Mukesh Ambani : ವಿಶ್ವದಲ್ಲೇ ಎರಡನೇ ಅತ್ಯಂತ ಕಾಸ್ಲಿಯೆಸ್ಟ್ ಮುಕೇಶ್ ಅಂಬಾನಿ ಮನೆ!
Mukesh Ambani: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಮುಕೇಶ್ ಅಂಬಾನಿ (Mukesh Ambani) ಭಾರತದ ಶ್ರೀಮಂತ ಉದ್ಯಮಿ ಎಂದು ಖ್ಯಾತಿ ಪಡೆದಿದ್ದಾರೆ. ನೀವಂತೂ ಅಂಬಾನಿ (Ambani) ಅವರ ಮನೆಯ ಬಗ್ಗೆ ಮಾಹಿತಿ ಕೇಳಿದ್ರೆ ಹೌಹಾರುತ್ತಿರಾ!!. ಈ ಮನೆ ವಿಶ್ವದ ಎರಡನೇ ಅತ್ಯಂತ ದುಬಾರಿ ಮನೆಯಾಗಿದೆ. ಅಬ್ಬಬ್ಬಾ!! ಹಾಗಿದ್ರೆ ಆ ಮನೆ ಹೇಗಿರಬಹುದು? ಅಲ್ವಾ!!. ಶ್ರೀಮಂತ ಉದ್ಯಮಿ ಅಂಬಾನಿ ಮನೆ (Mukesh Ambani house) ಎಲ್ಲಿದೆ? ಅದರ ಹೆಸರೇನು? ಬನ್ನಿ ತಿಳಿಯೋಣ.
ಮುಖೇಶ್ ಅಂಬಾನಿ (Mukesh Ambani) ಅವರ ದುಬಾರಿ ಮನೆಗೆ ಆಂಟಿಲಿಯಾ ಎಂದು ಹೆಸರಿಡಲಾಗಿದೆ. ಆಂಟಿಲಿಯಾ ದಕ್ಷಿಣ ಮುಂಬೈನ ಹೃದಯಭಾಗದಲ್ಲಿದೆ. ಇದು ಮೂರು ಹೆಲಿಪ್ಯಾಡ್‌ಗಳನ್ನು ಮತ್ತು ವಿದೇಶದಲ್ಲಿ ಮುಂಬೈ ಮತ್ತು ಅರೇಬಿಯನ್ ಸಮುದ್ರದ ಸ್ಕೈಲೈನ್‌ಗಳನ್ನು ಹೊಂದಿದೆ.
ಆಂಟಿಲಿಯಾ (Antilia) ಮನೆಯನ್ನು ನಿರ್ಮಾಣ ಮಾಡಲು ಸುಮಾರು ಎರಡು ವರ್ಷಗಳು ತೆಗೆದುಕೊಂಡಿತು. ಇದರ ನಿರ್ಮಾಣ 2008 ರಲ್ಲಿ ಪ್ರಾರಂಭವಾಗಿ, 2010 ರಲ್ಲಿ ಪೂರ್ಣಗೊಂಡಿತು. ಈ ಮನೆಯಲ್ಲಿ ಪ್ರತ್ಯೇಕ ಮನರಂಜನಾ ಸ್ಥಳ, ಭವ್ಯ ಪ್ರವೇಶ, ವಿಶಾಲವಾದ ಕೋಣೆಗಳು, 6-ಅಂತಸ್ತಿನ ಕಾರ್ ಪಾರ್ಕಿಂಗ್, ಯೋಗ ಕೇಂದ್ರ, ನೃತ್ಯ ಸ್ಟುಡಿಯೋ, ಆರೋಗ್ಯ ಸ್ಪಾ ಮತ್ತು ಈಜುಕೊಳ ಸೇರಿದಂತೆ ಹಲವು ಅದ್ಭುತವಾದ ವ್ಯವಸ್ಥೆಗಳಿವೆ. ಈ ಮನೆ ನೋಡಲು ಆಕರ್ಷಣೀಯವಾಗಿದ್ದು, ಮೈನವಿರೇಳಿಸುವಂತಿದೆ.
ಆಂಟಿಲಿಯಾ ವಿಶ್ವದ ಎರಡನೇ ಅತ್ಯಂತ ದುಬಾರಿ ಮನೆಯಾಗಿದ್ದು, ಈ ಮನೆಯನ್ನು ಆಸ್ಟ್ರೇಲಿಯನ್ ಮೂಲದ ನಿರ್ಮಾಣ ಕಂಪನಿ ಲೈಟನ್ ಹೋಲ್ಡಿಂಗ್ಸ್‌ನೊಂದಿಗೆ ವಿನ್ಯಾಸಗೊಳಿಸಲಾಗಿದೆ. ಫೋರ್ಬ್ಸ್ ಪ್ರಕಾರ, ಅಂಬಾನಿ ಕುಟುಂಬದ ನಿವಾಸದ ವೆಚ್ಚ ಸುಮಾರು 1ರಿಂದ 2 ಬಿಲಿಯನ್ ಯುಎಸ್ ಡಾಲರ್ ಆಗಿದೆ. ಅಂದ್ರೆ, 6,000 ಕೋಟಿ ಮತ್ತು 12,000 ಕೋಟಿ ರೂ. ಎನ್ನಲಾಗಿದೆ.
ಈ ದುಬಾರಿ, ಭವ್ಯ ನಿವಾಸ ಆಂಟಿಲಿಯಾ ಒಟ್ಟು ಒಂಬತ್ತು ಲಿಫ್ಟ್‌ಗಳನ್ನು ಹೊಂದಿದೆ. ಹಾಗೂ 27 ಮಹಡಿಗಳನ್ನು ಹೊಂದಿದ್ದು, ಆಂಟಿಲಿಯಾವನ್ನು ನೋಡಿಕೊಳ್ಳಲು ಸುಮಾರು 600 ಸಿಬ್ಬಂದಿಗಳಿದ್ದಾರೆ. ಈ ಐಷಾರಾಮಿ ಮನೆಯಲ್ಲಿ ವಾಸಿಸುವುದಕ್ಕಿಂತ ಮೊದಲು, ಅಂಬಾನಿ ಕುಟುಂಬ ಮುಂಬೈನ ಸೀ ವಿಂಡ್‌ನಲ್ಲಿರುವ 14 ಅಂತಸ್ತಿನ ಮನೆಯಲ್ಲಿ ವಾಸಿಸುತ್ತಿತ್ತು.