Mindful Bath : ಸ್ನಾನ ನಿಮ್ಮ ದೇಹ, ಮನಸ್ಸಿಗೆ ಎಷ್ಟೊಂದು ಮುಖ್ಯ ಎನ್ನುವುದು ಗೊತ್ತೇ? ಸರಿಯಾದ ರೀತಿಯಲ್ಲಿ ಸ್ನಾನ ಮಾಡೋದು ಹೇಗೆ? ಇಲ್ಲಿದೆ ವಿವರ

Mindful Bath: ಸ್ನಾನ ಮಾಡಿದರೆ ದೇಹ, ಮನಸ್ಸು ಎರಡಕ್ಕೂ ಆಹ್ಲಾದಕರ ಭಾವನೆ ಸಿಗುತ್ತದೆ. ದೇಹ ಶುಚಿಯಾಗುವುದರ ಜೊತೆಗೆ ಮನಸ್ಸು ಕೂಡ ಪ್ರಶಾಂತವೆನಿಸುತ್ತದೆ. ಕೆಲವರಂತು ಅವಸರದಲ್ಲಿ, ಬೇಗನೆ ಸ್ನಾನ ಮಾಡಿ ಬರುತ್ತಾರೆ. ಆದರೆ ಸ್ನಾನ ಮನಃಪೂರ್ವಕವಾಗಿ, ಆಹ್ಲಾದಕರ ಭಾವದಿಂದ ಮಾಡಬೇಕು ಎಂದು ವಿಜ್ಞಾನ ಮತ್ತು ಆಯುರ್ವೇದ ಹೇಳುತ್ತದೆ. ಹಾಗಾದ್ರೆ, ಮನಃಸ್ಫೂರ್ತಿಯಾಗಿ ಸ್ನಾನ (Mindful Bath) ಮಾಡುವುದು ಹೇಗೆ? ಎಂಬುದು ತಿಳಿಯೋಣ.

• ಆಹ್ಲಾದಕರ ಅಥವಾ ಮನಃಪೂರ್ತಿಯಾಗಿ ಸ್ನಾನ ಮಾಡಬೇಕೆಂದರೆ ಕನಿಷ್ಠ 20 ನಿಮಿಷಗಳ ಕಾಲ ಸ್ನಾನ ಮಾಡಬೇಕು. 20 ನಿಮಿಷಗಳ ಕಾಲ ಸ್ನಾನ ಮಾಡುವುದರಿಂದ ದೇಹ ಹಾಗೂ ಮನಸ್ಸು ಎರಡಕ್ಕೂ ನೆಮ್ಮದಿ, ಆಹ್ಲಾದಕರ ಭಾವನೆ ಸಿಗುತ್ತದೆ. ಸ್ನಾನದ ಸಮಯದಲ್ಲಿ ಮನಸ್ಸಿನ ಗೊಂದಲ, ಒತ್ತಡ, ಚಿಂತೆಗಳು ದೂರಾಗುತ್ತದೆ. ಬಿಸಿನೀರಿನ ಸ್ನಾನವು ಮೆದುಳಿನ ಥೀಟಾ ಅಲೆಗಳನ್ನು ಪ್ರಚೋದಿಸುತ್ತದೆ. ಇದು ಮನಸ್ಸಿಗೆ ವಿಶ್ರಾಂತಿ, ಶಾಂತಿ ಹಾಗೂ ಹಿತ ನೀಡುತ್ತದೆ. ಇದರಿಂದ ಸ್ನಾನ ಮಾಡಿ, ಹೊರಬರುವಾಗ ದೇಹದ ಜೊತೆ ಮನಸ್ಸೂ ಶುಭ್ರವಾಗಿರುತ್ತದೆ.

• ಹಾಗೆಯೇ ಅವಸರದಲ್ಲಿ ಸ್ನಾನದ ಕೊಠಡಿಗೆ ಹೋಗಬೇಡಿ, ಬದಲಾಗಿ ಎಲ್ಲಾ ಒತ್ತಡ, ಕೆಲಸಗಳನ್ನು ದೂರವಿರಿಸಿ, ಅದರ ಯೋಚನೆ ತಳ್ಳಿಹಾಕಿ, ನಂತರ ಸ್ನಾನಕ್ಕೆ ಹೋಗಿ. ಸ್ನಾನವು ಕೂಡ ಮಾನಸಿಕ ಆರೋಗ್ಯದ ಒಂದು ಭಾಗವಾಗಿದ್ದು, ಇದು ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಹಾಗೆಯೇ ನಿಮ್ಮ ಮನಸ್ಸಿಗೆ ಖುಷಿ ಎನ್ನಿಸುವಷ್ಟು ಕಾಲ ಸ್ನಾನದ ಕೊಠಡಿಯಲ್ಲಿ ಸಮಯ ಕಳೆಯಿರಿ.

• ಹವಾಗುಣಕ್ಕೆ ತಕ್ಕ ಹಾಗೆ ಸ್ನಾನದ ನೀರಿನ ಹದ ಇರಲಿ. ಬೇಸಿಗೆಯಲ್ಲಿ ಅತಿ ಬೆಚ್ಚನೆಯ ನೀರು ಹಾಗೂ ಚಳಿಗಾಲದಲ್ಲಿ ತಣ್ಣನೆಯ ನೀರು ಬಳಸಬೇಡಿ. ಸ್ನಾನಕ್ಕೂ ಮೊದಲು ನೀರಿಗೆ ಪರಿಮಳದ ಎಣ್ಣೆಯನ್ನು ಬೆರೆಸಿ, ಇದರಿಂದ ದೇಹಕ್ಕೂ ಮನಸ್ಸಿಗೂ ಖುಷಿ ನೀಡುತ್ತದೆ. ಸ್ನಾನ ಮಾಡುವಾಗ ಮನಸ್ಸು ದೇಹ ಎರಡಕ್ಕೂ ನೆಮ್ಮದಿ ಸಿಗುವಷ್ಟು ಹೊತ್ತು ಮಾಡಬೇಕು. ಹಾಗಾಗಿ ಸಾಕಷ್ಟು ನೀರು ಮೊದಲೇ ತುಂಬಿಟ್ಟಿರಿ. ಹಾಗೇ ಮನಃಸ್ಫೂರ್ತಿಯಾಗಿ ಸ್ನಾನ ಮಾಡಿ.

• ಸ್ನಾನ ಮಾಡಬೇಕಾದರೆ ಸ್ನಾನದ ಕೋಣೆ ಸ್ವಚ್ಛವಾಗಿಲ್ಲ ಅಂದ್ರೆ ಹೇಗೆ. ಸ್ನಾನದ ಕೋಣೆ ಸ್ವಚ್ಛವಾಗಿಲ್ಲದಿದ್ದರೆ, ಮನಃಸ್ಫೂರ್ತಿಯಾಗಿ ಸ್ನಾನ ಮಾಡಲು ಇಷ್ಟವಾಗುವುದಿಲ್ಲ. ಹಾಗಾಗಿ ಸ್ನಾನದ ಕೋಣೆಗೆ ಹೋಗುವ ಮೊದಲು, ಕೊಠಡಿ ಚೆನ್ನಾಗಿ ಸ್ವಚ್ಛ ಮಾಡಿಕೊಂಡು ನಂತರ ಸ್ನಾನ ಮಾಡಿ.

Leave A Reply

Your email address will not be published.