸಬೇಕು. ನಂತರ ನಿಮಗೆ ದೃಡೀಕರಣಕ್ಕಾಗಿ ಎಸ್‌ಎಂಎಸ್ ಬರುತ್ತದೆ.
ಇನ್ನು, ಈ ಆಧಾರ್ ಕಾರ್ಡ್ ಬ್ಲಾಕಿಂಗ್ ವ್ಯವಸ್ಥೆ ನಿಮ್ಮ ಆಧಾರ್ ಕಾರ್ಡ್ ದುರ್ಬಳಕೆ ಆಗುವುದನ್ನು ತಡೆಯುತ್ತದೆ. ಹಾಗೂ ನಿಮ್ಮ ಆಧಾರ್ ಸುರಕ್ಷಿತವಾಗಿರುತ್ತದೆ.