Rahul Gandhi: 52ನೇ ವಯಸ್ಸಿಗೆ ಮಕ್ಕಳನ್ನು ಪಡೆಯುವ ಇಂಗಿತ ವ್ಯಕ್ತ ಪಡಿಸಿದ ರಾಹುಲ್ ಗಾಂಧಿ! ಇಟಲಿಯ ಸಂದರ್ಶನದಲ್ಲಿ ಮನ ಬಿಚ್ಚಿ ಮಾತಾಡಿದ ರಾಗಾ!
Rahul Gandhi: ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಆಗಾಗ ಯಾವುದಾದರೂ ವಿಚಾರಗಳ ಕುರಿತು ತಮ್ಮದೇ ದೃಷ್ಟಿಯಲ್ಲಿ ಮಾತನಾಡಿ ಸುದ್ಧಿಯಾಗುತ್ತಲೇ ಇರುತ್ತಾರೆ. ಅಲ್ಲದೆ ಇತ್ತೀಚೆಗಂತೂ ತಮ್ಮ ವೈಯಕ್ತಿಕ ವಿಚಾರಗಳಿಗೆ ಸಂಬಂಧಿಸಿದಂತೆ ಯಾರಾದರೂ ಪ್ರಶ್ನೆಗಳನ್ನು ಕೇಳಿದರೆ ತಮ್ಮದೇ ಧಾಟಿಯಲ್ಲಿ ಉತ್ತರಿಸುವುದನ್ನು ನಾವು ನೋಡಿದ್ದೇವೆ. ಭಾರತ್ ಜೋಡೋ ಯಾತ್ರೆ ವೇಳೆಯೂ ರಾಗಾಗೆ ಹಲವು ಬಾರಿ ಸಂದರ್ಶನಗಳಲ್ಲಿ ತಮ್ಮ ಮದುವೆ (Marriage) ಬಗ್ಗೆ ಪ್ರಶ್ನೆಗಳನ್ನು ಕೇಳಲಾಗಿತ್ತು. ಇದಕ್ಕೆ ಅವರು ಭಿನ್ನವಾಗಿ ಉತ್ತರಗಳನ್ನು ನೀಡಿದ್ದರು. ಆದರೆ ಇದೀಗ ರಾಹುಲ್ ಗೆ ಮಕ್ಕಳನ್ನು (Children) ಪಡೆಯುವ ಬಯಕೆಯಕೆ ಆಗಿದ್ಯಂತೆ.
ಈ ಹಿಂದೆ ಭಾರತ್ ಜೋಡೋ(Bharat jodo) ಯಾತ್ರೆ ವೇಳೆ ರಾಹುಲ್ ಗಾಂಧಿ ಅವರಿಗೆ ಸಂದರ್ಶನವೊಂದರಲ್ಲಿ ತಮ್ಮ ಹೆಂಡತಿ ಹೇಗಿರಬೇಕು ಎಂದು ಪ್ರಶ್ನಿಸಲಾಗಿತ್ತು. ಅದಕ್ಕವರು ತಾವು ತಮ್ಮ ಅಜ್ಜಿ ಇಂದಿರಾ ಗಾಂಧಿ(Indhira Ghandi)ಯವರಂತಹ ಗುಣಗಳುಳ್ಳ, ಬುದ್ಧಿವಂತ ಹಾಗೂ ಪ್ರೀತಿಯ ಹೆಣ್ಣಿನೊಂದಿಗೆ ಇರಲು ಬಯಸುತ್ತೇನೆ ಎಂದಿದ್ದರು. ನನ್ನ ಅಜ್ಜಿ ನನ್ನ 2ನೇ ತಾಯಿ. ನಾನು ನನ್ನ ಅಜ್ಜಿ ಹಾಗೂ ತಾಯಿ ಸೋನಿಯಾ ಗಾಂಧಿ(Soniya Gandhi)ಯವರಂತಹ ಗುಣಗಳುಳ್ಳ ಹೆಣ್ಣಿಗೆ ಆದ್ಯತೆ ನೀಡುತ್ತೇನೆ ಎಂದಿದ್ದರು. ಇದೀಗ ಇಂತದೇ ಒಂದು ವಿಚಾರಕ್ಕೆ ಅವರು ಪ್ರತಿಕ್ರೆಯಿಸಿದ್ದು ಎಲ್ಲರೂ ಒಮ್ಮೆ ಆಶ್ಚರ್ಯ ಪಡುವಂತೆ ಮಾಡಿದ್ದಾರೆ.
ಹೌದು, 52 ವರ್ಷದ ರಾಹುಲ್ ಗಾಂಧಿ ಇಟಾಲಿಯನ್(Italian) ದಿನಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರಿಗೆ ‘ಕಾಂಗ್ರೆಸ್ ನಾಯಕ, ಇಷ್ಟು ವಯಸ್ಸಾದರೂ ಯಾಕೆ ಒಟಟಿಯಾಗಿದ್ದೀರಿ’ ಎಂಬ ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಅವರು ನನಗೂ ಬಯಕೆಗಳಿವೆ. ಆದರೆ ಅದು ಇಲ್ಲಿಯವರೆಗೆ ಸಾಧ್ಯವಾಗಿಲ್ಲ. ಜೊತೆಗೆ ನನಗೂ ಇದು ವಿಚಿತ್ರ ಎನಿಸುತ್ತದೆ. ಇದಕ್ಕೆ ಉತ್ತರ ನನಗೂ ಗೊತ್ತಿಲ್ಲ ಎಂದಿದ್ದಾರೆ.
ಅಲ್ಲದೆ ಮದುವೆಯಾಗುವ ಹಾಗೂ ಮಕ್ಕಳನ್ನು ಹೊಂದುವ ಆಲೋಚನೆ ತಮ್ಮ ಮನಸ್ಸಿಗೆ ಬಂದಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ನನಗೆ ಮಾಡಲು ತುಂಬಾ ಕೆಲಸಗಳಿವೆ. ಇದರ ನಡುವೆ ನನಗೆ ಮಕ್ಕಳನ್ನು ಹೊಂದುವ ಬಯಕೆ ಆಗುತ್ತಿದೆ ಎಂದು ತಮ್ಮ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ತಮ್ಮ ಈ ಪ್ರಾಯದಲ್ಲಿ ಮಕ್ಕಳನ್ನು ಹೊಂದಲು ಬಯಸಿರುವುದಾಗಿ ಬಹಿರಂಗಪಡಿಸಿದ್ದಾರೆ. ಜೊತೆಗೆ ತಮ್ಮ ಕುಟುಂಬದ ಸದಸ್ಯರು ಹಾಗೂ ಅವರೊಂದಿಗೆ ಇದ್ದ ಅನ್ಯೋನ್ಯ ಸಂಬಂಧಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ ರಾಗಾ.