ಕಡಬ : ಇಬ್ಬರನ್ನು ಬಲಿ ಪಡೆದ ಕಾಡಾನೆ ಸೆರೆ ಹಿಡಿಯಲು ಮೈಸೂರು, ದುಬಾರೆಯಿಂದ ಆನೆಗಳ ಆಗಮನ

wild elephant in Kadaba:  ಕಡಬ :ಕುಟ್ರುಪ್ಪಾಡಿ ಗ್ರಾಮದ ರೆಂಜಿಲಾಡಿ ಸಮೀಪದ ನೈಲ ಸಮೀಪ ಸೋಮವಾರ ಮುಂಜಾವು ನಡೆದ ಕಾಡಾನೆ ದಾಳಿಯಿಂದ (wild elephant in Kadaba) ಇಬ್ಬರು ಬಲಿಯಾದ ಬೆನ್ನಲ್ಲೇ ಎಚ್ಚೆತ್ತುಕೊಂಡ ಅರಣ್ಯ ಇಲಾಖೆಯು ಕಾಡಾನೆಯನ್ನು ಸೆರೆಹಿಡಿಯಲು ಪಳಗಿದ ಆನೆಗಳನ್ನು ತರಿಸಲಾಗಿದೆ.

 

ಸೋಮವಾರ ರಾತ್ರಿಯೇ ಬೃಹತ್ ಲಾರಿಗಳ ಮೂಲಕ ಮೈಸೂರು ಹಾಗೂ ದುಬಾರೆಯಿಂದ ಐದು ಆನೆಗಳು ಆಗಮಿಸಿದ್ದು, ಮಂಗಳವಾರ ಬೆಳಗ್ಗಿನಿಂದ ಕಾಡಾನೆಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆ ನಡೆಯಲಿದೆ.

ಅರಣ್ಯ ಇಲಾಖೆಯು ಕಾಡಾನೆಯ ಚಲನವಲನ ಪತ್ತೆ ಹಚ್ಚಲು ಡ್ರೋನ್ ಬಳಸಿ ಮಾಹಿತಿ ಕಲೆ ಹಾಕಿತ್ತು. ಪೂರ್ವ ಸಿದ್ದತೆಯೊಂದಿಗೆ ಕಾಡಾನೆಯನ್ನು ಪತ್ತೆ ಹಚ್ಚಿ ಹಿಡಿದು ಬೇರೆಡೆ ಸ್ಥಳಾಂತರ ಮಾಡಲು ಅರಣ್ಯ ಇಲಾಖಾಧಿಕಾರಿಗಳು ಯೋಜನೆ ರೂಪಿಸಿದ್ದಾರೆ.

ಸೋಮವಾರ ಬೆಳಿಗ್ಗೆ ಕಾಡಾನೆಯು ಇಬ್ಬರನ್ನು ತಿವಿದು ಕೊಂದು ಹಾಕಿತ್ತು. ಆಕ್ರೋಶಗೊಂಡ ಸ್ಥಳೀಯರು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಾಡಾನೆಯನ್ನು ಸ್ಥಳಾಂತರಗೊಳಿಸದೆ ಮೃತದೇಹದ ಅಂತ್ಯಸಂಸ್ಕಾರ ನೆರವೇರಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಇದಕ್ಕೆ ಮಣಿದ ಅರಣ್ಯ ಇಲಾಖೆಯ ಅಧಿಕಾರಿಗಳು ಕಾಡಾನೆಯನ್ನು ಸ್ಥಳಾಂತರಿಸುವ ಭರವಸೆ ನೀಡಿದ್ದ ಹಿನ್ನೆಲೆಯಲ್ಲಿ ಮೃತದೇಹವನ್ನು ವಾರಸುದಾರರಿಗೆ ನೀಡಲಾಗಿತ್ತು.

ಅದರಂತೆ ಸೋಮವಾರ ಸಂಜೆಯೇ ಕಾಡಾನೆಯನ್ನು ಸೆರೆ ಹಿಡಿಯಲು ಪಳಗಿದ ಸಾಕಾನೆಗಳನ್ನು ಮೈಸೂರು, ದುಬಾರೆಯಿಂದ ತರಿಲಾಗಿದೆ.

Leave A Reply

Your email address will not be published.