Interesting Fact : ಫೆಬ್ರವರಿಯಲ್ಲಿ ಕೇವಲ 28 ದಿನ ಯಾಕೆ ಇರೋದು? ಇಂಟೆರೆಸ್ಟಿಂಗ್ ಮಾಹಿತಿ ಇಲ್ಲಿದೆ!
February have 28 days: ಕ್ಯಾಲೆಂಡರ್ ನಲ್ಲಿ ಫೆಬ್ರವರಿ ತಿಂಗಳಲ್ಲಿ 28 ದಿನಗಳು ಮಾತ್ರ ಇದೆ (February have 28 days) . ಉಳಿದ ತಿಂಗಳಲ್ಲಿ 30/31 ಇದೆ. ಆದರೆ ಫೆಬ್ರವರಿಯಲ್ಲಿ ಮಾತ್ರ 28 ದಿನ. ಯಾಕೆ? ಈ ಪ್ರಶ್ನೆ ಎಲ್ಲರಿಗೂ ಒಂದು ಬಾರಿ ಮೂಡಿರುತ್ತದೆ. ಆದರೆ ಉತ್ತರ ಸಿಕ್ಕಿರೋದಿಲ್ಲ. ಇಲ್ಲಿದೆ ನೋಡಿ ಇದರ ಉತ್ತರ. ಯಾಕೆ ಫೆಬ್ರವರಿ ತಿಂಗಳಲ್ಲಿ 28 ದಿನಗಳು ಎಂಬುದರ ಇಂಟೆರೆಸ್ಟಿಂಗ್ ಮಾಹಿತಿ ಇಲ್ಲಿದೆ.
ಇದೀಗ ಇಡೀ ಪ್ರಪಂಚ ಗ್ರೆಗೋರಿಯನ್ ಕ್ಯಾಲೆಂಡರ್ ಬಳಸುತ್ತದೆ. ಇದಕ್ಕೂ ಮೊದಲು ಜೂಲಿಯನ್ ಕ್ಯಾಲೆಂಡರ್ ಬಳಸಲಾಗುತ್ತಿತ್ತು.
ಹಾಗೇ ಈ ಮೊದಲು ರೋಮನ್ ಕ್ಯಾಲೆಂಡರ್ ಕೂಡ ಬಳಕೆಯಲ್ಲಿತ್ತು. ಆರಂಭದಲ್ಲಿ ವರ್ಷವನ್ನು ಚಂದ್ರನ ಚಕ್ರದ ಆಧಾರದ ಮೇಲೆ ಮಾರ್ಚ್’ನಿಂದ ಡಿಸೆಂಬರ್’ವರೆಗೆ 29 ಅಥವಾ 31 ದಿನಗಳ 10 ತಿಂಗಳುಗಳಾಗಿ ವಿಂಗಡಿಸಲಾಗಿದೆ.
ರೋಮನ್ ರಾಜ ನುಮಾ ಪೊಂಪಿಲಿಯಸ್ ತನ್ನ ಆಳ್ವಿಕೆಯ ಅವಧಿಯಲ್ಲಿ, 365 ದಿನಗಳು ಒಳಗೊಳ್ಳಲು ಎರಡು ತಿಂಗಳುಗಳನ್ನು ಸೇರಿಸಿದನು. ಅದುವೇ ಜನವರಿ ಮತ್ತು ಫೆಬ್ರವರಿ. ರೋಮನ್ನರು ಸಮ ಸಂಖ್ಯೆಗಳನ್ನು ಕೆಟ್ಟ ದಿನಗಳು ಎಂದು ಪರಿಗಣಿಸುತ್ತಿದ್ದರು. ಹಾಗೂ ರೋಮನ್ನರು ಫೆಬ್ರವರಿಯನ್ನು ಸತ್ತವರನ್ನು ಗೌರವಿಸಲು ಇರುವಂತಹ ತಿಂಗಳು ಎಂದು ಭಾವಿಸಿದ್ದರು. ಹಾಗಾಗಿ ಹೆಚ್ಚಾಗಿ ತಿಂಗಳಲ್ಲಿ 29 ಅಥವಾ 31 ದಿನಗಳನ್ನು ಮಾಡಿದರು. ಇನ್ನು ವರ್ಷದಲ್ಲಿ 365 ದಿನಗಳನ್ನು ಪೂರೈಸಲು ಹನ್ನೆರಡು ತಿಂಗಳುಗಳು ಬೇಕಾಗುತ್ತದೆ. ಹಾಗಾಗಿ ಫೆಬ್ರವರಿ ತಿಂಗಳನ್ನು 28 ದಿನಗಳ ತಿಂಗಳು ಎಂದು ಪರಿಗಣಿಸಲಾಯಿತು.
ರೋಮನ್ ಕ್ಯಾಲೆಂಡರ್ ಮತ್ತು ಜೂಲಿಯಸ್ ಕ್ಯಾಲೆಂಡರ್ ನ ಸಮಯದಲ್ಲಿ, ಸಂಶೋಧಕ ಮತ್ತು ಶೈಕ್ಷಣಿಕ ಸ್ಯಾಕ್ರೊಬೊಸ್ಕೋದ ಸಿದ್ಧಾಂತದ ಪ್ರಕಾರ, ಜೂಲಿಯಸ್ ಸೀಸರ್ ರೋಮನ್ ಸಾಮ್ರಾಜ್ಯದ ಅತ್ಯಂತ ಶಕ್ತಿಶಾಲಿ ವ್ಯಕ್ತಿಯಾಗಿದ್ದ. ಜೂಲಿಯಸ್ ಆಳ್ವಿಕೆಯಲ್ಲಿ, ಇವರು ರೋಮನ್ ಕ್ಯಾಲೆಂಡರ್ ಪರಿಷ್ಕರಿಸಿ, ಹೊಸ ಕ್ಯಾಲೆಂಡರ್ ಪರಿಚಯಿಸಿದರು. ಜೂಲಿಯಸ್ ಸೀಸರ್ ಸೂರ್ಯನ ಚಲನೆಯ ಆಧಾರದ ಮೇಲೆ ಕ್ಯಾಲೆಂಡರ್ ತಯಾರಿಸಿದನು. ಆದರೆ ರೋಮನ್ ಕ್ಯಾಲೆಂಡರ್ನಲ್ಲಿ ದಿನಗಳು, ಜನವರಿ 30, ಫೆಬ್ರವರಿ 29, ಮಾರ್ಚ್ 30, ಏಪ್ರಿಲ್ 29, ಮೇ 30, ಜೂನ್ 29, ಜುಲೈ 30, ಆಗಸ್ಟ್ 29, ಸೆಪ್ಟೆಂಬರ್ 30, ಅಕ್ಟೋಬರ್ 29, ನವೆಂಬರ್ 30 ಮತ್ತು ಡಿಸೆಂಬರ್ 29. ಅಂದ್ರೆ, ವರ್ಷದಲ್ಲಿ 354 ದಿನಗಳಿದ್ದವು. ಇದನ್ನು ಜೂಲಿಯಸ್ ಸೀಸರ್ ಬದಲಾಯಿಸಿ, ವರ್ಷಕ್ಕೆ 11 ದಿನಗಳನ್ನು ಅಂದರೆ ಪ್ರತಿ ತಿಂಗಳಿಗೆ ಒಂದು ದಿನವನ್ನು ಸೇರಿಸಿದರು. ಆದರೆ ಫೆಬ್ರವರಿಯಲ್ಲಿ ಅವರು ಕೇವಲ 29 ದಿನಗಳನ್ನು ಮಾಡಿದರು. ಯಾಕಂದ್ರೆ, ಅಧಿಕ ವರ್ಷದಲ್ಲಿ ಫೆಬ್ರವರಿ ತಿಂಗಳಿಗೆ 30 ದಿನಗಳ ಹೆಚ್ಚುವರಿ ದಿನ ಇರುತ್ತದೆ ಎಂದು ಅವರು ಭಾವಿಸಿದ್ದರು.
ಜೂಲಿಯಸ್ ಸೀಸರ್ ನಂತರ ಅಗಸ್ಟಸ್ ರೋಮನ್ ಸಾಮ್ರಾಜ್ಯವನ್ನು ಆಳ್ವಿಕೆ ನಡೆಸಿದನು. ಅವನ ಆಳ್ವಿಕೆಯಲ್ಲಿ ಪುನಃ
ಜೂಲಿಯನ್ ಕ್ಯಾಲೆಂಡರ್ನಲ್ಲಿ ಬದಲಾವಣೆಗಳು ಆದವು. ಯಾಕಂದ್ರೆ ಜೂಲಿಯಸ್ ಹೆಸರಿನ ಜುಲೈ ತಿಂಗಳಿಗೆ 31 ದಿನಗಳು ಇತ್ತು, ತನ್ನ ಹೆಸರಿನ ಆಗಸ್ಟ್ ತಿಂಗಳಿಗೆ ಕೇವಲ 30 ದಿನಗಳು ಮಾತ್ರ ಇದೆ ಎಂದು ಅಗಸ್ಟಸ್ ಕ್ಯಾಲೆಂಡರ್ನಲ್ಲಿ ಬದಲಾವಣೆ ಮಾಡಿದ.
ಇದರಿಂದ ಅಗಸ್ಟಸ್ ಫೆಬ್ರವರಿಯಲ್ಲಿದ್ದ 29 ದಿನಗಳಿಂದ ಒಂದು ದಿನವನ್ನು ತೆಗೆದು ಆಗಸ್ಟ್ ಗೆ ಸೇರಿಸಿದ. ಹಾಗಾಗಿಯೇ ಜುಲೈ ಮತ್ತು ಆಗಸ್ಟ್ ತಿಂಗಳುಗಳು 31 ದಿನಗಳಾಗಿವೆ. ಫೆಬ್ರವರಿಯಲ್ಲಿ 28 ದಿನಗಳು ಆಗಿವೆ.
ಭೂಮಿ ಸೂರ್ಯನ ಸುತ್ತುವುದಕ್ಕೆ ಸುಮಾರು 365 ದಿನಗಳು ಮತ್ತು 6 ಗಂಟೆಗಳನ್ನು ಬೇಕಾಗುತ್ತದೆ. ದಿನದ ಕಾಲು ಭಾಗ ಹೋಗುತ್ತದೆ. ಒಂದು ದಿನವನ್ನು ನಿಗದಿಪಡಿಸಲಾಗದ ಕಾರಣ ಇದನ್ನು ಅಧಿಕ ವರ್ಷ ಎಂದು ಹೇಳಲಾಗುತ್ತದೆ. ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಾಲ್ಕು ತ್ರೈಮಾಸಿಕಗಳನ್ನು ಒಂದು ದಿನದಲ್ಲಿ ಸಂಯೋಜಿಸಿ, ಇದನ್ನು ಫೆಬ್ರವರಿ ತಿಂಗಳಲ್ಲಿ ಸೇರಿಸಲಾಗಿದೆ. ಹಾಗಾಗಿ ವರ್ಷದಲ್ಲಿಯೇ ಅತಿ ಕಡಿಮೆ ದಿನಗಳನ್ನು ಹೊಂದಿರುವ ಫೆಬ್ರವರಿಯಲ್ಲಿ ಈ ಅಧಿಕ ವರ್ಷ ಬಿದ್ದರೆ 29 ದಿನಗಳಾಗುತ್ತದೆ. ಈ ಎಲ್ಲಾ ವಿಷಯಗಳಿಂದ ಫೆಬ್ರವರಿಯಲ್ಲಿ 28 ದಿನಗಳಿವೆ.