Electric Car : ಓಪನ್ ಎಲೆಕ್ಟ್ರಿಕ್ ಕಾರ್ ಇದು, ವಿಶ್ವದಲ್ಲೇ ಮೊದಲು! ಸಂಪೂರ್ಣ ವಿವರ ಇಲ್ಲಿ!
Electric Car : BMW ನಿಂದ ಎಲೆಕ್ಟ್ರಿಕ್ ಕಾರು ತಯಾರಿಕೆಗೆ ಹೆಜ್ಜೆ ಇಟ್ಟಿದೆ. ಈ ಬೃಹತ್ ಕಂಪನಿಯ ಮೊದಲ ಎಲೆಕ್ಟ್ರಿಕ್ ಕಾರು Mini Cooper SE Convertible ಬಿಡುಗಡೆ ಮಾಡುವ ಮೂಲಕ ಎಲೆಕ್ಟ್ರಿಕ್ ಕಾರು( Electric Car) ತಯಾರಿಕೆಗೆ ಪ್ರವೇಶ ಪಡೆದಂತಾಗಿದೆ. ಇನ್ನು ಮುಂದೆಯೂ ಈ ಕಂಪನಿ ತನ್ನ ಬತ್ತಳಿಕೆಯಿಂದ ಹಲವಾರು ಎಲೆಕ್ಟ್ರಿಕ್ ಕಾರುಗಳನ್ನು ಲಾಂಚ್ ಮಾಡಲು ಆಸಕ್ತಿ ತೋರುತ್ತಿದೆ.
ಹೊಸ ಯೂನಿಯನ್ ಜ್ಯಾಕ್ ವಿನ್ಯಾಸ್ ಹೊಂದಿರುವ ಈ ಮಿನಿ ಕೂಪರ್ ಎಸ್ಇ ಕನ್ವರ್ಟಿಬಲ್ ವಿನ್ಯಾಸ ಅದರ ರೂಫ್ ಫೋಲ್ಡಿಂಗ್ ಕ್ಲಾತ್ ಟಾಪ್ ಕೂಡಾ ಹೊಂದಿರುವ ಈ ಕಾರು ಅನೇಕ ವಿನ್ಯಾಸಗಳನ್ನು ಹೊಂದಿದೆ. ಯೂನಿಯನ್ ಜ್ಯಾಕ್ ಥೀಮ್ನೊಂದಿಗೆ ಹೆಡ್ಲ್ಯಾಂಪ್ ಮತ್ತು ಟೈಲ್ ಲ್ಯಾಂಪ್ಗಳು ಸಾಮಾನ್ಯ ಕೂಪರ್ ಮಾದರಿಯನ್ನು ಹೋಲುತ್ತವೆ. ಈ ಕಾರಿನ ಡೋರ್ ಹಿಡಿಕೆ ಕಂಚಿನ ಲೇಪ ಹೊಂದಿದ್ದು, ನೋಡಲು ಆಕರ್ಷಕವಾಗಿದೆ. ಮಿನಿ ಲೋಗೋ ಇದ್ದು ಇದಕ್ಕೆ ಕಪ್ಪು ಬಣ್ಣ ನೀಡಲಾಗಿದೆ. ಇದನ್ನೆಲ್ಲ ನೋಡುವಾಗ ಇದಕ್ಕೊಂದು ಸಖತ್ ಫ್ಯಾಷನೇಬಲ್ ಲುಕ್ ಕೊಟ್ಟಿದೆ ಕಂಪನಿ ಎನ್ನಲಾಗಿದೆ.
ಎಸ್ಇಗೆ ಈ ಕಾರಿನ ಕ್ಯಾಬಿನ್ ಕೂಪ್ ಹೋಲುತ್ತದೆ. ಇದೊಂದು ರೀತಿಯ ನವನವೀನ ಮಾದರಿಯ ಕಾರು ಇದಾಗಿದೆ. ಈ ಕಾರಿನ ಇಂಟಿರೀಯರ್ ಕಸ್ಟಮೈಸ್ ಗ್ರಾಹಕರು ತಮ್ಮ ಮನಸ್ಸಿಗೆ ಬಂದ ಹಾಗೆ ಮಾಡುವ ಅವಕಾಶ ಕೂಡಾ ಇದೆ.
ಆಪಲ್ ಕಾರ್ಫ್ಲೈ, ಆಟೋ, ಹೆಡ್ ಅಪ್ ಡಿಸ್ಪ್ಲೇ, ಆಕ್ಟಿವ್ ಕ್ರೂಸ್ ಕಂಟ್ರೋಲ್, ಸ್ಟಾಪ್ ಮತ್ತು ಗೋ ಫಂಕ್ಷನ್ ಸಹ ಸ್ಟ್ಯಾಂಡರ್ಡ್ ಮಾದರಿಯಲ್ಲಿ ಲಭ್ಯವಿದೆ. ಈ ಕಾರು 8.8-ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, 5.5-ಇಂಚಿನ MID ಡಿಸ್ಪ್ಲೇ, Apple CarPlay, Android Auto, ಹೆಡ್-ಅಪ್ ಡಿಸ್ಪ್ಲೇ, ಸಕ್ರಿಯ ಕ್ರೂಸ್ ಅನ್ನು ಹೊಂದಿದೆ.
184 ಎಚ್ಪಿ ಎಲೆಕ್ಟ್ರಿಕ್ ಮೋಟಾರು ಹೊಂದಿದ್ದು, ಸ್ಟ್ಯಾಂಡರ್ಡ್ ಕಾರಿನ ರೀತಿ ಈ ಕಾರು ರೂಪು ಗೊಂಡಿದೆ. ಇದರ ಬ್ಯಾಟರಿ ಪ್ಯಾಕ್ ಬಗ್ಗೆ ಮಾತನಾಡುವುದಾದರೆ 32.6 kWh ಹೊಂದಿದೆ. ಈ ಕಾರು 7.3 ಸೆಕೆಂಡುಗಳಲ್ಲಿ 100 ಕಿಮೀ ವೇಗವನ್ನು ಕ್ರಮಿಸುತ್ತದೆ. ಈ ಕಾರು 8.7 ಸೆಕೆಂಡುಗಳಲ್ಲಿ 100 ಕಿಮೀ ವೇಗವನ್ನು ಪಡೆಯುತ್ತದೆ ಎಂದರೆ ನೀವು ನಂಬುತ್ತೀರಾ. ಬಿಎಂಡಬ್ಲ್ಯು ನ ಈ ಕಾರು ನಿಜಕ್ಕೂ ಹಲವಾರು ವೈಶಿಷ್ಟ್ಯತೆಗಳ ಆಗರ ಎಂದೇ ಹೇಳಬಹುದು.
ಈ ಕಾರಿನ ಬೆಲೆ ರೂ.52.5ಲಕ್ಷ ವಾಗಿದ್ದು, ಸದ್ಯಕ್ಕೆ ಇದು ಭಾರತದಲ್ಲಿ ಲಭ್ಯವಾಗುವ ಸಂಭವನೀಯತೆ ಇಲ್ಲ ಎನ್ನಬಹುದು. ಈ ಕಾರುಗಳು ಸದ್ಯಕ್ಕೆ ಯುರೋಪಿಯನ್ ಮಾರುಕಟ್ಟೆಗಳಲ್ಲಿ ಲಭ್ಯವಿದೆ ಎಂದು ವರದಿಯಾಗಿದೆ. ಹಾಗೆನೇ ಜಾಗತಿಕ ಮಾರುಕಟ್ಟೆಗೆ ಸದ್ಯಕ್ಕೆ ಲಭ್ಯವಿಲ್ಲ ಎಂದು ಹೇಳಲಾಗಿದೆ. ಭಾರತದಲ್ಲಿ ಈ ಮಿನಿ ಕೂಪರ್ ಕಂಪನಿಯು ಕೂಪರ್ 3-ಡೋರ್ ಕಾರಿನ ಬೆಲೆಯನ್ನು ರೂ.41.2 ಲಕ್ಷಕ್ಕೆ ಫಿಕ್ಸ್ ಮಾಡಿದೆ. ಆದರೆ, ಕಂಟ್ರಿಮ್ಯಾನ್ ಕಾರಿನ ಬೆಲೆ ರೂ.47.4 ಲಕ್ಷಕ್ಕೆ ಮಾರಾಟ ಮಾಡುವ ನಿರ್ಧಾರವನ್ನು ಕಂಪನಿ ತೆಗೆದುಕೊಂಡಿದೆ ಎಂದು ವರದಿಯಾಗಿದೆ.