Smartphone Rent : ಸ್ಮಾರ್ಟ್ ಫೋನ್ ಖರೀದಿಸುವವರಿಗೆ ಸಿಹಿ ಸುದ್ದಿ; ಬಾಡಿಗೆಗೆ ಸಿಗುತ್ತೆ ಈ ಸ್ಮಾರ್ಟ್ ಫೋನ್ ಗಳು!
Smartphone Rent : ಸ್ಮಾರ್ಟ್ ಫೋನ್ (smartphone) ಖರೀದಿಸಲು ಬಯಸುವವರಿಗೆ ಬಂಪರ್ ಸಿಹಿಸುದ್ದಿ. ಇಲ್ಲಿವರೆಗೂ ಮಾರುಟ್ಟೆಯಲ್ಲಿ ಇರುವ ನಿಮಗಿಷ್ಟವಾದ ಮೊಬೈಲ್ ಖರೀದಿ ಮಾಡುತ್ತಿದ್ದೀರಿ. ದುಬಾರಿಯೋ, ಅಗ್ಗವೋ ಬೆಲೆ ತೆತ್ತು ಒಂದು ಸ್ಮಾರ್ಟ್ ಫೋನ್ ಖರೀದಿಸಿ, ಅದು ಹಾಳಾಗುವವರೆಗೂ ಅಥವಾ ಬೇಡ ಎನಿಸುವವರೆಗೂ ಬಳಕೆ ಮಾಡಬೇಕಿತ್ತು. ಆದರೆ ಇನ್ನು ಹಾಗಲ್ಲ, ಇನ್ಮುಂದೆ ನಿಮಗೆ ಸ್ಮಾರ್ಟ್ಫೋನ್ ಗಳು ಬಾಡಿಗೆಗೂ (Smartphone Rent) ಸಿಗುತ್ತೆ. ನಿಮಗೆ ಬೇಕು ಎನಿಸಿದ ಹಲವು ಸ್ಮಾರ್ಟ್ ಫೊನ್ ಗಳನ್ನು ಬಳಕೆ ಮಾಡಬಹುದು.
ಹಾಗೆಯೇ ನೀವು ಸ್ಮಾರ್ಟ್ ಫೋನ್ ಬಾಡಿಗೆಗೆ (Smartphone Rent) ಪಡೆದರೆ, ಎಷ್ಟು ದಿನ ಬೇಕಾದರೂ ಬಳಸಿ ನಂತರ ಹಿಂತಿರುಗಿಸಬಹುದು. ನಂತರ ಮತ್ತೊಂದು ಹೊಸ ಸ್ಮಾರ್ಟ್ಫೋನ್ ಬಾಡಿಗೆಗೆ ಪಡೆಯಬಹುದು. ಇದರಿಂದ ಹಲವು ಮೊಬೈಲ್ ಬಳಸಿದಂತೆಯೂ ಆಗುತ್ತದೆ. ನಿಮ್ಮ ನೆಚ್ಚಿನ ಸ್ಮಾರ್ಟ್ ಫೋನ್ ಗಳನ್ನು ನಿಮ್ಮದಾಗಿಸಬಹುದು. ಅಲ್ಲದೆ, ಅಗ್ಗದ ಬೆಲೆಯಲ್ಲಿ ನೀವು ಸ್ಮಾರ್ಟ್ ಫೋನ್ ಖರೀದಿಸಬಹುದು. ಎಲ್ಲಿ ಬಾಡಿಗೆಗೆ ಸಿಗುತ್ತವೆ? ಯಾವ ಸ್ಮಾರ್ಟ್ ಫೋನ್ ? ಎಲ್ಲದರ ಮಾಹಿತಿ ಇಲ್ಲಿದೆ.
ರೆಂಟ್ ಮೋಜೋ (RentoMojo) ಎಂಬ ಆನ್‌ಲೈನ್ ಪ್ಲಾಟ್‌ಫಾರ್ಮ್ ಸ್ಮಾರ್ಟ್ ಫೋನ್ ಬಾಡಿಗೆ ನೀಡುತ್ತಿದ್ದು, ಈ ಪ್ಲಾಟ್‌ಫಾರ್ಮ್ ಮೂಲಕ Samsung Galaxy S10 Plus, Apple iPhone XR, Apple iPhone 11 Pro, OnePlus 7, Redmi K20 Pro, Samsung Galaxy Note 10, Apple iPhone XS Max, OnePlus 7 Pro, Apple iPhone X, Oppo F11 Pro, Google Pixel 2 ಸ್ಮಾರ್ಟ್ಫೋನ್ಗಳನ್ನು ಗ್ರಾಹಕರು ಬಾಡಿಗೆಗೆ ಪಡೆಯಬಹುದಾಗಿದೆ.
ಇದನ್ನೂ ಓದಿ :ಬಿಡುಗಡೆಗೆ ಮೊದಲೇ ಜನರಲ್ಲಿ ಭಾರೀ ಆಸಕ್ತಿ ಮೂಡಿಸಿದೆ ವಿವೋ ವಿ27 ಸಿರೀಸ್!
ಗ್ರಾಹಕರು ಆಯ್ಕೆ ಮಾಡುವ ಸ್ಮಾರ್ಟ್‌ಫೋನ್‌ನ ಆಧಾರದ ಮೇಲೆ ನಿಮ್ಮ ಮಾಸಿಕ ಬಾಡಿಗೆ ಬೆಲೆ ಕೂಡ ಬದಲಾಗುತ್ತದೆ. ಅಂದ್ರೆ, ನೀವು Redmi K20 ಸ್ಮಾರ್ಟ್ಫೋನ್ ಬಾಡಿಗೆಗೆ ಕೊಳ್ಳಲು ಬಯಸಿದರೆ, ತಿಂಗಳಿಗೆ ರೂ. 649 ಪಾವತಿಸಬೇಕು. ಹಾಗೆಯೇ ನೀವು Redmi K20 Pro ಮಾದರಿಯನ್ನು ಬಾಡಿಗೆಗೆ ತೆಗೆದುಕೊಳ್ಳಲು ಬಯಸಿದರೆ ತಿಂಗಳಿಗೆ ರೂ. 829 ಕಟ್ಟಬೇಕು. ಆದರೆ ನೀವು ಮೊದಲೇ ರೂ. 2149 ಠೇವಣಿ ಇಡಬೇಕು. ಅದನ್ನು ಮತ್ತೆ ನಿಮಗೆ ಮರುಪಾವತಿಸಲಾಗುತ್ತದೆ. 12 ತಿಂಗಳ ಬಾಡಿಗೆ ತೆಗೆದುಕೊಂಡರೆ ತಿಂಗಳಿಗೆ ರೂ. 829 ಪಾವತಿಸಬೇಕು.
ಅಲ್ಲದೆ, ಆಯ್ಕೆ ಮಾಡುವ ಅವಧಿಯ ಮೇಲೆ ಬಾಡಿಗೆ ಬದಲಾಗುತ್ತದೆ. ನೀವು iPhone XR ಮಾದರಿಯನ್ನು 12 ತಿಂಗಳವರೆಗೆ ಬಾಡಿಗೆಗೆ ತೆಗೆದುಕೊಳ್ಳಲು ಬಯಸಿದರೆ ತಿಂಗಳಿಗೆ ರೂ. 1639 ಪಾವತಿಸಬೇಕಾಗುತ್ತದೆ. ಜೊತೆಗೆ ಡೆಪೋಸಿಟ್ ಆಗಿ 4249 ರೂ. ಪಾವತಿಸಬೇಕು. ಕೂಡಲೆ ಬಾಡಿಗೆಗೆ ಮೊಬೈಲ್ ಪಡೆದು, ನಿಮ್ಮದಾಗಿಸಿ.