ರೋಮ್ಯಾನ್ಸ್‌ ಮಾಡೋಕೆ 30ದಿನದ ಭರ್ಜರಿ ರಜೆ ನೀಡುತ್ತೆ ಈ ದೇಶ! ಕಾರಣವೇನು?

Married Couple Romance Leave: ಮದುವೆ (Marriage)ಹೊಸ ಜೀವನಕ್ಕೆ ಮುನ್ನುಡಿ ಬರೆಯುವವರ ಪಾಲಿಗೆ ಅತ್ಯಂತ ವಿಶಿಷ್ಟ ದಿನ. ಮದುವೆ ಎಂದರೆ ಸಾಕು ಮನೆಯಲ್ಲಿ ಹಬ್ಬದ ವಾತಾವರಣ. ಆದರೆ ಈ ಕೆಲಸದ ನಡುವೆ ಒಮ್ಮೆ ರಜೆ(Leave) ಸಿಕ್ಕರೆ ಸಾಕು ಎಂದು ಅಂದುಕೊಳ್ಳುವ ವಧು ವರರಿಗೆ ಕೆಲಸದ ನಡುವೆ ಮನೆಯವರೊಂದಿಗೆ ಕಾಲ ಕಳೆಯಲಾಗದೆ ಪರಿತಪಿಸುವವರೆ ಹೆಚ್ಚು. ಈ ನಡುವೆ ಬಾಸ್ ಬಳಿ ಮನವಿ ಮಾಡಿ ರಜೆ ಪಡೆಯೋದೆ ದೊಡ್ಡ ಟಾಸ್ಕ್. ಮದುವೆ ಎಂದಾಗ ಅಬ್ಬಬ್ಬಾ ಅಂದರೆ 15 ದಿನ ರಜೆ ಸಿಗಬಹುದು. ಆದರೆ, ಈ ರಜೆ ಪಡೆಯೋದಕ್ಕೆ ಏನೆಲ್ಲಾ ಹರಸಾಹಸ ಪಡಬೇಕು ಅನ್ನೋದು ಅವರಿಗಷ್ಟೇ ಗೊತ್ತು. ಆದರೆ , ಇದೊಂದು ದೇಶದಲ್ಲಿ ವಧು ವರರಿಗೆ ಮದುವೆಗೆ ಭರ್ಜರಿ ಗಿಫ್ಟ್ ಸಿಕ್ಕಿದೆ. ಅದೇನು ಅಂತೀರಾ?? ಹಾಗಿದ್ರೆ ಈ ಕಹಾನಿ ನೀವು ಓದಲೇಬೇಕು.

ಮದುವೆ ಮತ್ತು ಹನಿಮೂನ್ ಆಚರಿಸಲು ಈ ದೇಶದಲ್ಲಿ ಸ್ಪೆಷಲ್ ರಜೆ ಕೂಡ ನೀಡುತ್ತಾರಂತೆ. ನಿಮ್ಗೆ ಕೇಳಿದಾಗ ಅಚ್ಚರಿ ಎನಿಸಿದರೂ ಕೂಡ ನಿಜ ಕಣ್ರೀ!! ಈ ದೇಶದಲ್ಲಿ ವಧು ವರರಿಗೆ ಭರ್ಜರಿ ಆಫರ್. ಮದುವೆ ಹನಿಮೂನ್ ಲೆಕ್ಕದಲ್ಲಿ ಜಾಲಿ ಮಾಡೋದಕ್ಕೆ ಒಂದು ತಿಂಗಳು ರಜೆ ( Married Couple Romance Leave )ಸಿಗುತ್ತೆ. ಯಾರಿಗುಂಟು ಯಾರಿಗಿಲ್ಲ ಅನ್ನೋ ಹಾಗೆ ಈ ಆಫರ್ ನೀಡಿರುವ ದೇಶ ಯಾವುದು ಗೊತ್ತಾ? ಅಷ್ಟಕ್ಕೂ ಈ ರೀತಿ ಆಫರ್ ಕೊಡೋದಕ್ಕೆ ಕಾರಣ ಕೂಡ ಇದೆ.

ಚೀನಾ ಹೊಸ ನಿಯಮ (Rules)ವನ್ನು ಪರಿಚಯಿಸಿದ್ದು, ಇದು ಜಸ್ಟ್ ಮ್ಯಾರೀಡ್ ಕಪಲ್ ಹಾಗೂ ಭಾವೀ ವಧು-ವರರ (Bride-groom) ಮೊಗದಲ್ಲಿ ವಿಶೇಷ ಖುಷಿ ತರಿಸುವಲ್ಲಿ ಯಶಸ್ವಿಯಾಗಿದೆ. ಎಷ್ಟೋ ಸಲ ರಜೆ ಸಿಗದೇ ನೂತನ ವಧು ವರರು ಪರಸ್ಪರ ಜೊತೆಯಾಗಿ ಕಾಲ ಕಳೆಯಲು ಕೂಡ ಆಗದ ಸ್ಥಿತಿ ನಿರ್ಮಾಣವಾಗುತ್ತದೆ. ಆದರೆ, ಚೀನಾ ದೇಶದಲ್ಲಿ ಇಳಿಮುಖವಾಗುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸುವ ಸಲುವಾಗಿ ಚೀನಾ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ.ಮದುವೆಯಾದ ದಂಪತಿಗೆ (Couple) ರೋಮ್ಯಾನ್ಸ್ ಮಾಡುವ ಸಲುವಾಗಿ 30 ದಿನಗಳ ವೇತನ ಸಹಿತ ರಜೆ ನೀಡುವುದಾಗಿ ಚೀನಾ ಸರ್ಕಾರ (China government) ಘೋಷಿಸಿದೆ.

ಇದರ ಜೊತೆಗೆ ಮತ್ತೆ ಕೆಲವು ಬಲ್ಲ ಮೂಲಗಳ ಪ್ರಕಾರ, ಯುವಜನತೆಯನ್ನು ಮದುವೆಯಾಗಲೂ ಪ್ರೇರೇಪಿಸುವ ನಿಟ್ಟಿನಲ್ಲಿ ಈ ಯೋಜನೆಗೆ ಚೀನಾ ಸರ್ಕಾರ ಮುಂದಾಗಿದೆ ಎನ್ನಲಾಗುತ್ತಿದೆ. ಚೀನಾದಲ್ಲಿ ಈ ಮೊದಲು ಮದುವೆಯಾದವರಿಗೆ ಮೂರು ದಿನಗಳ ರಜೆ ನೀಡಲಾಗುತ್ತಿತ್ತು. ಸದ್ಯ ಸಿಚುವಾನ್‌ನಲ್ಲಿ, ನವವಿವಾಹಿತ ದಂಪತಿಗಳು ಇನ್ನೂ ಮೂರು ದಿನಗಳ ರಜೆಯನ್ನು ನೀಡಲಾಗುತ್ತಿದೆ. ಮತ್ತೊಂದು ಮುಖ್ಯ ವಿಚಾರವೇನೆಂದರೆ ಈ ಹೊಸ ತೀರ್ಮಾನ ಎಲ್ಲ ಪ್ರಾಂತ್ಯದಲ್ಲಿ ಜಾರಿಯಾಗಿಲ್ಲ ಎನ್ನಲಾಗಿದೆ. ಚೀನಾದ ಕೆಲವು ಭಾಗಗಳಲ್ಲಿ ಈ ವಿಶೇಷ 30 ದಿನಗಳ ರಜೆ ನೀಡಲಾಗುತ್ತಿದ್ದು, ಇದು ಗನ್ಸು ಮತ್ತು ಶಾಂಕ್ಸಿ ಪ್ರಾಂತ್ಯಗಳನ್ನು ಒಳಗೊಂಡಿದೆ ಇದರ ಜೊತೆಗೆ, ಶಾಂಘೈ 10 ದಿನಗಳ ರಜೆಯನ್ನು ನೀಡಲಾಗುತ್ತಿದೆ.

ಈಗ ಸಹಜವಾಗಿ ನಿಮಗೆಲ್ಲ ಚೀನಾ ಸರ್ಕಾರ ಈ ರೀತಿ ನಿರ್ಣಯ ಕೈಗೊಳ್ಳಲು ಕಾರಣವೇನು ಎಂಬ ಕುತೂಹಲ ಸೃಷ್ಟಿಸಿರಬಹುದು. ಚೀನಾದಲ್ಲಿ ಜನಸಂಖ್ಯೆಯು (Population) ವೇಗವಾಗಿ ಕಡಿಮೆಯಾಗುತ್ತಿದ್ದು ಇದನ್ನು ಕಂಡು ಗಾಬರಿಗೊಂಡ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸರ್ಕಾರ ಹೊಸ ಪ್ರಯತ್ನಕ್ಕೆ ಮುಂದಾಗಿದೆ. ಚೀನಾದಲ್ಲಿ ವಯಸ್ಸಾದವರ ಜನಸಂಖ್ಯೆಯಲ್ಲಿ ಏರಿಕೆ ಕಂಡುಬರುತ್ತಿದ್ದು ಇದರಿಂದಾಗಿ ಜನಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅನೇಕ ಕ್ರಮಗಳನ್ನು ಕೈಗೊಳ್ಳಲು ಚೀನಾ ಸರ್ಕಾರ ಮುಂದಾಗಿದೆ. ಜನ ಸಂಖ್ಯೆ ಹೆಚ್ಚಿಸುವ ಸಲುವಾಗಿ ಮದುವೆಯಾದವರಿಗೆ ರೋಮ್ಯಾನ್ಸ್ ಮಾಡಲು 30 ದಿನಗಳ ವೇತನ ಸಹಿತ ರಜೆ ನೀಡಲು ಚೀನಾ ಸರ್ಕಾರ ತೀರ್ಮಾನ ಕೈಗೊಂಡಿದೆ.

Leave A Reply

Your email address will not be published.