Students Viral Video : ವಿದ್ಯೆ ಕಲಿಸೋ ವಿದ್ಯಾಮಂದಿರದಲ್ಲೇ ವಿದ್ಯಾರ್ಥಿಗಳ ಕುಚ್‌ಕುಚ್‌ ವೀಡಿಯೋ ವೈರಲ್‌! ಏನಿದು ಅಸಹ್ಯ ಎಂದ ನೆಟ್ಟಿಗರು!

Share the Article

Students Viral Video: ಪ್ರತಿಯೊಬ್ಬ ವಿದ್ಯಾರ್ಥಿಯು ಶಾಲೆಗೆ ವಿದ್ಯೆ ಕಲಿಯೋದಿಕ್ಕೆ ಹೋಗುತ್ತಾರೆ. ಹೆತ್ತವರು ಕೂಡ ತಮ್ಮ ಮಕ್ಕಳು ಚೆನ್ನಾಗಿ ಓದಿ, ವಿದ್ಯಾವಂತರಾಗಿ ಮುಂದೆ ತಮಗೆ ಆಸರೆಯಾಗುತ್ತಾರೆ ಎಂಬ ಕನಸು ಹೊತ್ತಿರುತ್ತಾರೆ. ಆ ಭರವಸೆಯಿಂದಲೇ ಮಕ್ಕಳನ್ನು ಶಾಲೆಗೆ ಕಳಿಸಿ, ಬೇಕಾದ್ದನ್ನೆಲ್ಲಾ ಕೊಡಿಸುತ್ತಾರೆ. ಮಕ್ಕಳಿಗೆ ಯಾವುದೇ ಕೊರತೆ ಬಾರದ ಹಾಗೆ ನೋಡಿಕೊಳ್ಳುತ್ತಾರೆ. ಆದರೆ ಕೆಲವು ಮಕ್ಕಳು ಶಾಲೆಗೆ ಹೋಗಿ ಓದುವುದು ಬಿಟ್ಟು, ಮೋಜು-ಮಸ್ತಿ, ಪ್ರೀತಿ-ಪ್ರೇಮ ಅಂತ ಅದರ ಹಿಂದೆ ಹೋಗುತ್ತಾರೆ. ಇದೀಗ ಅಂತಹದೇ ಕಾರ್ಯವನ್ನು ವಿದ್ಯಾರ್ಥಿಗಳಿಬ್ಬರು ಮಾಡಿದ್ದು, ಅದು ಕೂಡ ಜ್ಞಾನದೇಗುಲ ಎಂದು ಪೂಜಿಸುವ ಶಾಲೆಯ ಒಳಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಸದ್ಯ ವಿದ್ಯಾರ್ಥಿಗಳ ಅಸಭ್ಯ ವರ್ತನೆಯ ವಿಡಿಯೋ ವೈರಲ್ (Students Viral video) ಆಗಿದೆ.

ವಿದ್ಯಾರ್ಥಿಗಳಿಬ್ಬರು ಶಾಲೆಯ ಎದುರು ಒಬ್ಬರಿಗೊಬ್ಬರು ತಬ್ಬಿಕೊಂಡು, ಕಿಸ್ ಮಾಡುವ ವೀಡಿಯೋ ವೈರಲ್ ಆಗಿದ್ದು, ಇವರ ಈ ನಾಚಿಗೇಡುತನಕ್ಕೆ ಛೀಮಾರಿ ವ್ಯಕ್ತವಾಗುತ್ತಿದೆ. ಓದಿ ದೇಶದಲ್ಲಿ ಘನತೆ, ಗೌರವ ಗಳಿಸಬೇಕಾದ ವಿದ್ಯಾರ್ಥಿಗಳು ತಮ್ಮ ಹೆಸರಿನ ಜೊತೆಗೆ ಶಾಲೆಯ ಹೆಸರನ್ನೂ ಹಾಳು ಮಾಡಿದ್ದಾರೆ. ತಮ್ಮ ಅಸಭ್ಯ ವರ್ತನೆಯಿಂದ ಲೋಕವನ್ನೇ ಮರೆತಂತಿದೆ. ಈ ವಿಡಿಯೋ ನೋಡಿದ್ರೆ ನೀವೂ ಛಿಮಾರಿ ಹಾಕುವುದು ಖಂಡಿತ!!

ಇದನ್ನೂ ಓದಿ :ಪಾರ್ಕಿನ ಪ್ರತೀ ಮರದಡಿ ನಡೆಯುತ್ತೆ ಜೋಡಿಗಳ ರೊಮ್ಯಾನ್ಸ್!

ಈ ವಿಡಿಯೋದಲ್ಲಿ ಶಾಲೆಯ ಸಮವಸ್ತ್ರ ಧರಿಸಿರುವ ಇಬ್ಬರು ವಿದ್ಯಾರ್ಥಿಗಳು ಕಾಣಿಸುತ್ತಾರೆ. ಈ ವಿದ್ಯಾರ್ಥಿಗಳು 11 ಅಥವಾ 12 ನೇ (ಪದವಿ ಪೂರ್ವ) ತರಗತಿ ವಿದ್ಯಾರ್ಥಿಗಳು ಎನ್ನಲಾಗಿದೆ. ಇವರ ವರ್ತನೆ ಅಚ್ಚರಿ ಮೂಡಿಸುವಂತಿದೆ. ಇಬ್ಬರೂ ಒಬ್ಬರನ್ನೊಬ್ಬರು ತಬ್ಬಿಕೊಳ್ಳುವುದು, ಮುತ್ತಿಟ್ಟುಕೊಳ್ಳುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ವಿಡಿಯೋ ಮಾಡುತ್ತಿದ್ದಾರೆ ಎಂದು ಗೊತ್ತಿದ್ದರೂ ಹೆಚ್ಚೇ ಹಗ್, ಕಿಸ್ ಮಾಡುತ್ತಿದ್ದಾರೆ. ವಿದ್ಯಾಮಂದಿರವನ್ನು ಲೆಕ್ಕಿಸದೆ ಮನಸೋ ಇಚ್ಚೆ ವರ್ತಿಸುತ್ತಿದ್ದಾರೆ. ಸದ್ಯ ಈ ವಿಡಿಯೋವನ್ನು shooter.vikramthakur ಎಂಬ ಇನ್ಸ್ಟಾ ಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

Leave A Reply