ಕಾರ್ ಕ್ರಾಷ್‌ ಟೆಸ್ಟ್ ಹಿಂದಿನ ಕಾಲದಲ್ಲಿ ಹೇಗಿತ್ತು? ಇದೊಂದು ಕುತೂಹಲಕಾರಿ ಕಥೆ!

Car Crash Test : ಇಂದಿನ ದಿನಗಳಲ್ಲಿ ಓಡಾಟ ನಡೆಸಲು ವಾಹನಗಳು ಅತ್ಯಗತ್ಯವಾಗಿದ್ದು, ಪ್ರತಿಯೊಬ್ಬರ ಮನೆಯಲ್ಲಿ ಕೂಡ ವಾಹನಗಳು ಇರೋದು ಸಾಮಾನ್ಯವಾಗಿ ಬಿಟ್ಟಿದೆ. ಇತ್ತೀಚಿನ ದಿನಗಳಲ್ಲಿ ಪ್ರೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಹೆಚ್ಚಳ ಕಂಡುಬರುತ್ತಿರುವ ಹಿನ್ನೆಲೆ ಹೆಚ್ಚಿನವರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಆದರೂ ಕೆಲ ಕಾರು ತಯಾರಿಕಾ ಕಂಪನಿಗಳು ಆಗಾಗ ಹೊಸ ಮಾದರಿಗಳನ್ನು ಪರಿಚಯಿಸಿ ಜನರ ಗಮನ ಸೆಳೆಯುವತ್ತ ಲಕ್ಷ್ಯ ವಹಿಸಿ ಜನ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಈಗ ತಂತ್ರಜ್ಞಾನ ಕ್ಷೇತ್ರದಲ್ಲಿ ಆಗಿರುವ ಬೆಳವಣಿಗೆಯ ಬಗ್ಗೆ ನಿಮಗೆ ಗೊತ್ತೇ ಇದೆ. ಆದರೆ, ವಾಹನಗಳು ಶುರುವಾದ ಕಾಲದಲ್ಲಿ ಕಾರುಗಳ ಬಳಕೆ ಆರಂಭವಾದ ವೇಳೆ ಕಾರು ಕ್ರಾಶ್ ಟೆಸ್ಟ್ (Car Crash Test) ಹೇಗೆ ಮಾಡುತ್ತಿದ್ದರು ಅನ್ನುವ ಕುತೂಹಲ ಹೆಚ್ಚಿನವರಿಗೆ ಕಾಡಿರಬಹುದು. ಆಗೆಲ್ಲ ಕಾರುಗಳ ಬಳಕೆಯೇ ವಿರಳ ಎಂದ ಮೇಲೆ ಈ ಟೆಸ್ಟ್ ಗಳೆಲ್ಲ ಹೇಗೆ ನಡೆಸಲಾಗುತ್ತಿತ್ತು ಎಂಬ ಮಾಹಿತಿ ಇಲ್ಲಿದೆ ನೋಡಿ.

ಪ್ರಸ್ತುತ ದಿನಗಳಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾರುಗಳಿಗೆ ಕ್ರ್ಯಾಶ್ ಟೆಸ್ಟ್ಗಳನ್ನು ಮಾಡುವ ಸಲುವಾಗಿ ಗ್ಲೋಬಲ್ ಎನ್ಸಿಎಪಿ ಮತ್ತು ಯುರೋ ಎನ್ಸಿಎಪಿ ಎಂಬ ಎರಡು ಖಾಸಗಿ ಏಜೆನ್ಸಿಗಳು ಕಾರ್ಯ ನಿರ್ವಹಿಸುತ್ತಿವೆ. ಈ ಪ್ರಕ್ರಿಯೆ ಮೂಲಕ ಕಾರನ್ನು ಕ್ರ್ಯಾಶ್ ಮಾಡಿದಾಗ ಉಂಟಾಗುವ ಹಾನಿಯನ್ನು ಆಧರಿಸಿ ಲೆಕ್ಕಚಾರ ಮಾಡಿ ಸುರಕ್ಷತೆಯ ಮೇಲೆ ರೇಟಿಂಗ್ ನೀಡಲಾಗುತ್ತದೆ.ಕಾರು ಕ್ರ್ಯಾಶ್ ಪರೀಕ್ಷೆಗೆ ಒಳಪಡಿಸಿದ ಸಂದರ್ಭದಲ್ಲಿ ಕಾರು ಎಷ್ಟರಮಟ್ಟಿಗೆ ಸುರಕ್ಷಿತವಾಗಿದೆ ಎಂಬುದನ್ನು ಪರೀಕ್ಷಿಸಲು ಕಾರಿನೊಳಗೆ ಡಮ್ಮಿಗಳನ್ನು ಇರಿಸುವುದು ವಾಡಿಕೆ. ಈ ನಡುವೆ ಭಾರತದಲ್ಲಿ ಭಾರತ್ ಎನ್ ಸಿಎಪಿ ಎಂಬ ಸಂಸ್ಥೆಯನ್ನು ಸ್ಥಾಪಿಸುವ ವ್ಯವಸ್ಥೆ ಕೂಡ ಭರದಿಂದ ಸಾಗುತ್ತಿದೆ. ಹಾಗಿದ್ರೆ ಈ ಹಿಂದೆ ಕ್ರಾಶ್ ಟೆಸ್ಟ್ ಹೇಗಿತ್ತು? ಎಂಬ ಡೀಟೇಲ್ಸ್ ನಿಮಗಾಗಿ.

1900 ರ ಬಳಿಕ ಭಾರತದಲ್ಲಿ ಆಟೋಮೊಬೈಲ್ಗಳ ಬಳಕೆ ಹೆಚ್ಚು ವ್ಯಾಪಕವಾಗಿ ಹಬ್ಬಿತ್ತು. ವಾಹನ ಬಳಕೆ ಮಾಡಲು ಆರಂಭಿಸಿದ ಕಾಲಘಟ್ಟದಲ್ಲಿ ಕಾರುಗಳು ಕೇವಲ ಬಳಕೆ ಮಾಡುವುದಕ್ಕಿಂತ ಹೆಚ್ಚಾಗಿ ಅದನ್ನು ಪ್ರತಿಷ್ಠೆಗೆ ತೋರ್ಪಡಿಸುವ ಐಷಾರಾಮಿ ಸಾಧನಗಳ ಪಟ್ಟಿಯಲ್ಲಿ ಗುರುತಿಸಲಾಗುತ್ತಿತ್ತು. ಅಷ್ಟೇ ಅಲ್ಲದೆ, ವಾಹನಗಳು ಬಳಕೆಗೆ ಯೋಗ್ಯವೇ? ಸುರಕ್ಷಿತವೇ ಎಂಬ ವಿಚಾರದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಒಂದು ವೇಳೆ ಐಷಾರಾಮಿ ಕಾರನ್ನು ಅಪಘಾತ ನಡೆಸಿ ಪರೀಕ್ಷೆ ನಡೆಸಿದರೆ ಇವರಿಗೇನೋ ತಲೆ ಸರಿಯಿಲ್ಲ ಎಂದು ಆಗಿನ ಕಾಲದ ಜನರು ಭಾವಿಸುತ್ತಿದ್ದರಂತೆ.

ಕಾರುಗಳ ಖರೀದಿ ಬಳಕೆ ಹೆಚ್ಚುತ್ತಾ ಹೋದಂತೆ ಕ್ರಾಶ್ ಟೆಸ್ಟ್ ಬಗ್ಗೆ ಕೆಲ ಜನರು ತಿಳಿಯಲು ಉತ್ಸುಕರಾಗಿ ಪರೀಕ್ಷೆಗಳನ್ನು ನಡೆಸಲು ಮುಂದಾದರು. ಹೀಗಾಗಿ, 1924 ರ ಸುಮಾರಿಗೆ ಜನರಲ್ ಮೋಟಾರ್ಸ್ ತಮ್ಮ ಕಾರುಗಳನ್ನು ಪರೀಕ್ಷಿಸುವ ಸಲುವಾಗಿ ಆಟೋಮೊಬೈಲ್ ಉದ್ಯಮದಲ್ಲಿ ಮೊದಲ ಪರೀಕ್ಷಾ ಕೇಂದ್ರವಾಗಿ ಸುಮಾರು 4 ಎಕರೆ ಪ್ರದೇಶದಲ್ಲಿ ಪರೀಕ್ಷಾ ಕೇಂದ್ರ ನಿರ್ಮಾಣ ಮಾಡಿದ್ದರು. ಈ ಬಳಿಕ ಅನೇಕ ಪ್ರಯೋಗ ನಡೆದು,1934 ರಲ್ಲಿ ಈ ಕೇಂದ್ರದಲ್ಲಿ ಜನರಲ್ ಮೋಟಾರ್ಸ್ ಕಂಪನಿಯು ಈ ಕಾರಿನ ಗುಣಮಟ್ಟವನ್ನು ಪರೀಕ್ಷೆ ನಡೆಸಿದ್ದು, ಇದು ವಿಶ್ವದ ಮೊದಲ ಅಧಿಕೃತ ಕ್ರ್ಯಾಶ್ ಟೆಸ್ಟ್ ಎನ್ನಲಾಗಿದೆ.

ಹೀಗೆ ಹೊಸ ಹೊಸ ಅನ್ವೇಷಣೆಗಳು ನಡೆದು, ಸೆಪ್ಟೆಂಬರ್ 10, 1959 ರಂದು ಲಂಡನ್ನಲ್ಲಿ ಮೊದಲ ಮಿನಿ ಕಾರನ್ನು ಬಿಡುಗಡೆ ಮಾಡಿತ್ತು. ಈ ವೇಳೆ ಬೆಂಝ್ ಕಂಪನಿಯು ಎದುರಾಳಿ ಕಂಪನಿಗೆ ಟಕ್ಕರ್ ನೀಡುವ ಸಲುವಾಗಿ ತನ್ನ ಕಾರನ್ನು ಜರ್ಮನಿಯಲ್ಲಿ ಕ್ರ್ಯಾಶ್ ಟೆಸ್ಟ್ ಮಾಡಿಸಲು ತಯಾರಿ ನಡೆಸಿತ್ತು. ಇದು ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಮರ್ಸಿಡಿಸ್-ಬೆಂಝ್ ಕಾರು ಅಪಘಾತ ಪರೀಕ್ಷೆಗೆ ಹೊಸ ರೂಪು ರೇಷೆಗಳನ್ನು ತಯಾರಿಸಲಾಯಿತು.

ಈ ಪರೀಕ್ಷೆ ನಡೆಸುವ ಸಲುವಾಗಿ, ಕಾರನ್ನು ವೇಗವಾಗಿ ತಂದು ಏರೋಪ್ಲೇನ್ ನಲ್ಲಿಟ್ಟು ಕಾರನ್ನು ಹಾರಿಸಿ ಪರೀಕ್ಷೆ ನಡೆಸಬೇಕಾಗಿತ್ತು. ಅಷ್ಟೇ ಅಲ್ಲದೆ, ಇದು ಎಷ್ಟು ಅಪಾಯಕಾರಿಯಾಗಿತ್ತು ಎಂದರೆ, ಕಾರಿನ ಚಾಲಕನ ಪಕ್ಕದ ಬಾಗಿಲು (Dore) ತೆಗೆದಿರಿಸಲಾಗುತ್ತಿತ್ತು. ಹೀಗಿದ್ದಾಗ ಮಾತ್ರವೇ ಕ್ಯಾಮೆರಾದ ಮೂಲಕ ದೂರದಿಂದ ಹಾನಿಯಾಗಿರುವ ದೃಶ್ಯಗಳನ್ನೂ ಸೆರೆ ಹಿಡಿಯಲು ಸಾಧ್ಯವಾಗುತ್ತಿತ್ತು. ಇದಲ್ಲದೆ, ಕಾರನ್ನು ಯಾರೂ ಕಾರು ಓಡಿಸಲಾಗದೆ ಇದ್ದ ಹಿನ್ನೆಲೆ ವಿಮಾನ ಕಟ್ಟಲು ಬಳಕೆ ಮಾಡುವಂತಹ ಹಗ್ಗ ಎಳೆಯುವ ಸಾಧನವನ್ನು ತರಿಸಿ ಕಾರಿಗೆ ಹಗ್ಗ ಕಟ್ಟಿ ಕಾರನ್ನು ವೇಗವಾಗಿ ಎಳೆದು ಎಗರಿಸಲಾಗುತ್ತಿತ್ತಂತೆ. ಹಿಂದಿನ ಕಾಲದಲ್ಲಿ ಕಾರುಗಳಿಗೆ ಸೀಟ್ ಬೆಲ್ಟ್ ಕೂಡ ಇರಲಿಲ್ಲ. ಕ್ರ್ಯಾಶ್ ಟೆಸ್ಟ್ ಬಳಿಕ, ತಲೆ, ತೋಳು, ಕಾಲು ಮತ್ತು ಬೆನ್ನು ಮುಂತಾದ ಕಡೆಗಳಲ್ಲಿ ಉಂಟಾಗುವ ಪ್ರಭಾವವನ್ನು ಆಧರಿಸಿ ಪರೀಕ್ಷೆ ನಡೆಯುತ್ತಿತ್ತು.

ಈಗ ಕಾರಿನಲ್ಲಿ ಪ್ರಯಾಣಿಕರ ಬದಲಿಗೆ ಪರೀಕ್ಷೆ ನಡೆಸಲು ಏನು ಮಾಡುತ್ತಿದ್ದರು? ಎಂಬ ಪ್ರಶ್ನೆ ಸಹಜವಾಗಿ ಮೂಡಿರಬಹುದು.ಕಾರಿನಲ್ಲಿದ್ದ ಪ್ರಯಾಣಿಕರ ತೂಕಕ್ಕೆ ಅನುಸಾರವಾಗಿ ಮರಳು ತುಂಬಿದ 3 ಚೀಲಗಳನ್ನು ಕಾರಿನಲ್ಲಿ ಇರಿಸಲಾಗುತ್ತದೆ. ಡ್ರೈವರ್ ಕುಳಿತುಕೊಳ್ಳುವ ಸ್ಥಳದಲ್ಲಿ ಡಮ್ಮಿಯನ್ನು ಅಳವಡಿಸಿದ ಬಳಿಕ ಹಲವು ಕಂಪನಿಗಳು ಈ ಕ್ರ್ಯಾಶ್ ಟೆಸ್ಟಿಂಗ್ ಅನ್ನು ಮಾಡುತಿದ್ದರು. ಈ ಪರೀಕ್ಷೆ ನಡೆಸುವ ಸಲುವಾಗಿ, Mercedes-Benz 190 ಅನ್ನು ಪರೀಕ್ಷೆಗೆ ಒಳಪಡಿಸಿ ಮುಂದಿನ ಪರೀಕ್ಷೆಯಲ್ಲಿ, ಕಾರನ್ನು 17 ಟನ್ ತಡೆಗೋಡೆಯ ವಿರುದ್ಧ ಪರೀಕ್ಷಿಸಲಾಗಿತ್ತು.

ಸಾಮಾನ್ಯವಾಗಿ ಅಪಘಾತ ಪರೀಕ್ಷೆಯು ಕಾರನ್ನು ಸಣ್ಣ ಬೆಟ್ಟದ ಮೇಲೆ ಓಡಿಸುವ ಇಲ್ಲವೇ ಕಾರು ಸಮೀಪಿಸುತ್ತಿರುವಾಗ ಚಾಲಕನು ಕಾರಿನಿಂದ ಜಿಗಿಯುವ ಪ್ರಕ್ರಿಯೆ ನಡೆಸಲಾಗಿತ್ತು. ಕೆಲವು ಬಾರಿ, ಸತ್ತ ಜೀವಿಗಳ ಅಂದರೆ ಹಂದಿಗಳು ಇಲ್ಲವೇ ಚಿಂಪಾಜಿ ಬಳಸಿಕೊಂಡು ಮನುಷ್ಯರ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂದು ಪರೀಕ್ಷೆ ನಡೆಸಲಾಗುತ್ತಿತ್ತು. ಹೀಗೆ ಅನೇಕ ರೀತಿಯ ಪ್ರಯೋಗಗಳನ್ನು ನಡೆಸಲಾಗಿ ರಸ್ತೆ ಅಪಘಾತಗಳನ್ನು ತಡೆಯುವ ಆಯಾಮದಲ್ಲಿ ಕೂಡ ಅನ್ವೇಷಣೆ ನಡೆದು ಕಾರ್ ಕ್ರ್ಯಾಶ್ ಪರೀಕ್ಷೆಗಳಲ್ಲಿ ಡಮ್ಮಿಗಳ ಬಳಕೆ ಆರಂಭವಾಯಿತು. ಹೀಗೆ, 1952 ರಲ್ಲಿ ಸ್ಯಾಮ್ಯುಯೆಲ್ ಎಂಬಾತ ವಿಮಾನಗಳನ್ನು ತಯಾರಿಸುವ ಸಲುವಾಗಿ ಮೊದಲ ಬಾರಿಗೆ ಡಮ್ಮಿಗಳನ್ನು ಬಳಕೆ ಮಾಡಿದರಂತೆ. ಸದ್ಯ, ಈಗ ಕಾರಿನ ಕ್ರಾಶ್ ಟೆಸ್ಟ್ ಗಾಗಿ ಬಳಕೆ ಮಾಡುವ ಸಾಧನಗಳ ಬಗ್ಗೆ ನಿಮಗೆಲ್ಲ ಗೊತ್ತೇ ಇದೆ. ಆದರೆ, ಈ ಹಂತಕ್ಕೆ ಬರುವ ದಾರಿ ಸುಗಮವಾಗಿರಲಿಲ್ಲ ಅನ್ನೋದು ಅಷ್ಟೆ ಸತ್ಯ.

Leave A Reply

Your email address will not be published.